»   » 'ಪ್ರೀತಿಯನು ಮರೆಯಲಾರೆ, ಋಣವನು ತೀರಿಸಲಾರೆ' ಎಂದು ಕಿಚ್ಚ ಹೇಳಿದ್ದು ಯಾರಿಗೆ?

'ಪ್ರೀತಿಯನು ಮರೆಯಲಾರೆ, ಋಣವನು ತೀರಿಸಲಾರೆ' ಎಂದು ಕಿಚ್ಚ ಹೇಳಿದ್ದು ಯಾರಿಗೆ?

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ದಾಖಲೆಗಳನ್ನು ಧೂಳಿಪಟ ಮಾಡಿ 'ಹೆಬ್ಬುಲಿ' ಚಿತ್ರ ರಾಜ್ಯಾದ್ಯಂತ ಮುನ್ನುಗುತ್ತಿದೆ. ಚಿತ್ರದ ಯಶಸ್ಸಿನ ಹಿನ್ನೆಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ರಾಜ್ಯಾದ್ಯಂತ ವಿಜಯಯಾತ್ರೆ ಕೈಗೊಂಡಿದ್ದ ಕಿಚ್ಚ ಸುದೀಪ್, ಇಂದು ಮೈಸೂರು ಮತ್ತು ಮಂಡ್ಯ ಗೆ ಭೇಟಿ ನೀಡಿ ವಿಜಯಯಾತ್ರೆಗೆ ಮುಗಿಸಿದ್ದಾರೆ.[ಪುನೀತ್ ರಾಜ್ ಕುಮಾರ್ ಹಾಡಿಗೆ ಧ್ವನಿಯಾದ ಕಿಚ್ಚ ಸುದೀಪ್]

'ಹೆಬ್ಬುಲಿ' ವಿಜಯಯಾತ್ರೆ ಹಿನ್ನೆಲೆಯಲ್ಲಿ ಅಭಿಮಾನಿಗಳು ರಾಜ್ಯದ ಹಲವು ಕಡೆ ಅದ್ಧೂರಿ ಆಗಿ ಸ್ವಾಗತಿಸಿ ಕಿಚ್ಚನನ್ನು ಕಣ್ತುಂಬಿಕೊಂಡಿದ್ದರೆ, ಇನ್ನೂ ಹಲವು ಸ್ಥಳಗಳಿಗೆ ಸುದೀಪ್ ಭೇಟಿ ನೀಡದ ಕಾರಣ ಅಭಿಮಾನಿಗಳು ನಿರಾಸೆ ವ್ಯಕ್ತಪಡಿಸಿದ್ದಾರೆ. ಆದರೆ ಅಭಿಮಾನಿಗಳ ಅಭಿಮಾನಿ ಎಂದು ಸಹೃದಯತೆನ್ನು ಮೆರೆದ ಕಿಚ್ಚ ಸುದೀಪ್ ಅಭಿಮಾನಿಗಳ ಪ್ರೀತಿಯನ್ನು ನೋಡಿ ಭಾವುಕರಾಗಿ ಟ್ವೀಟ್ ಮಾಡಿದ್ದಾರೆ. ಅಲ್ಲದೇ ಭೇಟಿ ನೀಡಲು ಆಗದ ಸ್ಥಳಗಳಿಗೆ 'ಹೆಬ್ಬುಲಿ' 50 ದಿನ ಪೂರೈಸುವುದರೊಳಗಾಗಿ ಆಗಮಿಸುವುದಾಗಿ ಹೇಳಿದ್ದಾರೆ.

ಕಿಚ್ಚ ಸುದೀಪ್ ಅಭಿಮಾನಿಗಳ ಪ್ರೀತಿಗೆ ಸೋತು ತಮ್ಮ ಟ್ವಿಟರ್ ನಲ್ಲಿ ಬರೆದ ಸಾಲುಗಳು ಹೀಗಿವೆ...

ಅಭಿಮಾನಿಗಳ ಅಭಿಮಾನಿಯ ಮನದಾಳದ ಮಾತು

ಕಳೆದ ನಾಲ್ಕು ದಿನಗಳಿಂದ 'ಹೆಬ್ಬುಲಿ' ವಿಜಯಯಾತ್ರೆ ಕೈಗೊಂಡಿದ್ದ ಸುದೀಪ್ ಭೇಟಿ ನೀಡಿದ ಸ್ಥಳಗಳಲ್ಲಿ ತಮ್ಮ ಅಭಿಮಾನಿಗಳ ಪ್ರೀತಿಯನ್ನು ನೋಡಿ ಭಾವುಕರಾಗಿದ್ದರು. ರಾಜ್ಯಾದ್ಯಂತ ತಮ್ಮ ಫ್ಯಾನ್ಸ್ ನೋಡಿದ ಕಿಚ್ಚ ಮನಸೋತು "ಎಂದಿಗೂ ನಿಮ್ಮ ಪ್ರೀತಿಯನು ಮರೆಯಲಾರೆ ,,,, ಎಂದಿಗೂ ಈ ಋಣವನು ತೀರಿಸಲಾರೆ.. ಪ್ರತಿ ಹೆಜ್ಜೆಗು ನಿಂತಿರುವಿರಿ ನೀವು,, ಪ್ರತಿ ಹೆಜ್ಜೆಗು ನೆನಸಿಕೊಳುವೆ ನಾನು-
ಕಿಚ್ಚ" ಎಂದು ಟ್ವೀಟ್ ಮಾಡಿದ್ದಾರೆ.

ಮೈಸೂರಿನಲ್ಲಿ 'ಹೆಬ್ಬುಲಿ' ಘರ್ಜನೆ

ಇಂದು(ಮಾರ್ಚ್ 9) 'ಹೆಬ್ಬುಲಿ' ವಿಜಯಯಾತ್ರೆ ಅಂಗವಾಗಿ ಮೈಸೂರು ಸಂಗಮ್ ಚಿತ್ರಮಂದಿರಕ್ಕೆ ಸುದೀಪ್ ಭೇಟಿ ನೀಡಿದ್ದರು. ಈ ವೇಳೆ ಅಭಿನಯ ಚಕ್ರವರ್ತಿ ನೋಡಲು ಜನ ಸಾಗರವೇ ಹರಿದುಬಂತಿತ್ತು.

ಹುಟ್ಟೂರಿನಲ್ಲಿ ಕಿಚ್ಚನ ಕ್ರೇಜ್

ಎರಡನೇ ವಾರ ಪೂರೈಸಿದ 'ಹೆಬ್ಬುಲಿ' ಕಿಚ್ಚ ಸುದೀಪ್ ತಮ್ಮ ಹುಟ್ಟೂರು ಶಿವಮೊಗ್ಗ ಜಿಲ್ಲೆಗೆ ರನ್ನನಾಗಿ ಭೇಟಿ ನೀಡಿದ್ದರು. ಅಭಿಮಾನಿಗಳ ಅಭಿಮಾನಿ ಈ ವೇಳೆ ಅಭಿಮಾನಿಗಳ ಮಧ್ಯೆ ನಿಂತು ಎಲ್ಲರತ್ತ ಕೈ ಬೀಸುತ್ತ, ರಂಜಿಸಿದರು.

ಚಿತ್ರದ ಯಶಸ್ಸನ್ನು ಅಭಿಮಾನಿಗಳಿಗೆ ಸಲ್ಲಿಸಿದ ಕಿಚ್ಚ

'ಹೆಬ್ಬುಲಿ' ಚಿತ್ರದಲ್ಲಿ ತಮ್ಮ ಹೇರ್ ಸ್ಟೈಲ್ ಮೂಲಕ ಯೂತ್ಸ್ ಗಳಲ್ಲಿ ಕ್ರೇಜ್ ಹುಟ್ಟು ಹಾಕಿದ್ದ ಕಿಚ್ಚ, ಸಿನಿಮಾ ವಿಜಯಯಾತ್ರೆ ಅಂಗವಾಗಿ ಹಾಸನಕ್ಕೂ ಭೇಟಿ ನೀಡಿದ್ದರು.

ಆತ್ಮಹತ್ಯೆಗೆ ಯತ್ನಿಸಿದ ಕಿಚ್ಚನ ಅಭಿಮಾನಿಗಳು

ರಾಜ್ಯದ ಹಲವು ಕಡೆ ಸುದೀಪ್ ಅಭಿಮಾನಿಗಳು ಅವರನ್ನು ನೋಡಿ ಕಣ್ತುಂಬಿಕೊಂಡ್ರೆ, ಬೆಳಗಾವಿಯಲ್ಲಿ ಸುದೀಪ್ ಅವರನ್ನು ನೋಡಲೇಬೇಕು, ಇಲ್ಲ ಅಂದ್ರೆ ಆತ್ಮಹತ್ಯೆ ಮಾಡಿಕೊಳ್ತೀವಿ ಎಂದು ಸಚಿನ್ ಮತ್ತು ಇನ್ನೊಬ್ಬ ಯುವಕ ಹಟ ಹಿಡಿದಿದ್ದರು. ಈ ಮಾಹಿತಿ ತಿಳಿದು ಪ್ರತಿಕ್ರಿಯಿಸಿದ ಸುದೀಪ್, "ಸಮಯದ ಅಭಾವದಿಂದ ಕೆಲವು ಊರುಗಳಿಗೆ ಭೇಟಿ ನೀಡಲು ಸಾಧ್ಯವಾಗಿಲ್ಲ. ನನ್ನನ್ನು ಕ್ಷಮಿಸಿ. 50 ದಿನಗಳ ಒಳಗಾಗಿ ಭೇಟಿ ನೀಡಿಲ್ಲದ ಸ್ಥಳಗಳಿಗೆ ಆಗಮಿಸುತ್ತೇನೆ. ನಿಮ್ಮನ್ನು ಖಂಡಿತಾ ಭೇಟಿ ಆಗುತ್ತೇನೆ. ನೀವು ನಿಮ್ಮ ಪರೀಕ್ಷೆಗಳತ್ತ ಗಮನಹರಿಸಿ ಪ್ಲೀಸ್" ಎಂದು ಹೇಳಿ ಭರವಸೆ ನೀಡಿದರು.

ದಾವಣಗೆರೆಯಲ್ಲಿ ಕಿಕ್ಕಿರಿದು ತುಂಬಿದ್ದ ಜನ

ಸುದೀಪ್ ಅವರು ದಾವಣಗೆರೆಗೆ ಭೇಟಿ ನೀಡಿದ್ದ ವೇಳೆ, ಕಿಕ್ಕಿರಿದ ಜನ ಸಾಗರ ಸೇರಿತ್ತು.

English summary
Kannada Actor Kiccha Sudeep Starrer 'Hebbuli' running successfully in all over Karnataka. For this success Kiccha sudeep carried out 'Hebbuli' Vijaya yathre in Mysore, Mandya, Belagavi, Hubballi and other Places.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada