ಮಗಳ ಮೊದಲ ಫೋಟೊ ಶೇರ್ ಮಾಡಿದ ನೀನಾಸಂ ಸತೀಶ್: ಹೇಗಿದ್ದಾಳೆ ಪುತ್ರಿ ಮನಸ್ವಿತಾ?

ಕನ್ನಡದ ಚಿತ್ರರಂಗದಲ್ಲಿ ಕಷ್ಟ ಪಟ್ಟು ಮೇಲೆ ಬಂದ ನಟರಲ್ಲಿ ನೀನಾಸಂ ಸತೀಶ್ ಕೂಡ ಒಬ್ಬರು. ಡ್ರಾಮ, ಲೂಸಿಯಾ, ಕ್ವಾಟ್ಲೆ ಅಂತ ಸಿನಿಮಾಗಳಲ್ಲಿ ನಟಿಸಿ, ತನ್ನದೇ ಒಂದು ವರ್ಗವನ್ನು ಸೃಷ್ಟಿಸಿಕೊಂಡ ನಟ. ಸುಮಾರು 14 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ದುಡಿಯುತ್ತಿರುವ ನೀನಾಸಂ ಸತೀಶ್ ತನ್ನದೇ ಅಭಿಮಾನಿಗಳ ವರ್ಗವನ್ನು ಸೃಷ್ಟಿಸಿಕೊಂಡಿದ್ದಾರೆ. ಕೈ ತುಂಬಾ ಸಿನಿಮಾಗಳಿವೆ. ತಮಿಳು ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ.

ನೀನಾಸಂ ಸತೀಶ್ ಕನ್ನಡ ಚಿತ್ರರಂಗದಲ್ಲಿ ಚಿರಪರಿಚಿತ ಫೇಸ್. ಆದರೆ, ಸತೀಶ್ ಕುಟುಂಬ ಮಾತ್ರ ಎಲ್ಲೂ ಕಾಣಿಸಿಕೊಂಡಿಲ್ಲ. ಪತ್ನಿ, ಮಗಳು ಸೋಶಿಯಲ್ ಮೀಡಿಯಾಗಳಲ್ಲೂ ಕಂಡಿರಲಿಲ್ಲ. ಆದರೆ, ಇದೇ ಮೊದಲ ಬಾರಿಗೆ ಮಗಳು ಮನಸ್ವಿತ ಅವರ ಮೊದಲ ಫೋಟೊವನ್ನು ಶೇರ್ ಮಾಡಿದ್ದಾರೆ. ಜೊತೆ ಈಗ ಫೋಟೊ ಶೇರ್ ಮಾಡಿದ್ದಕ್ಕೆ ಕಾರಣ, ಯಾಕೆ ಕುಟುಂಬ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿಲ್ಲ ಎಂಬುವುದನ್ನು ಫಿಲ್ಮಿ ಬೀಟ್ ಜೊತೆ ಶೇರ್ ಮಾಡಿಕೊಂಡಿದ್ದಾರೆ.

ಮಗಳ ಮೊದಲ ಫೋಟೊ ಬಿಟ್ಟ ನೀನಾಸಂ ಸತೀಶ್

ಮಗಳ ಮೊದಲ ಫೋಟೊ ಬಿಟ್ಟ ನೀನಾಸಂ ಸತೀಶ್

ನೀನಾಸಂ ಸತೀಶ್ ಇದೂವರೆಗೂ ತಮ್ಮ ಪುತ್ರಿಯ ಫೋಟೊವನ್ನು ಎಲ್ಲೂ ಶೇರ್ ಮಾಡಿರಲಿಲ್ಲ. ಆದರೆ, ಅಭಿಮಾನಿಗಳು ಹಾಗೂ ಸ್ನೇಹಿತರ ಒತ್ತಾಯಕ್ಕೆ ಪುತ್ರಿ ಮನಸ್ವಿತ ಅವರ ಫೋಟೊವೊಂದನ್ನು ಶೇರ್ ಮಾಡಿದ್ದಾರೆ. ಈಗ ಪುತ್ರಿಗೆ ಆರು ವರ್ಷ. ಆದರೆ, ಮಗಳ ಖಾಸಗಿ ಬದುಕಿಗೆ ಧಕ್ಕೆ ಬರಬಾರದು ಎಂಬ ಕಾರಣಕ್ಕೆ ಒಂದು ವರ್ಷವಿದ್ದಾಗ ತೆಗೆದ ಫೋಟೊವನ್ನು ಶೇರ್ ಮಾಡಿದ್ದಾರೆ. "ಸೋಶಿಯಲ್ ಮೀಡಿಯಾಗೆ ಸಂಪೂರ್ಣವಾಗಿ ಎಂಟ್ರಿ ಕೊಟ್ಟಿಲ್ಲ. ಅವಳನ್ನು ಸಂಪೂರ್ಣವಾಗಿ ಸೋಶಿಯಲ್ ಮೀಡಿಯಾಗೆ ಕರೆ ತರುವುದು ಇಷ್ಟವಿಲ್ಲ. ಅವರ ಖಾಸಗಿ ಜೀವನದ ಉದ್ದೇಶದಿಂದ ಈ ನಿರ್ಧಾರಕ್ಕೆ ಬಂದಿದ್ದೇವೆ. ಕಾರಣ ಏನು ಅಂದರೆ, ಅವಳು ಶಾಲೆಗೆ ಹೋಗುತ್ತಾಳೆ. ಅಂಗಡಿಗೆ ಹೋಗುತ್ತಾಳೆ. ಆರಾಮಾಗಿ ಇದ್ದಾಳೆ. ಅವಳಿಗೆ ಒಬ್ಬ ಹೀರೋ ಮಗಳು ಅನ್ನುವುದು ಗೊತ್ತಿಲ್ಲ. ಮುಂದೊಂದು ದಿನ ಅವಳೇ ಸೋಶಿಯಲ್ ಮೀಡಿಯಾಗೆ ಬಂದರೆ ನಂದೇನು ಅಭ್ಯಂತರವಿಲ್ಲ." ಎಂದು ಸತೀಶ್ ಫಿಲ್ಮಿ ಬೀಟ್‌ಗೆ ಹೇಳಿದ್ದಾರೆ.

ಪ್ರಚಾರದಿಂದ ಮಗಳ ದೂರವಿಡಲು ಚಿಂತನೆ

ಪ್ರಚಾರದಿಂದ ಮಗಳ ದೂರವಿಡಲು ಚಿಂತನೆ

"ಮಗಳ ವಿಚಾರವನ್ನು ಪಬ್ಲಿಸಿಟಿಗೆ ತಂದಿಡುವುದು ನನಗೆ ಇಷ್ಟವಿಲ್ಲ. ಅದಕ್ಕೆ ನಾನು ಮೊದಲಿನಿಂದಲೂ ಅವಳನ್ನು ಪ್ರಚಾರದಿಂದ ದೂರನೇ ಉಳಿಸಿದ್ದೇನೆ. ನನ್ನ ಕುಟುಂಬಕ್ಕೂ ಇಷ್ಟ ಆಗಲ್ಲ. ನನ್ನ ತಾಯಿಗೂ ಇಷ್ಟವಿರಲಿಲ್ಲ. ನನ್ನ ಪತ್ನಿಗೂ ಇಷ್ಟವಿಲ್ಲ. ನಾವೇ ಸಾರ್ವಜನಿಕ ಜೀವನದಲ್ಲಿ ಪ್ರೈವಸಿಯನ್ನು ಕಳೆದುಕೊಂಡಿದ್ದೇವೆ. ಹೀಗಾಗಿ ಅವಲ ಪ್ರೈವಸಿಯನ್ನು ಕಸಿದುಕೊಳ್ಳಲು ನಮಗೆ ಇಷ್ಟವಿಲ್ಲ. ಹಾಗಾಗಿ ಒಂದು ವರ್ಷವಿದ್ದಾಗ ತೆಗೆದ ಫೋಟೊವನ್ನು ಶೇರ್ ಮಾಡಿದ್ದೇನೆ." ಎಂದು ನೀನಾಸಂ ಸತೀಶ್ ಹೇಳಿದ್ದಾರೆ.

ಮಕ್ಕಳ ಪ್ರೈವಸಿ ಕಿತ್ತುಕೊಳ್ಳಬಾರದು

ಮಕ್ಕಳ ಪ್ರೈವಸಿ ಕಿತ್ತುಕೊಳ್ಳಬಾರದು

"ಮಕ್ಕಳ ಪ್ರೈವಸಿಯನ್ನು ನಾವು ಕಿತ್ತುಕೊಳ್ಳಬಾರದು. ಶಾಲೆಗೆ ನಾನೇ ಕರೆದುಕೊಂಡು ಹೋಗುತ್ತೇನೆ. ಕರೆದುಕೊಂಡು ಬರುತ್ತೇನೆ. ಆದರೆ ಯಾರಿಗೂ ನೀನಾಸಂ ಸತೀಶ್ ಮಗಳು ಎನ್ನುವುದು ಗೊತ್ತಿಲ್ಲ. ಒಂದು ವೇಳೆ ಅದು ಗೊತ್ತಾದರೆ, ಅವಳ ವರ್ತನೆಯೇ ಬದಲಾಗಬಹುದು. ಸಣ್ಣ ವಯಸ್ಸಿನಲ್ಲೇ ಅವಳ ಮೇಲೆ ಒತ್ತಡ ಹೇರಬಾರದು ಅನ್ನುವ ಕಾರಣಕ್ಕೆ ಈ ನಿರ್ಧಾರಕ್ಕೆ ಬಂದಿದ್ದೇನೆ." ಎಂಬ ಅಭಿಪ್ರಾಯ ತಿಳಿಸಿದ್ದಾರೆ.

ಅಮ್ಮನ ವಿಡಿಯೋ ರಿಲೀಸ್

ಅಮ್ಮನ ವಿಡಿಯೋ ರಿಲೀಸ್

ಇತ್ತೀಚೆಗೆ ನೀನಾಸಂ ಸತೀಶ್ ಅವರ ತಾಯಿ ನಿಧನರಾಗಿದ್ದರು. ಹೀಗಾಗಿ ಅವರ ಅಮ್ಮನ ಬಗ್ಗೆ ವಿಡಿಯೋವನ್ನು ಬಿಡುಗಡೆ ಮಾಡಲಿದ್ದಾರೆ. ಇನ್ನೊಂದು 15 ದಿನಗಳಲ್ಲಿ ಅಮ್ಮನ ಬಗ್ಗೆ ವಿಡಿಯೋ ಬಿಡುಗಡೆ ಮಾಡಲಿದ್ದಾರೆ. "ನನ್ನ ಅಭಿಮಾನಿಗಳು ಹಾಗೂ ಮಾಧ್ಯಮದವರು ತುಂಬಾ ಮಂದಿ ಕೇಳುತ್ತಲೇ ಇದ್ದರು. ಪ್ರೆಸ್ ಮೀಟ್‌ಗಳಿಗೆ ಹೋದಾಗಲೆಲ್ಲಾ ಮಗಳ ಬಗ್ಗೆ ಕೇಳುತ್ತಲೇ ಇದ್ದರು. ಅದಕ್ಕಾಗಿ ಒಂದು ವರ್ಷವಿದ್ದಾಗ ತೆಗೆದ ಪೋಟೊ ಶೇರ್ ಮಾಡಿದ್ದೇನೆ. ನನ್ನ ತಾಯಿಯ ಒಂದು ವಿಡಿಯೋ ಸಾಂಗ್ ಬರುತ್ತೆ. ಅದರಲ್ಲಿ ಮಗಳು ಒಂದೇ ಶಾಟ್‌ನಲ್ಲಿ ಬರುತ್ತಾಳೆ. ಅದನ್ನೂ ನಾನು ಪ್ರಮೋಟ್ ಮಾಡಲು ಹೋಗುವುದಿಲ್ಲ." ಎಂದು ಫಿಲ್ಮಿ ಬೀಟ್‌ಗೆ ತಿಳಿಸಿದ್ದಾರೆ.

More from Filmibeat

English summary
Kannada Actor Ninasam Sathish posted his daughter Manasvitha first Photo. He doesnt want to show his daughter photo in social media. For fans he is sharing old photo of her daughter.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X