"ಒದೆ ಬೀಳುತ್ತೆ ಅಂತ ನನಗೆ ಸುಮಾರು ಜನ ಹೇಳಿದ್ರು"; ಮಹಿಳೆ ಕಪಾಳಮೋಕ್ಷ ಮಾಡಿದ ಕನ್ನಡದ ನಟನ ಪ್ರತಿಕ್ರಿಯೆ!

ಕಳೆದ ವಾರ ತೆಲುಗಿನಲ್ಲಿ ಬಿಡುಗಡೆಯಾಗಿದ್ದ 'ಲವ್ ರೆಡ್ಡಿ' ಅನ್ನೋ ಸಿನಿಮಾ ಸಿಕ್ಕಾಪಟ್ಟೆ ಸುದ್ದಿಯಲ್ಲಿದೆ. ಈ ಸಿನಿಮಾದಲ್ಲಿ ಕನ್ನಡದ ನಟ ಎನ್‌ಟಿ ರಾಮಸ್ವಾಮಿ ಪೋಷಕ ಪಾತ್ರದಲ್ಲಿ ನಟಿಸಿದ್ದರು. ಇವರ ಪಾತ್ರವನ್ನು ನೋಡಿ ತೆಲುಗು ಮಂದಿನೇ ವೈಲೆಂಟ್ ಆಗಿದ್ದಾರೆ. ಹೀಗಾಗಿ ಥಿಯೇಟರ್‌ಗೆ ವಿಸಿಟ್ ಮಾಡಿದ್ದ ಸಂದರ್ಭದಲ್ಲಿ ಮಹಿಳೆಯೊಬ್ಬರು ಕಪಾಳಮೋಕ್ಷ ಮಾಡಿ ಥಳಿಸಿದ್ದರು.

'ಲವ್ ರೆಡ್ಡಿ' ಬಿಡುಗಡೆಯಾಗಿ ಒಂದು ವಾರ ಆದ ಬೆನ್ನಲ್ಲೇ ಚಿತ್ರತಂಡ ಥಿಯೇಟರ್ ವಿಸಿಟ್ ಹಾಕುತ್ತಿದೆ. ಈ ವೇಳೆ ಅವರಿಗೆ ಕನ್ನಡ ನಟನ ಪಾತ್ರಕ್ಕೆ ಜನರು ಆಕ್ರೋಶ ಹೊರ ಹಾಕುತ್ತಿದ್ದರು. ಹೀಗಾಗಿ ಎನ್‌ಟಿ ರಾಮಸ್ವಾಮಿಯವರಿಗೆ ಥಿಯೇಟರ್‌ ವಿಸಿಟ್‌ಗೆ ಬನ್ನಿ ಅಂತ ಹೇಳುತ್ತಿದ್ದರು. ಚಿತ್ರತಂಡದ ಒತ್ತಾಯದ ಮೇರೆಗೆ ಹೈದರಾಬಾದ್‌ನ ಥಿಯೇಟರ್‌ಗೆ ವಿಸಿಟ್ ಕೊಟ್ಟಿದ್ದರು. ಆ ವೇಳೆ ಮಹಿಳೆಯೊಬ್ಬರು ಏಕಾಏಕಿ ಬಂದು ಹೊಡೆಯುವುದಕ್ಕೆ ಶುರು ಮಾಡಿದ್ದರು.

Kannada actor NT Ramaswamy Reacted on woman who slapped while promotion Love Reddy movie

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಕೆಲವರು ಇದು ಗಿಮಿಕ್ ಅಂದರು. ಮತ್ತೆ ಕೆಲವರು ಕನ್ನಡದ ನಟನನ್ನು ಕರೆದುಕೊಂಡು ಹೋಗಿ ಹೊಡೆಸಿದ್ದಾರೆಂದು ಕಾಮೆಂಟ್ ಮಾಡಿದ್ದರು. ಇಷ್ಟೆಲ್ಲ ಸುದ್ದಿ ಮಾಡಿದ ನಟ ಎನ್‌ಟಿ ರಾಮಸ್ವಾಮಿ ಈ ಘಟನೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಅಂದು ನಡೆದ ಘಟನೆ, ಪಾತ್ರ, ಸನ್ನಿವೇಶವನ್ನು ವಿವರಿಸಿದ್ದಾರೆ.

'ಲವ್ ರೆಡ್ಡಿ' ಸಿನಿಮಾ ಆಂಧ್ರ ಪ್ರದೇಶ ಮತ್ತು ಕರ್ನಾಟಕ ಬಾರ್ಡರ್‌ನಲ್ಲಿ ನಡೆದ ಕಥೆ. ಅದನ್ನು ಮೂಲವಾಗಿ ಇಟ್ಟುಕೊಂಡು ಡೆವೆಲಪ್ ಮಾಡಿರುವಂತಹ ಸಿನಿಮಾ. ಇದು ಟಿಪಿಕಲ್ ತೆಲುಗು ಭಾಷೆಯ ಸಿನಿಮಾ. ಬಾರ್ಡರ್‌ನಲ್ಲಿ ನಡೆಯುವ ಸಿನಿಮಾ ಆಗಿದ್ದರಿಂದ ಕನ್ನಡದಲ್ಲೂ ಡಬ್ ಮಾಡಿದ್ದು, ಮೊದಲು ತೆಲುಗಿನಲ್ಲಿ ರಿಲೀಸ್ ಮಾಡಲಾಗಿದೆ. ಸಿನಿಮಾ ರಿಲೀಸ್ ಆದಲ್ಲಿಂದ ಚಿತ್ರತಂಡ ಪ್ರಚಾರಕ್ಕೆ ಕರೆಯುತ್ತಲೇ ಇತ್ತು. ಕನ್ನಡದ ನಟ ಎನ್‌ಟಿ ರಾಮಸ್ವಾಮಿಯ ನೆಗೆಟಿವ್ ಶೇಡ್‌ನಲ್ಲಿ ನಟಿಸಿದ್ದರು. ಅದನ್ನು ನೋಡಿ ಜನರು ರೊಚ್ಚಿಗೆದ್ದಿದ್ದರು. ಹೀಗಾಗಿ ರೆಸ್ಪಾನ್ಸ್ ಚೆನ್ನಾಗಿ ಒಮ್ಮೆ ಬನ್ನಿ ಎಂದು ಚಿತ್ರತಂಡ ಆಹ್ವಾನ ನೀಡಿತ್ತು.

"ನಿಮ್ಮ ಪಾತ್ರದ ಬಗ್ಗೆ ಮಾತಾಡುತ್ತಿದ್ದಾರೆ. ಜನರು ಅವನು ಬರಲಿ ಅದೇ ಕಲ್ಲಲ್ಲೇ ಹೊಡೆಯುತ್ತೇವೆ ಅಂತ ಹೇಳುತ್ತಿದ್ದಾರೆ. ನೀವು ಬಂದರೆ ಇದು ಪಾಸಿಟಿವ್ ಆಗಬಹುದು ಎಂದು ಹೇಳಿದ್ದರು. ಸೀನ್ ಏನು ಅಂದರೆ, ನನಗೆ ಇಷ್ಟವಿಲ್ಲದವನನ್ನು ಮದುವೆ ಆಗಬೇಕು ಅಂತ ನನ್ನ ಮಗಳು ನಿರ್ಧಾರ ಮಾಡಿರುತ್ತಾಳೆ. ಅವಳನ್ನು ಸಾಯಿಸಿಬಿಡುತ್ತೇನೆ. ಡಬ್ಬಿಂಗ್ ಮಾಡುವಾಗ ನನಗೆ ಸುಮಾರು ಜನ ಹೇಳಿದ್ದರು. ಸರ್ ಇದು ತುಂಬಾನೇ ವೈಲೆಂಟ್ ಆಗಿದೆ. ಒದೆ ಬೀಳುವ ಸಾಧ್ಯತೆಯಿದೆ ಎಂದಿದ್ದರು." ಎಂದು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಅಂದ್ಹಾಗೆ ಎನ್‌ಟಿ ರಾಮಸ್ವಾಮಿಗೆ ನಿರ್ದೇಶಕರು ಮೊದಲೇ ಹೇಳಿದ್ದರು. ಕ್ಲೈಮ್ಯಾಕ್ಸ್‌ನಲ್ಲಿ ತುಂಬಾ ವೈಲೆಂಟ್ ಇರುತ್ತೆ. ನೀವು ಮಗಳನ್ನು ಸಾಯಿಸುವ ಹಂತಕ್ಕೂ ಹೋಗುತ್ತೀರಿ. ಕ್ಲೈಮ್ಯಾಕ್ಸ್ ಹಾಗೆ ಬರುತ್ತೆ ಅಂತ ಹೇಳಿದ್ದರು. ಆದರೆ, ಕ್ಲೈಮ್ಯಾಕ್ಸ್ ಇಷ್ಟೊಂದು ವೈಲೆಂಟ್ ಆಗಿರುತ್ತೆ ಅನ್ನೋದನ್ನು ಹೇಳಿರಲಿಲ್ಲ. ಸಿನಿಮಾ ಮಾಡುವಾಗ ಇದು ನಿಜಕ್ಕೂ ವೈಲೆಂಟ್ ಆಗಿದೆ ಅಂತ ಅನಿಸಿತ್ತು.

"ಒಂದು ವಾರ ಆಯ್ತು ಸಿನಿಮಾ ರಿಲೀಸ್ ಆಗಿ. ಅಲ್ಲಿಂದಲೂ ಅವರು ಥಿಯೇಟರ್‌ಗೆ ವಿಸಿಟ್ ಮಾಡಿ ಅಂತ ಕರೆಯುತ್ತಲೇ ಇದ್ದರು. ನನಗೆ ಹೋಗುವುದಕ್ಕೆ ಆಗಿರಲಿಲ್ಲ. ಎರಡು ಥಿಯೇಟರ್‌ಗೆ ಹೋದ್ವಿ ರೆಸ್ಪಾನ್ಸ್ ಚೆನ್ನಾಗಿತ್ತು. ಮೂರನೇ ಥಿಯೇಟರ್‌ಗೆ ಹೋದಾಗಲು ಚಿತ್ರತಂಡ ನನಗೆ ಸ್ಟೇಜ್ ಮೇಲೆ ಬೇಡ. ಮೊದಲು ನಾವು ಹೋಗುತ್ತೇವೆ. ಆ ಮೇಲೆ ಕರೆಯುತ್ತೇವೆ ಎಂದಿದ್ದರು. ಆಗ ನಾನು ಇನ್ನೇನು ವೇದಿಕೆ ಮೇಲೆ ಹೋಗಿ ನಿಂತಿದ್ದೆ. ಅಷ್ಟರಲ್ಲೇ ಇಬ್ಬ ಹೆಂಗಸು ಒಂದು ಹೊಡೆಯುವುದಕ್ಕೆ ಶುರು ಮಾಡಿದ್ದರು." ಎಂದು ಎನ್‌ಟಿ ರಾಮಸ್ವಾಮಿ ಹೇಳಿದ್ದಾರೆ.

ಈ ಘಟನೆಯ ಬಳಿಕ ಕೆಲವರು ಇದು ಗಿಮಿಕ್ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಎನ್‌ಟಿ ರಾಮಸ್ವಾಮಿ ಹೀಗಂತಾರೆ. "ಕೆಲವರು ಫೋನ್ ಮಾಡಿ ಇದೇನಾದರೂ ಗೇಮ್ ಮಾಡಿದ್ದೀರ? ಇದೇನಾದರೂ ಗಿಮಿಕ್ಕಾ? ಸಿನಿಮಾದವರು ನಿಮ್ಮನ್ನು ಕರೆದುಕೊಂಡು ಹೋಗಿ ಏನಾದರೂ ಹೊಡೆಸಿದ್ದಾರಾ? ಅಂತ ಕೇಳಿದರು. ನನಗೆ ಆತರ ಯಾವುದೂ ಕಾಣಿಸಲಿಲ್ಲ. ಇದು ಒಂದು ರೀತಿ ಪಾಸಿಟಿವ್. ಇನ್ನೊಂದು ರೀತಿ ನೆಗೆಟಿವ್. ಯಾಕಂದ್ರೆ ಒಬ್ಬ ಕಲಾವಿದನ ಮೇಲೆ ಈ ರೀತಿ ಅಟ್ಯಾಕ್ ಮಾಡಿದ್ದು ಬೇಸರ ತರುತ್ತೆ." ಎಂದು ಕನ್ನಡದ ನಟ ಪ್ರತಿಕ್ರಿಯೆ ನೀಡಿದ್ದಾರೆ.

More from Filmibeat

English summary
Kannada actor NT Ramaswamy Reacted on woman who slapped while promotion Love Reddy movie;
Read more about: tollywood slap filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X