ಕೊಪ್ಪದಲ್ಲಿ 'ಸಿಲ್ಕು ಮಿಲ್ಕು' ಖಬರ್: ಪ್ರಮೋದ್ ಶೆಟ್ಟಿಗೆ ಸಿಕ್ತು ಸ್ಯಾಂಡಲ್‌ವುಡ್ ಘಟೋದ್ಗಜ ಟೈಟಲ್

ಸ್ಯಾಂಡಲ್‌ವುಡ್‌ನ ಮತ್ತೊಂದು ಹೊಸಬರ ಸಿನಿಮಾ 'ಇನಾಮ್ದಾರ್'. ಈ ಸಿನಿಮಾದ ಟೀಸರ್ ಈಗಾಗಲೇ ರಾಜ್ಯದೆಲ್ಲಡೆ ಬೇಜಾನ್ ಸದ್ದು ಮಾಡುತ್ತಿದೆ. ಇದೀಗ ಕೊಪ್ಪದಲ್ಲಿ ಇದೇ ಸಿನಿಮಾದ ಮೊದಲ ಹಾಡು ರಿಲೀಸ್ ಆಗಿದೆ. ಈ ಹಾಡು ಸಂಗೀತ ಪ್ರಿಯರಿಗೆ ಸಖತ್ ಕಿಕ್ ಕೊಟ್ಟಿದೆ.

'ಇನಾಮ್ದಾರ್' ಸಿನಿಮಾವನ್ನು ಸಂದೇಶ್ ಶೆಟ್ಟಿ ಆಜ್ರಿ ಆಕ್ಷನ್ ಕಟ್ ಹೇಳಿದ್ದಾರೆ. ನಿರಂಜನ್ ಶೆಟ್ಟಿ ತಲ್ಲೂರು ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಕೊಪ್ಪದಲ್ಲಿ ಇದೇ 'ಇನಾಮ್ದಾರ್' ಸಿಲ್ಕು ಮಿಲ್ಕು ಹಾಡನ್ನು ರಿಲೀಸ್ ಮಾಡಲಾಗಿದೆ. ಕೊಪ್ಪ ಜನತೆಯನ್ನ ಹುಚ್ಚೆಬ್ಬಿಸಿದ ಇನಾಮ್ದಾರ ಚಿತ್ರ ತಂಡ ಮತ್ತಷ್ಟು ಭರವಸೆಯನ್ನು ಮೂಡಿಸುವ ನಿಟ್ಟಿನಲ್ಲಿ ಪ್ರೇಕ್ಷಕರನ್ನು ಆಕರ್ಷಿಸುತ್ತಿದೆ.

ಅಂದ್ಹಾಗೆ ಈ ಸಿನಿಮಾದಲ್ಲಿ ಕಲಾವಿದರ ದಂಡೇ ಇದೆ. ಈ ಸಿನಿಮಾ ಎರಡು ಬಣ್ಣಗಳ ನಡುವಿನ ಘರ್ಷಣೆಯ ಸುತ್ತ ಹೆಣೆದಿರುವ ಕಥೆ. ಹೀಗಾಗಿ ಸಿನಿಮಾ ಮತ್ತಷ್ಟು ಕುತೂಹಲ ಮೂಡಿಸಿದೆ. ಕೊಪ್ಪದ ಸಾವಿರಾರು ಜನರ ಮುಂದೆ ಸಿಲ್ಕು ಮಿಲ್ಕು ಸಾಂಗ್ ರಿಲೀಸ್ ಮಾಡಿಸಲಾಗಿದೆ.

Kannada Actor Pramod Shetty Got Title As Sandalwood Ghatodghaja

ವಿಶೇಷ ಅಂದ್ರೆ, ನಟ ಪ್ರಮೋದ್ ಶೆಟ್ಟಿಗೆ ಚಿತ್ರತಂಡ ಸ್ಯಾಂಡಲ್‌ವುಡ್ ಘಟೋದ್ಗಜ ಎಂಬ ಬಿರುದು ನೀಡಲಾಗಿದೆ. ಇದೇ ಸಂದರ್ಭದಲ್ಲಿ ಡೈಲಾಗ್ ಕೇಳಿ ಕೊಪ್ಪದ ಜನರು ಹುಚ್ಚೆದ್ದು ಕುಣಿದಿದ್ದಾರೆ. ಇಡೀ ಸಿನಿಮಾ ಟೆಕ್ನಿಕಲ್ ಆಗಲಿ, ಕಥೆಯಾಗಲಿ ಎಲ್ಲವೂ ಕೂಡ ಅದ್ಭುತವಾಗಿ ಮೂಡಿ ಬಂದಿದೆ.

ಎರಡು ಜನಾಂಗ ಘರ್ಷಣೆಯನ್ನ ತೆರೆ ಮೇಲೆ ತರಲು ನಿರ್ದೇಶಕರು ಹೊಸ ಪ್ರಯತ್ನ ಮಾಡಿದ್ದಾರೆ. ಈ ಸಿನಿಮಾ ಎಲ್ಲರಿಗೂ ಇಷ್ಟ ಆಗುತ್ತೆ ಎಂದು ಚಿತ್ರತಂಡ ಭರವಸೆಯಲ್ಲಿದೆ.

Kannada Actor Pramod Shetty Got Title As Sandalwood Ghatodghaja

ಈ ಸಿನಿಮಾದ ನಾಯಕನಾಗಿ ರಂಜನ್ ಛತ್ರಪತಿ, ನಟಿ ಚಿರಶ್ರೀ ಅಂಚನ್ ಹಾಗೂ ಏಸ್ತಾರ್ ನೆರೋನಾ, ರಘು ಪಾಂಡೇಶ್ವರ್, ಕರಣ್ ಕುಂದರ್, ಯಶ್ ಆಚಾರ್ಯ, ಮಹಾಬಲೇಶ್ವರ ಕ್ಯಾದಗಿ, ರಕ್ಷಿತ್ ಶೆಟ್ಟಿ ನಟಿಸಿದ್ದಾರೆ.

{document1}

{document2}

More from Filmibeat

English summary
Kannada Actor Pramod Shetty Got Title As Sandalwood Ghatodghaja, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X