For Quick Alerts
  ALLOW NOTIFICATIONS  
  For Daily Alerts

  ಶೂಟಿಂಗ್ ವೇಳೆ ಡಿಂಗ್ರಿ ನಾಗರಾಜ್ ಪುತ್ರ ನಟ ರಾಜವರ್ಧನ್ ಬೆನ್ನಿಗೆ ಗಾಯ

  |

  ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ನಟ ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿರುವುದು ನಿಮಗೆ ಗೊತ್ತಿರುವ ವಿಚಾರವೇ. ರಾಜವರ್ಧನ್ ಸದ್ಯ 'ಬಿಚ್ಚುಗತ್ತಿ' ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ.

  'ಬಿಚ್ಚುಗತ್ತಿ' ಚಿತ್ರದ ಶೂಟಿಂಗ್ ವೇಳೆ ಕುದುರೆಯಿಂದ ಬಿದ್ದ ರಾಜವರ್ಧನ್ ಬೆನ್ನಿಗೆ ಪೆಟ್ಟಾಗಿದೆ. ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ರಾಜವರ್ಧನ್ ಬಚಾವ್ ಆಗಿದ್ದಾರೆ.

  ಚಂದನವನದ 'ಫ್ಲೈ'ಯಿಂಗ್ ಸ್ಟಾರ್ ರಾಜವರ್ಧನ್ ಸಂದರ್ಶನ

  ರಾಜವರ್ಧನ್ ರವರನ್ನ ಸದ್ಯ ಪೀಪಲ್ ಟ್ರೀ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. 15-20 ದಿನಗಳ ಕಾಲ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ.

  ಡಿಂಗ್ರಿ ನಾಗರಾಜ್ ಪುತ್ರನಿಗೆ ಹೊಡಿತು ಚಾನ್ಸು.!

  ಅಂದ್ಹಾಗೆ, ಹರಿ ಸಂತು ನಿರ್ದೇಶನದ ಸಿನಿಮಾ 'ಬಿಚ್ಚುಗತ್ತಿ'. ಅದ್ಧೂರಿ ವೆಚ್ಚದಲ್ಲಿ ಕೋಟೆ ಸೆಟ್ ನಿರ್ಮಿಸಿ ಕಳೆದ ಮೂವತ್ತು ದಿನಗಳಿಂದ ನೆಲಮಂಗಲದ ಬಳಿ ಶೂಟಿಂಗ್ ನಡೆಸಲಾಗುತ್ತಿತ್ತು. ಮುಂದಿನ ಶೆಡ್ಯೂಲ್ ಚಿತ್ರದುರ್ಗದ ಕೋಟೆಯಲ್ಲಿ ಪ್ಲಾನ್ ಮಾಡಲಾಗಿತ್ತು. ಆದ್ರೆ, ಅಷ್ಟರಲ್ಲಿ ಅವಘಡ ಸಂಭವಿಸಿದ್ದು ರಾಜವರ್ಧನ್ ಬೆಡ್ ರೆಸ್ಟ್ ನಲ್ಲಿದ್ದಾರೆ.

  English summary
  Kannada Actor Rajavardhan injured during Kannada Movie 'Bicchu Gathi' shooting.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X