'ಅಯೋಗ್ಯ' ಚಿತ್ರದ ವೇಳೆ ನಟ ಸತೀಶ್ ನೀನಾಸಂ ಕಾರು ಅಪಘಾತ !

By Naveen

Recommended Video

'ಅಯೋಗ್ಯ' ಚಿತ್ರದ ವೇಳೆ ನಟ ಸತೀಶ್ ನೀನಾಸಂ ಕಾರು ಅಪಘಾತ | Filmibeat Kannada

ನಟ ನೀನಾಸಂ ಸತೀಶ್ ಅವರ ಕಾರು ಅಪಘಾತವಾಗಿದೆ. 'ಅಯೋಗ್ಯ' ಸಿನಿಮಾದ ಶೂಟಿಂಗ್ ಮುಗಿಸಿ ಹೊರಡುತ್ತಿರುವ ವೇಳೆ ಈ ಘಟನೆ ನಡೆದಿದೆ. ಆದರೆ ದೇವರ ದಯೆಯಿಂದ ಯಾರಿಗೂ ಏನೂ ಆಗಿಲ್ಲ. ಅಪಘಾತವಾದ ವಿಷಯವನ್ನು ಚಿತ್ರದ ನಿರ್ದೇಶಕ ಮಹೇಶ್ ತಿಳಿಸಿದ್ದಾರೆ.

'ಅಯೋಗ್ಯ' ಸಿನಿಮಾದ ಚಿತ್ರೀಕರಣ ಮಂಡ್ಯದಲ್ಲಿ ನಡೆಯುತ್ತಿತ್ತು. ನಿನ್ನೆ ಸಿನಿಮಾದ ಶೂಟಿಂಗ್ ನಲ್ಲಿ ಭಾಗಿಯಾಗಿದ್ದ ಸತೀಶ್ ವಾಪಸ್ ಹೋಗುವ ವೇಳೆ ಅವರ ಕಾರು ಅಪಘಾತ ಆಗಿದೆ. ಕಾರಿನಲ್ಲಿ ಸತೀಶ್ ಜೊತೆಗೆ ಇದ್ದ ಕಾರ್ ಡ್ರೈವರ್, ಮೇಕಪ್ ಮ್ಯಾನ್ ಮತ್ತು ಪರ್ಸನಲ್ ಅಸಿಸ್ಟೆಂಟ್ ಗಳಿಗೆ ಚಿಕ್ಕ ಪುಟ್ಟ ಗಾಯ ಆಗಿದೆ. ತಕ್ಷಣವೇ ಅವರಿಗೆ ಮಂಡ್ಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಕೊಡಿಸಲಾಗಿದೆ.

Kannada actor Sathish Neenasam injured while car accident

'ಅಯೋಗ್ಯ' ಸತೀಶ್ ನೀನಾಸಂ ಅಭಿನಯದ ಹೊಸ ಸಿನಿಮಾ. ಈ ಚಿತ್ರದಲ್ಲಿ ರಚಿತಾ ರಾಮ್ ನಾಯಕಿ ಆಗಿದ್ದಾರೆ. ಯೋಗರಾಜ್ ಭಟ್ ಶಿಷ್ಯ ಮಹೇಶ್ ನಿರ್ದೇಶನದ ಮೊದಲ ಸಿನಿಮಾ ಇದಾಗಿದೆ. ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಚಿತ್ರದ ಚಿತ್ರೀಕರಣ ಸದ್ಯ ಜೋರಾಗಿ ನಡೆಯುತ್ತಿದೆ. ಅಂದಹಾಗೆ, ಈ ಹಿಂದೆ ಕೂಡ ಸತೀಶ್ ನೀನಾಸಂ ಅವರಿಗೆ 'ಟೈಗರ್ ಗಲ್ಲಿ' ಚಿತ್ರೀಕರಣದ ವೇಳೆ ಗಾಯಗಳು ಆಗಿತ್ತು.

More from Filmibeat

English summary
Kannada actor 'Lusia' fame Sathish Neenasam injured while car accident in Mandya Yesterday (January 31).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X