ಶರಣ್ ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್: ಈ ಬಾರಿ 'ಪುಗ್ಸಟ್ಟೆ ಲೈಫು ಪುರುಸೊತ್ತೇ ಇಲ್ಲ' ಅನ್ನೋಕಾಗಲ್ಲ!
ಸ್ಯಾಂಡಲ್‌ವುಡ್‌ನ ಅಧ್ಯಕ್ಷ ಶರಣ್ ಹುಟ್ಟುಹಬ್ಬಕ್ಕೆ ಭರ್ಜರಿ ಗಿಫ್ಟ್ ಸಿಕ್ಕಿದೆ. ಈಗಾಗಲೇ 'ಛೂ ಮಂತರ್' ಸಿನಿಮಾ ಬರ್ತ್‌ಡೇ ಟೀಸರ್ ರಿಲೀಸ್ ಮಾಡಿ, ಅವರ ಅಭಿಮಾನಿಗಳಿಗೆ ಸಖತ್ ಪಡಿಸಿದ್ದಾಗಿದೆ. ಇದೇ ವೇಳೆ ಹೊಸ ಸಿನಿಮಾವೊಂದು ಅನೌನ್ಸ್ ಆಗಿದೆ.
ಸ್ಟಾರ್ ಹುಟ್ಟುಹಬ್ಬ ಬರುತ್ತೆ ಅಂದರೆ, ಆ ದಿನ ಅಭಿಮಾನಿಗಳಿಗೆ ಸ್ಪೆಷಲ್. ಯಾಕಂದ್ರೆ, ಆ ದಿನ ಕಾಂಪಿಟೇಷನ್‌ಗೆ ಬಿದ್ದವರಂತೆ ಸಿನಿಮಾ ಮಂದಿ ಒಂದಲ್ಲಾ ಒಂದು ಸಿನಿಮಾವನ್ನು ಅನೌನ್ಸ್ ಮಾಡುತ್ತಾರೆ. ಇದನ್ನು ಕಣ್ತುಂಬಿಕೊಂಡು ಫ್ಯಾನ್ಸ್ ಖುಷಿಯಾಗುತ್ತಾರೆ.

ಅಂದ್ಹಾಗೆ, ಶರಣ್ ಹುಟ್ಟುಹಬ್ಬಕ್ಕೆ ಅನೌನ್ಸ್ ಆದ ಹೊಸ ಸಿನಿಮಾದ ಹೆಸರು ಇನ್ನೂ ರಿವೀಲ್ ಆಗಿಲ್ಲ. ಆದರೆ, ಹೊಸ ಸಿನಿಮಾ ಅನೌನ್ಸ್ ಅಂತೂ ಆಗಿದೆ. 'ಪುಗ್ಸಟ್ಟೆ ಲೈಫು ಪುರುಸೊತ್ತೇ ಇಲ್ಲ' ಸಿನಿಮಾದ ನಿರ್ದೇಶಕ ಅರವಿಂದ್ ಕುಪ್ಲಿಕರ್ ಈ ಸಿನಿಮಾ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಶರಣ್ ಹೊಸ ಸಿನಿಮಾ ಡಾರ್ಕ್ ಹ್ಯೂಮರ್ ಕಥೆಯನ್ನು ಒಳಗೊಂಡಿದೆ. ಈ ಸಿನಿಮಾದಲ್ಲಿ ಹಿಂದಿನ ಪಾತ್ರಗಳಿಗಿಂತ ಶರಣ್ ಡಿಫ್ರೆಂಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಎಲೆಕ್ಟ್ರಿಷಿಯನ್ ಪಾತ್ರದಲ್ಲಿ ನಗುವಿನ ಜೊತೆ ಏನೋ ಸಂದೇಶ ಹೇಳುವುದಕ್ಕೆ ಹೊರಟಿದ್ದಾರೆ ಅನ್ನೋದಂತೂ ಸದ್ಯ.
ಬಿ.ಬಸವರಾಜ್ ಹಾಗೂ ಶ್ರೀಧರ್ ಎಂಬುವವರು ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಅರವಿಂದ್ ಕುಪ್ಲಿಕರ್ ನಿರ್ದೇಶನ ಮಾಡುತ್ತಿದ್ದಾರೆ. ಸಂಚಾರಿ ವಿಜಯ್ ಅಭಿನಯದ 'ಪುಗ್ಸಟ್ಟೆ ಲೈಫು ಪುರುಸೋತ್ತೇ ಇಲ್ಲ' ಸಿನಿಮಾ ತೆರೆಕಂಡ ಬಳಿಕ ಅರವಿಂದ್ ಕುಪ್ಲಿಕರ್ ನಿರ್ದೇಶಿಸುತ್ತಿರುವ ಸಿನಿಮಾವಿದು.

ಈ ಸಿನಿಮಾದ ಕಥೆ ಬಾಗಲಕೋಟೆಯಲ್ಲಿ ನಡೆಯುತ್ತಿದೆ. ಈ ಕಾರಣಕ್ಕಾಗಿಯೇ ಉತ್ತರ ಕರ್ನಾಟಕ ಶೈಲಿ ಭಾಷೆಯಲ್ಲಿ ಸ್ಯಾಂಡಲ್‌ವುಡ್ ಅಧ್ಯಕ್ಷ ಶರಣ್ ಗಮನ ಸೆಳೆಯುತ್ತಾರೆ ಅಂತಾರೆ ನಿರ್ದೇಶಕ ಅರವಿಂದ್
ಶರಣ್ ಜೊತೆಗೆ ಈ ಸಿನಿಮಾದಲ್ಲಿ ಅಚ್ಯುತ್ ಕುಮಾರ್, ರಂಗಾಯಣ ರಘು ಸೇರಿದಂತೆ ಹೊಸ ಕಲಾವಿದರು ಕಾಣಿಸಿಕೊಳ್ಳುತ್ತಿದ್ದಾರೆ. ಇದೇ ಫೆಬ್ರವರಿ ತಿಂಗಳ 20ರಿಂದ ಸಿನಿಮಾದ ಚಿತ್ರೀಕರಣ ಆರಂಭ ಆಗಲಿದೆ. ಈ ಸಿನಿಮಾದ ಟೈಟಲ್ ಹಾಗೂ ಸಿನಿಮಾ ಬಗೆಗಿನ ಹೆಚ್ಚಿನ ಶೀಘ್ರದಲ್ಲಿಯೇ ಹೊರಬೀಳಲಿದೆ.


Click it and Unblock the Notifications











