ಆಪ್ತಮಿತ್ರ ಶೈಲಿಯ ಸಿನಿಮಾ 'ಅವತಾರ ಪುರುಷ': 10 ಅವತಾರದಲ್ಲಿ ಶರಣ್

ಡಿಸೆಂಬರ್ ತಿಂಗಳಲ್ಲಿ ಒಂದರ ಹಿಂದೊಂದು ಸಿನಿಮಾ ರಿಲೀಸ್ ಆಗುತ್ತಿದೆ. ಈ ವರ್ಷ ಮುಗಿಯುವುದರೊಳಗೆ ಬಿಗ್ ಸಿನಿಮಾಗಳು ರಿಲೀಸ್ ಆಗುತ್ತಿವೆ. ಇದರಲ್ಲಿ ಕಾಮಿಡಿ ಕಿಂಗ್ ಶರಣ್ ಅಭಿನಯದ ಅವತಾರ ಪುರುಷ ಕೂಡ ಒಂದು. ಸಿಂಪಲ್ ಸುನಿ ನಿರ್ದೇಶಿಸಿ, ಪುಷ್ಕರ್ ಮಲ್ಲಿಕಾರ್ಜುನ್ ನಿರ್ಮಿಸಿರುವ 'ಅವತಾರ ಪುರುಷ' ಸಿನಿಮಾ ಡಿಸೆಂಬರ್ 10 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

'ಅವತಾರ ಪುರುಷ' ಈಗಾಗಲೇ ರಿಲೀಸ್ ಆಗಿರುವ ಫಸ್ಟ್ ಲುಕ್ ಹಾಗೂ ಟೀಸರ್‌ನಿಂದ ಬೇಜಾನ್ ಸದ್ದು ಮಾಡುತ್ತಿದೆ. ಈ ಸಿನಿಮಾದಲ್ಲಿ ಶರಣ್ ಬರೋಬ್ಬರಿ 10 ಅವತಾರವೆತ್ತಿ ತೆರೆಮೇಲೆ ವಿಜೃಂಭಿಸಲಿದ್ದಾರೆ. ಹಿಂದೆಂದೂ ಇಂತಹದ್ದೊಂದು ಪ್ರಯತ್ನಕ್ಕೆ ಕೈ ಹಾಕಿರದ ಶರಣ್ ಸಿನಿಪ್ರಿಯರಲ್ಲಿ ಕುತೂಹಲ ಕೆರಳಿಸಿದ್ದಾರೆ. ಈ ಸಿನಿಮಾ ಬಗ್ಗೆ ಶರಣ್, ನಟಿ ಆಶಿಕಾ ರಂಗನಾಥ್ ಹಾಗೂ ನಿರ್ದೇಶಕ ಸಿಂಪಲ್ ಸುನಿ ಏನು ಹೇಳಿದ್ದಾರೆ? ಅನ್ನುವುದನ್ನು ತಿಳಿಯಲು ಮುಂದೆ ಓದಿ.

ಡಿಸೆಂಬರ್ 10 ರಂದು ಶರಣ್ 10 ಅವತಾರ

ಡಿಸೆಂಬರ್ 10 ರಂದು ಶರಣ್ 10 ಅವತಾರ

"ನಾನು ಇಲ್ಲಿವರೆಗೂ ಇಂತಹದ್ದೊಂದು ಚಿತ್ರದಲ್ಲಿ ನಟಿಸಿಲ್ಲ. ಇಲ್ಲಿವರೆಗಿನ ನನ್ನ ಸಿನಿಪಯಣದಲ್ಲೇ ಬಿಗ್ ಬಜೆಟ್ ಸಿನಿಮಾವಿದು. ಇಂತಹ ಅದ್ಧೂರಿ ಸಿನಿಮಾ ನಿರ್ಮಾಣಕ್ಕೆ ಮುಂದಾಗಿರುವ ನಿರ್ಮಾಪಕ ಪುಷ್ಕರ್ ಧೈರ್ಯ ಮೆಚ್ಚಲೇಬೇಕು. ನಿರ್ದೇಶಕ‌ ಸಿಂಪಲ್ ಸುನಿ ಹೆಸರಿನಲ್ಲಿ ಅಷ್ಟೇ ಸಿಂಪಲ್ ಅನ್ನುವುದಿಲ್ಲ. ಅವರು ಸಿಂಪಲೆಸ್ಟ್ ಸುನಿ. ಅವರ ನಿರ್ದೇಶನ, ಕೆಲಸ ಮಾಡುವ ರೀತಿ ಬಗ್ಗೆ ಎಷ್ಟು ಹೇಳಿದರು ಕಡಿಮೆನೇ. ನಾಯಕಿ ಆಶಿಕಾ ರಂಗನಾಥ್ ಅಭಿನಯ ಸೊಗಸಾಗಿ ಮೂಡಿ ಬಂದಿದೆ. ಈ ಸಿನಿಮಾದಲ್ಲಿ ನಾನು ಸುಮಾರು ಹತ್ತು ಅವತಾರಗಳಲ್ಲಿ ಕಾಣಿಸಿಕೊಳ್ಳುತ್ತೇನೆ." ಎಂದಿದ್ದಾರೆ ಕಾಮಿಡಿ ಕಿಂಗ್ ಶರಣ್.

ಶರಣ್- ಸಿಂಪಲ್ ಸುನಿ ಜೋಡಿನೇ ಹೈಲೈಟ್

ಶರಣ್- ಸಿಂಪಲ್ ಸುನಿ ಜೋಡಿನೇ ಹೈಲೈಟ್

" ಅವತಾರ ಪುರುಷ ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಬೆಸೆದ ಸಿನಿಮಾ. ನಾವೆಲ್ಲರೂ ಒಂದೇ ಕುಟುಂಬದವರಂತೆ ಇದ್ದು ಕೆಲಸ ಮಾಡಿದ್ದೇವೆ. ಶರಣ್ ಹಾಗೂ ಸುನಿ ಕಾಂಬಿನೇಶನಲ್ಲಿ ಈ ಸಿನಿಮಾ ಹೇಗೆ ಮೂಡಿಬಂದಿರಬಹುದು? ಅನ್ನುವ ಕುತೂಹಲವಿದೆ. ಈ ಸಿನಿಮಾ ನೋಡುವ ಕಾತುರತೆ ನನ್ನಲ್ಲೂ ಇದೆ. ಉತ್ತಮ ಸಿನಿಮಾದಲ್ಲಿ ಅಭಿನಯಿಸಿದೆ ಅನ್ನುವ ತೃಪ್ತಿ ನನಗಿದೆ. ಪ್ರೇಕ್ಷಕರು ಕೂಡ ಮೆಚ್ಚಿ ಕೊಳ್ಳುತ್ತಾರೆ ಎಂಬ ಭರವಸೆಯಿದೆ " ಅಂತಾರೆ ನಟಿ ಆಶಿಕಾ ರಂಗನಾಥ್.

ವೆಬ್ ಸಿರೀಸ್‌ಗೆ ಹೆಣೆದ ಕಥೆ ಸಿನಿಮಾ ಆಯ್ತು

ವೆಬ್ ಸಿರೀಸ್‌ಗೆ ಹೆಣೆದ ಕಥೆ ಸಿನಿಮಾ ಆಯ್ತು

" ಅವತಾರ ಪುರುಷ ನಾನು ವೆಬ್ ಸಿರೀಸ್ ಗೆ ಮಾಡಬೇಕು ಅಂತ ಮಾಡಿದ ಕಥೆಯಿದು. ನಿರ್ಮಾಪಕ ಪುಷ್ಕರ್ ಅವರಿಗೆ ಈ ಕತೆ ಹೇಳಿದಾಗ ವೆಬ್ ಸಿರೀಸ್ ಬೇಡ, ಸಿನಿಮಾ ಮಾಡೋಣ ಅಂತ ಹೇಳಿದರು. ಈ ಸಿನಿಮಾ ಎರಡು ಭಾಗಗಳಲ್ಲಿ ನಿರ್ಮಾಣವಾಗಿದೆ. ಮೊದಲ ಭಾಗ ಇದೇ ಡಿಸೆಂಬರ್ 10ರಂದು ಬಿಡುಗಡೆಯಾಗಲಿದೆ. ಇನ್ನು ಎರಡನೇ ಭಾಗದ ಚಿತ್ರೀಕರಣವೂ ಬಹುತೇಕ ಮುಗಿದಿದೆ. ಪ್ರತಿಯೊಬ್ಬ ನಿರ್ದೇಶಕನಿಗೆ ಅವನ ಸಿನಿಮಾ ಬಗ್ಗೆ ಅವನದ್ದೇ ಆದ ಒಂದು ಕಲ್ಪನೆ ಇರುತ್ತದೆ. ಆದರೆ, ಆ ಕಲ್ಪನೆಗೂ ಮೀರಿ " ಅವತಾರ ಪುರುಷ " ಚಿತ್ರ ಬಂದಿದೆ. ಶರಣ್ - ಆಶಿಕಾ ರಂಗನಾಥ್ ಅವರ ಜೋಡಿ ನೋಡುಗರನ್ನು ಮೋಡಿ ಮಾಡಲಿದೆ. ಶ್ರೀನಗರ ಕಿಟ್ಟಿ, ಸಾಯಿಕುಮಾರ್, ಭವ್ಯ, ಸುಧಾರಣಿ, ಮುಂತಾದ ಅನುಭವಿ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ." ಅಂತ ಸಿನಿಮಾ ಬಗ್ಗೆ ಮಾಹಿತಿ ನೀಡಿದ್ದಾರೆ ನಿರ್ದೇಶಕ ಸಿಂಪಲ್ ಸುನಿ.

'ಆಪ್ತಮಿತ್ರ' ಸಿನಿಮಾ ಶೈಲಿಯ ಕಥೆ ಹೊಂದಿದೆ 'ಅವತಾರ ಪುರುಷ'

'ಆಪ್ತಮಿತ್ರ' ಸಿನಿಮಾ ಶೈಲಿಯ ಕಥೆ ಹೊಂದಿದೆ 'ಅವತಾರ ಪುರುಷ'

" ಆಪ್ತಮಿತ್ರ" ಬಳಿಕ ಕನ್ನಡದಲ್ಲಿ ಬರುತ್ತಿರುವ ಸಿನಿಮಾ 'ಅವತಾರ ಪುರುಷ' ಎಂದು ಹೇಳಬಹುದು. ಕಳೆದ 10-15 ವರ್ಷಗಳಲ್ಲಿ ಇಂತಹ ಸಿನಿಮಾ ಬಂದಿಲ್ಲ. ಶರಣ್, ಆಶಿಕಾ ರಂಗನಾಥ್ ಹಾಗೂ ನಿರ್ದೇಶಕ ಸಿಂಪಲ್ ಸುನಿ ಸೇರಿದಂತೆ ಎಲ್ಲಾ ಕಲಾವಿದರ ಸಹಕಾರದಿಂದ 'ಅವತಾರ ಪುರುಷ' ಉತ್ತಮವಾಗಿ ಮೂಡಿಬಂದಿದೆ. ಡಿಸೆಂಬರ್ 10ರಂದು ಸುಮಾರು 350 ಕ್ಕೂ ಅಧಿಕ ಚಿತ್ರಮಂದಿರದಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ. ಭಾಗ ೧ ಬಿಡುಗಡೆಯಾದ ನೂರನೇ ದಿನಕ್ಕೆ ಸರಿಯಾಗಿ ಈ ಚಿತ್ರದ ಎರಡನೇ ಭಾಗ ಕೂಡ ರಿಲೀಸ್ ಆಗುತ್ತೆ." ಅಂತಾರೆ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನ.

More from Filmibeat

English summary
Kannada actor Sharan will be seen in 10 avatara in the movie Avatara Purusha part 1. Avatara Purusha is like Apthamithra kind of movie says Sharan, Ashika Ranganath, Suni and producer Pushkar Mallikarjunaiyya.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X