ಶಿವಣ್ಣ 63ನೇ ಹುಟ್ಟುಹಬ್ಬಕ್ಕೆ ಸಿನಿಮಾಗಳ ಸುರಿಮಳೆ; ಕೈಯಲ್ಲಿ ಇರುವ ಸಿನಿಮಾಗಳೆಷ್ಟು?

ಕನ್ನಡ ಚಿತ್ರರಂಗದಲ್ಲಿ ಯಾವಾಗಲೂ ಬ್ಯುಸಿ ಇರುವ ನಟ ಯಾರು ಅಂತ ಕೇಳಿದರೆ, ಎಲ್ಲರೂ ಹೇಳುವ ಒಂದೇ ಹೆಸರು ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್. ಕಳೆದ ಎರಡು ವರ್ಷಗಳು ಬಿಟ್ಟರೆ, ಸ್ಯಾಂಡಲ್‌ವುಡ್‌ನಲ್ಲಿ ವರ್ಷಕ್ಕೆ ಎರಡು ಸಿನಿಮಾ ರಿಲೀಸ್ ಮಾಡುವ ನಟ ಶಿವಣ್ಣ ಮಾತ್ರ. ಆ ಎರಡು ಸಿನಿಮಾಗಳು ರಿಲೀಸ್‌ಗೆ ರೆಡಿ ಇರುವಾಗಲೇ ಇನ್ನೆರಡು ಸಿನಿಮಾಗಳು ಶೂಟಿಂಗ್ ಪ್ಲೋರ್‌ನಲ್ಲಿ ಇರುತ್ತವೆ ಮತ್ತೊಂದು ವಿಷಯ.

ಇಂದು (ಜುಲೈ 12) ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ 63ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಬಹಳ ದಿನಗಳ ಬಳಿಕ ಅಭಿಮಾನಿಗಳು ಶಿವಣ್ಣನನ್ನು ಭೇಟಿ ಮಾಡುತ್ತಿದ್ದಾರೆ. ಹೀಗಾಗಿ ರಾತ್ರಿಯಿಂದಲೇ ಮನೆ ಮುಂದೆ ಸಂಭ್ರಮ ಮನೆ ಮಾಡಿದೆ. ದೂರದೂರುಗಳಿಂದ ಅಭಿಮಾನಿಗಳು ಬಂದು ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಶಿವಣ್ಣ ಕೂಡ ಗುಣಮುಖರಾದ ಬಳಿಕ ಅಭಿಮಾನಿಗಳನ್ನು ಭೇಟಿ ಮಾಡುತ್ತಿದ್ದಾರೆ.

Kannada actor Shivarajkumar list of movies announced on his 63rd Birthday

ಇನ್ನೊಂದು ಕಡೆ ಸ್ಯಾಂಡಲ್‌ವುಡ್‌ ಮಂದಿ ಕೂಡ ಶಿವರಾಜ್‌ಕುಮಾರ್ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷ ಕೂಡ ಸಾಲು ಸಾಲು ಸಿನಿಮಾ ಅನೌನ್ಸ್ ಆಗಿವೆ. ಶಿವಣ್ಣನ ಜೊತೆ ಸಿನಿಮಾ ಮಾಡುವುದಕ್ಕೆ ಸಿನಿಮಾ ಮಂದಿ ತುದಿಗಾಲಲ್ಲಿ ನಿಂತಿದ್ದಾರೆ. ಹಾಗಿದ್ದರೆ, ಹುಟ್ಟುಹಬ್ಬದಂದು ಅನೌನ್ಸ್ ಆದ ಶಿವಣ್ಣನ ಸಿನಿಮಾಗಳ ಲಿಸ್ಟ್ ಇಲ್ಲಿದೆ.

ಶಿವಣ್ಣ ಫುಲ್ ಬ್ಯುಸಿ

ಶಿವಣ್ಣ ಈ ವರ್ಷ ಫುಲ್ ಬ್ಯುಸಿ. ಅನಾರೋಗ್ಯದ ಕಾರಣದಿಂದ ಐದಾರು ತಿಂಗಳು ಸಿನಿಮಾ ಮಾಡಲು ಸಾಧ್ಯವಾಗಿರಲಿಲ್ಲ. ಈಗ ಸಂಪೂರ್ಣ ಗುಣಮುಖರಾಗಿ ಮತ್ತೆ ಸಿನಿಮಾಗಳ ಕಡೆಗೆ ಗಮನ ಹರಿಸಿದ್ದಾರೆ. ಮೊದಲೇ ಒಪ್ಪಿಕೊಂಡಿರುವ ಸಿನಿಮಾಗಳ ಶೂಟಿಂಗ್ ಆರಂಭಿಸಿದ್ದಾರೆ. ಅದರಲ್ಲಿ ಶಿವಣ್ಣನ 131ನೇ ಸಿನಿಮಾ ಕೂಡ ಸೇರಿದೆ. ಇನ್ನೊಂದು ಕಡೆ ರಾಮ್‌ ಚರಣ್ ನಟಿಸುತ್ತಿರುವ 'ಪೆದ್ದಿ' ಹಾಗೂ ಸೂಪರ್‌ಸ್ಟಾರ್ ರಜನಿಕಾಂತ್ ನಟಿಸುತ್ತಿರುವ 'ಜೈಲರ್ 2' ಸಿನಿಮಾಗಳು ಕೂಡ ಸೇರಿವೆ.

'ಟಗರು 2'

ಬಹಳ ದಿನಗಳಿಂದ ಅಭಿಮಾನಿಗಳು ಕಾಯುತ್ತಿದ್ದ ಸಿನಿಮಾ 'ಟಗರು 2'. ಕೊನೆಗೂ ಈ ಸಿನಿಮಾ ಅನೌನ್ಸ್ ಆಗಿದೆ. ಶಿವಣ್ಣ ಹಾಗೂ ದುನಿಯಾ ಸೂರಿ ಮತ್ತೆ ಒಂದಾಗುತ್ತಿದ್ದಾರೆ. ಕೆ.ಪಿ. ಶ್ರೀಕಾಂತ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಶಿವಣ್ಣ ಬರ್ತ್‌ಡೇ ಸಿನಿಮಾ ಅನೌನ್ಸ್ ಮಾಡಿದ್ದು, ಮತ್ತೆ ಶಿವಣ್ಣ ಲಾಂಗ್ ಹಿಡಿದ ಫಸ್ಟ್ ಲುಕ್ ಅನ್ನು ರಿಲೀಸ್ ಮಾಡಲಾಗಿದೆ. 'ಟಗರು 2' ಪೋಸ್ಟರ್ ಈಗಾಗಲೇ ಸದ್ದು ಮಾಡುವುದಕ್ಕೆ ಶುರು ಮಾಡಿದೆ.

666 ಆಪರೇಷನ್ ಡ್ರೀಮ್ ಥಿಯೇಟರ್

ಕನ್ನಡದ ಮತ್ತೊಬ್ಬ ಕ್ರಿಯೇಟಿವ್ ಡೈರೆಕ್ಟರ್ ಹೇಮಂತ್ ರಾವ್ ಈ ಹಿಂದೆನೇ ಶಿವಣ್ಣನಾಗಿ ಒಂದು ಸಿನಿಮಾ ಅನೌನ್ಸ್ ಮಾಡಿದ್ದರು. ಆದರೆ, ಆ ಸಿನಿಮಾ ಸೆಟ್ಟೇರಲಿಲ್ಲ. ಅದರ ಬೆನ್ನಲ್ಲೇ '666 ಆಪರೇಷನ್ ಡ್ರೀಮ್ ಥಿಯೇಟರ್' ಸಿನಿಮಾ ಅನೌನ್ಸ್ ಆಗಿದೆ. ಡಾಲಿ ಧನಂಜಯ್ ಹಾಗೂ ಶಿವಣ್ಣ ಮತ್ತೆ ಒಟ್ಟಿಗೆ ನಟಿಸುತ್ತಿರುವ ಸಿನಿಮಾವಿದು. ರೆಟ್ರೋ ಲುಕ್‌ನಲ್ಲಿರುವ ಶಿವಣ್ಣನ ಲುಕ್‌ ಅನ್ನು ನಿರ್ದೇಶಕರು ಈಗಾಗಲೇ ರಿವೀಲ್ ಮಾಡಿದ್ದಾರೆ.

ಮಂಡ್ಯ ಬ್ರದರ್ಸ್

ಶಿವರಾಜ್‌ಕುಮಾರ್ ಸುಮಾರು 15 ವರ್ಷಗಳ ಬಳಿಕ ಹಳ್ಳಿ ಸಬ್ಜೆಕ್ಟ್‌ನಲ್ಲಿ ನಟಿಸುತ್ತಿದ್ದಾರೆ. ತಮಿಳು ಚಿತ್ರರಂಗದ ಜನಪ್ರಿಯ ನಿರ್ದೇಶಕ ಎನ್.ಮಹಾರಾಜನ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಸದ್ಯ ಈ ಸಿನಿಮಾಗೆ 'ಮಂಡ್ಯ ಬ್ರದರ್ಸ್' ಎಂಬ ಟೈಟಲ್ ಇಡುವ ಬಗ್ಗೆ ಚಿಂತನೆ ನಡೆದಿದೆ ಎನ್ನಲಾಗಿದೆ. ಆದರೆ, ಚಿತ್ರತಂಡ ಟೈಟಲ್ ಅನ್ನು ಅಧಿಕೃತವಾಗಿ ಘೋಷಣೆ ಮಾಡಿಲ್ಲ.

Kannada actor Shivarajkumar list of movies announced on his 63rd Birthday


ಕೈಯಲ್ಲಿರುವ ಸಿನಿಮಾಗಳು

ಶಿವರಾಜ್‌ಕುಮಾರ್ ಬರ್ತ್‌ಡೇಯಂದು ಇನ್ನೂ ಸಿನಿಮಾಗಳು ಅನೌನ್ಸ್ ಆಗೋದು ಬಾಕಿ. ಆದರೆ, ಅದಾಗಲೇ ಶಿವಣ್ಣ ಗ್ರೀನ್ ಸಿಗ್ನಲ್ ಕೊಟ್ಟಿರುವ ಸಾಕಷ್ಟು ಸಿನಿಮಾಗಳಿವೆ. ಶ್ರೀನಿ ನಿರ್ದೇಶಿಸುತ್ತಿರುವ 'ಆನಂದ್' ಅನೌನ್ಸ್ ಆಗಿದ್ದು, ಗೀತಾ ಶಿವರಾಜ್‌ಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ. ಇದರ ಜೊತೆಗೇ ಶಿವಣ್ಣನ 131ನೇ ಸಿನಿಮಾದ ಶೂಟಿಂಗ್ ಕೂಡ ನಡೆಯುತ್ತಿದೆ. ಅರ್ಜುನ್ ಜನ್ಯ ನಿರ್ದೇಶಿಸಿದ '45' ಸಿನಿಮಾದ ಬಿಡುಗಡೆಗೆ ರೆಡಿಯಾಗಿದೆ. 'ಉತ್ತರಕಾಂಡ' ಶೂಟಿಂಗ್ ಮತ್ತೆ ಶುರುವಾಗಬೇಕಿದೆ.


ಪರಭಾಷೆಯಲ್ಲೂ ಬ್ಯುಸಿ

ಶಿವಣ್ಣ ಈಗಾಗಲೇ ರಾಮ್ ಚರಣ್ ಸಿನಿಮಾ 'ಪೆದ್ದಿ'ಯಲ್ಲಿ ನಟಿಸಿದ್ದಾರೆ. ಇದರೊಂದಿಗೆ ಸೂಪರ್‌ಸ್ಟಾರ್ ರಜನಿಕಾಂತ್ ನಟಿಸುತ್ತಿರುವ 'ಜೈಲರ್ 2' ಸಿನಿಮಾದಲ್ಲಿ ನರಸಿಂಹನಾಗಿ ಕಾಣಿಸಿಕೊಳ್ಳಲಿದ್ದಾರೆ. ಮೊದಲ ಪಾರ್ಟ್‌ನಲ್ಲಿ ಶಿವಣ್ಣನ ಪಾತ್ರ ಎಲ್ಲರಿಗೂ ಇಷ್ಟ ಆಗಿತ್ತು. ಈಗ ಎರಡನೇ ಪಾರ್ಟ್‌ನಲ್ಲಿ ಶಿವಣ್ಣನ ಖದರ್ ನೋಡುವುದಕ್ಕೆ ಫ್ಯಾನ್ಸ್ ತುದಿಗಾಲಲ್ಲಿ ನಿಂತಿದ್ದಾರೆ. ಹಾಗೇ ಮೋಹನ್‌ಲಾಲ್, ಮಮ್ಮುಟ್ಟಿ ನಟಿಸುತ್ತಿರುವ ಮಲಯಾಳಂ ಸಿನಿಮಾಗೂ ಮಾತುಕತೆ ನಡೆಯುತ್ತಿದೆ ಎಂಬ ಸುದ್ದಿನೂ ಹರಿದಾಡುತ್ತಿದೆ.

More from Filmibeat

English summary
Kannada actor Shivarajkumar list of movies announced on his 63rd Birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X