'ಬಘೀರ' ರಿಲೀಸ್‌ಗೆ ಮುಹೂರ್ತ ಸಿಕ್ಕೇಬಿಡ್ತು; ಉಪೇಂದ್ರ 'ಯುಐ' ಕತೆಯೇನು? ಬಾಕ್ಸಾಫೀಸ್‌ನಲ್ಲಿ ದೀಪಾವಳಿ ಆಚರಿಸೋದ್ಯಾರು?

ಹೊಂಬಾಳೆ ಫಿಲ್ಮ್ ನಿರ್ಮಿಸಿರುವ ಮತ್ತೊಂದು ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಬಘೀರ'. ಈ ಸಿನಿಮಾದ ಕಳೆದ ಕೆಲವು ತಿಂಗಳಿನಿಂದ ಶೂಟಿಂಗ್ ಆಗುತ್ತಲೇ ಇತ್ತು. ಕೊನೆಗೂ ಶೂಟಿಂಗ್ ಎಲ್ಲ ಮುಗಿದ ಬಳಿಕವೂ ರಿಲೀಸ್ ಡೇಟ್ ಅನೌನ್ಸ್ ಮಾಡುವುದಕ್ಕೆ ಸ್ವಲ್ಪ ಸಮಯವನ್ನು ತೆಗೆದುಕೊಂಡಿತ್ತು. ಶ್ರೀಮುರಳಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಈ ಸಿನಿಮಾ ಕೊನೆಗೂ ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡಿದೆ.

ಈ ವರ್ಷ ರಿಲೀಸ್ ಆಗುವ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಪಟ್ಟಿಯಲ್ಲಿ 'ಬಘೀರ' ಹೆಸರಿದ್ದರೂ, ರಿಲೀಸ್ ಆಗುತ್ತಾ? ಇಲ್ವಾ? ಅನ್ನೋ ಅನುಮಾನವಂತೂ ಇತ್ತು. ಪ್ರಶಾಂತ್ ನೀಲ್ ಕಥೆ ಬರೆದಿದ್ದು, 'ಲಕ್ಕಿ' ಸಿನಿಮಾದ ನಿರ್ದೇಶಕ ಡಾಕ್ಟರ್ ಸೂರಿ ಆಕ್ಷನ್ ಕಟ್ ಹೇಳಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಹೊಂಬಾಳೆ ಫಿಲ್ಮ್ಸ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದರಿಂದ ಅದ್ಧೂರಿಯಾಗಿಯೇ ರಿಲೀಸ್ ಆಗೋದು ಕನ್ಫರ್ಮ್ ಆಗಿತ್ತು.

Kannada actor SriMurali movie Bagheera release date out what about Upendra UI film

ಕೊನೆಗೂ 'ಬಘೀರ' ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಅಕ್ಟೋಬರ್ 31ಕ್ಕೆ ರಿಲೀಸ್ ಮಾಡುವುದಾಗಿ ಅನೌನ್ಸ್ ಮಾಡಿದೆ. ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದೆ. ಆದರೆ, ಈಗಾಗಲೇ ಅಕ್ಟೋಬರ್‌ನಲ್ಲಿ ರಿಲೀಸ್ ಮಾಡುವುದಾಗಿ ಘೋಷಿಸಿದ್ದ ಉಪೇಂದ್ರ ನಿರ್ದೇಶಿಸಿ, ನಟಿಸಿರುವ 'ಯುಐ' ಸಿನಿಮಾದ ಕತೆಯೇನು? ಯಾವ ಡೇಟ್‌ನಲ್ಲಿ ರಿಲೀಸ್ ಆಗುತ್ತೆ? 'ಯುಐ' ಹಾಗೂ 'ಬಘೀರ' ರಿಲೀಸ್ ಬಗ್ಗೆ ಸ್ಯಾಂಡಲ್‌ವುಡ್‌ನಲ್ಲಿ ಹರಿದಾಡುತ್ತಿರುವ ಸುದ್ದಿಯೇನು? ತಿಳಿಯಲು ಮುಂದೆ ಓದಿ.

ದೀಪಾವಳಿ ಹಬ್ಬಕ್ಕೆ 'ಬಘೀರ'

ರೋರಿಂಗ್ ಸ್ಟಾರ್ ಶ್ರೀಮುರಳಿ ಹಾಗೂ ರುಕ್ಮಿಣಿ ವಸಂತ್ ಜೋಡಿಯ ಮೊದಲ ಸಿನಿಮಾವಿದು. 'ಕೆಜಿಎಫ್', 'ಕಾಂತಾರ'ದಂತಹ ಸಕ್ಸಸ್‌ಫುಲ್ ಸಿನಿಮಾಗಳನ್ನು ಕೊಟ್ಟ ಬಳಿಕ ಮತ್ತೊಂದು ಇಷ್ಟೇ ದೊಡ್ಡ ಸಕ್ಸಸ್ ಸ್ಯಾಂಡಲ್‌ವುಡ್‌ನಲ್ಲಿ ಹೊಂಬಾಳೆ ಫಿಲ್ಮ್ಸ್‌ಗೆ ಸಿಕ್ಕಿಲ್ಲ. ಹೀಗಾಗಿ 'ಬಘೀರ' ಸಿನಿಮಾ ಮೇಲೆ ಹೊಂಬಾಳೆ ಫಿಲ್ಮ್ಸ್ ಕೂಡ ಲೆಕ್ಕ ಹಾಕಿ ರಿಲೀಸ್ ಮಾಡುತ್ತಿದೆ. ಬೆಳಕಿನ ಹಬ್ಬ ದೀಪಾವಳಿಗೆ ಸಿನಿಮಾ ರಿಲೀಸ್ ಆಗುತ್ತಿರುವುದರಿಂದ ಬಾಕ್ಸಾಫೀಸ್‌ನಲ್ಲಿ 'ಬಘೀರ'ಗೆ ಹೆಚ್ಚು ಲಾಭ ಆಗಲಿದೆ.

ಇದೇ ವೇಳೆ ರಿಲೀಸ್ ಆಗಬೇಕಿತ್ತು 'ಯುಐ'

ಇನ್ನು ಉಪೇಂದ್ರ ನಿರ್ದೇಶಿಸಿ, ನಟಿಸಿರುವ 'ಯುಐ' ಸಿನಿಮಾ ಕೂಡ ಅಕ್ಟೋಬರ್‌ಗೆ ರಿಲೀಸ್ ಅಂತ ಅನೌನ್ಸ್ ಆಗಿದೆ. ಸ್ಯಾಂಡಲ್‌ವುಡ್ ಮಂದಿ 'ಯುಐ' ದೀಪಾವಳಿ ಹಬ್ಬಕ್ಕೆ ರಿಲೀಸ್ ಆಗುತ್ತೆ ಅಂತ ಮಾತಾಡಿಕೊಂಡಿತ್ತು. ಈ ಬಾರಿಗೆ ಬೆಳಕಿನ ಹಬ್ಬಕ್ಕೆ ರಿಯಲ್ ಸ್ಟಾರ್ ಉಪೇಂದ್ರ ಪಟಾಕಿ ಹೊಡೆಯೋದು ಗ್ಯಾರಂಟಿ ಅಂತಲೇ ಭಾವಿಸಲಾಗಿತ್ತು. ಆದರೆ, ದೀಪಾವಳಿ 'ಬಘೀರ' ರಿಲೀಸ್ ಆಗುವುದಾಗಿ ಅನೌನ್ಸ್ ಮಾಡಿದೆ. ಅಸಲಿಗೆ ದೀಪಾವಳಿ ಹಬ್ಬಕ್ಕೆ 'ಬಘೀರ' ಎಂಟ್ರಿ ಕೊಟ್ಟಿದ್ದೇಗೆ? 'ಯುಐ' ಇನ್ನೂ ಸೈಲೆಂಟ್ ಆಗಿರುವುದೇಕೆ?

Kannada actor SriMurali movie Bagheera release date out what about Upendra UI film

'UI' ಸೈಲೆಂಟ್ ಯಾಕೆ?

ಇನ್ನು ಉಪೇಂದ್ರ ಸಿನಿಮಾ 'ಯುಐ' ಸ್ಯಾಂಡಲ್‌ವುಡ್‌ನಲ್ಲಿ ಬೇರೊಂದು ಸುದ್ದಿ ಹರಿದಾಡುತ್ತಿದೆ. 'ಯುಐ' ಅಕ್ಟೋಬರ್‌ನಲ್ಲಿ ರಿಲೀಸ್ ಆಗೋದಿಲ್ಲ ಅನ್ನೋ ಸುದ್ದಿ ಓಡಾಡುತ್ತಿದೆ. 'ಯುಐ' ಸಿನಿಮಾ ಸಿಜಿ ವರ್ಕ್ ಇನ್ನೂ ಮುಗಿದಿಲ್ಲ. ಉಪ್ಪಿಗೆ ಫಸ್ಟ್ ಹಾಫ್‌ನ ಕಾಪಿ ಇತ್ತೀಚೆಗಷ್ಟೇ ಕೈ ಸೇರಿದೆ ಎಂದು ಹೇಳಲಾಗುತ್ತಿದೆ. ಇನ್ನೂ ಸೆಕೆಂಡ್ ಹಾಫ್‌ ಕೆಲಸ ಬಾಕಿಯಿದ್ದು, ಅದಕ್ಕೆ ಕಮ್ಮಿ ಅಂದರೂ ಇನ್ನು 40 ದಿನಗಳು ಬೇಕು ಎನ್ನುತ್ತಿದ್ದಾರೆ. ಈ ಕಾರಣಕ್ಕೆ 'ಯುಐ' ಅಕ್ಟೋಬರ್‌ ರಿಲೀಸ್ ಆಗೋದು ಅನುಮಾನ ಎನ್ನುತ್ತಿವೆ ಮೂಲಗಳು.

ಅಕ್ಟೋಬರ್‌ಗೆ ರಿಲೀಸ್ ಅಂತಾದರೇ..!

'ಯುಐ' ಘೋಷಣೆಯಾದಂತೆ ಅಕ್ಟೋಬರ್‌ಗೆ ರಿಲೀಸ್ ಮಾಡುವುದಕ್ಕೆ ಮುಂದಾದರೆ, ಇರೋದು ಒಂದೇ ಡೇಟ್. ಅಕ್ಟೋಬರ್ 25ಕ್ಕೆ ರಿಲೀಸ್ ಆಗಬೇಕು. ಯಾಕಂದ್ರೆ, 'ಮಾರ್ಟಿನ್' ಸಿನಿಮಾ ಅಕ್ಟೋಬರ್ 11ಕ್ಕೆ ರಿಲೀಸ್ ಆಗುತ್ತಿದೆ. ಪ್ಯಾನ್ ಇಂಡಿಯಾ ರಿಲೀಸ್ ಎರಡು ವಾರ ಗ್ಯಾಪ್ ಕೊಟ್ಟು ರಿಲೀಸ್ ಆಗಬೇಕು. ಹಾಗೇನಾದರೂ ಮಾಡಿದರೆ, 'ಯುಐ'ಗೂ 'ಬಘೀರ'ಗೂ ಉಳಿಯೋದು ಕೇವಲ ಒಂದು ವಾರದ ಅಂತರ ಅಷ್ಟೇ. ಹೀಗಾಗಿ ಅದು ಕೂಡ ಅಸಾಧ್ಯ. ಉಪ್ಪಿ ಸಿನಿಮಾ ಡಿಸೆಂಬರ್‌ಗೆ ಪೋಸ್ಟ್‌ಪೋನ್ ಆಗಬಹುದು ಅನ್ನೋದು ಸಿನಿಮಾ ಮಂದಿ ಬಾಯಲ್ಲಿ ಹರಿದಾಡುತ್ತಿರುವ ಸುದ್ದಿ. ಆದರೆ, 'ಯುಐ' ನಿರ್ಮಾಪಕರು ಇನ್ನೂ ಅಧಿಕೃತವಾಗಿ ಈ ಬಗ್ಗೆ ಹೇಳಿಕೆ ಕೊಟ್ಟಿಲ್ಲ.

More from Filmibeat

English summary
Kannada actor SriMurali movie Bagheera release date out what about Upendra UI film
Read more about: srimurali upendra filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X