‘Love...ಲಿ’ ಮೂಡ್ ನಲ್ಲಿ ಆಂಗ್ರಿ ಯಂಗ್ ಮ್ಯಾನ್ ಲುಕ್ ಕೊಟ್ಟ ವಸಿಷ್ಠ ಸಿಂಹ!

ಕನ್ನಡದ ಕಂಚಿನ ಕಂಠದ ನಟ ವಸಿಷ್ಠ ಸಿಂಹ ಹೊಸ ಸಿನಿಮಾ ಸೆಟ್ಟೇರಿದೆ. ಲವ್ ಮೂಡ್ನಲ್ಲಿ ಆಂಗ್ರಿ ಯಂಗ್ ಮ್ಯಾನ್ ಲುಕ್ ಕೊಟ್ಟಿದ್ದಾರೆ. ಇಷ್ಟು ದಿನ ರಗಡ್ ಲುಕ್‌ನಲ್ಲಿ ರಂಜಿಸಿದ ನಟನ ಹೊಸ ಅವತಾರ ಸಿನಿಪ್ರಿಯರಿಗೆ ಇಷ್ಟ ಆಗುತ್ತಿದೆ. ನಾಯಕನಾಗಿಯೂ, ಖಳನಾಯಕನಾಗಿ ಮಿಂಚಿದ ವಸಿಷ್ಠ ಸಿಂಹ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಹೆಜ್ಜೆಯನ್ನಿಡುತ್ತಿದ್ದಾರೆ. ಅಂದ್ಹಾಗೆ ಈ ಹೊಸ ಸಿನಿಮಾದ ಹೆಸರು 'Love...ಲಿ'.

Recommended Video

Dali Dhananjay | ನಾಲಕ್ಕು ಜನ ಸ್ನೇಹಿತರು ಸೇರಿದ್ರೆ ಚರಿತ್ರೆ ಆಗುತ್ತೆ ಅಂತ ಧನಂಜಯ್ ಹೇಳಿಕೊಟ್ಟಿದ್ದಾರೆ

ಸದ್ಯ ಈ ಹೊಸ ಸಿನಿಮಾ ಇಂದು (ಏಪ್ರಿಲ್ 21) ಸೆಟ್ಟೇರಿದೆ. ರೆಕಾರ್ಡ್ ಬ್ರೇಕಿಂಗ್ 'ಕೆಜಿಎಫ್ 2′ ಸಿನಿಮಾದಲ್ಲೂ ವಸಿಷ್ಠ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಇದೇ ಖುಷಿಯಲ್ಲಿ ವಿಶಿಷ್ಟ ಹೆಸರಿನ 'Love...ಲಿ' ಎಂಬ ವಿಭಿನ್ನಟೈಟಲ್ ಸಿನಿಮಾ ಸೆಟ್ಟೇರಿದೆ. ಈ ಟೈಟಲ್ ಸಿನಿಪ್ರಿಯರನ್ನು ಅಟ್ರಾಕ್ಟ್ ಮಾಡುತ್ತಿದೆ. ಇದೇ ವೇಳೆ ಚಿತ್ರತಂಡ ಫಸ್ಟ್ ಲುಕ್ ರಿಲೀಸ್ ಮಾಡಿದ್ದು, ಬೈಕ್ ಮೇಲೆ ಕುಳಿತು, ಧಮ್ ಎಳೆಯುತ್ತಿರುವ ಸ್ಟೈಲಿಶ್ ಲುಕ್ ಅಭಿಮಾನಿಗಳಿಗೆ ಕಿಕ್ ಕೊಡುತ್ತಿದೆ.

'Love...ಲಿ' ಎಂದ ವಸಿಷ್ಠ ಸಿಂಹ

ವಸಿಷ್ಠ ಸಿಂಹ ಹೊಸ ಸಿನಿಮಾ ಇಂಟ್ರೆಸ್ಟಿಂಗ್ ಆಗಿದೆ. 'Love...ಲಿ' ಎಂಬ ಬ್ಯೂಟಿಫುಲ್ ಟೈಟಲ್‌ನಿಂದಲೇ ಸಿನಿಪ್ರಿಯರ ಗಮನ ಸೆಳೆಯುತ್ತಿದೆ. 'ಲವ್ ಲಿ' ಚಿತ್ರದ ಫಸ್ಟ್ ಲುಕ್ ಕೂಡ ಚಿತ್ರತಂಡ ರಿಲೀಸ್ ಮಾಡಿದೆ.

Kannada Actor Vasista Simha Angry Young Man Look In New Movie Love Li

'Love...ಲಿ' ಪಕ್ಕಾ ಕಮರ್ಶಿಯಲ್ ಕಮ್ ರೊಮ್ಯಾಂಟಿಕ್ ಲವ್ ಸ್ಟೋರಿ ಸಿನಿಮಾವಾಗಿದೆ. ವಸಿಷ್ಠ ಸಿಂಹ ರೊಮ್ಯಾನ್ಸ್ ಜೊತೆ ಜೊತೆಗೆ ರೌಡಿಸಂ ಎಳೆಯನ್ನೂ ತರಲಾಗಿದೆ. ವಿಭಿನ್ನ ಕಥಾಹಂದರವನ್ನು ಒಳಗೊಂಡಿರುವ ಸಿನಿಮಾ ವಸಿಷ್ಠ ವೃತ್ತಿ ಬದುಕಿಗೆ ಹೊಸ ತಿರುವು ನೀಡುವ ಲಕ್ಷಣ ಕಾಣುತ್ತಿದೆ. ಕಳೆದ ಎಂಟು ವರ್ಷಗಳಿಂದ ವಸಿಷ್ಠ ಸಿಂಹಗೆ ಆಪ್ತರಾಗಿರುವ ಹಾಗೂ 'ಮಫ್ತಿ' ಸಿನಿಮಾದ ನಿರ್ದೇಶಕ ನರ್ತನ್ ಜೊತೆ ಕೆಲಸ ಮಾಡಿರುವ ಚೇತನ್ ಕೇಶವ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

Kannada Actor Vasista Simha Angry Young Man Look In New Movie Love Li

ವಸಿಷ್ಠ ಸಿಂಹ ಕೈಯಲ್ಲಿ ಹಲವು ಸಿನಿಮಾ

'Love...ಲಿ' ಸಿನಿಮಾ ಮೇ 4 ರಿಂದ ಬೆಂಗಳೂರು ಹಾಗೂ ಸುತ್ತಮುತ್ತ ಶೂಟಿಂಗ್ ಆರಂಭ ಆಗಲಿದೆ. ವಸಿಷ್ಠ ಸಿಂಹ ಹಾಗೂ ತಂಡ ಇಂದಿನಿಂದ ಸಿನಿಮಾ ಕೆಲಸಗಳಲ್ಲಿ ಭಾಗಿಯಾಗಲಿದ್ದು, ಈಗಾಗಲೇ ಬ್ಯುಸಿಯಾಗಿರುವ ನಟ, ಈ ಚಿತ್ರವನ್ನು ಎಷ್ಟು ಮುಗಿಸುತ್ತಾರೆ ಎನ್ನುವುದೇ ಕುತೂಹಲ.

ವಸಿಷ್ಠ ಸಿಂಹ ಕೈಯಲ್ಲಿ ಈಗಾಗಲೇ ಸಾಕಷ್ಟು ಪ್ರಾಜೆಕ್ಟ್‌ಗಳಿವೆ. 'ಹೆಡ್ ಬುಷ್', 'ಸಿಂಬಾ', 'ಓದೆಲಾ ರೈಲ್ವೇ ಸ್ಟೇಷನ್' ಸಿನಿಮಾ ಸೇರಿದಂತೆ ತೆಲುಗು ಸಿನಿಮಾ ಬಿಡುಗಡೆಯಾಗಬೇಕಿದೆ. ಸದ್ಯ ವಸಿಷ್ಠ ನಾಯಕ ನಟನಾಗಿ ಬಣ್ಣ ಹಚ್ಚಿರುವ 'ಕಾಲಚಕ್ರ' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಜೊತೆಗೆ ಚಿ'ತಲ್ವಾರ್ ಪೇಟೆ' ಸಿನಿಮಾದಲ್ಲಿ ಲೀಡ್‌ ರೋಲ್‌ನಲ್ಲಿ ನಟಿಸ್ತಿದ್ದಾರೆ. ಸದ್ಯ 'ಕೆಜಿಎಫ್ 2' ಸಿನಿಮಾದ ಖುಷಿಯಲ್ಲಿ ತೇಲಾಡುತ್ತಿದ್ದಾರೆ.

More from Filmibeat

English summary
Kannada Actor Vasista Simha Angry Young Man Look In New Movie Love Li. Know More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X