ಲಾಂಗ್ ಹಿಡಿದು ಖಡಕ್ ಎಂಟ್ರಿ ಕೊಟ್ಟ ವಸಿಷ್ಠ ಸಿಂಹ: ರಾ ಲುಕ್ 'ಲವ್ ಲಿ' ಎಂದು ಫ್ಯಾನ್ಸ್!

ಸ್ಯಾಂಡಲ್‌ವುಡ್‌ನಲ್ಲಿ ಲಾಂಗ್ ಹಿಡಿದ ಮಿಂಚಿದ ಹೀರೊಗಳಿಗೇನು ಕಮ್ಮಿಯಿಲ್ಲ. ಶಿವಣ್ಣ, ದರ್ಶನ್‌ರಿಂದ ಹಿಡಿದು ದುನಿಯಾ ವಿಜಯ್, ಡಾಲಿ ಎಲ್ಲರೂ ಲಾಂಗ್ ಹಿಡಿದವರೇ. ಲಾಂಗ್ ತೆರೆಮೇಲೆ ಎಂಟ್ರಿ ಕೊಟ್ಟ ಬಹುತೇಕ ಸಿನಿಮಾಗಳು ಹಿಟ್ ಲಿಸ್ಟ್ ಸೇರಿವೆ. ಈಗ ವಸಿಷ್ಠ ಸಿಂಹ ಲಾಂಗ್ ಹಿಡಿದು ರಗಡ್ ಲುಕ್ ಕೊಟ್ಟಿದ್ದಾರೆ.

ವಸಿಷ್ಠ ಸಿಂಹ ಅಭಿನಯದ ಹೊಸ ಸಿನಿಮಾವೊಂದು ಪೋಸ್ಟರ್‌ಗಳಿಂದಲೇ ಸದ್ದು ಮಾಡುತ್ತಿದೆ. ವಸಿಷ್ಠ ಸದ್ಯ 'Love..ಲಿ' ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಆರಂಭ ಆದಲ್ಲಿಂದ ಹಿಡಿದು ಇಲ್ಲಿವರೆಗೂ ಒಂದಲ್ಲ ಒಂದು ವಿಷಯಕ್ಕೆ ಸಿನಿಮಾ ಸದ್ದು ಮಾಡುತ್ತಲೇ ಇದೆ.

ಕಂಚಿನ ಕಂಠದ ಸ್ಯಾಂಡಲ್‌ವುಡ್ ನಟ ವಸಿಷ್ಠ ಸಿಂಹ 'Love..ಲಿ'ಯ ಹೊಸ ಪೋಸ್ಟರ್ ರಿಲೀಸ್ ಆಗಿದೆ. ರಕ್ತಸಿಕ್ತ ಕೈಯಲ್ಲಿ ಲಾಂಗ್ ಹಿಡಿದು ಖಡಕ್ ಲುಕ್ ಕೊಟ್ಟಿದ್ದಾರೆ. ಇನ್ನೊಂದೆಡೆ ಕೈಯಲ್ಲಿ ಧಮ್ ಎಳೆಯುತ್ತಾ, ರಾ ಲುಕ್‌ನಲ್ಲಿ ಮಿಂಚಿದ್ದಾರೆ. ವಸಿಷ್ಠ ಸಿಂಹ ಕೊಟ್ಟ ರಾ ಎಂಟ್ರಿಗೆ ಸಿನಿ ಪ್ರೇಮಿಗಳು ಫಿದಾ ಆಗಿದ್ದಾರೆ.

Kannada actor Vasista Simha Held Long In Love Lee Movie

ಈಗಾಗಲೇ ವಸಿಷ್ಠ ಸಿಂಹ ಅಭಿನಯದ 'Love..ಲಿ' ಸಿನಿಮಾದ ಶೂಟಿಂಗ್ ಆರಂಭ ಆಗಿದೆ. ನಾಯಕ ಇಂಟ್ರುಡಕ್ಷನ್ ಸೀನ್ ಅನ್ನು ಅದ್ಧೂರಿಯಾಗಿ ಶೂಟ್ ಮಾಡಲಾಗಿದೆ. ಇದೇ ವೇಳೆ ಚಿತ್ರತಂಡ ವಸಿಷ್ಠ ಸಿಂಹ ಲಾಂಗ್ ಹಿಡಿದ ಪೋಸ್ಟರ್ ಅನ್ನು ರಿಲೀಸ್ ಮಾಡಿದೆ. ಈ ಮೂಲಕ ಸಿನಿಮಾ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಸಿನಿಮಾ ಟೈಟಲ್ 'Love..ಲಿ' ಎಂದಿದ್ದು ನೋಡಿದರೆ, ಇದೊಂದು ರೊಮ್ಯಾಂಟಿಕ್ ಲವ್ ಸ್ಟೋರಿ ಇರಬಹುದಾ? ಎಂದು ಊಹೆ ಮಾಡಲಾಗಿತ್ತು. ಆದರೆ, ಸಿನಿಮಾ ಪೋಸ್ಟರ್ ನೋಡಿದರೆ, ಇದೊಂದು ರೌಡಿಸಂ ಸಿನಿಮಾ ಅಂತ ಅನಿಸುತ್ತಿದೆ. ಸದ್ಯ ಸಿನಿಪ್ರಿಯರಲ್ಲಿ ಕುತೂಹಲವನ್ನು ಈ ಸಿನಿಮಾ ಕಾಯ್ದುಕೊಂಡಿದೆ.

Kannada actor Vasista Simha Held Long In Love Lee Movie

'ಮಫ್ತಿ' ಸಿನಿಮಾ ನಿರ್ದೇಶಕ ನರ್ತನ್‌ ಜೊತೆಗೆ ಕೆಲಸ ಮಾಡಿರುವ ಚೇತನ್‌ ಕೇಶವ್‌ 'Love..ಲಿ' ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ನೈಜ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ಸಿನಿಮಾ ಮಾಡಲಾಗಿದೆ. 'Love..ಲಿ'ವನ್ನು ರವೀಂದ್ರ ಕುಮಾರ್‌ ನಿರ್ಮಿಸುತ್ತಿದ್ದು, ಹರೀಶ್‌ಕೊಂಬೆ ಕ್ಯಾಮೆರಾ, ಅನೂಪ್‌ ಸಿಳೀನ್‌ ಸಂಗೀತವಿದೆ. ಸದ್ಯ ವಸಿಷ್ಠ ಸಿಂಹ ಜಯರಾಜ್​ ಜೀವನ ಆಧರಿಸಿ 'ಹೆಡ್ ಬುಷ್' 'ಸಿಂಬಾ', 'ಓದೆಲಾ ರೈಲ್ವೇ ಸ್ಟೇಷನ್' ಸೇರಿ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

More from Filmibeat

English summary
Kannada actor Vasista Simha Held Long In Love Lee Movie, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X