ತೀವ್ರ ಅನಾರೋಗ್ಯದಿಂದ ನಟಿ ಅಮೂಲ್ಯ ಸಹೋದರ ದೀಪಕ್ ನಿಧನ; ಚಿತ್ರರಂಗಕ್ಕೆ ಮತ್ತೊಂದು ಅಘಾತ
ಸ್ಯಾಂಡಲ್‌ವುಡ್ ನಟಿ ಅಮೂಲ್ಯ ಸಹೋದರ ದೀಪಕ್ ಅರಸ್ ಚಿತ್ರರಂಗದಲ್ಲಿ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದರು. ಇತ್ತೀಚೆಗಷ್ಟೇ 'ಶುಗರ್ ಫ್ಯಾಕ್ಟರಿ' ಅನ್ನೋ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಇವರು ಇಂದು (ಅಕ್ಟೋಬರ್ 17) ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದಾರೆ.
ದೀಪಕ್ ಅರಸ್ ಕಳೆದ ಹಲವು ದಿನಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಹೇಳಲಾಗುತ್ತಿದೆ. ಸಹೋದರಿ ಅಮೂಲ್ಯರಂತೆ ಸ್ಯಾಂಡಲ್‌ವುಡ್‌ನಲ್ಲಿ ಉತ್ತಮ ಬಾಂಧವ್ಯ ಹೊಂದಿದ್ದ ದೀಪಕ್ ನಿರ್ದೇಶನದ ಕಡೆಗೆ ಹೆಚ್ಚು ಒಲವನ್ನು ಬೆಳೆಸಿಕೊಂಡಿದ್ದರು. 42 ವರ್ಷದ ದೀಪಕ್‌ಗೆ ಕೆಲವು ದಿನಗಳ ಹಿಂದೆ ಕಿಡ್ನಿ ವೈಫಲ್ಯ ಆಗಿತ್ತು ಎಂದು ಹೇಳಲಾಗುತ್ತಿದೆ.

ಇಂದು (ಅಕ್ಟೋಬರ್ 17) ಸಂಜೆ 7 ಸುಮಾರಿಗೆ ದೀಪಕ್ ಅರಸ್ ಚಿಕಿತ್ಸೆ ಫಲಕಾರಿಯಾದ ಕೊನೆಯುಸಿರೆಳೆದಿದ್ದಾರೆ. ತಮ್ಮದೇ ಶೈಲಿಯಲ್ಲಿ ಯುವಕರನ್ನು ಗಮನದಲ್ಲಿ ಇಟ್ಟುಕೊಂಡು ಸಿನಿಮಾ ನಿರ್ದೇಶನ ಮಾಡುತ್ತಿದ್ದರು. ಈಗ ಅಮೂಲ್ಯ ಹಾಗೂ ಅವರ ಕುಟುಂಬ ಶೋಕದಲ್ಲಿದೆ. ಸಿನಿಮಾರಂಗದಲ್ಲಿ ಆಕ್ಟಿವ್ ಆಗಿದ್ದ ದೀಪಕ್ ನಿಧನ ಚಿತ್ರರಂಗದ ದೊಡ್ಡ ಶಾಕ್ ಆಗಿದೆ,
ಅಮೂಲ್ಯ ಸಹೋದರ ದೀಪಕ್ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ದೀಪಕ್ ಅರಸ್ ಅವರನ್ನು ಬೆಂಗಳೂರಿನ ರಾಜರಾಜೇಶ್ವರಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು ಎನ್ನಲಾಗಿದೆ. ಆದರೆ, ಚಿಕಿತ್ಸೆ ಫಲಿಸದೆ ದೀಪಕ್ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಸದ್ಯ ಅವರ ಮೃತದೇಹವನ್ನು ವಯ್ಯಾಲಿಕಾವಲ್‌ನಲ್ಲಿರುವ ಅವರು ನಿವಾಸಕ್ಕೆ ತೆಗೆದುಕೊಂಡು ಬರಲಾಗಿದೆ.
ಮೂಲಗಳ ಪ್ರಕಾರ, ದೀಪಕ್ ಅರಸ್ ಅವರ ಅಂತ್ಯ ಸಂಸ್ಕಾರವನ್ನು ನಾಳೆ ಶುಕ್ರವಾರ (ಅಕ್ಟೋಬರ್ 18) ಅವರ ಸ್ವಂತ ಊರು ನಾಗಮಂಗಲದಲ್ಲಿ ನೆಡಸುವ ಸಾಧ್ಯತೆಯಿದೆ. ದೀಪಕ್ ಅರಸ್‌ಗೆ ನಿರ್ದೇಶಕ ಹಾಗೂ ಸಿನಿಮಾ ನಿರ್ಮಾಣದ ಕಡೆಗೆ ಹೆಚ್ಚು ಒಲವು ಇತ್ತು. ಆದರೆ, ಅವರಿಗೆ ನಿರ್ದೇಶನ ಹಾಗೂ ನಿರ್ಮಾಣದಲ್ಲಿ ಹೆಚ್ಚು ಯಶಸ್ಸು ಸಿಗಲಿಲ್ಲ.
2011ರಲ್ಲಿ ಅಮೂಲ್ಯ ಯಶಸ್ಸಿನ ತುತ್ತತುದಿಯಲ್ಲಿ ಇರುವಾಗಲೇ ದೀಪಕ್ ಅರಸ್ 'ಮನಸಾಲಜಿ' ಅನ್ನೋ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಇದರಲ್ಲಿ ಅಮೂಲ್ಯ ಹಾಗೂ ರಾಕೇಶ್ ಅಡಿಗ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಆದರೆ, ಈ ಸಿನಿಮಾ ಅಂದುಕೊಂಡಷ್ಟು ಸದ್ದು ಮಾಡಲಿಲ್ಲ. ಕಳೆದ ವರ್ಷವಷ್ಟೇ 2023ರಲ್ಲಿ ದೀಪಕ್ ಎರಡನೇ ಸಿನಿಮಾಗೆ ಕೈ ಹಾಕಿದ್ದರು. ಡಾರ್ಲಿಂಗ್ ಕೃಷ್ಣ ಹಾಗೂ ಸೋನಾಲ್ ಮಾಂಥೇರೊ ನಟಿಸಿದ್ದ 'ಶುಗರ್ ಫ್ಯಾಕ್ಟರಿ' ರಿಲೀಸ್ ಆಗಿತ್ತು. ಆ ಸಿನಿಮಾ ಕೂಡ ಅಂದುಕೊಂಡಷ್ಟು ಸದ್ದು ಮಾಡಲಿಲ್ಲ.
ದೀಪಕ್ ಅರಸ್ ಕೇವಲ ಸಿನಿಮಾ ನಿರ್ದೇಶನ ಅಷ್ಟೇ ಅಲ್ಲ. ಉದ್ಯಮಿ ಕೂಡ ಆಗಿದ್ದರು. ಅವರು ಟ್ರಾವೆಲ್ ಏಜೆನ್ಸಿಯೊಂದನ್ನು ನಡೆಸುತ್ತಿದ್ದರು. ಹೀಗಾಗಿ ಸಿನಿಮಾರಂಗದಲ್ಲಿ ಆಕ್ಟಿವ್ ಆಗಿದ್ದರೂ, ಹೆಚ್ಚು ಸಿನಿಮಾಗಳನ್ನು ನಿರ್ದೇಶನ ಮಾಡುವುದಕ್ಕೆ ಹೋಗಲಿಲ್ಲ.


Click it and Unblock the Notifications











