ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ ಗೋಲ್ಡನ್ ಕ್ವೀನ್ ಅಮೂಲ್ಯ ಜಗದೀಶ್

ಸ್ಯಾಂಡಲ್​ವುಡ್‌ನ ಗೋಲ್ಡನ್ ಕ್ವೀನ್ ಅಮೂಲ್ಯ ಶಿವರಾತ್ರಿ ದಿನದಂದು ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಈ ಖುಷಿ ವಿಚಾರವನ್ನು ಅಮೂಲ್ಯ ಪತಿ ಜಗದೀಶ್ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಅಮೂಲ್ಯ ಅವರ ಸೀಮಂತ ಕಾರ್ಯವನ್ನು ಅದ್ಧೂರಿಯಾಗಿ ನೆರೆವೇರಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಸ್ಯಾಂಡಲ್‌ವುಡ್‌ನ ದಿಗ್ಗಜರು ಆಗಮಿಸಿ, ಅಮೂಲ್ಯ ದಂಪತಿಗೆ ಶುಭಕೋರಿದರು.

ನಟಿ ಅಮೂಲ್ಯಗೆ ಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆ ಆಗಿದೆ. ಬೆಳಗ್ಗೆ 11.45ರ ಸುಮಾರಿಗೆ ಗೋಲ್ಡನ್ ಕ್ವೀನ್ ಅಮೂಲ್ಯ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಮಕ್ಕಳು ಹಾಗೂ ತಾಯಿ ಇಬ್ಬರೂ ಆರೋಗ್ಯವಾಗಿದ್ದಾರೆ. ಈ ಪಯಣದಲಿ ಜೊತೆಗೆ ನಿಂತಿದ್ದವರಿಗೆಲ್ಲರಿಗೂ ಧನ್ಯವಾದ ಎಂದು ಅಮೂಲ್ಯ ಪತಿ ಜಗದೀಶ್ ತಿಳಿಸಿದ್ದಾರೆ. ಜಗದೀಶ್ ದಂಪತಿಗೆ ಸ್ಯಾಂಡಲ್‌ವುಡ್‌ನ ಗಣ್ಯರು ಶುಭಾಶಯ ಕೋರಿದ್ದಾರೆ.

ರಮ್ಯಾ, ಆಶಿಕಾ ಅಭಿನಂದನೆ

ರಮ್ಯಾ, ಆಶಿಕಾ ಅಭಿನಂದನೆ

ಅಮೂಲ್ಯ ಅವಳಿ ಮಕ್ಕಳಿಗೆ ಜನ್ಮ ನೀಡಿದ ಖುಷಿಯಲ್ಲಿದ್ದಾರೆ. ಇದೇ ವೇಳೆ ಸ್ಯಾಂಡಲ್‌ವುಡ್‌ನ ಮೋಹಕ ತಾರೆ ರಮ್ಯಾ, ಇನ್‌ಸ್ಟಾಗ್ರಾಂನಲ್ಲಿ " ಅಭಿನಂದನೆಗಳು, ಅಭಿನಂದನೆಗಳು" ಅಂತ ಕಮೆಂಟ್ ಮಾಡಿದ್ದಾರೆ. ರಮ್ಯಾ ಅಮೂಲ್ಯ ಸೀಮಂತ ಕಾರ್ಯಕ್ರಮಕ್ಕೆ ಹೋಗಿ, ಶುಭ ಹಾರೈಸಿ ಬಂದಿದ್ದರು. ಇವರೊಂದಿಗೆ ಕನ್ನಡದ ಮತ್ತೊಬ್ಬ ನಟಿ ಆಶಿಕಾ ರಂಗನಾಥ್ ಕೂಡ ಅಮೂಲ್ಯ ಹಾಗೂ ಜಗದೀಶ್ ದಂಪತಿಗೆ ಶುಭಾಶಗಳನ್ನು ತಿಳಿಸಿದ್ದಾರೆ.

ಕನ್ನಡ ತಾರೆಯರಿಂದ ಅಭಿನಂದನೆ

ಅಮೂಲ್ಯ ಅವಳಿ ಮಕ್ಕಳಿಗೆ ಜನ್ಮ ನೀಡಿದ ವಿಷಯವನ್ನು ಪತಿ ಜಗದೀಶ್ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ಕನ್ನಡ ಚಿತ್ರರಂಗದ ನಟಿಯರು ಶುಭಾಶಯಗಳನ್ನು ತಿಳಿಸಿದ್ದಾರೆ. ಹರ್ಷಿಕಾ ಪೂಣಚ್ಚಾ " ಜಗ್ಗಿ ಮತ್ತು ಅಮೂಲ್ಯಗೆ ಅಭಿನಂದನೆಗಳು" ಎಂದು ಹೇಳಿದ್ದಾರೆ. ನಟಿ ಸೋನು ಗೌಡ " ವ್ಹಾವ್ ಅಭಿನಂದನೆಗಳು". ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಅದ್ವಿತಿ ಶೆಟ್ಟಿ ಸೇರಿದಂತೆ ಅಮೂಲ್ಯ ಆಪ್ತರು ಹಾಗೂ ಅಭಿಮಾನಿಗಳು ಜಗದೀಶ್ ದಂಪತಿಗಳಿಗೆ ಖುಷಿ ವ್ಯಕ್ತಪಡಿಸಿದ್ದಾರೆ.

ಅಮೂಲ್ಯ ಅದ್ದೂರಿ ಸೀಮಂತ ಶಾಸ್ತ್ರ

ಅಮೂಲ್ಯ ಅದ್ದೂರಿ ಸೀಮಂತ ಶಾಸ್ತ್ರ

ಅಮೂಲ್ಯ ಸೀಮಂತ ಶಾಸ್ತ್ರವನ್ನು ಅದ್ಧೂರಿಯಾಗಿ ನಡೆಸಲಾಗಿತ್ತು. ಸ್ಯಾಂಡಲ್‌ವುಡ್‌ನ ಗಣ್ಯರು ಹಾಗೂ ಆಪ್ತರಿಗೆ ಆಹ್ವಾನ ನೀಡಲಾಗಿತ್ತು. ಈ ಕಾರ್ಯಕ್ರಮ ಕನ್ನಡ ಚಿತ್ರರಂಗದ ನಟ-ನಟಿಯರು ಭಾಗವಹಿಸಿದ್ದರು. ಗಣೇಶ್ ದಂಪತಿ, ಉಪೇಂದ್ರ ದಂಪತಿ, ಅನಿರುದ್ಧ್ ದಂಪತಿ, ರಾಧಿಕಾ ಪಂಡಿತ್, ಶ್ರುತಿ, ಸುಧಾರಾಣಿ, ಮಾಳವಿಕಾ ಸೇರಿದಂತೆ ಗಣ್ಯರು ಆಗಮಿಸಿದ್ದರು. ಇದೇ ವೇಳೆ ನಟಿ ಅಮೂಲ್ಯ ಮಾಡಿಸಿದ್ದ ಬೇಬಿ ಬಂಪ್ ಫೋಟೋಶೂಟ್‌ ಅನ್ನು ನೋಡಿದ ಅಭಿಮಾನಿಗಳು ಮೆಚ್ಚುಗೆ ಸೂಚಿಸಿ, ಶುಭ ಹಾರೈಸಿದ್ದರು.

ಪ್ರೆಗ್ನೆನ್ಸಿ ಫೋಟೊಶೂಟ್ ವೈರಲ್

ಪ್ರೆಗ್ನೆನ್ಸಿ ಫೋಟೊಶೂಟ್ ವೈರಲ್

ತಾಯಿಯಾಗುತ್ತಿರುವ ಸಂಭ್ರಮದಲ್ಲಿದ್ದ ಅಮೂಲ್ಯ ಮಗು ಜನಿಸುವುದಕ್ಕೆ ಕೆಲವೇ ದಿನಗಳು ಬಾಕಿ ಇವೆ ಎನ್ನುವಾಗ ಪ್ರೆಗ್ನೆನ್ಸಿ ಫೋಟೊಶೂಟ್ ಅನ್ನು ಹಂಚಿಕೊಂಡಿದ್ದರು. ಕೆರೆದಂಡೆಯಲ್ಲಿ ಜೋಕಾಲಿ ಮೇಲೆ ಕೂಡ ಫೋಟೊಶೂಟ್ ಮಾಡಿಸಿದ್ದರು. ಈ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಹೂವಿನ ತೂಗು ಉಯ್ಯಾಲೆಯಲ್ಲಿ ಅಮೂಲ್ಯ ಮುದ್ದುದ್ದಾಗಿ ಕಾಣಿಸಿಕೊಂಡಿದ್ದರು. ಅಮೂಲ್ಯ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದು, ಅಭಿಮಾನಿಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.

More from Filmibeat

English summary
Kannada actress Amulya Jagadish gave birth to twins boys. Few days back Amulya Seemantha was celebrated in grand way. sandalwood celebs attended that event.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X