ತನ್ನ ಅವಳಿ ಮಕ್ಕಳಿಗೆ ಹೆಸರಿಟ್ಟ ನಟಿ ಭಾವನಾ; ಈ ಹೆಸರೇ ಯಾಕೆ?
ಸ್ಯಾಂಡಲ್‌ವುಡ್ ನಟಿ ಭಾವನಾ ರಾಮಣ್ಣ ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿದ್ದಾರೆ. ಅದು ಸಿನಿಮಾದಿಂದ ಅಲ್ಲ ಅನ್ನೋದು ಈಗಾಗಲೇ ನಿಮಗೆ ಗೊತ್ತೇ ಇದೆ. ಭಾವನಾ ರಾಮಣ್ಣ ಮದುವೆ ಆಗದೆಯೇ ಮಗುವನ್ನು ಪಡೆಯಲು ಮುಂದಾಗಿದ್ದಾರೆ. ಈ ದಿಟ್ಟ ನಿರ್ಧಾರಕ್ಕೆ ಬಹಳಷ್ಟು ಮಂದಿ ಪಾಸಿಟಿವ್ ಆಗಿ ಸ್ಪಂದಿಸಿದ್ದಾರೆ. ನಟಿ ಕೂಡ ಅಷ್ಟೇ ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ತಾನು ಯಾಕೆ ಐವಿಎಫ್ ಮೂಲಕ ಮಗುವನ್ನು ಪಡೆಯುವುದಕ್ಕೆ ಮುಂದಾದೆ ಅನ್ನೋದನ್ನು ಈಗಾಗಲೇ ನೀಡಿರುವ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.
ಭಾವನಾ ರಾಮಣ್ಣಾ ಈಗಾಗಲೇ ತಮಗೆ ಅವಳಿ ಮಕ್ಕಳು ಹುಟ್ಟುತ್ತವೆಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ತಮ್ಮ ಮಕ್ಕಳನ್ನು ಹೇಗೆ ಬೆಳೆಸಬೇಕು. ಅವರನ್ನು ಹೇಗೆ ನೋಡಿಕೊಳ್ಳಬೇಕು ಅನ್ನೋ ಬಗ್ಗೆ ತಮ್ಮ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ 40 ರಿಂದ 50ರ ಒಳಗಿನ ವಯಸ್ಸಿನವರಾಗಿದ್ದರಿಂದ ಸಹಜ ಹೆರಿಗೆ ಆಗುವುದಿಲ್ಲ. ಸಿ ಸೆಕ್ಷನ್ ಮೂಲಕವೇ ಹೆರಿಗೆ ಮಾಡಿಸುವುದಾಗಿ ವೈದ್ಯರು ಸ್ಪಷ್ಟಪಡಿಸಿರುವ ಬಗ್ಗೆ ಭಾವನಾ ಅವರೇ ಸಂದರ್ಶನದಲ್ಲೂ ಹೇಳಿದ್ದಾರೆ.

ಈಗ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಭಾವನಾ ರಾಮಣ್ಣ ತಮಗೆ ಹುಟ್ಟುವ ಮಕ್ಕಳಿಗೆ ಹೆಸರನ್ನೂ ಇಟ್ಟಿ ಆಗಿದೆ. ತಮ್ಮ ಮಕ್ಕಳಿಗೆ ಹೆಸರೇನು ಇಡಬೇಕು? ಹೆಣ್ಣು ಮಗು ಹುಟ್ಟಿದರೆ ಏನು ಹೆಸರು? ಗಂಡು ಮಗು ಹುಟ್ಟಿದರೆ ಏನು ಹೆಸರು? ಅನ್ನೋದನ್ನೂ ಈಗಾಗಲೇ ತೀರ್ಮಾನಿಸಿದ್ದಾರೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆಂದು ಫಸ್ಟ್ ನ್ಯೂಸ್ ಕನ್ನಡ ವರದಿ ಮಾಡಿದೆ.
ಭಾವನಾ ರಾಮಣ್ಣ ಅವರಿಗೆ ಕೆಲವು ದಿನಗಳ ಹಿಂದಷ್ಟೇ ಸೀಮಂತ ಕಾರ್ಯಕ್ರಮ ಇಟ್ಟುಕೊಳ್ಳಲಾಗಿತ್ತು. ಕೆಲವೇ ಆಪ್ತರಿಗೆ ಹಾಗೂ ಕುಟುಂಬದವರಿಗೆ ಭಾವನಾ ರಾಮಣ್ಣ ಆಹ್ವಾನವನ್ನು ನೀಡಿದ್ದರು. ಆ ಕಾರ್ಯಕ್ರಮದ ಫೋಟೊಗಳು ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡಿದ್ದವು. ಹಸಿರು ಹಾಗೂ ಕೆಂಪು ಬಣ್ಣದ ಸೀರೆಯುಟ್ಟು ಸೀಮಂತ ಕಾರ್ಯಕ್ರಮದಲ್ಲಿ ಮಿಂಚಿದ್ದರು.
ಭಾವನಾ ಅವರಿಗೆ ತಮ್ಮ ಮುಂದಿನ ಬದುಕು ಹೇಗಿರುತ್ತೆ ಅನ್ನೋದು ಗೊತ್ತಿದೆ. ಅದೆಲ್ಲವನ್ನೂ ಲೆಕ್ಕಾಚಾರ ಹಾಕಿಯೇ ಈ ಗಟ್ಟಿ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಅಲ್ಲದೆ ವೈದ್ಯರು ಅವಳಿ ಮಕ್ಕಳು ಹುಟ್ಟುತ್ತಾರೆಂದು ಗೊತ್ತಾಗುತ್ತಿದ್ದಂತೆ ಇದೇ ಹೆಸರು ಇಡಬೇಕು ಎಂದೂ ನಿರ್ಧರಿಸಿದ್ದಾರೆ. ಅದರಲ್ಲೂ ಹೆಣ್ಣು ಮಗು ಹುಟ್ಟಿದರೆ, ರುಕ್ಮಿಣಿ ಎಂದು ಹೆಸರು ಇಡುವುದಕ್ಕೆ ನಿರ್ಧರಿಸಿದ್ದಾರೆ. ಇದೇ ಹೆಸರು ಇಡುವುದಕ್ಕೂ ಒಂದು ಕಾರಣವಿದೆ.
ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಭಾವನಾ ರಾಮಣ್ಣ ಅವರಿಗೆ ಮಕ್ಕಳಿಗೆ ಏನು ಹೆಸರು ಇಡುತ್ತೀರಿ ಎಂದು ಪ್ರಶ್ನೆ ಮಾಡಿದ್ದರು. ಅದಕ್ಕೆ ಭಾವನಾ ಹೆಣ್ಣು ಮಗುವಿಗೆ ಮಾತ್ರ ಯೋಚನೆ ಮಾಡಿದ್ದು, ತನ್ನ ಅಜ್ಜಿಯ ಹೆಸರನ್ನೇ ಇಡಬೇಕು ಎಂದು ನಿರ್ಧರಿಸಿದ್ದೇನೆ ಎಂದಿದ್ದಾರೆ. ಅವರ ಅಜ್ಜಿಯ ಹೆಸರು ರುಕ್ಮಿಣಿ. ಹೀಗಾಗಿ ಹೆಣ್ಣು ಮಗು ಹುಟ್ಟಿದರೆ ರಕ್ಮಿಣಿ ಎಂದು ಹೆಸರಿಡುತ್ತೇನೆ. ಆದರೆ, ಗಂಡು ಮಗುವಿಗೆ ಇನ್ನೂ ಹೆಸರಿಡುವ ನಿರ್ಧಾರ ಮಾಡಿಲ್ಲ ಎಂದಿದ್ದಾರೆ.
ಹಾಗೇ ತನಗೆ ಮಕ್ಕಳ ಮೇಲೆ ಇರುವ ಪ್ರೀತಿಯನ್ನೂ ಹಂಚಿಕೊಂಡಿದ್ದಾರೆ. ಅವರು ಮಕ್ಕಳೊಂದಿಗೆ ಹೆಚ್ಚು ಕಾಲ ಕಳೆಯುವುದಾಗಿಯೂ ಹೇಳಿಕೊಂಡಿದ್ದಾರೆ. ಹೀಗಾಗಿ ಭಾವನಾ ತಮ್ಮ ಅವಳಿ ಮಕ್ಕಳನ್ನು ತುಂಬಾನೇ ಪ್ರೀತಿಸುತ್ತಾರೆ ಅನ್ನೋದು ಅವರ ಮಾತುಗಳಿಂದಲೇ ತಿಳಿಯುತ್ತೆ.


Click it and Unblock the Notifications











