ಐವಿಎಫ್ ಚಿಕಿತ್ಸೆ ಮೂಲಕ ತಾಯಿಯಾಗುತ್ತಿರುವ ನಟಿ ಭಾವನಾಗೆ ಸೀಮಂತ ಸಂಭ್ರಮ!

ಕನ್ನಡ ನಟಿ ಭಾವನಾ ರಾಮಣ್ಣ ಐವಿಎಫ್ ಚಿಕಿತ್ಸೆಯ ಮೂಲಕ ತಾಯಿಯಾಗುತ್ತಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ತಾಯಿಯಾಗುತ್ತಿರುವ ಖುಷಿ ವಿಷಯವನ್ನು ಹಂಚಿಕೊಂಡಿದ್ದರು. ಭಾವನಾ ರಾಮಣ್ಣ ಅವರ ಈ ನಿರ್ಧಾರ ಹಾಗೂ ಧೈರ್ಯಕ್ಕೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇನ್ನು ಕೆಲವರು ಟೀಕೆಗಳನ್ನು ಮಾಡಿದ್ದರು. ಅದ್ಯಾವುದೂ ತಲೆ ಕೆಡಿಸಿಕೊಳ್ಳುವುದ ಭಾವನಾ ತಾಯ್ತನವನ್ನು ಎಂಜಾಯ್ ಮಾಡುತ್ತಿದ್ದಾರೆ.

ತಾಯಿಯಾಗುತ್ತಿರುವ ಖುಷಿಯಲ್ಲಿರುವ ಭಾವನಾ ರಾಮಣ್ಣಗೆ ಸೀಮಂತ ಕಾರ್ಯಕ್ರಮ ನಡೆದಿದೆ. ಸೀಮಂತ ಸಂಭ್ರಮದಲ್ಲಿರುವ ನಟಿಗೆ ಅವರ ಅಭಿಮಾನಿಗಳು ಹಾಗೂ ಸ್ನೇಹಿತರು ಶುಭ ಹಾರೈಸಿದ್ದಾರೆ. ಸದ್ಯ ನಟಿ ಭಾವನಾ ರಾಮಣ್ಣ ಅವರು ಏಳು ತಿಂಗಳ ಗರ್ಭಿಣಿಯಾಗಿದ್ದಾರೆ. ತಾಯಿಯಾಗುತ್ತಿರುವ ಖುಷಿಯಲ್ಲಿರುವ ಭಾವನಾ ಅವರಿಗೆ ಅವರ ಮನೆಯಲ್ಲಿಯೇ ಸೀಮಂತ ನಡೆದಿದ್ದು, ಕೇವಲ ಆಪ್ತರಿಗಷ್ಟೇ ಆಹ್ವಾನ ನೀಡಲಾಗಿತ್ತು.

Kannada Actress Bhavana Ramanna IVF pregnancy Baby shower celebration photo went viral

ಮದುವೆಯಾಗದೇ ಐವಿಎಫ್ ಮೂಲಕ ತಾಯಿಯಾಗುತ್ತಿರುವ ಭಾವನಾ ರಾಮಣ್ಣ ಅವಳಿ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಬೆಂಗಳೂರಿನ ಅವರ ನಿವಾಸದಲ್ಲಿ ಸಂಪ್ರದಾಯ ಬದ್ಧವಾಗಿ ಸೀಮಂತ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ. ಆತ್ಮೀಯರ ಆಗಮಿಸಿ ಶುಭ ಕೋರಿದ್ದು, ಆ ಫೋಟೊಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಭಾವನಾ ರಾಮಣ್ಣ ಐವಿಎಫ್ ಚಿಕಿತ್ಸೆಯ ಮೂಲಕ ತಾಯಿಯಾಗುವ ನಿರ್ಧಾರಕ್ಕೆ ಬಹುತೇಕ ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅವರೇ ಕೆಲವು ಸಂದರ್ಶನದಲ್ಲಿ ಹೇಳಿಕೊಂಡಂತೆ ಐವಿಎಫ್ ಮೂಲಕ ಗರ್ಭಿಣಿಯಾಗಿದ್ದರಿಂದ ಸಹಜ ಹೆರಿಗೆ ಆಗುವುದು ಅನುಮಾನ. ಹೀಗಾಗಿ ನಿರೀಕ್ಷೆಗೂ ಮೊದಲೇ ಅವಳಿ ಮಕ್ಕಳು ಜನಿಸುವ ಸಾಧ್ಯತೆಯಿದೆ. ಈ ಕಾರಣಕ್ಕೆ ಏಳು ತಿಂಗಳು ಇರುವಾಗಲೇ ಭಾವನಾ ರಾಮಣ್ಣ ಅವರಿಗೆ ಮನೆಯವರು ಹಾಗೂ ಆಪ್ತರು ಸೇರಿ ಸೀಮಂತ ಕಾರ್ಯಕ್ರಮವನ್ನು ಮಾಡಿದ್ದಾರೆ.

ಇನ್ನು ಈ ಸೀಮಂತ ಕಾರ್ಯಕ್ರಮದಲ್ಲಿ ಭಾವನಾ ರಾಮಣ್ಣ ಹಸಿರು ಹಾಗೂ ಗುಲಾಬಿ ಬಣ್ಣದ ರೇಷ್ಮೆ ಸೀರೆಯುಟ್ಟು ಮಿಂಚಿದ್ದರು. ಅಪ್ಪಟ ಕನ್ನಡತಿಯಂತೆ ಕಂಗೊಳಿಸುತ್ತಿದ್ದ ಭಾವನಾ ಅವರಲ್ಲಿ ತಾಯಿಯಾಗುತ್ತಿರುವ ಸಂಭ್ರಮ ಎದ್ದು ಕಾಣುತ್ತಿತ್ತು. ತೀರಾ ಖಾಸಗಿಯಾಗಿ ಸೀಮಂತ ಕಾರ್ಯಕ್ರಮ ನಡೆದಿದ್ದರಿಂದ ಚಿತ್ರರಂಗದ ತಾರೆಯರಿಗೆ ಆಹ್ವಾನ ನೀಡಿದಂತೆ ಕಾಣಲಿಲ್ಲ. ನಟಿಯ ಸೀಮಂತ ಸಂಭ್ರಮದ ಕೆಲವೇ ಕೆಲವು ಫೊಟೊಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಇವುಗಳಲ್ಲಿ ಸಿನಿಮಾ ತಾರೆಯರು ಕಾಣಿಸಿಕೊಂಡಿಲ್ಲ.

ನಟಿ ಭಾವನಾ ತಾಯಿಯಾಗುತ್ತಿರುವ ಖುಷಿಯನ್ನು ಮೊದಲ ಬಾರಿಗೆ ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದರು. ಅದಾಗಲೇ 45ರ ಆಸುಪಾಸಿನಲ್ಲಿದ್ದ ಭಾವನಾ ಅವರ ಈ ನಿರ್ಧಾರವನ್ನು ಒಂದು ಕ್ಷಣ ಕೆಲವರು ಅಚ್ಚರಿಯಿಂದ ನೋಡಿದ್ದೂ ಇದೆ. ಆದರೆ, ಮದುವೆಯಾಗದೇ ಮಗುವನ್ನು ಪಡೆಯುವುದಕ್ಕೆ ನಿರ್ಧರಿಸಿರುವ ನಟಿಯ ಧೈರ್ಯಕ್ಕೆ ಮೆಚ್ಚುಗೆ ಬಂದಿವೆ. ಅಲ್ಲದೇ ಭಾವನಾ ತಾವೇಕೆ ಇಂತಹ ನಿರ್ಧಾರವನ್ನು ತೆಗೆದುಕೊಂಡರು ಎನ್ನುವುದಕ್ಕೆ ಈಗಾಗಲೇ ಹಲವು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ.

ಸಂದರ್ಶನದಲ್ಲಿ ಭಾವನಾ ಅವರೇ ಹೇಳಿದಂತೆ ನವೆಂಬರ್‌ ತಿಂಗಳಲ್ಲಿ ಅವರಿಗೆ ಡಿಲೇವರಿಯಾಗುವ ಸಾಧ್ಯತೆಯಿದೆ. ಈ ಸಂದರ್ಶನಗಳಲ್ಲೇ ಭಾವನಾ ತಮ್ಮ ಮುಂದಿನ ಭವಿಷ್ಯದ ಬಗ್ಗೆಯೂ ಮಾತಾಡಿದ್ದಾರೆ. ಒಂದು ವೇಳೆ ತನ್ನ ಮಕ್ಕಳು ಹಾಗೂ ತನ್ನನ್ನು ಮನಸಾರೆ ಒಪ್ಪಿಕೊಳ್ಳುವ ವ್ಯಕ್ತಿ ಸಿಕ್ಕಿದರೆ, ಖಂಡಿತಾ ಮದುವೆಯಾಗುವುದಾಗಿ ಭಾವನಾ ಹೇಳಿಕೊಂಡಿದ್ದರು. ಹಾಗೇ ಐವಿಎಫ್‌ ಬಗ್ಗೆ ಭಯ ಪಡುವ ಅವಶ್ಯಕತೆ ಇಲ್ಲ ಎಂದೂ ಭಾವನಾ ಒಪ್ಪಿಕೊಂಡಿದ್ದರು.

More from Filmibeat

English summary
Kannada Actress Bhavana Ramanna IVF pregnancy Baby shower celebration photo went viral.
Read more about: bhavana baby shower actress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X