'ಟೋಬಿ' ಬ್ಯೂಟಿ ಚೈತ್ರಾ ಆಚಾರ್ ಫೋಟೋಶೂಟ್ ನೋಡಿ 'ಹೈ ಅಲರ್ಟ್' ಘೋಷಿಸಿದ ಹುಡುಗರು
ಸ್ಯಾಂಡಲ್‌ವುಡ್‌ನಲ್ಲಿ ಸಾಮಾನ್ಯವಾಗಿ ನಟಿಯರು ಇಷ್ಟು ಮುಂದುವರೆದು ಫೋಟೋಶೂಟ್ ಮಾಡಿಸೋದು ವಿರಳ. ಇದೆಲ್ಲ ಏನೇ ಇದ್ದರೂ ಬಾಲಿವುಡ್ ಸಂಸ್ಕೃತಿ. ಅಲ್ಲಿ ಚೈತ್ರಾ ಆಚಾರ್ ಮಾಡಿಸಿದಂತಹ ಫೋಟೋಶೂಟ್‌ಗಳು ಕಾಮನ್. ಆದರೆ, ಕನ್ನಡ ಚಿತ್ರರಂಗದಲ್ಲಿ ಇದೆಲ್ಲ ನಡೆಯುತ್ತಾ? ಯಾಕೆ ನಡೆಯಲ್ಲ ಅಂತ ಮುಂದೆ ಬಂದ ಕೆಲವೇ ಕೆಲವು ನಟಿಯರಲ್ಲಿ ಚೈತ್ರಾ ಆಚಾರ್ ಕೂಡ ಒಬ್ಬರು.
ಈ ಸೋಶಿಯಲ್ ಮೀಡಿಯಾ ಪವರ್‌ಫುಲ್ ಆದ್ಮೇಲೆ ಸಿನಿಮಾ ಮಂದಿಗೆ ತಮ್ಮನ್ನು ತಾವು ಪ್ರಮೋಟ್ ಮಾಡಿಕೊಳ್ಳುವುದಕ್ಕೆ ವೇದಿಕೆಯೊಂದು ಸಿಕ್ಕಂತೆ ಆಗಿದೆ. ತಮ್ಮ ವ್ಯಕ್ತಿತ್ವವನ್ನು ಬಿಂಬಿಸುವುದಕ್ಕೋ? ಇಲ್ಲ ಯಾವಾಗಲೂ ಚಾಲ್ತಿಯಲ್ಲಿ ಇರುವುದಕ್ಕೋ ಸೋಶಿಯಲ್ ಮೀಡಿಯಾಗಳಲ್ಲಿ ಫೋಟೋಶೂಟ್‌ಗಳನ್ನು ಹಾಕುತ್ತಲೇ ಇರುತ್ತಾರೆ. ಇದು ಸಾಮಾನ್ಯವಾಗಿ ಎಲ್ಲಾ ಚಿತ್ರರಂಗದಲ್ಲೂ ನಡೆಯುತ್ತೆ. ಅದಕ್ಕೆ ಕನ್ನಡ ಚಿತ್ರರಂಗದ ನಟ, ನಟಿಯರು ಯಾವಾಗಲೂ ಆಕ್ಟಿವ್ ಆಗಿರುತ್ತಾರೆ.

ಆದರೆ, ಚೈತ್ರಾ ಆಚಾರ್ ಸಿನಿಮಾಗಳಲ್ಲಿ ಬೋಲ್ಡ್ ರೋಲ್‌ಗಳ ಮೂಲಕ ಸದ್ದು ಮಾಡಿದ್ದಷ್ಟೇ ಅಲ್ಲ. ಸೋಶಿಯಲ್ ಮೀಡಿಯಾದಲ್ಲಿ ಅಷ್ಟೇ ಬೋಲ್ಡ್ ಫೋಟೋಗಳನ್ನು ಶೇರ್ ಮಾಡುವ ಮೂಲಕ ಕೆಲವ ಕಣ್ಣುಗಳಿಗೆ ಭೇಷ್ ಎನಿಸಿದ್ದಾರೆ. ಮತ್ತೆ ಕೆಲವರ ಕಣ್ಣುಗಳನ್ನು ಕೆಂಪಾಗುವಂತೆ ಮಾಡಿದ್ದಾರೆ. ಈಗ ಮತ್ತೊಂದು ಫೋಟೋಶೂಟ್ ಮಾಡಿಸಿದ್ದು, ಒಳ ಉಡುಪು ಕಾಣುವಂತೆ ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ಈ ಫೋಟೋಗಳನ್ನು ನೋಡಿ ಹುಡುಗರು ಹೈ ಅಲರ್ಟ್ ಘೋಷಣೆ ಮಾಡಿದ್ದಾರೆ.
ಚೈತ್ರಾ ಅಚಾರ್ ಕನ್ನಡ ಚಿತ್ರರಂಗದ ಅದ್ಭುತ ನಟಿ ಅದರಲ್ಲಿ ಎರಡು ಮಾತೇ ಇಲ್ಲ. ಈಗಾಗಲೇ ಅದನ್ನೂ ಪ್ರೂವ್ ಮಾಡಿದ್ದಾರೆ. ಅವರ ಅಭಿನಯಕ್ಕೆ ಈಗಾಗಲೇ ಸಾಕಷ್ಟು ಸಿನಿಮಾಗಳು ಉದಾಹರಣೆಯಾಗಿ ಸಿಗುತ್ತವೆ. 'ತಲೆದಂಡ', 'ಟೋಬಿ', 'ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ' ಅಂತಹ ಸಿನಿಮಾಗಳು ಇವರ ನಟನೆಯ ಬಗ್ಗೆ ಸಾರಿ ಹೇಳುತ್ತವೆ. ಒಮ್ಮೊಮ್ಮೆ ಮೈಚಳಿ ಬಿಟ್ಟು ನಟಿಸುವ ನಾಯಕಿ ಎನಿಸಿಬಿಡುತ್ತಾರೆ.
ಅದೇ ಸೋಶಿಯಲ್ ಮೀಡಿಯಾಗೆ ಬಂದರೆ, ಹೀಗೆಲ್ಲ ಫೋಟೋಶೂಟ್ ಮಾಡಿಸಿ ಹುಡುಗರಿಗೆ ಮೈ ಚಳಿ ಬರುವಂತೆ ಮಾಡುತ್ತಾರೆ. ಚೈತ್ರಾ ಆಚಾರ್ ಹೀಗೆ ಬೋಲ್ಡ್ ಲುಕ್‌ನಲ್ಲಿ ಫೋಟೋಶೂಟ್ ಮಾಡಿಸುವುದು ಇದೇ ಮೊದಲೇನು ಅಲ್ಲ. ಈ ಹಿಂದೆ ಕೂಡ ಇಂತಹ ಸಾಕಷ್ಟು ಫೋಟೋಶೂಟ್‌ಗಳನ್ನು ಮಾಡಿಸಿದ್ದಾರೆ. ಆಗ ಇವರ ವಿರುದ್ಧ ವಿಪರೀತ ಟೀಕೆಗಳು ಬಂದಿವೆ. ಆದರೂ ಅದ್ಯಾವುದಕ್ಕೂ ಸೊಪ್ಪೂ ಹಾಕಿಲ್ಲ. ತನಗೆ ಇಷ್ಟ ಬಂದಂತೆ ಕ್ಯಾಮರಾ ಮುಂದೆ ಪೋಸ್ ಕೊಟ್ಟು ಮಿಂಚುತ್ತಿದ್ದಾರೆ. ಇದರಿಂದ ಅವರನ್ನು ಇಷ್ಟ ಪಡುವ ವರ್ಗವೂ ಹುಟ್ಟಿಕೊಂಡಿದೆ.
ವೈಟ್ ಟಾಪ್.. ಗ್ರೇ ಕಲರ್ ಜೀನ್ಸ್.. ಒಳ ಉಡುಪು ಕಾಣುವಂತೆ ನಾನಾ ಭಂಗಿಯಲ್ಲಿ ಕ್ಯಾಮರಾ ಮುಂದೆ ಪೋಸ್ ಕೊಟ್ಟಿದ್ದಾರೆ. ಅದನ್ನು ವೈಟ್ ಬ್ಯಾಗ್ರೌಂಡ್‌ನಲ್ಲಿಯೇ ಶೂಟ್ ಮಾಡಿದ್ದರಿಂದ ಇನ್ನೂ ಹೈಲೈಟ್ ಆಗುತ್ತಿದೆ. ಸದ್ಯ ಈ ಫೋಟೋಶೂಟ್‌ಗೆ ಕಮೆಂಟ್‌ಗಳು ಹೆಚ್ಚೇನು ಬಂದಿಲ್ಲ. ಕಮೆಂಟ್ ಸೆಕ್ಷನ್ ಅನ್ನು ಆಫ್ ಮಾಡಿರುವ ಸಾಧ್ಯತೆಯಿದೆ. ಆದರೆ, ಅಷ್ಟರೊಳಗೆ ಕೆಲವರು ಹೈ ಅಲರ್ಟ್ ಘೋಷಣೆ ಮಾಡಿಬಿಟ್ಟಿದ್ದಾರೆ. ಒಟ್ನಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೊಶೂಟ್‌ಗಳು ಭರ್ಜರಿಯಾಗಿ ಸೇಲ್ ಆಗುತ್ತಿವೆ.
ಇನ್ನು ಸಿನಿಮಾ ವಿಚಾರಕ್ಕೆ ಬರೋದಾರೇ ಚೈತ್ರಾ ಆಚಾರ್ ನಟಿಸಿದ ತಮಿಳು ಸಿನಿಮಾ '3BHK' ರಿಲೀಸ್ ಆಗಿದೆ. ತಮಿಳು ನಟ ಸಿದ್ಧಾರ್ಥ್, ಹಿರಿಯ ನಟ ಶರತ್ ಕುಮಾರ್ ಸೇರಿದಂತೆ ಪ್ರಮುಖ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಇದರ ಜೊತೆ ಕೈ ತುಂಬಾ ಸಿನಿಮಾಗಳಿವೆ. 'ಮಾರ್ನಮಿ' ಎಂಬ ಸಿನಿಮಾದಲ್ಲಿ ಚೈತ್ರಾ ಆಚಾರ್ ನಟಿಸಿದ್ದಾರೆ. ಮಲ್ಟಿಸ್ಟಾರರ್ ಸಿನಿಮಾ 'ಉತ್ತರಕಾಂಡ'ದಲ್ಲೂ ಪ್ರಮುಖ ಪಾತ್ರವಿದೆ. 'ಸ್ಟ್ರಾಬರಿ' ಶೂಟಿಂಗ್ ಆಗಿ ಪೋಸ್ಟ್ ಪ್ರೊಡಕ್ಷನ್‌ನಲ್ಲಿದೆ. ಮತ್ತೊಂದು ತಮಿಳು ಸಿನಿಮಾ 'ಮೈ ಲಾರ್ಡ್' ಶೂಟಿಂಗ್ ನಡೆಯುತ್ತಿದೆ.


Click it and Unblock the Notifications











