ಕಳೆದು ಹೋಗಿದ್ದ ದೀಪಾ ಸನ್ನಿಧಿ ಮತ್ತೆ ಆಕ್ಟೀವ್; ಸ್ಯಾಂಡಲ್‌ವುಡ್‌ ಮತ್ತೆ ಮರಳಬಹುದೇ?

ಕನ್ನಡ ಚಿತ್ರರಂಗದ ಜನಪ್ರಿಯ ನಟಿ ದೀಪಾ ಸನ್ನಿಧಿ ಇದ್ದಕ್ಕಿಂತ ಕಣ್ಮರೆಯಾಗಿದ್ದರು. ಬ್ಯಾಕ್ ಟು ಬ್ಯಾಕ್ ಸೂಪರ್‌ಸ್ಟಾರ್‌ಗಳ ಜೊತೆ ನಟಿಸಿದ್ದ ನಟಿ ಕಳೆದ ಕೆಲವು ವರ್ಷಳಿಂದ ಸಿನಿಮಾವನ್ನೇ ಮಾಡಿಲ್ಲ. 2017 ದೀಪಾ ಸನ್ನಿಧಿ ನಟಿಸಿದ ಕೊನೆಯ ಸಿನಿಮಾ. ಚಾಲೆಂಜಿಂಗ್‌ಸ್ಟಾರ್ ದರ್ಶನ್ ನಟಿಸಿದ 'ಚಕ್ರವರ್ತಿ' ಸಿನಿಮಾವೇ ಕೊನೆ. ಅಲ್ಲಿಂದ ಸುಮಾರು ಎಂಟು ವರ್ಷಗಳಾಯ್ತು. ಇವರು ಒಂದೇ ಒಂದು ಸಿನಿಮಾದಲ್ಲಿಯೂ ಕಾಣಿಸಿಕೊಂಡಿಲ್ಲ.

ದೀಪಾ ಸನ್ನಿಧಿ ಕನ್ನಡ ಚಿತ್ರರಂಗಕ್ಕೆ ಹೊಸ ಭರವಸೆ ಮೂಡಿಸಿದ ನಟಿ. ಎತ್ತರವಿರುವ ದರ್ಶನ್, ಸುದೀಪ್, ಯಶ್ ಅಂತ ಹೀರೋಗಳಿಗೆ ಉತ್ತಮ ನಾಯಕಿ ಎಂದೇ ಚಿತ್ರರಂಗ ಹಿಗ್ಗಿತ್ತು. ಅಷ್ಟೇ ಯಾಕೆ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್‌ಗೂ ಪರ್ಫೆಕ್ಟ್ ಜೋಡಿಯಾಗಿದ್ದರು. ಅದಕ್ಕೆ ಯೋಗರಾಜ್ ಭಟ್ ನಿರ್ದೇಶಿಸಿದ 'ಪರಮಾತ್ಮ' ಸಿನಿಮಾವೇ ಸಾಕ್ಷಿ. ಇಂದಿಗೂ ಪುನೀತ್ ಅಭಿಮಾನಿಗಳ ಫೇವರಿಟ್ ಸಿನಿಮಾವಿದು.

Kannada actress Deepa Sannidhi post on instagram after disappearing from the industry

ಕನ್ನಡದಲ್ಲಿ ದೀಪಾ ಸನ್ನಿಧಿ ಬಹುತೇಕ ಸ್ಟಾರ್ ನಟರೊಂದಿಗೆ ನಟಿಸಿದ್ದರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸಿದ ಬ್ಲಾಕ್‌ ಬಸ್ಟರ್ ಸಿನಿಮಾ 'ಸಾರಥಿ' ಇವರ ಮೊದಲ ಸಿನಿಮಾ. ಇಲ್ಲಿಂದ ಶುರುವಾಗಿದ್ದ ಚಿಕ್ಕಮಗಳೂರು ಬೆಡಗಿಯ ಈ ಸಿನಿಮಾ ಯಾನ 2017ರ ವರೆಗೆ ಮುಂದುವರೆದಿತ್ತು. ದರ್ಶನ್ ನಟಿಸಿದ 'ಚಕ್ರವರ್ತಿ' ಸಿನಿಮಾವೇ ಇವರ ಕೊನೆಯ ಸಿನಿಮಾ. ಈಗ್ಯಾಕೆ ಈ ವಿಷ್ಯ ಅಂದರೆ, 2018ರಿಂದ ಸೋಶಿಯಲ್ ಮೀಡಿಯಾದಲ್ಲೂ ಆಕ್ಟೀವ್ ಆಗಿರದ ನಟಿಯಿಂದ ಒಂದು ಇನ್‌ಸ್ಟಾಗ್ರಾಂ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.

ಮುಂದೆ ಓದಿ

ದೀಪಾ ಸನ್ನಿಧಿ ಮತ್ತೆ ಸ್ಯಾಂಡಲ್‌ವುಡ್‌ಗೆ ಕಮ್‌ಬ್ಯಾಕ್ ಮಾಡಬಹುದಾ?
ದಿಢೀರನೇ ಇನ್‌ಸ್ಟಾಗ್ರಾಂನಲ್ಲಿ ಆಕ್ಟೀವ್ ಆದ ನಟಿ ದೀಪಾ ಸನ್ನಿಧಿ
8 ವರ್ಷಗಳ ಬಳಿಕ ದೀಪಾ ಸನ್ನಿಧಿ ಸಿನಿಮಾ ಮಾಡಬಹುದಾ?

ದೀಪಾ ಸನ್ನಿಧಿ ಕನ್ನಡ ಚಿತ್ರರಂಗದ ಸ್ಟಾರ್ ನಟಿ. 2011ಕ್ಕೆ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಕೇವಲ ಆರು ವರ್ಷಗಳಿ ನಟಿಸಿದ್ದು ಕೇವಲ 9 ಸಿನಿಮಾಗಳು ಮಾತ್ರ. ಇದರಲ್ಲಿ ಎರಡು ತಮಿಳು ಸಿನಿಮಾಗಳು ಸೇರಿವೆ. ಒಟ್ಟು 7 ಕನ್ನಡ ಸಿನಿಮಾಗಳಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ನಟಿಸಿದ 'ಸಕ್ಕರೆ' ಹಾಗೂ 'ಎಂದೆಂದೂ ನಿನಗಾಗಿ' ಸಿನಿಮಾ ಬಿಟ್ಟರೆ ಉಳಿದ ಐದು ಸಿನಿಮಾಗಳು ಹಿಟ್‌ ಲಿಸ್ಟ್ ಸೇರಿವೆ. ಅವೆಲ್ಲ ಸಿನಿಮಾಗಳಲ್ಲಿಯೂ ಸ್ಟಾರ್ ನಟರೊಂದಿಗೆ ದೀಪಾ ಸನ್ನಿಧಿ ನಟಿಸಿದ್ದರು. ಹೀಗಾಗಿ ಭವಿಷ್ಯದಲ್ಲಿ ಬಹುಬೇಡಿಕೆಯ ನಟಿಯಾಗಬಹುದೆಂಬ ನಿರೀಕ್ಷೆಯಿತ್ತು. ಆದರೆ, ಇದ್ದಕ್ಕಿದ್ದಂತೆ ದೀಪಾ ಸನ್ನಿಧಿ ಕಣ್ಮರೆಯಾಗಿದ್ದರು.

ಏಳೆಂಟು ವರ್ಷಗಳಿಂದ ಕಣ್ಮರೆಯಾಗಿದ್ದ ದೀಪಾ ಸನ್ನಿಧಿ ಸೋಶಿಯಲ್ ಮೀಡಿಯಾದಲ್ಲೂ ಆಕ್ಟೀವ್ ಆಗಿರಲಿಲ್ಲ. 2018ರಲ್ಲಿ ಮಾಡಿದ್ದೇ ಕೊನೆಯ ಪೋಸ್ಟ್‌. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದರ ದೀಪಾ ಸನ್ನಿಧಿ ತನ್ನ ಹುಟ್ಟುಹಬ್ಬಕ್ಕೆ ಶುಭಕೋರಿದವರಿಗೆ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಪೋಸ್ಟ್ ಹಾಕಿದ್ದಾರೆ. ದಿಢೀರನೇ ಪೋಸ್ಟ್ ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

Kannada actress Deepa Sannidhi post on instagram after disappearing from the industry

"ಹಾಯ್‌.. ಸುಂದರವಾದ ಆತ್ಮಗಳೇ.. ಬಹಳ ಸಮಯಗಳೇ ಆಗಿತ್ತು. ಹುಟ್ಟುಹಬ್ಬಕ್ಕೆ ಶುಭಾಶಯಗಳನ್ನು ಕೋರಿದವರಿಗೆಲ್ಲರಿಗೂ ಧನ್ಯವಾದಗಳು. ನನ್ನ ಮೇಲೆ ಇಷ್ಟೊಂದು ಪ್ರೀತಿಯನ್ನು ತೋರಿದ್ದಕ್ಕೆ ಧನ್ಯವಾದಗಳು. ಹಾಗೇ ನನ್ನ ಮೇಲೆ ಶುಭಕೋರಿದವರಿಗೆ, ತಾಳ್ಮೆಯನ್ನು ತೋರಿದವರಿಗೂ ಧನ್ಯವಾದಗಳು. ನಿಜವಾಗಲೂ ನಾನು ಧನ್ಯಳಾಗಿದ್ದೇನೆ." ಎಂದು ದೀಪಾ ಸನ್ನಿಧಿ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದಿಕೊಂಡಿದ್ದಾರೆ.

ಈ ಇನ್‌ಸ್ಟಾಗ್ರಾಂ ಖಾತೆ ದೀಪಾ ಸನ್ನಿಧಿಯವರದ್ದೇನಾ? ಇಲ್ಲಾ ಫ್ಯಾನ್ ಪೇಜ್ ಅನ್ನೋದಕ್ಕೆ ಕ್ಲಾರಿಟಿ ಇಲ್ಲ. ದೀಪಾ ಸನ್ನಿಧಿ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬ್ಲ್ಯೂ ಟಿಕ್ ಇಲ್ಲ. ಹೀಗಾಗಿ ಅಧಿಕೃತವಾಗಿ ಅವರದ್ದೇ ಖಾತೆ ಎಂದು ಹೇಳುವುದಕ್ಕೆ ಅಸಾಧ್ಯ. ಆದರೆ, 1.40 ಲಕ್ಷ ಫಾಲೋವರ್ಸ್‌ ಹಾಗೂ 2018ರಲ್ಲಿ ಕೊನೆಯ ಪೋಸ್ಟ್ ಆಗಿತ್ತು. ಹೀಗಾಗಿ ಇದು ಅವರದ್ದೇ ಖಾತೆ ಎಂದು ಅಂದಾಜು ಮಾಡಬಹುದು.

More from Filmibeat

English summary
Kannada actress Deepa Sannidhi post on instagram after disappearing from the industry;
Read more about: deepa sannidhi actress sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X