ಸ್ಯಾಂಡಲ್‌ವುಡ್‌ನ ಟಗರು ಪುಟ್ಟಿಗೆ ಕೂಡಿ ಬಂತು ಕಂಕಣ; ಮದುವೆ ಯಾವಾಗ? ವರ ಯಾರು?

ಮಾನ್ವಿತಾ ಕಾಮತ್ ಸ್ಯಾಂಡಲ್‌ವುಡ್‌ನಲ್ಲಿ ಟಗರು ಪುಟ್ಟಿ ಎಂದೇ ಫೇಮಸ್. ಆರ್‌ಜೆ ಆಗಿ ವೃತ್ತಿ ಬದುಕನ್ನು ಆರಂಭಿಸಿದ್ದ ಮಾನ್ವಿತಾ ಸಿನಿಮಾದಲ್ಲಿ ನಾಯಕಿಯಾಗಿ ಯಶಸ್ಸು ಕಂಡಿದ್ದಾರೆ. ದುನಿಯಾ ಸೂರಿ ನಿರ್ದೇಶನದ 'ಕೆಂಡಸಂಪಿಗೆ' ಸಿನಿಮಾ ಮೂಲಕ ನಟನಾ ವೃತ್ತಿಯನ್ನು ಆರಂಭಿಸಿದ್ದರು. ಬಳಿಕ ಹಲವು ಸಕ್ಸಸ್‌ಫುಲ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಶಿವಣ್ಣನೊಂದಿಗೆ ನಟಿಸಿದ 'ಟಗರು' ಸಿನಿಮಾ ಮಾನ್ವಿತಾ ಕಾಮತ್‌ಗೆ ಮತ್ತಷ್ಟು ಹೆಸರು ತಂದುಕೊಟ್ಟಿತ್ತು. ಇದೇ ನಟಿಯೀಗ ಹಸೆಮಣೆ ಏರುವುದಕ್ಕೆ ಸಜ್ಜಾಗಿದ್ದಾರೆ. ಈ ವಿಷಯವನ್ನು ಅವರೇ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

Kannada actress Manvita Kamath is getting married to music director Arun Kumar

ನಟಿ ಮಾನ್ವಿತಾ ಕಾಮತ್ ಮೈಸೂರು ಮೂಲದ ಮ್ಯೂಸಿಕ್ ಪ್ರೊಡ್ಯೂಸರ್ ಅರುಣ್ ಕುಮಾರ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇದೇ ಮೇ 1 ರಂದು ಅರುಣ್ ಕುಮಾರ್ ಅವರೊಂದಿಗೆ ಹಸಮಣೆ ಏರುತ್ತಿರುವುದಾಗಿ ಖುಷಿಯನ್ನು ಶೇರ್ ಮಾಡಿಕೊಂಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಮಾನ್ವಿತಾ ಅಭಿಮಾನಿಗಳು ಹಾಗೂ ಚಿತ್ರರಂಗದ ತಾರೆಯರು ಶುಭಾಶಯ ಕೋರುತ್ತಿದ್ದಾರೆ.

ಕನ್ನಡದ ನಟಿ ಮಾನ್ವಿತಾ ಕಾಮತ್ ಹಾಗೂ ಮ್ಯೂಸಿಕ್ ಪ್ರಡ್ಯೂಸರ್ ಅರುಣ್ ಕುಮಾರ್ ಮದುವೆ ಮೇ1 ಕ್ಕೆ ಕೊಂಕಣಿ ಸಂಪ್ರದಾಯದಂತೆ ನಡೆಯುತ್ತಿದೆ. ಆದರೆ, ಅದಕ್ಕೂ ಮುನ್ನ ಏಪ್ರಿಲ್ 29ಕ್ಕೆ ಮೆಹಂದಿ ಕಾರ್ಯಕ್ರಮ ಜರುಗಿದರೆ, ಏಪ್ರಿಲ್ 30ರಂದು ಸಂಗೀತ್ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಆರತಕ್ಷತೆ ಬಗ್ಗೆ ಸದ್ಯ ಮಾಹಿತಿಯನ್ನು ಹಂಚಿಕೊಂಡಿಲ್ಲ.

ಇತ್ತೀಚೆಗಷ್ಟೇ ಮಾನ್ವಿತಾ ಕಾಮತ್ ಅವರ ಅಮ್ಮ ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದರು. ಮಗಳನ್ನು ಅದ್ಧೂರಿಯಾಗಿ ಮದುವೆ ಮಾಡಬೇಕು ಅನ್ನೋದು ಅವರ ಬಹು ದಿನಗಳ ಕನಸಾಗಿತ್ತು. ಹೀಗಾಗಿ ಮಗಳ ಮದುವೆಗೆ ಸಂಬಂಧಗಳನ್ನು ಹುಡುಕುತ್ತಲೇ ಇದ್ದರು. ಅದರ ಪ್ರತಿಫಲವಾಗಿಯೇ ಮೈಸೂರು ಮೂಲಕದ ಅರುಣ್ ಕುಮಾರ್ ಜೊತೆ ಮಾನ್ವಿತಾ ಹಸೆಮಣೆ ಏರುತ್ತಿದ್ದಾರೆ.

ಮಾನ್ವಿತಾ ಕಾಮತ್ ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ದುನಿಯಾ ವಿಜಯ್ ನಟನೆಯ 'ಕನಕ', 'ಚೌಕ', 'ತಾರಕಾಸುರ', 'ರಿಲ್ಯಾಕ್ಸ್ ಸತ್ಯ', 'ಇಂಡಿಯಾ ವರ್ಸಸ್‌ ಇಂಗ್ಲೆಂಡ್', 'ಶಿವ 143' ಅಂತಹ ಸಿನಿಮಾಗಳಲ್ಲಿ ಮಾನ್ವಿತಾ ನಟಿಸಿದ್ದಾರೆ. ಹಾಗೇ 'ಅಪ್ಪಾ ಐ ಲವ್ ಯೂ' ಸಿನಿಮಾ ತೆರೆಕಂಡಿದ್ದು, ಕೈಯಲ್ಲಿ ಇನ್ನೂ 'ಹ್ಯಾಪಿಲಿ ಮ್ಯಾರೀಡ್' , 'ಬ್ಯಾಡ್', 'ರಾಜಸ್ಥಾನ್ ಡೈರೀಸ್', ಸಿನಿಮಾಗಳು ಬಿಡುಗಡೆಯಾಗಬೇಕಿದೆ.

ಹೊಸ ಬಾಳಿಗೆ ಕಾಲಿಡಲು ಸಜ್ಜಾಗಿರುವ ಮಾನ್ವಿತಾಗೆ ಅಭಿಮಾನಿಗಳು ಶುಭ ಕೋರಿದ್ದಾರೆ. ಹಾಗೇ ಕನ್ನಡದ ತಾರೆಯರು ಶುಭ ಹಾರೈಸಿದ್ದಾರೆ. ನಟಿ ಸೋನು ಗೌಡ "ಅಭಿನಂದನೆಗಳು, ನಿಮ್ಮಿಬ್ಬರ ಬಾಳು ಮತ್ತಷ್ಟು ಸುಗಮವಾಗಿರಲಿ. ಸಂತೋಷದಿಂದ ಕೂಡಿರಲಿ." ಎಂದು ವಿಶ್ ಮಾಡಿದ್ದಾರೆ. ಹಾಗೇ ಶ್ರುತಿ ಹರಿಹರನ್, ಸಂಯುಕ್ತ ಹೊರನಾಡು, ನಟ ಸೂರಜ್ ಗೌಡ, ಕಾವ್ಯಾ ಶೆಟ್ಟಿ ಸೇರಿದಂತೆ ಹಲವರು ಖುಷಿಯನ್ನು ವ್ಯಕ್ತಪಡಿಸಿದ್ದಾರೆ.

More from Filmibeat

English summary
Actress Manvita Kamath marriage with Arun Kumar:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X