ಮಾನ್ವಿತಾ ಮದುವೆಯಾಗ್ತಿರೋ ಆ ಅದೃಷ್ಟವಂತ ಇವ್ರೇ; ಟಗರು ಪುಟ್ಟಿ ಲೈಫ್ ಪಾರ್ಟನರ್ ಫುಲ್ ಡೀಟೆಲ್ಸ್

ಈಗ ಎಲ್ಲಾ ಕಡೆಯೂ ಮದುವೆ ಸೀಸನ್ ಶುರುವಾಗಿದೆ. ಬೇಸಿಗೆ ರಜೆಯ ಸಂದರ್ಭದಲ್ಲಿ ಸಾಲು ಸಾಲು ಶುಭ ಸಮಾರಂಭಗಳು ಸದಾ ಇದ್ದೇ ಇರುತ್ತವೆ. ಇದಕ್ಕೆ ನಮ್ಮ ಸ್ಯಾಂಡಲ್​ವುಡ್ ಕೂಡಾ ಹೊರತಲ್ಲ. ಟಗರುಪುಟ್ಟಿ ಮಾನ್ವಿತಾ ಕಾಮತ್ ಹಸೆಮಣೆ ಏರೋಕೆ ರೆಡಿಯಾಗಿರೋದು ಈಗಾಗಲೇ ಗೊತ್ತಾಗಿದೆ. ತಾವೇ ಖುದ್ದಾಗಿ ಮದುವೆ ಆಮಂತ್ರಣ ಕೊಟ್ಟು ಮಾನ್ವಿತಾ ಸಂತಸಪಡ್ತಿದ್ದಾರೆ. ಆದರೆ, ಇದೂವರಗೆ ಈ ಮುದ್ದು ಹುಡುಗಿಯನ್ನು ಕೈ ಹಿಡಿಯುತ್ತಿರೋ ಅದೃಷ್ಟವಂತ ಯಾರು ಅನ್ನೋ ಬಗ್ಗೆ ಹೆಚ್ಚಿನ ಮಾಹಿತಿ ಇರಲಿಲ್ಲ. ಈಗ ಅಭಿಮಾನಿಗಳ ಈ ಕುತೂಹಲವನ್ನು ಖುದ್ದು ಮಾನ್ವಿತಾ ದೂರ ಮಾಡಿದ್ದಾರೆ.

ಅಂದ್ಹಾಗೆ, ಮಾನ್ವಿತಾ ಕೈ ಹಿಡಿಯುತ್ತಿರುವ ಲಕ್ಕಿ ಮ್ಯಾನ್ ಹೆಸರು ಅರುಣ್ ಕುಮಾರ್. ಕಂಪನಿಯೊಂದರಲ್ಲಿ ಮ್ಯೂಸಿಕ್ ಪ್ರಡ್ಯೂಸರ್ ಆಗಿರುವ ಅರುಣ್ ಕುಟುಂಬಕ್ಕೆ ಮಾನ್ವಿತಾ ತಾಯಿ ಸುಜಾತಾ ಕಾಮತ್ ಪರಿಚಯ ಇತ್ತು. ಮಗಳಿಗೆ ಮದುವೆ ಮಾಡ್ಬೇಕು, ಒಳ್ಳೆ ಹುಡುಗ ಇದ್ದರೆ ತಿಳಿಸಿ ಎಂದು ಅನೇಕ ಸಂಬಂಧಿಕರು, ಆಪ್ತರ ಬಳಿ ಹೇಳಿದ್ದರು. ಅವರಲ್ಲಿ ಅರುಣ್ ಕುಮಾರ್ ತಾಯಿ ಕೂಡಾ ಒಬ್ಬರು.

Kannada Actress Manvitha Kamath wedding groom arun kumar full details

ಆದರೆ, ದುರಾದೃಷ್ಟವಶಾತ್ ಅನಾರೋಗ್ಯದಿಂದ ಮಾನ್ವಿತಾ ತಾಯಿಯನ್ನು ಕಳೆದುಕೊಂಡರು. ನಂತರ ಈ ವಿಚಾರ ತಿಳಿದು ಅರುಣ್ ಕುಮಾರ್ ಕುಟುಂಬ ಮಾನ್ವಿತಾರನ್ನು ಸಂಪರ್ಕಿಸಿದೆ. ಆಮೇಲೆ ಎರಡೂ ಕುಟುಂಬಗಳು ಭೇಟಿಯಾಗಿ, ಮಾತುಕತೆ ನಡೆದು ಈಗ ಮದುವೆ ನಿಶ್ಚಯವಾಗಿದೆ.
ಕೊಂಕಣಿ ಸಮುದಾಯ(ಜಿಎಸ್​ಬಿ)ಕ್ಕೆ ಸೇರಿದಾ ಮಾನ್ವಿತಾ ಮದುವೆ ಕೂಡಾ ಅದೇ ಸಂಪ್ರದಾಯದಂತೆ ನಡೆಯುತ್ತಿದೆ. ಮಾನ್ವಿತಾ ಚಿಕ್ಕವರಿದ್ದಾಗ ಅವರ ಕುಟುಂಬ ಚಿಕ್ಕಮಗಳೂರಿನ ಕಳಸದಲ್ಲಿ ವಾಸವಿದ್ದರು. ಈಗಲೂ ಅವರ ಅನೇಕ ಸಂಬಂಧಿಕರು ಅಲ್ಲೇ ಇದ್ದಾರೆ. ಆ ಕಾರಣದಿಂದ ಅಲ್ಲಿಯ ಜಿಎಸ್‌ಬಿ ಸಭಾಭವನದಲ್ಲಿ ಮಾನ್ವಿತಾ ಮೇ 1ರಂದು ಶಾಸ್ತ್ರೋಕ್ತವಾಗಿ ಮದುವೆಯಾಗಲಿದ್ದಾರೆ.

ಕಳೆದ ವಾರವಷ್ಟೇ ತಾನು ಓದಿದ ಶಾಲೆಯ ಹಿರಿಯರು, ಊರಿನ ಪರಿಚಿತರು ಎಲ್ಲರನ್ನೂ ಭೇಟಿ ಮಾಡಿ ಮದುವೆಗೆ ಆಮಂತ್ರಿಸಿದ್ದಾರೆ. ಈಗ ವಧೂವರರಿಬ್ಬರೂ ಚಿತ್ರರಂಗದ ಗಣ್ಯರನ್ನು ಖುದ್ದಾಗಿ ಹೋಗಿ ಇನ್ವೈಟ್ ಮಾಡ್ತಿದ್ದಾರೆ. ಮೂರು ದಿನಗಳ ಅದ್ಧೂರಿ ಮದುವೆ ಸಮಾರಂಭ ಇದಾಗಲಿದ್ದು ಏಪ್ರಿಲ್ 29ಕ್ಕೆ ಹಳದಿ ಶಾಸ್ತ್ರ, ಏಪ್ರಿಲ್ 30ಕ್ಕೆ ಸಂಗೀತ ಮತ್ತು ಮೆಹೆಂದಿ ಕಾರ್ಯಕ್ರಮ ಹಾಗೂ ಮೇ 1ಕ್ಕೆ ಮದುವೆ ನಡೆಯಲಿದೆ.

Kannada Actress Manvitha Kamath wedding groom arun kumar full details

ದೊಡ್ಮನೆ ಸೊಸೆ ಅಶ್ವಿನಿ ಪುನೀತ್ ರಾಜ್‌ಕುಮಾರ್‌ರನ್ನು ಮದುವೆಗೆ ಆಮಂತ್ರಿಸಲು ಈ ಜೋಡಿ ಹೋಗಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೊನೆಗೂ ಟಗರು ಪುಟ್ಟಿಯ ಭಾವೀ ಪತಿಯನ್ನು ನೋಡಿದ ಅಭಿಮಾನಿಗಳು ಜೋಡಿ ಚೆನ್ನಾಗಿದೆ ಎಂದಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ, ನೆನಪಿರಲಿ ಪ್ರೇಮ್ ಕುಟುಂಬವನ್ನೂ ಈ ಜೋಡಿ ಈಗಾಗಲೇ ಮದುವೆಗೆ ಆಮಂತ್ರಿಸಿದೆ.

ಒಟ್ನಲ್ಲಿ ಅನೇಕ ಹುಡುಗರ ನಿದ್ದೆಗೆಡಿಸಿದ್ದ ಈ ಚೆಲುವೆ ಈಗ ಸಂಸಾರಸ್ಥರಾಗಲು ತಯಾರಿ ನಡೆಸಿದ್ದಾರೆ. ಸಿನಿಮಾ ನಂಟಿರುವ ಹುಡುಗನನ್ನೇ ಮದುವೆಯಾಗ್ತಿರೋದ್ರಿಂದ ಮಾನ್ವಿತಾ ಚಿತ್ರರಂಗದಿಂದ ದೂರವಾಗಲ್ಲ ಅನ್ನೋ ಗ್ಯಾರಂಟಿಯಂತೂ ಸಿಕ್ಕು ಅಭಿಮಾನಿಗಳು ಖುಷಿಯಾಗಿದ್ದಾರೆ.

More from Filmibeat

English summary
Actress Manvitha Kamath wedding groom Arun Kumar details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X