ಅರುಣ್‌ ಕುಮಾರ್ ಜೊತೆ ಸಪ್ತಪದಿ ತುಳಿದ ಮಾನ್ವಿತಾ ಕಾಮತ್; ಟಗರು ಪುಟ್ಟಿ ಮದ್ವೆಗೆ ಯಾರೆಲ್ಲ ಬಂದಿದ್ರು?

ಸ್ಯಾಂಡಲ್‌ವುಡ್‌ನ ಟಗರು ಪುಟ್ಟಿ ಮಾನ್ವಿತಾ ಕಾಮತ್ ಮದುವೆ ತಯಾರಿ ಹಲವು ದಿನಗಳಿಂದ ನಡೆಯುತ್ತಿತ್ತು. ಕಳೆದೊಂದು ತಿಂಗಳಿನಿಂದ ಕನ್ನಡ ಚಿತ್ರರಂಗದ ಗಣ್ಯರಿಗೆ ಮದುವೆ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನಿಸಿದ್ದರು. ಇಂದು (ಮೇ 1) ಚಿಕ್ಕಮಗಳೂರಿನ ಕಳಸದಲ್ಲಿ ಮಾನ್ವಿತಾ ಕಾಮತ್ ಹಸೆಮಣೆ ಏರಿದ್ದಾರೆ.

ಅಂದ್ಹಾಗೆ, ಮಾನ್ವಿತಾ ಕಾಮತ್ ಸಪ್ತಪದಿ ತುಳಿದಿರುವ ಹುಡುಗನ ಹೆಸರು ಅರುಣ್ ಕುಮಾರ್. ಐಟಿ ಪ್ರೊಫೆಶನಲ್ ಕಮ್ ಮ್ಯೂಸಿಕ್ ಪ್ರೊಡ್ಯೂಸರ್ ಆಗಿ ಕೆಲಸ ಮಾಡುತ್ತಿರುವ ಅರುಣ್ ಜೊತೆ ಇತ್ತೀಚೆಗೆ ಮಾನ್ವಿತಾ ಕಾಮತ್ ಮದುವೆ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದರು. ಈಗ ತನ್ನ ಬೆಳೆದ ಊರು ಕಳಸದಲ್ಲಿ ಮದುವೆ ಆಗಬೇಕು ಎಂದು ಇಷ್ಟ ಪಟ್ಟಿದ್ದರು. ಅದರಂತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

Kannada actress Manvitha Kamath wedding with Arun Kumar in Kalasa in Chikmagalur

ಚಿಕ್ಕಮಗಳೂರು ಜಿಲ್ಲೆಯ ಕಳಸದ ವೆಂಕಟರಮಣ ದೇವಸ್ಥಾನದಲ್ಲಿ ಈ ಜೋಡಿ ಶಾಸ್ತ್ರೋಕ್ತವಾಗಿ ಮದುವೆಯಾಗಿದೆ. ಎರಡೂ ಕುಟುಂಬಗಳ ಸದಸ್ಯರು, ಸ್ನೇಹಿತರು ಹಾಗೂ ಚಿತ್ರರಂಗದ ಗಣ್ಯರು ಈ ಸೆಲೆಬ್ರೆಟಿ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ. ಕೊಂಕಣಿ ಸಂಪ್ರದಾಯದಂತೆ ಮದುವೆ ಮಾನ್ವಿತಾ ಕಾಮತ್ ಮದುವೆ ನಡೆದಿರೋದು ವಿಶೇಷ.

ಸ್ಯಾಂಡಲ್‌ವುಡ್ ನಟಿ ಮಾನ್ವಿತಾ ಕಾಮತ್ ಮದುವೆ ನೋಡಬೇಕು ಅನ್ನೋದು ಅವರ ಕನಸಾಗಿತ್ತು. ಆದರೆ, ಅದು ಸಾಧ್ಯವಾಗಿಲಿಲ್ಲ. ಹೀಗಾಗಿ ಅಮ್ಮನ ಆಸೆಯಂತೆಯೇ ಮಾನ್ವಿತಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಪತಿ ಅರುಣ್ ಕುಮಾರ್ ತಮ್ಮ ಬಾಳಲ್ಲಿ ಬಂದಿದ್ದು ಹೇಗೆ? ಅನ್ನೋದನ್ನು ಮಾನ್ವಿತಾ ಮದುವೆ ಮುನ್ನ ಮಾಧ್ಯಮಗಳಿಗೆ ತಿಳಿಸಿದ್ದರು.

ಪತಿ ಅರುಣ್ ಕುಮಾರ್ ಮನೆಯವರೊಂದಿಗೆ ಮಾನ್ವಿತಾ ತಾಯಿ ಸಂಪರ್ಕದಲ್ಲಿ ಇದ್ದರು. ಮಗಳಿಗೆ ಗಂಡು ಹುಡುಕುತ್ತಿರುವ ವಿಷಯವನ್ನು ತಿಳಿಸಿದ್ದರು. ಇದೇ ವೇಳೆ ಮಾನ್ವಿತಾ ತಾಯಿ ನಿಧನರಾಗಿದ್ದರು. ಆ ವಿಷಯ ತಡವಾಗಿ ತಿಳಿದಿತ್ತು. ಇದು ಗೊತ್ತಾಗುತ್ತಿದ್ದಂತೆ ಮಾನ್ವಿತಾರನ್ನು ಸಂಪರ್ಕ ಮಾಡಿ ಮದುವೆ ಪ್ರಸ್ತಾಪ ಮಾಡಲಾಗಿತ್ತು. ಹೀಗಾಗಿ ಅಮ್ಮನ ಆಸೆಯಂತೆಯೇ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

Kannada actress Manvitha Kamath wedding with Arun Kumar in Kalasa in Chikmagalur

ಮಾನ್ವಿತಾ ಕಾಮತ್ ಮದುವೆಗೆ ಸ್ಯಾಂಡಲ್‌ವುಡ್ ಕೆಲವು ಆತ್ಮೀಯರ ತಾರೆಯರು ಭಾಗಿಯಾಗಿದ್ದರು. ನಟಿ ನಿಧಿ ಸುಬ್ಬಯ್ಯ, ಶ್ರುತಿ ಹರಿಹರನ್, ನಿರೂಪಕ ನಿರಂಜನ್ ದೇಶಪಾಂಡೆ ಸೇರಿದಂತೆ ಹಲವು ಈ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದರು. ಕಳೆದ ಎರಡು ದಿನಗಳಿಂದ ಮದುವೆ ಶಾಸ್ತ್ರಗಳು ಕಳಸದಲ್ಲಿಯೇ ನಡೆದಿತ್ತು. ಅರಿಶಿನ ಶಾಸ್ತ್ರ, ಮೆಹಂದಿ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆದಿತ್ತು.

ಮಾನ್ವಿತಾ ಕಾಮತ್ ಮದುವೆ ಸಮಾರಂಭ ಬಳಿಕ ಬೆಂಗಳೂರಿನಲ್ಲಿ ಚಿತ್ರರಂಗದ ಗಣ್ಯರಿಗೆ ಆರತಕ್ಷತೆ ಹಮ್ಮಿಕೊಳ್ಳುವ ಸಾಧ್ಯತೆಯಿದೆ. ಸದ್ಯ ಮಾನ್ವಿತಾ ಕಾಮತ್ ಸಂಭ್ರಮದಲ್ಲಿದ್ದು, ಆರತಕ್ಷತೆ ಯಾವಾಗ? ಅನ್ನುವ ಬಗ್ಗೆ ಸದ್ಯ ಮಾಹಿತಿ ಹೊರಬೀಳಬೇಕಿದೆ. ಇನ್ನು ವಿವಾಹದ ಬಳಿಕವೂ ಮಾನ್ವಿತಾ ಸಿನಿಮಾಗಳಲ್ಲಿ ನಟನೆಯನ್ನು ಮುಂದುವರೆಸುವುದಾಗಿ ಹೇಳಿಕೊಂಡಿದ್ದಾರೆ.

More from Filmibeat

English summary
Actress Manvitha Kamath wedding with Arun Kumar in Kalasa;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X