"ಡಿವೋರ್ಸ್ ಬಗ್ಗೆ ಎಲ್ಲೂ ಹೇಳಿಕೆಗಳನ್ನು ಕೊಟ್ಟಿಲ್ಲ.. ಕೊಡುವುದೂ ಇಲ್ಲ" ನಟಿ ಮಯೂರಿ

ಕನ್ನಡ ಕಿರುತೆರೆಯಲ್ಲಿ ದಾಖಲೆ ಬರೆದಿದ್ದ 'ಅಶ್ವಿನಿ ನಕ್ಷತ್ರ' ಧಾರಾವಾಹಿಯ ಮೂಲಕ ನಟನೆಗೆ ಎಂಟ್ರಿ ಕೊಟ್ಟವರು ನಟಿ ಮಯೂರಿ ಕ್ಯಾತರಿ. ಈ ಧಾರಾವಾಹಿ ಮಯೂರಿ ಬದುಕನ್ನೇ ಬದಲಿಸಿಬಿಟ್ಟಿತ್ತು. ಈ ಸೀರಿಯಲ್ ನೋಡ ನೋಡುತ್ತಿದ್ದಂತೆ ಮಯೂರಿಗೆ ಜನಪ್ರಿಯತೆಯನ್ನು ತಂದುಕೊಟ್ಟಿತ್ತು. ಕಿರುತೆರೆ ಲೋಕದಲ್ಲಿ ಮಯೂರಿ ಕ್ಯಾತರಿ ಸ್ಟಾರ್ ಆಗಿ ಬೆಳೆದು ನಿಂತಿದ್ದರು. ಇಲ್ಲಿಂದ ಮಯೂರಿ ಮತ್ತೆಂದೂ ಹಿಂದೆ ತಿರುಗಿ ನೋಡಲೇ ಇಲ್ಲ.

ಕಿರುತೆರೆಯಲ್ಲಿ ಜನಪ್ರಿಯತೆ ಗಳಿಸಿದ ಬಳಿಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಸಿನಿಮಾದಲ್ಲೂ ಇವರಿಗೆ ಯಶಸ್ಸಿ ಸಿಕ್ಕಿತ್ತು. ಅಜಯ್ ರಾವ್‌ ಜೊತೆ ನಟಿಸಿದ 'ಕೃಷ್ಣ ಲೀಲಾ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆದ್ದಿತ್ತು. ಈ ಮೂಲಕ ಸಿನಿಮಾದಲ್ಲಿಯೂ ಯಶಸ್ಸು ಗಳಿಸಿದರು. 'ಇಷ್ಟಕಾಮ್ಯ', 'ನಟರಾಜ ಸರ್ವೀಸ್','ಕರಿಯ 2', '8 ಎಂಎಂ ಬುಲೆಟ್', 'ರುಸ್ತುಂ' ಅಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ.

Kannada Actress Mayuri Kyatari open up about her divorce rumors in podcast with RJ Rajesh

2020ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಮಯೂರಿ ಕ್ಯಾತರಿ ಸಿನಿಮಾಗಳಲ್ಲಿ ನಟಿಸುವುದಕ್ಕೆ ಕಡಿಮೆ ಮಾಡಿದರು. ಗಂಡು ಮಗುವಿಗೆ ಜನ್ಮ ನೀಡಿದ ಬಳಿಕ ಮಯೂರಿ ಸಿನಿಮಾರಂಗದಿಂದ ಕೊಂಚ ಮಟ್ಟಿಗೆ ದೂರವೇ ಉಳಿದರು. ಇತ್ತೀಚೆಗೆ ಮತ್ತೆ ಕಮ್‌ಬ್ಯಾಕ್ ಮಾಡಿರುವ ನಟಿಯ ವೈವಾಹಿಕ ಜೀವನದ ಕುರಿತು ಕೆಲವು ದಿನಗಳಿಂದ ಸುದ್ದಿ ಹರಿದಾಡುತ್ತಿದೆ. ಮಯೂರಿ ದಾಂಪತ್ಯದಲ್ಲಿ ಬಿರುಕು ಮೂಡಿದೆಂಬ ಸುದ್ದಿ ಓಡಾಡಿತ್ತು. ಆದರೆ, ಈ ವಿಷಯದ ಬಗ್ಗೆ ಮಯೂರಿ ಸ್ಪಷ್ಟ ಉತ್ತರ ಕೊಟ್ಟಿಲ್ಲ. ಇತ್ತೀಚೆಗೆ ಆರ್‌ ಜೆ ರಾಜೇಶ್ ನಡೆಸಿಕೊಡುವ ಪಾಡ್‌ಕಾಸ್ಟ್‌ನಲ್ಲಿ ಮಯೂರಿ ವಿಚ್ಚೇದನದ ಬಗ್ಗೆ ಮಾತಾಡಿದ್ದಾರೆ.

"ನಾನು ಡಿವೋರ್ಸ್‌ ಬಗ್ಗೆ ಎಲ್ಲೂ ಹೇಳಿಲ್ಲ"

ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್‌ನ ಪಾಡ್‌ಕಾಸ್ಟ್‌ನಲ್ಲಿ ನಟಿ ಮಯೂರಿ ಕ್ಯಾತರಿ ವಿಚ್ಚೇದನ, 5 ವರ್ಷದ ಮಗ ಹಾಗೂ ಕುಟುಂಬದ ಬಗ್ಗೆ ಮಾತಾಡಿದ್ದಾರೆ. "ಮೊದಲಿಗೆ ನಾನು ಡಿವೋರ್ಸ್ ಎನ್ನುವ ಹೇಳಿಕೆಯನ್ನೇ ಕೊಟ್ಟಿಲ್ಲ. ಡಿವೋರ್ಸ್ ಆಗಿದೆಯಾ? ಇಲ್ವಾ ಅಂತ ನೀವು ಹೇಳ್ತಿದ್ದೀರ. ಆಗ ಹೇಳಿದ ಹಾಗೆ ಈಗಲೂ ಹೇಳುತ್ತೇನೆ. ನನಗೆ 5 ವರ್ಷದ ಮಗ ಇದ್ದಾನೆ. ನನಗೆ ಅದ್ಭುತವಾದ ಕುಟುಂಬವಿದೆ. ಆರವ್‌ಗೆ ಒಳ್ಳೆಯ ತಾಯಿ ಇದ್ದಾಳೆ ಮಯೂರಿ. ತುಂಬಾ ಚೆನ್ನಾಗಿ ನೋಡಿಕೊಳ್ತೀನಿ. ಒಳ್ಳೆಯ ಅಪ್ಪ ಇದ್ದಾರೆ. ಆರವ್‌ಗೂ ಅವರ ಅಪ್ಪನಿಗೂ ಒಳ್ಳೆಯ ಸಂಬಂಧವಿದೆ. ರಿಲೇಷನ್‌ಶಿಪ್‌ ಸ್ಟೇಟಸ್ ಬಗ್ಗೆ ಮಾತಾಡುವುದಕ್ಕೆ ಇಷ್ಟ ಪಡುವುದಿಲ್ಲ. ನನ್ನ ವೈಯಕ್ತಿಕ ಜೀವನದ ಬಗ್ಗೆ ಮಾತಾಡುವುದಕ್ಕೆ ನಾನು ಇಷ್ಟ ಪಡುವುದಿಲ್ಲ." ಎಂದು ನಟಿ ಮಯೂರಿ ಹೇಳಿದ್ದಾರೆ.

"ಇದು ನನ್ನ ವೈಯಕ್ತಿಕ ವಿಚಾರ"

ಡಿವೋರ್ಸ್‌ ಬಗ್ಗೆ ಕೇಳಿದಾಗ, ನಟಿ ಮಯೂರಿ ಪ್ರತಿಕ್ರಿಯೆ ನೀಡಿದ್ದು ಹೀಗೆ. "ನನಗೆ ಈ ಬಗ್ಗೆ ಎಲ್ಲೂ ಉತ್ತರ ಕೊಡುವುದಕ್ಕೆ ಇಷ್ಟವಿಲ್ಲ. ಎಲ್ಲೂ ಈ ಬಗ್ಗೆ ಹೇಳಿಕೆಗಳನ್ನು ಕೊಟ್ಟಿಲ್ಲ.. ಕೊಡುವುದೂ ಇಲ್ಲ. ಅದು ನನ್ನ ವೈಯಕ್ತಿಕ ವಿಚಾರ. ಅದು ನಮ್ಮಲ್ಲೇ ಇರಬೇಕು. ಯಾವಾಗ ಏನು ಹೇಳಬೇಕು.. ಏನು ಹೇಳಬಾರದು.. ಇದೆಲ್ಲ ಏನೇ ಇದ್ದರೂ ನನಗೆ ಏನೂ ಹೇಳುವುದಕ್ಕೆ ಇಷ್ಟವಿಲ್ಲ. ಡಿವೋರ್ಸ್ ಅನ್ನೋ ವಿಷಯದ ಬಗ್ಗೆ ಮಾತಾಡುವುದಕ್ಕೇ ಇಷ್ಟವಿಲ್ಲ. ಎಲ್ಲರೂ ನನ್ನ ಹಾಗೆ ಇರಬೇಕು ಅಂತ ನಾನು ಹೇಳುವುದಿಲ್ಲ." ಎಂದು ಮಯೂರಿ ಹೇಳಿದ್ದಾರೆ.

Kannada Actress Mayuri Kyatari open up about her divorce rumors in podcast with RJ Rajesh

"ನನ್ನ ಮಗನ ಬೆಳವಣಿಗೆ ಚೆನ್ನಾಗಿದೆ"

"ನಾನು ಒಬ್ಬ ನಟಿಯಾಗಿ ನನಗೆ ನನ್ನದೇ ಜವಾಬ್ದಾರಿಗಳು ಇವೆ. ನಾನು ನನ್ನ ಪರ್ಸನಲ್ ಲೈಫ್‌ ಬಗ್ಗೆ ಎಲ್ಲೂ ಮಾತನಾಡಿಲ್ಲ. ಮುಂದೆನೂ ಮಾತಾಡುವುದಿಲ್ಲ. ನನಗೆ ಒಂದು ಒಳ್ಳೆಯ ಕುಟುಂಬವಿದೆ. ನಾನು ನನ್ನ ಮಗನನ್ನು ತುಂಬಾನೇ ಚೆನ್ನಾಗಿ ಬೆಳೆಸುತ್ತಿದ್ದೇನೆ. ಇದನ್ನು ನಾನು ಹೇಳಲೇಬೇಕು. ತುಂಬಾ ಜನರು ಕೇಳ್ತಾರೆ, ಮಗು ಇದೆಯಲ್ಲ. ಅದು-ಇದು ಏನು ಅಂತೆಲ್ಲ ಕೇಳ್ತಾರೆ. ಅವರೆಲ್ಲರಿಗೂ ಹೇಳುವುದು ಒಂದೇ, ನನ್ನ ಮಗನ ಬೆಳವಣಿಗೆ ತುಂಬಾನೇ ಚೆನ್ನಾಗಿ ಆಗುತ್ತಿದೆ. ನನ್ನ ಮಗ ತುಂಬಾ ಖುಷಿಯಾಗಿದ್ದಾನೆ. ತಾಯಿಯಾಗಿ ನನ್ನ ಮಗನಿಗೆ ಒಳ್ಳೆಯ ವಾತಾವರಣ ಕೊಡಬೇಕು. ಅವನಿಗೆ ನೆಗೆಟಿವ್ ವಾತಾವರಣ ಬೇಡ." ಎನ್ನುತ್ತಾರೆ ಮಯೂರಿ ಕ್ಯಾತರಿ.

ಒಪ್ಪುವುದಿಲ್ಲ.. ತಿರಸ್ಕರಿಸುವುದೂ ಇಲ್ಲ

ಈ ಪಾಡ್‌ ಕಾಸ್ಟ್‌ನಲ್ಲಿ ಮಯೂರಿ ಮತ್ತೆ ಅಡ್ಡ ಗೋಡೆ ಮೇಲೆ ದೀಪವಿಟ್ಟೇ ಮಾತಾಡಿದ್ದಾರೆ. ಡಿವೋರ್ಸ್ ಅಂದಿದ್ದಕ್ಕೆ, "ನೀವು ಡಿವೋರ್ಸ್ ಅಂತ ಏನೋ ಹೇಳಿದ್ರಿ. ನಾನು ಅದನ್ನು ಒಪ್ಪುವುದಿಲ್ಲ.. ನಾನು ಅದನ್ನು ತಿರಸ್ಕರಿಸುವುದೂ ಇಲ್ಲ. ಅದನ್ನು ಹಾಗೆ ಬಿಟ್ಟು ಬಿಡೋಣ. ನೀವು ನಿಮ್ಮ ಕಲ್ಪನೆಯನ್ನು ಎಂಜಾಯ್ ಮಾಡಿಕೊಂಡು ಇರಿ" ಎಂದು ನಟಿ ಮಯೂರಿ ಹೇಳಿದ್ದಾರೆ.

More from Filmibeat

English summary
Kannada Actress Mayuri Kyatari open up about her divorce rumors in podcast with RJ Rajesh.
Read more about: mayuri actress divorce
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X