Pranitha:ಪ್ಯಾರಿಸ್ ಫ್ಯಾಷನ್ ವೀಕ್‌ನಲ್ಲಿ ಪ್ರಣಿತಾ ಸುಭಾಷ್; 2 ಮಕ್ಕಳ ತಾಯಿಯಾದ ಬಳಿಕ ಅಂದ ಹೆಚ್ಚಿಸಿಕೊಂಡ ನಟಿ

ಕನ್ನಡದ ನಟಿ ಪ್ರಣಿತಾ ಸುಭಾಷ್ ವಿವಾಹದ ಬಳಿಕ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ. ಆದರೆ ತನ್ನ ಅಭಿಮಾನಿಗಳ ಜೊತೆ ಸಂಪರ್ಕವನ್ನು ಮಾತ್ರ ಕಡಿದುಕೊಂಡಿಲ್ಲ. ಸೋಶಿಯಲ್ ಮೀಡಿಯಾದ ಸದಾ ಆಕ್ಟಿವ್ ಆಗಿರುವ ನಟಿ ಈಗ ಕೆಲವು ಗ್ಲಾಮರಸ್ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಆ ಫೋಟೊಗಳನ್ನು ಕಣ್ತುಂಬಿಕೊಂಡ ಅವರ ಅಭಿಮಾನಿಗಳು ಇವರು ಇಬ್ಬರು ಮಕ್ಕಳ ತಾಯಿನಾ ಅಂತ ಹೌಹಾರಿದ್ದಾರೆ.

ಪ್ರಣಿತಾ ಸುಭಾಷ್ ಜಗತ್ತಿನ ಪ್ರತಿಷ್ಠಿತ ಪ್ಯಾರಿಸ್ ಫ್ಯಾಷನ್ ವೀಕ್‌ನಲ್ಲಿ (Paris fashion week 2025) ಭಾಗಿಯಾಗಿದ್ದಾರೆ. ಅಲ್ಲಿ ತೆಗೆಸಿಕೊಂಡು ಫೋಟೊಗಳು ಇವು. ಈ ಫೋಟೊಗಳನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ಆ ಫೋಟೊಗಳನ್ನು ನೋಡಿಯೇ ಅವರ ಅಭಿಮಾನಿಗಳು ಕಳೆದು ಹೋಗಿದ್ದಾರೆ. ಅಷ್ಟು ಗ್ಲಾಮರಸ್ ಆಗಿ ಪ್ರಣಿತಾ ಸುಭಾಷ್ ಪೋಸ್ ಕೊಟ್ಟಿದ್ದಾರೆ.

Kannada actress Pranitha Subhash photoshoot in paris fashion week 2025 is trending

ಪ್ಯಾರಿಸ್ ಫ್ಯಾಷನ್ ವೀಕ್ 2025 ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ನಲ್ಲಿ ಅದ್ಧೂರಿಯಾಗಿ ಆರಂಭಗೊಂಡಿದೆ. ರೂಪದರ್ಶಿಗಳ, ಸಿನಿಮಾ ತಾರೆಯರ ನೆಚ್ಚಿನ ಫ್ಯಾಷನ್‌ ವೀಕ್‌ ಇದು. ಇಲ್ಲಿ ವಿಶ್ವದ ಮೂಲೆ ಮೂಲೆಯಿಂದ ಸ್ಟಾರ್‌ಗಳು ಆಕರ್ಷಕ ಉಡುಪುಗಳನ್ನು ಧರಿಸಿ ಬರುತ್ತಾರೆ. ಖ್ಯಾತ ವಸ್ತ್ರ ವಿನ್ಯಾಸಗಾರರ ವಸ್ತ್ರಗಳನ್ನು ಧರಿಸಿ ರ‍್ಯಾಂಪ್ ವಾಕ್ ಮಾಡುತ್ತಾರೆ. ಇದು ಸಿನಿಮಾ ತಾರೆಯರಿಗೂ ಕೂಡ ಪ್ರತಿಷ್ಠೆಯ ಇವೆಂಟ್ ಆಗಿರುತ್ತೆ. ಈ ಬಾರಿ ಪ್ರಣಿತಾ ಸುಭಾಷ್ ಆ ನಟಿಯರ ಸಾಲಿನಲ್ಲಿ ಸೇರಿಕೊಂಡಿದ್ದಾರೆ.

ಪ್ಯಾರಿಸ್ ಫ್ಯಾಷನ್ ವೀಕ್‌ನಲ್ಲಿ ಕನ್ನಡದ ನಟಿ ಪ್ರಣಿತಾ ಸುಭಾಷ್ ಗ್ಲಾಮರ್ ಟ್ರೀಟ್ ಕೊಟ್ಟಿದ್ದಾರೆ. ವಿಶೇಷ ಅಂದರೆ, ಈ ಪ್ರತಿಷ್ಠಿತ ಫ್ಯಾಷನ್ ವೀಕ್‌ನಲ್ಲಿ ಭಾಗವಹಿಸಿದ ಕನ್ನಡದ ಮೊದಲ ನಟಿ ಎನಿಸಿಕೊಂಡಿದ್ದಾರೆ. ಇನ್ನು ಪ್ಯಾರಿಸ್‌ನ ಸ್ಟ್ರೀಟ್‌ನಲ್ಲಿ ಕ್ಯಾಮರಾಗೆ ಪ್ರಣಿತಾ ಸಖತ್ ಪೋಸ್ ನೀಡಿದ್ದಾರೆ. ಅದರಲ್ಲೂ ತಾಯಿಯಾದ ನಂತರ ಮತ್ತಷ್ಟು ಅಂದ ಹೆಚ್ಚಿಸಿಕೊಂಡ ಪ್ರಣೀತಾ ತಮ್ಮ ಗ್ಲಾಮರ್‌ ಸೆನ್ಸ್‌ನಿಂದ ಅಭಿಮಾನಿಗಳಿಗೆ ಕಣ್ಣುಗಳನ್ನು ಕುಕ್ಕಿದ್ದಾರೆ.

ವಿವಾಹದ ಬಳಿಕ ಸಂಸಾರ, ಪ್ರೆಗ್ನೆನ್ಸಿ, ಮಕ್ಕಳು ಅಂತಿದ್ದ ಪ್ರಣಿತಾ ಸುಭಾಷ್ ಮತ್ತೆ ಆಕ್ಟಿವ್ ಆಗಿದ್ದಾರೆ. ಪ್ಯಾರಿಸ್ ಫ್ಯಾಷನ್ ವೀಕ್‌ನಲ್ಲಿ ಕಾಣಿಸಿಕೊಳ್ಳುವ ಮೂಲಕ ಮತ್ತೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಸೂಚನೆ ನೀಡಿದ್ದಾರೆ. ಪ್ರಣಿತಾ ಸುಭಾಷ್ ಈಗಾಗಲೇ ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯ ಸಿನಿಮಾಗಳಲ್ಲಿ ಪ್ರಣಿತಾ ಸುಭಾಷ್ ನಟಿಸಿದ್ದಾರೆ. ಇಬ್ಬರು ಮಕ್ಕಳ ತಾಯಿಯಾಗಿರುನ ನಟಿ ಮತ್ತೆ ಚಿತ್ರರಂಗಕ್ಕೆ ಎಂಟ್ರಿ ಕೊಡುವುದಕ್ಕೆ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.

ಪ್ರಣಿತಾ ಇಬ್ಬರು ಮಕ್ಕಳ ತಾಯಿಯಾಗಿದ್ದರೂ, ಸೌಂದರ್ಯವನ್ನು ಹಾಗೇ ಉಳಿಸಿಕೊಂಡಿದ್ದಾರೆ. ಫಿಟ್ನೆಸ್ ಕಡೆಗೆ ಹೆಜ್ಜೆ ಗಮನ ಹರಿಸಿದ್ದು, ಮತ್ತೆ ಹೀರೋಯಿನ್ ಆಗಿ ತೆರೆಮೇಲೆ ಕಾಣಿಸಿಕೊಳ್ಳುವ ಎಲ್ಲಾ ಲಕ್ಷಣಗಳು ಇವೆ. ಅದಕ್ಕೆ ಪ್ಯಾರಿಸ್ ಫ್ಯಾಷನ್ ವೀಕ್‌ನಲ್ಲಿ ಕೊಟ್ಟಿರುವ ಗ್ಲಾಮರ್ ಲುಕ್ ಸಾಕ್ಷಿ. ಇನ್ನು ಪ್ರಣಿತಾ ಮತ್ತೆ ಸಿನಿಮಾರಂಗಕ್ಕೆ ಎಂಟ್ರಿ ಕೊಡೋದು ಬಹುತೇಕ ಖಚಿತ. ಆದರೆ, ಯಾವ ಭಾಷೆಯಿಂದ ಸಿನಿಮಾವನ್ನು ಆರಂಭ ಮಾಡುತ್ತಾರೆ ಅನ್ನೋದು ಮಾತ್ರ ಇನ್ನೂ ರಿವೀಲ್ ಆಗಿಲ್ಲ.

Take a Poll

2010ರಲ್ಲಿ ದರ್ಶನ್ ನಟಿಸಿದ 'ಪೊರ್ಕಿ' ಸಿನಿಮಾದ ಮೂಲಕ ಪ್ರಣಿತಾ ಸುಭಾಷ್ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಇಲ್ಲಿಂದ 'ಜರಾಸಂಧ', 'ಭೀಮ ತೀರದಲ್ಲಿ' ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಮಧ್ಯೆ 'ಭಾವ'. ಪವನ್ ಕಲ್ಯಾಣ್ ಸಿನಿಮಾ 'ಅತ್ತಾರಿಂಟಿಕಿ ದಾರೇದಿ', ಜೂ.ಎನ್‌ಟಿಆರ್ 'ರಭಸ', ಮಹೇಶ್ ಬಾಬು ಅಭಿನಯದ 'ಬ್ರಹ್ಮೋತ್ಸವಂ' ಅಂತಹ ತೆಲುಗು ಸೂಪರ್‌ಸ್ಟಾರ್‌ಗಳ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಾಗೇ ತಮಿಳಿನಲ್ಲೂ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನು ಬಾಲಿವುಡ್‌ನಲ್ಲಿ 'ಹಂಗಾಮ 2' ಹಾಗೂ 'ಬುರ್ಜ್; ದಿ ಪ್ರೈಡ್ ಆಫ್ ಇಂಡಿಯಾ' ಸಿನಿಮಾದಲ್ಲಿ ನಟಿಸಿದ್ದಾರೆ.

FAQs
ಕನ್ನಡದ ನಟಿ ಪ್ರಣಿತಾ ಸುಭಾಷ್ ಮದುವೆಯಾಗಿದ್ದು ಯಾವಾಗ?

ಪ್ರಣಿತಾ ಸುಭಾಷ್ 2021, ಮೇ 30ರಂದು ಲಾಕ್‌ಡೌನ್ ಸಮಯದಲ್ಲಿ ಉದ್ಯಮಿ ನಿತಿನ್ ರಾಜು ಎಂಬುವವರನ್ನು ವಿವಾಹವಾಗಿದ್ದಾರೆ. 2022, ಜೂನ್‌ನಲ್ಲಿ ಮಗಳು ಹಾಗೂ 2024ರಲ್ಲಿ ಮಗನಿಗೆ ಜನ್ಮ ನೀಡಿದ್ದಾರೆ.

Filmibeat Entertainment

More from Filmibeat

English summary
Kannada actress Pranitha Subhash photoshoot in Paris fashion week 2025 is trending
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X