4 ವರ್ಷಗಳ ಬಳಿಕ ಡಬ್ಬಿಂಗ್ ಸ್ಟುಡಿಯೋದಲ್ಲಿ ನಟಿ ಪ್ರೇಮಾ: ಪಾತ್ರಕ್ಕಾಗಿ ಏನೆಲ್ಲಾ ಮಾಡಿದ್ರು?

ನಟಿ ಪ್ರೇಮಾ ಅಭಿನಯಿಸಿದ ಕನ್ನಡ ಸಿನಿಮಾಗಳು ಇಂದಿಗೂ ಎವರ್‌ಗ್ರೀನ್. ಕೆಲವು ಸಿನಿಮಾಗಳನ್ನೂ ಇಂದಿಗೂ ಮರೆಯಲು ಸಾಧ್ಯವಿಲ್ಲ. ವಿವಾಹದ ಬಳಿಕ ಸಿನಿಮಾಗಳಿಂದ ದೂರು ಉಳಿದಿದ್ದ ನಟಿ ಪ್ರೇಮಾ ನಟನೆಗೆ ಬ್ರೇಕ್ ನೀಡಿದ್ದರು. 'ಓಂ' ಅಂತ ಅದ್ಭುತ ಸಿನಿಮಾ ನೀಡಿದ ನಟಿ ಮತ್ತೆಂದೂ ಹಿಂತಿರುಗಿ ನೋಡಿರಲಲ್ಲ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸಿದ್ದರು. ಕೇವಲ ಕನ್ನಡ ಅಷ್ಟೇ ಅಲ್ಲ ತೆಲುಗು ಸಿನಿಮಾಗಳಲ್ಲಿಯೂ ಕಾಣಿಸಿಕೊಂಡಿದ್ದರು.

'ನಮ್ಮೂರ ಮಂದಾರ ಹೂವೇ', 'ತುತ್ತಾಮುತ್ತಾ', 'ಚಂದ್ರಮುಖಿ ಪ್ರಾಣಸಖಿ' ಹೀಗೆ ಪ್ರೇಮಾ ಅವರ ಹಿಟ್ ಸಿನಿಮಾ ಪಟ್ಟಿ ಬೆಳೆಯುತ್ತಾ ಹೋಗುತ್ತೆ. 13 ವರ್ಷಗಳ ಹಿಂದೆ ನಟಿ ಪ್ರೇಮಾ ಸಿನಿಮಾಗಳಿಂದ ದೂರ ಉಳಿದಿದ್ದರು. ಆ ಬಳಿಕ ನಾಲ್ಕು ವರ್ಷಗಳ ಹಿಂದೆ ಸ್ಯಾಂಡಲ್‌ವುಡ್‌ಗೆ ಮರಳಿದ್ದರೂ, ಮತ್ತೆ ಗಾಯಬ್ ಆಗಿದ್ದರು ಈಗ ಮತ್ತೆ 'ವೆಡ್ಡಿಂಗ್ ಗಿಫ್ಟ್' ಸಿನಿಮಾದ ಮೂಲಕ ಚಿತ್ರರಂಗಕ್ಕೆ ಮರಳಿದ್ದು, ಮತ್ತೆ ಡಬ್ಬಿಂಗ್ ಸ್ಟುಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ.

ಡಬ್ಬಿಂಗ್ ಸ್ಟುಡಿಯೋದಲ್ಲಿ ನಟಿ ಪ್ರೇಮಾ

'ವೆಡ್ಡಿಂಗ್ ಗಿಫ್ಟ್' ವಿಕ್ರಂಪ್ರಭು ನಿರ್ಮಿಸಿ, ನಿರ್ದೇಶಿಸುತ್ತಿರುವ ಸಿನಿಮಾ. ಈ ಸಿನಿಮಾದಲ್ಲಿ ನಟಿ ಪ್ರೇಮಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳುತ್ತಿದ್ದಾರೆ. ಲಾಂಗ್ ಗ್ಯಾಪ್ ಕೊಟ್ಟಿದ್ದ ನಟಿ ಬಹಳ ದಿನಗಳ ಬಳಿಕ ತಮ್ಮ ಪಾತ್ರಕ್ಕೆ ಡಬ್ ಮಾಡಿದ್ದಾರೆ. ಡಬ್ಬಿಂಗ್ ಸ್ಟುಡಿಯೋದಲ್ಲಿ ಪ್ರೇಮಾ ಅವರನ್ನು ನೋಡಿ ಅವರ ಅಭಿಮಾನಿಗಳು ಮತ್ತೆ ಥ್ರಿಲ್ ಆಗಿದ್ದಾರೆ. ಹೌದು ಇತ್ತೀಚೆಗೆ ಅವರ ಅಭಿನಯದ ಭಾಗಕ್ಕೆ ಸಾಧುಕೋಕಿಲ ಅವರ ಸ್ಟೂಡಿಯೋದಲ್ಲಿ ಡಬ್ಬಿಂಗ್ ಮಾಡಿದ್ದಾರೆ.

Kannada Actress Prema completed dubbing for wedding gift

"ನಾನು ಇದೇ ಮೊದಲ ಬಾರಿಗೆ ಲಾಯರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ನಿರ್ದೇಶಕ ವಿಕ್ರಂಪ್ರಭು ಅವರ ಕಥೆ ಅದ್ಭುತವಾಗಿದೆ. ನಾನು ಕೋರ್ಟಿನಲ್ಲಿ ಕೆಲವು ಕಲಾಪಗಳನ್ನು ನೋಡಿದ್ದೇನೆ. ಅಲ್ಲಿ ವಕೀಲರು ಹತ್ತಿರದಿಂದ ಮಾತನಾಡುವ ನೋಡಿದ ಬಳಿಕ ನನಗೆ ಈ ಪಾತ್ರದಲ್ಲಿ ನಟಿಸಲು ಅನುಕೂಲವಾಯಿತು." ಎಂದು ಪ್ರೇಮ ತಮ್ಮ ಪಾತ್ರದ ಬಗ್ಗೆ ತಿಳಿಸಿದ್ದಾರೆ.

ಪ್ರೇಮಾ ಕೆರಿಯರ್‌ನಲ್ಲೇ ಇಂತಹ ಪಾತ್ರ ಮಾಡಿಲ್ಲ

ಮಂಗಳೂರಿನವರಾದರೂ ಪೂಣೆಯಲ್ಲಿ ವಿಕ್ರಂ ಪ್ರಭು ನೆಲೆಸಿದ್ದಾರೆ. ಹದಿನೆಂಟು ವರ್ಷಗಳ ಹಿಂದೆ ರಾಜೇಂದ್ರ ಸಿಂಗ್ ಬಾಬು ನಿರ್ದೇಶಿಸಿದ 'ಲವ್' ಸಿನಿಮಾದಲ್ಲಿ ಕೆಲಸ ಮಾಡಿದ್ದರು. ಸಿನಿಮಾಗೆ ಗುಡೈ ಬೈ ಹೇಳಿದ್ದರು. ಈಗ 'ವೆಡ್ಡಿಂಗ್ ಗಿಫ್ಟ್' ಮೂಲಕ ಮತ್ತೆ ಚಿತ್ರರಂಗಕ್ಕೆ ವಾಪಾಸ್ ಆಗಿದ್ದು, ಮತ್ತೆ ಪ್ರೇಮಾ ಅವರನ್ನು ಚಿತ್ರರಂಗಕ್ಕೆ ಕರೆದುಕೊಂಡು ಬಂದಿದ್ದಾರೆ. "ಈಗಿನ ಕಾಲದ ಕೆಲವು ಕಾನೂನುಗಳನ್ನು ಕೆಲವರು ಹೇಗೆ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ? ಎಂಬ ವಿಷಯಯಿಟ್ಟುಕೊಂಡು ಈ ಚಿತ್ರ ನಿರ್ದೇಶನ ಮಾಡಿದ್ದೇನೆ." ಎನ್ನುತ್ತಾರೆ ನಿರ್ದೇಶಕ ವಿಕ್ರಂಪ್ರಭು.

ಪ್ರೇಮಾ ಅವರೊಂದಿಗೆ ನಿಶಾನ್ ನಾಣಯ್ಯ, ಸೋನುಗೌಡ ನಾಯಕ, ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಬೆಂಗಳೂರು, ತುಮಕೂರು, ಉಡುಪಿ, ಮಂಗಳೂರು ಸೇರಿದಂತೆ ಹಲವೆಡೆ ಸುಮಾರು 37 ದಿನಗಳ ಕಾಲ ಚಿತ್ರೀಕರಣ ನಡೆದಿದೆ. ಅಚ್ಯುತ್ ಕುಮಾರ್, ಪವಿತ್ರ ಲೋಕೇಶ್ ಸಿನಿಮಾದಲ್ಲಿ ನಟಿಸಿದ್ದಾರೆ. ಸದ್ಯ ಶೂಟಿಂಗ್ ಮುಗಿಸಿರುವ ಖುಷಿಯಲ್ಲಿ ಚಿತ್ರತಂಡವಿದ್ದು, ಏಪ್ರಿಲ್‌ನಲ್ಲಿ ಸಿನಿಮಾ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ.

More from Filmibeat

English summary
Kannada Actress Prema completed dubbing for wedding gift. Actress Prema playing advoate role. After4 long years Prema making come back with Wedding Gift.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X