ದೀಪಿಕಾ, ಪ್ರಿಯಾಂಕಾ, ಐಶ್ವರ್ಯ ಭಾಗವಹಿಸಿದ್ದ ‘ಏಷ್ಯಾ ಸ್ಟಾರ್ ಗಾಲಾ’ದಲ್ಲಿ ಕನ್ನಡದ ನಟಿ ಸಂಹಿತಾ ವಿನ್ಯಾ
ಪ್ರತಿಷ್ಟಿತ ಮೆಟ್ ಗಾಲಾ ಇವೆಂಟ್ ಫ್ಯಾಷನ್ ಪ್ರೇಮಿಗಳಿಗೆ ಚಿರಪರಿಚಿತ. ಈ ಫ್ಯಾಷನ್ ಇವೆಂಟ್ ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಪ್ರತಿ ವರ್ಷ ನಡೆಯುವ ರಂಗು ರಂಗಿನ ಈ ಫ್ಯಾಷನ್ ಇವೆಂಟ್‌ನಲ್ಲಿ ರೂಪದರ್ಶಿಯರು, ಸಿನಿಮಾ ತಾರೆಯರಿಗೆ ಆಹ್ವಾನ ನೀಡಲಾಗುತ್ತದೆ. ವಿಶ್ವ ಮಟ್ಟದಲ್ಲಿ ಹೆಸರು ಮಾಡಿರುವ ಡಿಸೈನರ್‌ಗಳು ಈ ವಿಶೇಷ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ.
ಮೆಟ್ ಗಾಲಾ ನಡೆಸಿದ ಏಷ್ಯಾ ಸ್ಟಾರ್ ಗಾಲಾ ಫ್ಯಾಶನ್ ಇವೆಂಟ್‌ನಲ್ಲಿ ಕರ್ನಾಟಕದ ಫೇಮಸ್ ಡಿಸೈನರ್ ನವೀನ್ ಕುಮಾರ್ ವಿನ್ಯಾಸಗೊಳಿಸಿದ ವಸ್ತ್ರವನ್ನು ಧರಿಸಿ ಕನ್ನಡದ ನಟಿ ಸಂಹಿತಾ ವಿನ್ಯಾ ಭಾಗವಹಿಸಿದ್ದರು. ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕಿದ ಸಂಹಿತಾ ವಿನ್ಯಾಗೆ ಇದು ವಿಶೇಷ ಇವೆಂಟ್. ಯಾಕಂದ್ರೆ, ಬಾಲಿವುಡ್‌ನ ಸ್ಟಾರ್ ನಟಿಯರು ಈ ಇವೆಂಟ್‌ನಲ್ಲಿ ಭಾಗಿಯಾಗಿದ್ದಾರೆ.
ಕೊಲಂಬೋದಲ್ಲಿ ಮೆಟ್ ಗಾಲಾ ಫ್ಯಾಷನ್ ಇವೆಂಟ್
ಮೆಟ್ ಗಾಲಾ ನಡೆಸಿಕೊಟ್ಟ 'ಏಷ್ಯಾ ಸ್ಟಾರ್ ಗಾಲಾ' ಫ್ಯಾಷನ್ ಇವೆಂಟ್ ಕೊಲಂಬೋದಲ್ಲಿ ನಡೆದಿತ್ತು. ವಿಶ್ವದಲ್ಲಿ ಮೆಟ್ ಗಾಲಾ ಫ್ಯಾಷನ್ ಶೋ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ. ಮೆಟ್ ಗಾಲಾ ಇದೇ ಮೊದಲ ಬಾರಿಗೆ ಏಷ್ಯಾದಲ್ಲಿ ಫ್ಯಾಷನ್ ಶೋ ನಡೆಸಿದ್ದು, ಶ್ರೀಲಂಕಾದ ಕೊಲಂಬೋದಲ್ಲಿ ಹಮ್ಮಿಕೊಳ್ಳಲಾಗಿತ್ತು. ಅದರಲ್ಲೂ ಕೊಲಂಬೋದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇನಲ್ಲಿ ಈ ಇವೆಂಟ್ ನಡೆದಿದೆ. ಬೇರೆ ಬೇರೆ ದೇಶದ ಪ್ರಖ್ಯಾತ ಫ್ಯಾಷನ್ ಡಿಸೈನರ್‌ಗಳು ಈ ರೆಡ್ ಕಾರ್ಪೆಟ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

'ಏಷ್ಯಾ ಸ್ಟಾರ್ ಗಾಲಾ' ಫ್ಯಾಷನ್ ಇವೆಂಟ್‌ನ ರೆಡ್ ಕಾರ್ಪೆಟ್ ಕಾರ್ಯಕ್ರಮದಲ್ಲಿ ಭಾರತದಿಂದ ಫಾರೆವರ್ ನವೀನ್ ಕುಮಾರ್ ಪ್ರತಿನಿಧಿಸಿದ್ದರು. ವಿಭಿನ್ನಹಾಗೂ ವಿಶಿಷ್ಟ ವಿನ್ಯಾಸಗಳಿಂದ ಮನೆ ಮಾತಾಗಿರುವ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಫಾರೆವರ್ ನವೀನ್ ಕುಮಾರ್ ಫ್ಯಾಷನ್ ಲೋಕದಲ್ಲಿ ಹೆಸರುವಾಸಿಯಾಗಿದ್ದಾರೆ. ಇವರ ಜೊತೆ ನವೀನ್ ಕುಮಾರ್ ವಿನ್ಯಾಸಗಳ ಬ್ರ್ಯಾಂಡ್ ಅಂಬಾಸಿಡರ್ ಆಗಿರುವ ಸಂಹಿತಾ ವಿನ್ಯಾ ಕೂಡ ಪಾಲ್ಕೊಂಡಿದ್ದಾರೆ.

ಮೆಟ್ ಗಾಲಾ ಫ್ಯಾಷನ್ ಶೋನಲ್ಲಿ ಬಾಲಿವುಡ್ ಸುಂದರಿಯರು
ಮೆಟ್‌ಗಾಲಾ ಫ್ಯಾಷನ್ ಶೋಗೂ ಬಾಲಿವುಡ್ ನಟಿಯರಿಗೂ ಬಿಡಲಾರದ ನಂಟಿದೆ. ಭಾರತದಿಂದ ಮೆಟ್ ಗಾಲಾ ಫ್ಯಾಷನ್ ಶೋನಲ್ಲಿ ಬಾಲಿವುಡ್ ನಟಿಯರು ನಾಜೂಕು ನಡಿಗೆ ಹಾಕಿದ್ದಾರೆ. ಐಶ್ವರ್ಯ ರೈ, ಪ್ರಿಯಾಂಕಾ ಚೋಪ್ರಾ, ದೀಪಿಕಾ ಪಡುಕೋಣೆ ಈ ಪ್ರತಿಷ್ಟಿತ ಇವೆಂಟ್‌ನಲ್ಲಿ ಭಾಗಿಯಾಗಿದ್ದಾರೆ. ಈಗ ಈ ಬಾಲಿವುಡ್ ಸುಂದರಿಯರ ಪಟ್ಟಿಗೆ ಕನ್ನಡದ ನಟಿ ಸಂಹಿತ ವಿನ್ಯಾ ಕೂಡ ಸೇರಿದ್ದಾರೆ.
2016ರಿಂದ ಫ್ಯಾಷನ್ ಲೋಕದಲ್ಲಿ ಗುರುತಿಸಿಕೊಂಡಿಕೊಂಡಿರುವ ಫಾರೆವರ್ ನವೀನ್ ಕುಮಾರ್ 5.7 ಅಡಿ ಎತ್ತರದ ಫೆದರ್ ವಿಂಗ್ಸ್ ಡಿಸೈನ್ ಅನ್ನು ವಿನ್ಯಾಸಗೊಳಿಸಿದ್ದರು. 'ಏಷ್ಯಾ ಸ್ಟಾರ್ ಗಾಲಾ'ದ ರೆಡ್ ಕಾರ್ಪೆಟ್ ಇವೆಂಟ್‌ನಲ್ಲಿ ಈ ವಿಂಗ್ಸ್ ಡಿಸೈನ್ ಅನ್ನು ಶೋಕೇಸ್ ಮಾಡಲಾಗಿದೆ. ನವೀನ್ ಡಿಸೈನ ಮಾಡಿದ ವಿಶೇಷ ವಸ್ತ್ರವನ್ನು ಸಂಹಿತಾ ವಿನ್ಯಾ ಧರಿಸಿ ಫ್ಯಾಷನ್ ಲೋಕದ ದಿಗ್ಗಜರ ಮಗನ ಸೆಳೆದಿದ್ದಾರೆ.


Click it and Unblock the Notifications











