ಕನ್ನಡ ಚಿತ್ರರಂಗಕ್ಕೆ ನಾಯಕಿಯಾಗಿ ಮರಳಿದ ಸಂಯುಕ್ತ ಹೆಗ್ಡೆ: ಅಗ್ನಿ ಶ್ರೀಧರ್ 'ಕಥೆ'
ಸ್ಯಾಂಡಲ್‌ವುಡ್‌ನ ಕಿರಿಕ್ ಹುಡುಗಿ ಸಂಯುಕ್ತ ಹೆಗ್ಡೆ ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್ ಆಗಿದ್ದಾರೆ. ದಿನ ಬೆಳಗಾದರೆ, ಒಂದಲ್ಲಾ ಒಂದು ವಿಡಿಯೋ, ಫೋಟೊಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ ಸಿನಿಮಾಗಳಿಗಿಂತ ಹೆಚ್ಚಾಗಿ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಕಾಣಸಿಗುವ ಸಂಯುಕ್ತ ಚಿತ್ರರಂಗದಿಂದ ದೂರವೇ ಉಳಿದಿದ್ದರು. ಈಗ ಅವರ ಹೊಸ ಸಿನಿಮಾ ಸೆಟ್ಟೇರಿದೆ.
ಒಂದಿಷ್ಟು ವಿವಾದಗಳಿಂದ ಸದ್ದು ಮಾಡಿದ್ದ ಸಂಯುಕ್ತ ಹೆಗ್ಡೆ 'ಕಿರಿಕ್ ಪಾರ್ಟಿ' ಬಳಿಕ ಹೆಚ್ಚು ಸಿನಿಮಾಗಳಲ್ಲಿ ನಟಿಸಬಹುದಿತ್ತು. ಆದರೆ, ಸಿನಿಮಾದಲ್ಲಿ ಹೆಚ್ಚು ನಟಿಸುತ್ತಿರಲಿಲ್ಲ. ಈಗ ಅಗ್ನಿ ಶ್ರೀಧರ್ ಬರೆದಿರುವ ಕಥೆಗೆ ಸಂಯುಕ್ತ ಹೆಗ್ಡೆ ನಾಯಕಿ ಕಮ್ ನಾಯಕ ಆಗಿದ್ದರೆ. 'ಕಿರಿಕ್ ಪಾರ್ಟಿ' ಸಂಯುಕ್ತ ಹೆಗ್ಡೆ ನಟಿಸಲಿರುವ ಹೊಸ ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮುಂದೆ ಓದಿ.
ಅಗ್ನಿ ಶ್ರೀಧರ್ ಕಥೆಗೆ ಸಂಯುಕ್ತ ಹೆಗ್ಡೆ ನಾಯಕಿ
ಅಗ್ನಿ ಶ್ರೀಧರ್ ಬರೆದ ಕಥೆಗಳು ಕನ್ನಡ ಚಿತ್ರರಂಗಕ್ಕೆ ಹೊಸ ಇಮೇಜ್ ಕೊಟ್ಟಿವೆ. ಅವರದ್ದೇ ಕಥೆ, ಚಿತ್ರಕಥೆ ಇದ್ದರೆ, ಆ ಸಿನಿಮಾವನ್ನು ನೋಡುವವರ ವರ್ಗವೇ ಬೇರೆಯೇ ಇದೆ. ಈಗ ಅಗ್ನಿ ಶ್ರೀಧರ್ ಕನ್ನಡ ಸಿನಿಮಾವೊಂದಕ್ಕೆ ಕಥೆ ಹೆಣೆದಿದ್ದಾರೆ. ಅದುವೇ 'ಕ್ರೀಂ'. ಸದ್ಯದಲ್ಲೇ ಈ ಸಿನಿಮಾ ಆರಂಭವಾಗಲಿದ್ದು, ಅಭಿಷೇಕ್ ಬಸಂತ್ ಈ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ. 'ಕಿರಿಕ್ ಪಾರ್ಟಿ' ಖ್ಯಾತಿಯ ಸಂಯುಕ್ತ ಹೆಗ್ಡೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

"ನಾನು ಕಥೆ ಕೇಳಲು ಹೋದಾಗ ತುಂಬಾ ಕುತೂಹಲವಿತ್ತು. ಅಗ್ನಿ ಶ್ರೀಧರ್ ಸರ್ ನನ್ನ ಪಾತ್ರದ ಬಗ್ಗೆ ಹೇಳಿದರೆ ಅದಕ್ಕೊಂದು ಕಳೆ. ಈ ಚಿತ್ರದಲ್ಲಿ ನಾನು ಫಿಮೇಲ್ ಹೀರೋ ಆಗಿ ಕಾಣಿಸಿಕೊಳ್ಳಲಿದೆ. ಈವರೆಗೂ ಮಾಡಿರದ ಪಾತ್ರದಲ್ಲಿ ನಟಿಸುತ್ತಿದ್ದೇನೆ." ಎಂದು ಸಂಯುಕ್ತ ಹೆಗ್ಡೆ ಹೇಳಿದ್ದಾರೆ.

'ಕ್ರೀಂ' ಇದು ಪಕ್ಕಾ ಮಹಿಳಾ ಪ್ರಧಾನ ಚಿತ್ರವಾಗಿದ್ದು, ಈ ಸಿನಿಮಾಗೆ ಸಂಯುಕ್ತ ಹೆಗ್ಡೆಯನ್ನು ಆಯ್ಕೆ ಮಾಡಿದ್ದು ಸ್ವತ: ಅಗ್ನಿ ಶ್ರೀಧರ್. "ನಟಿಯರ ಆಯ್ಕೆ ಮಾಡಬೇಕು ಅಂದಾಗ, ಸಂಯುಕ್ತ ಹೆಗಡೆ ಸೂಕ್ತ ಅಂತ ಅನಿಸಿತ್ತು. ಸಂಯುಕ್ತ ಹೆಗಡೆ ನನ್ನ ಭೇಟಿ ಮಾಡಲು ಬಂದಿದ್ದರು. ಆಗ ನಾನು ಕಿಕ್ ಬಾಕ್ಸಿಂಗ್ ಮಾಡಲು ಹೇಳಿದ್ದೆ. ಆಕೆ ತಕ್ಷಣ ಕಿಕ್ ಬಾಕ್ಸಿಂಗ್ ಮಾಡಲು ಸಜ್ಜಾಗಿದ್ದರು. ಅವರು ಕಿಕ್ ಬಾಕ್ಸಿಂಗ್ ಮಾಡಲು ಹಿಂದೇಟು ಹಾಕುತ್ತಾರೆ ಎಂದು ಕೊಂಡಿದೆ. ಅದಕ್ಕೆ ಅವರು ತಕ್ಷಣ ರೆಡಿಯಾದರು. ಆಗ ಈ ಪಾತ್ರಕ್ಕೆ ನನ್ನ ಆಯ್ಕೆ ಸರಿ ಎನಿಸಿತು." ಎಂದು ಅಗ್ನಿ ಶ್ರೀಧರ್ ಹೇಳಿದ್ದಾರೆ.
ಕ್ರೀಂ ಸಿನಿಮಾ ಏಪ್ರಿಲ್ ತಿಂಗಳಿನಿಂದ ಚಿತ್ರೀಕರಣ ಆರಂಭವಾಗಲಿದ್ದು, ಆಗಸ್ಟ್ -ಸೆಪ್ಟೆಂಬರ್ ತಿಂಗಳಲ್ಲಿ ಸಿನಿಮಾ ತೆರೆಗೆ ಬರಲು ಸಿದ್ಧತೆಗಳನ್ನು ಮಾಡಿಕೊಂಡಿದೆ. ಅಭಿಷೇಕ್ ಬಸಂತ್ ನಿರ್ದೇಶನ ಮಾಡುತ್ತಿದ್ದು, ದೇವೇಂದ್ರ ನಿರ್ಮಾಣ ಮಾಡುತ್ತಿದ್ದಾರೆ. ಅರುಣ್ ಸಾಗರ್ ಕೂಡ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ.


Click it and Unblock the Notifications











