RCB ಹೊಸ ನಾಯಕ ಫಾಫ್ ಡು ಪ್ಲೆಸಿಸ್ ಜೊತೆ ಕಿರಿಕ್ ಪಾರ್ಟಿ ಸಂಯುಕ್ತಾ ಹೆಗ್ಡೆ ಸೆಲ್ಫಿ: ಇನ್ನೂ ಬರುತ್ತೆ ಫೋಟೊಗಳು

ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ಸಂಯುಕ್ತಾ ಹೆಗ್ಡೆ. ಇತ್ತೀಚೆಗೆ ಈ ನಟಿ ಸಿನಿಮಾಗಳಲ್ಲಿ ಹೆಚ್ಚು ಕಾಣಿಸಿಕೊಳ್ಳದೆ ಇದ್ದರೂ, ಫಿಟ್‌ನೆಸ್ ಬಗ್ಗೆ ಹೆಚ್ಚು ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಏನಾದರೂ ಒಂದು ವಿಡಿಯೋ ಶೇರ್ ಮಾಡಿ, ನೆಟ್ಟಿಗರೊಂದಿಗೆ ಸಂಪರ್ಕದಲ್ಲಿರುತ್ತಾರೆ. ಈಗ ಸಂಯುಕ್ತಾ ಹೆಗ್ಡೆ ಆರ್‌ಸಿಬಿ ತಂಡದ ಹೊಸ ನಾಯಕ ಫಾಫ್ ಡು ಪ್ಲೆಸಿಸ್ ಜೊತೆ ಸೆಲ್ಫಿ ತೆಗೆದುಕೊಂಡಿದ್ದಾರೆ.

ಕಳೆದ ಕೆಲವು ದಿನಗಳಿಂದ ಆರ್‌ಸಿಬಿ ತಂಡದ ನಾಯಕ ಯಾರು ಎಂಬ ಪ್ರಶ್ನೆ ಕಾಡುತ್ತಲೇ ಇತ್ತು. ಕೊನೆಗೂ ಆ ಪ್ರಶ್ನೆಗೀಗ ಉತ್ತರ ಸಿಕ್ಕಿದೆ. ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಫಾಫ್ ಡು ಪ್ಲೆಸಿಸ್‌ರನ್ನು ಆರ್‌ಸಿಬಿ ತಂಡದ ಹೊಸ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ. IPL ಪಂದ್ಯ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಕ್ರಿಕೆಟ್ ಪ್ರಿಯರು ಟಿಟ್ವೆಂಟಿ ಪಂದ್ಯವನ್ನು ವೀಕ್ಷಿಸುವ ಉತ್ಸಾಹದಲ್ಲಿದ್ದಾರೆ. ಈ ಮಧ್ಯೆ ಆರ್‌ಸಿಬಿ ತನ್ನ ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಎಂದು ಘೋಷಿಸಿತ್ತು. ಈಗ ಅದೇ ನಾಯಕನೊಂದಿಗೆ ಕನ್ನಡದ ನಟಿ ಸಂಯುಕ್ತಾ ಹೆಗ್ಡೆ ಸೆಲ್ಪಿ ತೆಗೆದುಕೊಂಡ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

 RCB ಕ್ಯಾಪ್ಟನ್ ಜೊತೆ ಸಂಯುಕ್ತಾ ಸೆಲ್ಫಿ

RCB ಕ್ಯಾಪ್ಟನ್ ಜೊತೆ ಸಂಯುಕ್ತಾ ಸೆಲ್ಫಿ

ನಿನ್ನೆ(ಮಾರ್ಚ್13) ರಂದು ಸಂಯುಕ್ತಾ ಹೆಗ್ಡೆ ತನ್ನ ಇನ್‌ಸ್ಟಾಗ್ರಾಂನಲ್ಲಿ ಫೋಟೊ ಒಂದನ್ನು ಶೇರ್ ಮಾಡಿಕೊಂಡಿದ್ದರು. ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಜೊತೆ ಸಂಯುಕ್ತಾ ಸೆಲ್ಪಿ ತೆಗೆದುಕೊಂಡಿದ್ದರು. ಈ ಫೋಟೊವನ್ನು ಕಿರಿಕ್ ಪಾರ್ಟಿ ನಟಿ ಸಂಯುಕ್ತಾ ಹೆಗ್ಡೆ ಕಾಣಿಸಿಕೊಂಡಿದ್ದರು. ಅದೇ ಫೋಟೊ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸಂಯುಕ್ತಾ ಹೆಗ್ಡೆಗೂ ಆರ್‌ಸಿಬಿ ತಂಡಕ್ಕೂ ಏನು ಸಂಬಂಧ ಅಂತ ಆರ್‌ಸಿಬಿ ಅಭಿಮಾನಿಗಳು ಹಾಗೂ ಸಂಯುಕ್ತಾ ಫ್ಯಾನ್ಸ್ ತಲೆಕೆಡಿಸಿಕೊಂಡಿದ್ದಾರೆ.

 ಫೋಟೊ ಬಗ್ಗೆ ಸಂಯುಕ್ತಾ ಹೇಳಿದ್ದೇನು?

ಫೋಟೊ ಬಗ್ಗೆ ಸಂಯುಕ್ತಾ ಹೇಳಿದ್ದೇನು?

ಸಂಯುಕ್ತಾ ಹೆಗ್ಡೆ ಸೆಲ್ಫಿ ಫೋಟೊವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಲ್ಲದೆ, ಹರ್ಷ ವ್ಯಕ್ತಪಡಿಸಿದ್ದಾರೆ. " ಆರ್‌ಸಿಬಿ ಹೊಸ ಕ್ಯಾಪ್ಟನ್‌ ಫಾಫ್ ಡು ಪ್ಲೆಸಿಸ್‌ಗೆ ಹಲೋ ಎನ್ನಿ. ಹೊಸ ಸೀಸನ್‌ಗೆ, ಹೊಸ ಕ್ಯಾಪ್ಟನ್‌ಗೆ, ಹೊಸ ಜೆರ್ಸಿಗೆ ಹೊಸ ಉತ್ಸಾಹ ಸಿಕ್ಕಿದೆ. ಆದರೆ, ಆರ್‌ಸಿಬಿ ಆರ್ಮಿಗೆ ಅದೇ ಬೆಂಬಲ ಇರುತ್ತೆ. ಈ ಕ್ಷಣಗಳ ಅದ್ಭುತ ಫೋಟೊಗಳನ್ನು ಶೇರ್ ಮಾಡುತ್ತೇನೆ." ಎಂದು ಸಂಯುಕ್ತಾ ಹೆಗ್ಡೆ ಬರೆದುಕೊಂಡಿದ್ದಾರೆ. ಹೀಗೆ ಹೇಳುವ ಮೂಲಕ ಸಂಯುಕ್ತಾ ಹೆಗ್ಡೆ ಮತ್ತಷ್ಟು ಅಚ್ಚರಿ ಮೂಡಿಸಿದ್ದಾರೆ.

 ಸಂಯುಕ್ತಾ ಹೆಗ್ಡೆ ಫುಲ್ ಬ್ಯುಸಿ

ಸಂಯುಕ್ತಾ ಹೆಗ್ಡೆ ಫುಲ್ ಬ್ಯುಸಿ

ಸಂಯುಕ್ತಾ ಹೆಗ್ಡೆ ರೆಗ್ಯೂಲರ್ ಸಿನಿಮಾಗಳ ಕಡೆ ಒಲವು ತೋರುತ್ತಿಲ್ಲ. ಆದರೆ, ಸಂಯುಕ್ತ ಇಷ್ಟಪಡುವಂತಹ ಕಥೆಗಳನ್ನು ಫಿಲ್ಮ್ ಮೇಕರ್ಸ್‌ ಕೂಡ ಕೊಡುತ್ತಿಲ್ಲ ಎನ್ನುವ ಆರೋಪವೂ ಇದೆ. ತಮಿಳಿನ ಖ್ಯಾತ ನಿರ್ದೇಶಕ ವೆಂಕಟ್ ಪ್ರಭು ನಿರ್ದೇಶಿಸಿದ 'ಮನ್ಮಥ ಲೀಲೈ' ಸಿನಿಮಾ ಸಂಯುಕ್ತಾಗೆ ವಿಭಿನ್ನ ಇಮೇಜ್ ಕೊಡಲಿದೆ ಎನ್ನುವ ಭರವಸೆಯಲ್ಲಿದ್ದಾರೆ. ಈ ಸಿನಿಮಾ ಏಪ್ರಿಲ್ 1ರಂದು ಬಿಡುಗಡೆಯಾಗಲಿದೆ. ಈ ಸಿನಿಮಾ ಸಂಯುಕ್ತಾ ಹೆಗ್ಡೆ ವಯಸ್ಸಿನಲ್ಲಿ ಹಿರಿಯ ವ್ಯಕ್ತಿಯನ್ನು ಮದುವೆ ಆಗಿರುವ ಹಳ್ಳಿ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೀಗಾಗಿ ಸಂಯುಕ್ತಾ ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆಯಲು ಪ್ರಯತ್ನ ಪಡುತ್ತಿದ್ದಾರೆ.

 ಸಂಯುಕ್ತಾ ಹೆಗ್ಡೆ ಸ್ಟೆಪ್ಸ್

ಸಂಯುಕ್ತಾ ಹೆಗ್ಡೆ ಸ್ಟೆಪ್ಸ್

ಸಂಯುಕ್ತಾ ಹೆಗ್ಡೆಗೆ ಡ್ಯಾನ್ ಅಂದ್ರೆ ಪಂಚಪ್ರಾಣ. ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಡ್ಯಾನ್ಸ್ ಮಾಡಿದ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಹೀಗಾಗಿ ಕೆ.ಮಂಜು ಪುತ್ರ ಶ್ರೇಯಸ್ ಮಂಜು ಅಭಿನಯದ 'ರಾಣಾ' ಸಿನಿಮಾದ ಒಂದು ಹಾಡಿನಲ್ಲಿ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಕನ್ನಡದ ಕೆಲವೇ ಕೆಲವು ಸಿನಿಮಾಗಳಲ್ಲಿ ನಟಿಸಿದ್ದರೂ, ಸಂಯುಕ್ತ ತನ್ನದೇ ಇಮೇಜ್ ಉಳಿಸಿಕೊಂಡಿದ್ದಾರೆ. ಈ ಮಧ್ಯೆ ಆರ್‌ಸಿಬಿ ತಂಡದೊಂದಿಗೆ ಕಾಣಿಸಿಕೊಂಡಿದ್ದಾರೆ. ಆರ್‌ಸಿಬಿ ತಂಡ ಸೇರಿ ಐಸಿಎಲ್‌ನಲ್ಲಿ ಹೊಸ ಪ್ರಾಜೆಕ್ಟ್‌ಗೆ ಕೈ ಹಾಕುತ್ತಿದ್ದಾರಾ? ಎನ್ನುವ ಕುತೂಹಲ ಮೂಡಿದೆ.

More from Filmibeat

English summary
Kannada Actress Samyuktha Hegde meets South African cricketer, RCB new captain Faf du Plessis. She shared photos with Faf du Plessis on Sunday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X