"ಕಿಬ್ಬೊಟ್ಟೆಯ ಭಾಗದಲ್ಲಿ ದಿಢೀರನೇ ನೋವು ಬಂತು, ವೈದ್ಯರು ಕ್ಯಾನ್ಸರ್ ಟೆಸ್ಟ್ ಮಾಡಿಸಿದ್ರು"; ನಟಿ ಶಾನ್ವಿ ಶ್ರೀವಾಸ್ತವ್
ಸ್ಯಾಂಡಲ್‌ವುಡ್ ನಟಿ ಶಾನ್ವಿ ಶ್ರೀವಾಸ್ತವ್ ಇತ್ತೀಚೆಗೆ ಹೆಚ್ಚಾಗಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ. ಆಗಲೇ ಸಿನಿಪ್ರಿಯರಿಗೆ ಈ ನಟಿ ಸಿನಿಮಾದಿಂದ ದೂರ ಉಳಿದುಬಿಟ್ರಾ ಅನ್ನೋ ಅನುಮಾನ ಮೂಡಿತ್ತು. ಆದರೆ, ಕೆಲವು ದಿನಗಳಿಂದ ನಟಿ ಶಾನ್ವಿ ಶ್ರೀವಾಸ್ತವ್ ಹೆಚ್ಚು ಸಂದರ್ಶನಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ, ಶಾನ್ವಿ ಸದ್ದಿಲ್ಲದೆ ಕನ್ನಡ ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ.
ಉತ್ತರ ಪ್ರದೇಶದ ವಾರಾಣಾಸಿ ಮೂಲದ ಶಾನ್ವಿ ಶ್ರೀವಾಸ್ತವ್ ತೆಲುಗು ಸಿನಿಮಾ ಮೂಲಕ ನಟನೆಗೆ ಎಂಟ್ರಿ ಕೊಟ್ಟಿದ್ದರು. ತೆಲುಗಿನ 'ಲವ್‌ಲೀ' ಹಾಗೂ 'ಅಡ್ಡ' ಈ ಎರಡು ಸಿನಿಮಾ ಮೂಲಕ ಗಮನ ಸೆಳೆದಿದ್ದರು. ಆ ಬಳಿಕ 'ಚಂದ್ರಲೇಖ' ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಪ್ರವೇಶ ಮಾಡಿದ್ದರು. ಯಶ್ ನಟಿಸಿದ 'ಮಾಸ್ಟರ್ ಪೀಸ್' ಶಾನ್ವಿಗೆ ಜನಪ್ರಿಯತೆಯನ್ನು ತಂದುಕೊಟ್ಟಿದ್ದರು. ಅಲ್ಲಿಂದ ಕನ್ನಡ ಸಿನಿಮಾದಲ್ಲಿಯೇ ಹೆಚ್ಚಾಗಿ ನಟಿಸುತ್ತಿದ್ದಾರೆ.

ಶಾನ್ವಿ ಶ್ರೀವಾಸ್ತವ್ ಕಳೆದ ಡಿಸೆಂಬರ್‌ನಿಂದ ಸೈಲೆಂಟ್ ಆಗಿದ್ದರು. ಹಾಗಿರುವುದಕ್ಕೊಂದು ಕಾರಣವಿತ್ತು. ಕಳೆದ ವರ್ಷ ಡಿಸೆಂಬರ್ 9ರಂದು ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದ ನಟಿಗೆ ಮಾರನೇ ದಿನವೇ ಕಿಬ್ಬೊಟ್ಟೆಯಲ್ಲಿ ನೋವು ಕಾಣಿಸಿಕೊಂಡಿತ್ತು. ವೈದ್ಯರು ಕ್ಯಾನ್ಸರ್ ಟೆಸ್ಟ್ ಮಾಡುವಂತೆ ಹೇಳಿದ್ದರು. ಮುಂದೆ ಏನಾಯ್ತು? ಈಗ ಅವರ ಆರೋಗ್ಯ ಹೇಗಿದೆ? ಅನ್ನೋದನ್ನು ರ್‍ಯಾಪಿಡ್ ರಶ್ಮಿ ಯೂಟ್ಯೂಬ್ ಚಾನೆಲ್‌ನಲ್ಲಿ ರಿವೀಲ್ ಮಾಡಿದ್ದಾರೆ.
'ಮಾಸ್ಟರ್ ಪೀಸ್' ನಟಿ ಶ್ವೇತಾ ಶ್ರೀವಾಸ್ತವ್ ದಿಢೀರನೇ ಅನಾರೋಗ್ಯಕ್ಕೀಡಾಗಿದ್ದರು. ಕಿಬ್ಬೊಟ್ಟೆಯಲ್ಲಿ ಕಾಣಿಸಿಕೊಂಡ ನೋವು ದೊಡ್ಡ ಆತಂಕವನ್ನು ಸೃಷ್ಟಿಸಿತ್ತು. "ನಾನು ಹುಟ್ಟುಹಬ್ಬ ಆಚರಿಸಿಕೊಂಡ ಕೆಲವೇ ದಿನಗಳ ಬಳಿಕ ನನ್ನ ಆರೋಗ್ಯದಲ್ಲಿ ದೊಡ್ಡ ಸಮಸ್ಯೆ ಎದುರಾಗಿತ್ತು. ಎಂಆರ್‌ಐ ಮಿಷಿನ್ ಒಳಗೆ ಹೋಗುತ್ತಿದ್ದಂತೆ ಆರೋಗ್ಯಕ್ಕಿಂತ ಮುಖ್ಯವಾದದ್ದು ಏನೂ ಇಲ್ಲ ಅನ್ನೋದು ಗೊತ್ತಾಯ್ತು. ಅದರಿಂದ ಹೊರ ಬರುತ್ತಿದ್ದಂತೆ ನನಗೆ ನಮ್ಮ ಜನ, ನನ್ನ ಕುಟುಂಬ, ಆರೋಗ್ಯ ಮೊದಲ ಆದ್ಯತೆ ಕೊಡಬೇಕು. ಉಳಿದಿದ್ದೆಲ್ಲ ಆಮೇಲೆ ಅಂತ ಅನಿಸಿತ್ತು. ಅಲ್ಲಿಂದ ನನ್ನ ಬಗ್ಗೆ ನಾನು ಅರ್ಥ ಮಾಡಿಕೊಳ್ಳುವ ಜರ್ನಿ ಆರಂಭ ಆಯ್ತು" ಎಂದು ಆರೋಗ್ಯದ ಬಗ್ಗೆ ರಿವೀಲ್ ಮಾಡಿದ್ದಾರೆ.
ಶಾನ್ವಿ ಶ್ರೀವಾಸ್ತವ್ ಅವರನ್ನು ತಕ್ಷಣವೇ ವೈದ್ಯರ ಬಳಿಕ ಕರೆದುಕೊಂಡು ಹೋಗಲಾಗಿತ್ತು. ಆಗ ವೈದ್ಯರು ಹೇಳಿದ ಮಾತು ಆತಂಕ ಸೃಷ್ಟಿಸಿತ್ತು. "ಡಿಸೆಂಬರ್ 9 ನನ್ನ ಬರ್ತ್‌ಡೇ ಇತ್ತು. ಮಾರನೇ ದಿನ ನನ್ನ ಕಿಬ್ಬೊಟ್ಟೆಯ ಭಾಗದಲ್ಲಿ ದಿಢೀರನೇ ನೋವು ಶುರುವಾಯ್ತು. ಒಂದು ಇಂಚು ಕೂಡ ಹೊರಳಾಡುವುದಕ್ಕೆ ಆಗುತ್ತಿರಲಿಲ್ಲ. ಸಿಕ್ಕಾಪಟ್ಟೆ ನೋವು ಶುರುವಾಗಿತ್ತು. ನಾನು ಡಾಕ್ಟರ್ ಹತ್ತಿರ ಹೋದೆ. ಆಗ ಅವರು ಮೊದಲು ಸೊನಾಗ್ರಫಿ ಮಾಡಬೇಕು ಅಂತ ಹೇಳಿದರು. ಅದರ ರಿಪೋರ್ಟ್ ಬಂದ್ಮೇಲೆ ತಕ್ಷಣವೇ ಎಂಆರ್‌ಐ ಮಾಡಿ ಕ್ಯಾನ್ಸರ್ ಟೆಸ್ಟ್ ಮಾಡಿ, ಆ ಮೇಲೆ ನನ್ನ ಹತ್ತಿರ ಬನ್ನಿ ಅಂದ್ರು." ಎಂದು ಆ ಕ್ಷಣವನ್ನು ರಿವೀಲ್ ಮಾಡಿದ್ದರು.

ವೈದ್ಯರಿಗೆ ರಿಪೋರ್ಟ್ ಸಿಕ್ಕಿದ ಬಳಿಕ ಅಂಡಾಶಯದಲ್ಲಿ ಸಿಸ್ಟ್‌ಗಳಿವೆ ಎಂದು ಹೇಳಿದ್ದರು. ಅದರಲ್ಲೊಂದು ಒಡೆದು ಕಿಬ್ಬೊಟ್ಟೆಯ ನೋವಿಗೆ ಕಾರಣವಾಗಿತ್ತು ಅಂತಾರೆ ಶ್ವಾನ್ವಿ ಶ್ರೀವಾಸ್ತವ್. "ವೈದ್ಯರು ನಿಮ್ಮ ಅಂಡಾಶಯದಲ್ಲಿ ಹೆಚ್ಚು ಸಿಸ್ಟ್‌ಗಳು ಇವೆ ಎಂದು ಹೇಳಿದ್ದರು. ನನಗೆ ಅದು ಹೊಸದಾಗಿತ್ತು. ನಾನು ಅನಾರೋಗ್ಯಕ್ಕೀಡಾಗಿತ್ತು ತೀರಾ ವಿರಳ. ಆಗ ವೈದ್ಯರು ಏನೂ ಯೋಚನೆ ಮಾಡಬೇಡಿ. ರಿಪೋರ್ಟ್ ಬರೋವರೆಗೂ ಏನು ಯೋಚನೆ ಮಾಡುವುದು ಬೇಡ ಅಂದಿದ್ದರು. ಆದರೆ, ರಿಪೋರ್ಟ್ ಬಂದ್ಮೇಲೆ ನಿಮ್ಮ ಓವರಿಯನ್ನು ತೆಗೆದು ಹಾಕಬೇಕಾಗಿ ಬರಬಹುದು. ಆದರೆ, ರಿಪೋರ್ಟ್ ಬರುವವರೆಗೂ ಏನೂ ಹೇಳುವುದಿಲ್ಲ ಎಂದಿದ್ದರು." ಅಂತ ರ್‍ಯಾಪಿಡ್ ರಶ್ಮಿ ಯೂಟ್ಯೂಬ್ ಚಾನೆಲ್‌ನಲ್ಲಿ ಆತಂಕ ಹೊರಹಾಕಿದ್ದಾರೆ.
ಅಸಲಿಗೆ ಶ್ವಾನ್ವಿ ಶ್ರೀವಾಸ್ತವ್ ಒವರಿಯಲ್ಲಿದ್ದ ಸಿಸ್ಟ್ ಒಡೆದಿತ್ತು. ಇನ್ನೂ ಹಲವು ಸಿಸ್ಟ್‌ಗಳು ಇದ್ದವು. ಅದಕ್ಕೆ ಔಷಧಿಗಳನ್ನು ಕೊಡುವುದಕ್ಕೆ ಪ್ರಾರಂಭಿಸಿದ್ದರು. ಸುಮಾರು ಒಂದು ಸಾವಿರ ಎಂಜಿಯಷ್ಟು ಮಾತ್ರಗಳನ್ನು ನೀಡುತ್ತಿದ್ದರು. ಅದು ಸುಮಾರು ಆರು ತಿಂಗಳವರೆಗೂ ಮುಂದುವರೆದಿತ್ತು. ಅದರದ್ದು ಒಂದಿಷ್ಟು ಸೈಡ್ ಎಫೆಕ್ಟ್‌ಗಳು ಇದ್ದವು. ಆಗ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು ಅಂತ ಶಾನ್ವಿ ಶ್ರೀವಾಸ್ತವ್‌ಗೆ ಜ್ಞಾನೋದಯವಾಗಿತ್ತು. ಈಗ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಯೋಗಾ ಕಡೆಗೆ ಹೆಚ್ಚು ಗಮನ ಹರಿಸಿದ್ದಾರೆ.


Click it and Unblock the Notifications











