ಬಿಡುಗಡೆಗೆ ರೆಡಿಯಾಯ್ತು ಶಾನ್ವಿ ಶ್ರೀವತ್ಸವ್ 'ಕಸ್ತೂರಿ ಮಹಲ್': ರಿಲೀಸ್ ಯಾವಾಗ?

'ಕಸ್ತೂರಿ ಮಹಲ್' ಅನೌನ್ಸ್ ಮಾಡಿದ್ದಲ್ಲಿಂದ ಒಂದಲ್ಲಾ ಒಂದು ಕಾರಣಕ್ಕೆ ಸದ್ದು ಮಾಡುತ್ತಲೇ ಇತ್ತು. ಕೆಲವೊಮ್ಮೆ ನೆಗೆಟಿವ್ ವಿಚಾರಕ್ಕೆ ಸುದ್ದಿಯಾಗುತ್ತಿದ್ದರೆ, ಮತ್ತೆ ಕೆಲವು ಒಳ್ಳೆ ಕಾರಣಕ್ಕೆ ಸುದ್ದಿಯಾಗಿತ್ತು. ಸದ್ಯ ಎದುರಾದ ಎಲ್ಲಾ ಸಂಕಷ್ಟಗಳನ್ನು ಎದುರಿಸಿ, ಸಿನಿಮಾ ತಂಡ ಶೂಟಿಂಗ್ ಅನ್ನು ಯಶಸ್ವಿಯಾಗಿ ಮುಗಿಸಿದೆ. ಪೋಸ್ಟ್ ಪ್ರೋಡಕ್ಷನ್ ಹಂತದಲ್ಲಿರುವ ಸಿನಿಮಾ ಬಿಡುಗಡೆಗೂ ಸಜ್ಜಾಗಿ ನಿಂತಿದೆ.

ಕೆಲವು ತಿಂಗಳ ಹಿಂದೆ 'ಕಸ್ತೂರಿ ಮಹಲ್' ಸಿನಿಮಾ ಫಸ್ಟ್ ಲುಕ್ ರಿಲೀಸ್ ಮಾಡಿದ್ದರು. ಶಾನ್ವಿ ಶ್ರೀವತ್ಸವ್ ಲುಕ್, ಗೆಟಪ್ ಎಲ್ಲವೂ ಸಿನಿಪ್ರಿಯರನ್ನು ಸೆಳೆದಿತ್ತು. ಹಿರಿಯ ನಿರ್ದೇಶಕ ದಿನೇಶ್ ಬಾಬು ನಿರ್ದೇಶನ ಮಾಡಿದ್ದರಿಂದ ಸಹಜವಾಗಿಯೇ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ. ಕೊರೊನಾ ಹಾವಳಿ ಮಧ್ಯೆ ಸಿನಿಮಾವನ್ನು ರೆಡಿ ಮಾಡಿಟ್ಟುಕೊಂಡಿರುವ ಚಿತ್ರತಂಡ ಬಿಡುಗಡೆಗೆ ಸೂಕ್ತ ಸಮಯವನ್ನು ಹುಡುಕುತ್ತಿದೆ.

ಸೆನ್ಸಾರ್‌ಗೆ ರೆಡಿಯಾಗಿದೆ ಕಸ್ತೂರಿ ಮಹಲ್

'ಕಸ್ತೂರಿ ಮಹಲ್' ಸಿನಿಮಾಗೆ ಹಿರಿಯ ನಿರ್ದೇಶಕ ದಿನೇಶ್ ಬಾಬು ಆಕ್ಷನ್ ಕಟ್ ಹೇಳಿದ್ದಾರೆ. ಬಹುಭಾಷಾ ನಟಿ ಶಾನ್ವಿ ಶ್ರೀವಾಸ್ತವ್ ಹಿಂದೆಂದೂ ಕಾಣಿಸಿಕೊಳ್ಳದ ಪಾತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ಸಿನಿಮಾ ಶೂಟಿಂಗ್ ಮುಗಿಸಿ, ಪ್ರೋಸ್ಟ್ ಪ್ರೊಡಕ್ಷನ್ ಕೆಲಸವನ್ನೂ ಮುಗಿಸಿರುವ ಚಿತ್ರತಂಡ ಪ್ರಾದೇಶಿಕ ಸೆನ್ಸಾರ್ ಮಂಡಳಿಗೆ ಸಿನಿಮಾ ತೋರಿಸಲು ಸಜ್ಜಾಗಿ ನಿಂತಿದೆ. ಸೆನ್ಸಾರ್ ಬೋರ್ಡ್ ಈ ಸಿನಿಮಾವನ್ನು ವೀಕ್ಷಿಸಿದ ಬಳಿಕ ಸಿನಿಮಾವನ್ನು ಬಿಡುಗಡೆ ಮಾಡಲು ಸಜ್ಜಾಗಿದೆ ಚಿತ್ರತಂಡ.

Kannada Actress Shanvi Srivastava Starrer Kasturi Mahal movie is ready for release

ಕೊರೊನಾ ಹಾಗೂ ಓಮಿಕ್ರಾನ್ ಹಾವಳಿ ಹೆಚ್ಚಾಗುತ್ತಿರುವುದರಿಂದ ರಾಜ್ಯ ಸರ್ಕಾರ ಮಾರ್ಗಸೂಚಿಯನ್ನು ಹೊರಡಿಸಿದೆ. ಚಿತ್ರಮಂದಿರಕ್ಕೆ ಶೇ. 50 ಸೀಟು ಭರ್ತಿಗೆ ಮಾತ್ರ ಅವಕಾಶ ನೀಡಿದೆ. ಜೊತೆಗೆ ವೀಕೆಂಡ್ ಕರ್ಪ್ಯೂ ಕೂಡ ಇದೆ. ಅಲ್ಲದೆ ಮತ್ತೆ ಲಾಕ್‌ಡೌನ್ ಆಗಬಹುದು ಎನ್ನುವ ಮಾತುಗಳು ಕೂಡ ಕೇಳಿ ಬರುತ್ತಿರುವುದರಿಂದ, ಕೊರೊನಾ ಕಡಿಮೆಯಾದ ಬಳಿಕ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಮುಂದಾಗಿದೆ.

ದಿನೇಶ್ ಬಾಬು ನಿರ್ದೇಶನದ 50ನೇ ಸಿನಿಮಾ

'ಕಸ್ತೂರಿ ಮಹಲ್' ಹಿರಿಯ ನಿರ್ದೇಶಕ ದಿನೇಶ್ ಬಾಬು ಆಕ್ಷನ್ ಕಟ್ ಹೇಳಿರುವ 50ನೇ ಚಿತ್ರ. ಈಗಾಗಲೇ 'ಕಸ್ತೂರಿ ಮಹಲ್' ಸಿನಿಮಾದ ಟೀಸರ್ ಅನ್ನು ದಿವಂಗತ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಬಿಡುಗಡೆ ಮಾಡಿದ್ದರು. ಈ ಟೀಸರ್ ಸೋಶಿಯಲ್ ಮೀಡಿಯಾಗಳಲ್ಲಿ ಭಾರಿ ಮೆಚ್ಚುಗೆ ಗಳಿಸಿತ್ತು. ಶಾನ್ವಿ ಶ್ರೀವಾಸ್ತವ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಚಿತ್ರದಲ್ಲಿ ರಂಗಾಯಣ ರಘು ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಿದ್ದಾರೆ. ಶಾನ್ವಿ ಜೊತೆಯಲ್ಲಿ ಸ್ಕಂಧ ಅಶೋಕ್, ಶೃತಿ ಪ್ರಕಾಶ್, ಕಾಶಿಮ ರಫಿ, ನೀನಾಸಂ ಅಶ್ವಥ್ , ಅಕ್ಷರ್ ಮುಂತಾದವರು ನಟಿಸಿದ್ದಾರೆ.

Kannada Actress Shanvi Srivastava Starrer Kasturi Mahal movie is ready for release

ಪಕ್ಕಾ ಹಾರಾರ್ ಥ್ರಿಲ್ಲರ್ ಕಥೆಯನ್ನು ಹೊಂದಿರುವ ಈ 'ಕಸ್ತೂರಿ ಮಹಲ್' ಚಿತ್ರಕ್ಕೆ ನಿರ್ದೇಶಕ ದಿನೇಶ್ ಬಾಬು ಅವರೇ ಕಥೆ, ಚಿತ್ರಕಥೆ ಜೊತೆ ಸಂಭಾಷಣೆ ಕೂಡ ಬರೆದಿದ್ದಾರೆ. 'ಕಸ್ತೂರಿ ಮಹಲ್' ಚಿತ್ರಕ್ಕೆ ಮೊದಲು ಡಿಂಪಲ್ ಕ್ವೀನ್ ರಚಿತಾ ರಾಮ್ ನಾಯಕಿಯಾಗಿ ಆಯ್ಕೆಯಾಗಿದ್ದರು. ರಚಿತಾ ರಾಮ್ ನಾಯಕಿ ಅಂತಲೇ ಅದ್ಧೂರಿಯಾಗಿ ಸೆಟ್ಟೇರಿದ್ದ ಸಿನಿಮಾ, ಶೂಟಿಂಗ್‌ಗೆ ಹೋಗಬೇಕು ಅನ್ನುವಷ್ಟರಲ್ಲಿ ರಚಿತಾ ರಾಮ್ ಸಿನಿಮಾದಿಂದ ಹೊರ ಹೋಗಿದ್ದರು. ಆ ಬಳಿಕ ರಚಿತಾ ರಾಮ್ ಬದಲು ನಟಿ ಶಾನ್ವಿ ಶ್ರೀವತ್ಸವ್ ಅವರನ್ನು ಸಿನಿಮಾ ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. ಹಾರರ್‌ ಸೈಕಾಲಾಜಿಕಲ್‌ ಥ್ರಿಲ್ಲರ್‌ ಸಿನಿಮಾದಲ್ಲಿ ಶಾನ್ವಿ ಹೇಗೆ ಕಾಣಿಸಿಕೊಳ್ಳುತ್ತಾರೆ? ಥ್ರಿಲ್ಲರ್, ಹಾರರ್ ಸಿನಿಮಾ ಪ್ರಿಯರಿಗೆ ಕಸ್ತೂರಿ ಮಹಲ್ ಇಷ್ಟ ಆಗುತ್ತಾ? ಅನ್ನುವ ಕುತೂಹಲ ಹೆಚ್ಚಾಗುತ್ತಿದೆ.

More from Filmibeat

English summary
Kannada Actress Shanvi Srivastava Starrer Kasturi Mahal movie is ready for release. Dinesh Baboo is directed Kannada film Kasturi Mahal which has completed the post-production is getting ready to hit screens this year.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X