ಹೈದರಾಬಾದ್ ಮೂಲದ ಸುಧೀರ್ ರೆಡ್ಡಿ ಕನ್ನಡದ ನಟಿಯನ್ನು ಮದುವೆ ಆಗಿದ್ದೇಗೆ? ಶೋಭಿತಾನನ್ನು ಮೊದಲು ಭೇಟಿಯಾಗಿದ್ದೆಲ್ಲಿ?
ಕರ್ನಾಟಕದ ಸಕಲೇಶಪುರ ಮೂಲಕ ನಟಿ ಶೋಭಿತಾ ಶಿವಣ್ಣ ದುಡುಕಿನ ನಿರ್ಧಾರ ತೆಗೆದುಕೊಂಡು ಜೀವನವನ್ನು ಅಂತ್ಯಗೊಳಿಕೊಂಡಿದ್ದಾರೆ. ಮದುವೆಯಾಗಿ ಹೆಚ್ಚು ಕಡಿಮೆ ಒಂದೂವರೆ ವರ್ಷ ಆಗಿತ್ತಷ್ಟೇ. ಅಷ್ಟರಲ್ಲೇ ಬದುನ್ನೇ ಅಂತ್ಯಗೊಳಿಸುವ ಒತ್ತಡವೇನಿತ್ತು? ಅನ್ನೋದು ಬಯಲಿಗೆ ಬರಬೇಕಿದೆ. ನಟಿ ಶೋಭಿತಾ ಶಿವಣ್ಣರನ್ನು ಹತ್ತಿರದಿಂದ ನೋಡಿದವರಿಗೂ ಇದು ಅಚ್ಚರಿ ಮೂಡಿಸಿದೆ.
ಶೋಭಿತಾ ಶಿವಣ್ಣ ಮದುವೆ ಕೂಡ ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ನಡೆದು ಹೋಗಿತ್ತು. ಅವರ ಪತಿಯ ಬಗ್ಗೆ ಎಲ್ಲೂ ಶೋಭಿತಾ ಹೇಳಿಕೊಂಡಿರಲಿಲ್ಲ. ಮದುವೆ ಬಳಿಕ ಹೈದರಾಬಾದ್‌ನಲ್ಲಿ ನೆಲೆಸಿದ್ದ ಶೋಭಿತಾ ನಟನೆಯಿಂದ ದೂರ ಉಳಿದಿದ್ದರು. 'ಬ್ರಹ್ಮಗಂಟು' ಅಂತಹ ಧಾರಾವಾಹಿ ಕೊಟ್ಟ ಜನಪ್ರಿಯತೆಯನ್ನು ಮುಂದುವರೆಸಿಕೊಂಡಿದ್ದ ಶೋಭಿತಾ ವಿವಾಹದ ಬಳಿಕ ನಟನೆಗೆ ಬ್ರೇಕ್ ಕೊಟ್ಟಿದ್ದೇಕೆ? ಎನ್ನುವ ಅನುಮಾನ ಈಗ ಮೂಡಿದೆ.

ಇನ್ನೊಂದು ಕಡೆ ಶೋಭಿತಾ ತೆಲುಗು ಮೂಲದ ಪತಿ ಸುಧೀರ್ ರೆಡ್ಡಿಯ ಸಂಪರ್ಕಕ್ಕೆ ಬಂದಿದ್ದು ಹೇಗೆ? ಸುಧೀರ್ ರೆಡ್ಡಿಯನ್ನು ಶೋಭಿತಾ ಶಿವಣ್ಣ ಒಪ್ಪಿಕೊಂಡಿದ್ದು ಹೇಗೆ? ಶೋಭಿತಾ ಶಿವಣ್ಣ ಮದುವೆಯ ಸೀಕ್ರೆಟ್ ಏನು? ಈ ಎಲ್ಲಾ ಪ್ರಶ್ನೆಗಳು ಒಂದೊಂದಾಗಿಯೇ ಹುಟ್ಟಿಕೊಂಡಿದೆ. ಮದುವೆ ಬಳಿಕ ನಟನೆಯಿಂದ ದೂರ ಉಳಿದಿದ್ದು ಏಕೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.
ಶೋಭಿತಾ ಶಿವಣ್ಣ ಕಿರುತೆರೆ ಹಾಗೂ ಸಿನಿಮಾದಲ್ಲಿ ಬ್ಯುಸಿಯಾಗಿದ್ದ ನಟಿ. ವೈವಾಹಿಕ ಜೀವನಕ್ಕೆ ಕಾಲಿಡಬೇಕು ಅಂತ ನಿರ್ಧಾರ ಮಾಡಿದ್ದಾಗ ತೆಲುಗು ಮೂಲದ ಸುಧೀರ್ ರೆಡ್ಡಿ ಎಂಬುವವರನ್ನು ಅವರು ಆಯ್ಕೆ ಮಾಡಿಕೊಂಡಿದ್ದರು. ಅವರ ಮದುವೆ ಅದ್ದೂರಿಯಾಗಿಯೇ ನಡೆದಿತ್ತು. ಆದರೆ, ತಮ್ಮ ವಿವಾಹದ ಬಗ್ಗೆ, ಪತಿಯ ಬಗ್ಗೆ ರಿವೀಲ್ ಮಾಡಿರಲಿಲ್ಲ. ಶೋಭಿತಾರನ್ನು ಹತ್ತಿರದಿಂದ ಬಲ್ಲವರು ಕೂಡ ವಿವಾಹದ ಬಳಿಕ ಸಂಪರ್ಕದಲ್ಲಿ ಇರಲಿಲ್ಲ ಎಂದೇ ಹೇಳಿದ್ದಾರೆ.

ತೆಲುಗು ಮಾಧ್ಯಮಗಳ ಪ್ರಕಾರ, ಪತಿ ಸುಧೀರ್ ರೆಡ್ಡಿ ನಟಿ ಶೋಭಿತಾ ಶಿವಣ್ಣ ಅವರನ್ನು ಬೆಂಗಳೂರು ಮ್ಯಾಟ್ರಿಮೋನಿಯಲ್ಲಿ ಭೇಟಿಯಾಗಿದ್ದರು. ಶೋಭಿತಾ ಮ್ಯಾಟ್ರಿಮೋನಿ ಸೈಟ್ ಒಂದರಲ್ಲಿ ತಮ್ಮ ಪ್ರೊಫೈಲ್ ಅನ್ನು ಅಪ್‌ಲೋಡ್ ಮಾಡಿದ್ದರು. ಅದನ್ನು ನೋಡಿ ಸುಧೀರ್ ರೆಡ್ಡಿ ಮೆಚ್ಚಿಕೊಂಡಿದ್ದರು. ಬಳಿಕ ಇಬ್ಬರೂ ಪರಸ್ಪರ ಒಪ್ಪಿಕೊಂಡು ಮನೆಯವರಿಗೆ ವಿಷಯ ತಿಳಿಸಿದ್ದರು. ವೃತ್ತಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ ಸುಧೀರ್ ರೆಡ್ಡಿಯ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡುವುದಕ್ಕೆ ನಿರ್ಧರಿಸಿದ್ದರು.
ಮದುವೆ ಬಳಿಕ ಶೋಭಿತಾ ಶಿವಣ್ಣ ನಟನೆಯನ್ನು ಯಾಕೆ ನಿಲ್ಲಿಸಿದ್ದರು ಅನ್ನೋದು ಪೊಲೀಸರ ತನಿಖೆಯಲ್ಲಿ ಗೊತ್ತಾಗಬೇಕಿದೆ. ಚಿತ್ರರಂಗದಿಂದ ಅಂತರವನ್ನು ಕಾಯ್ದುಕೊಂಡಿದ್ದರು. ಅಷ್ಟೇ ಅಲ್ಲದೆ ಚಿತ್ರರಂಗದಲ್ಲಿ ಅವರ ಸಹೋದ್ಯೋಗಿಗಳೊಂದಿಗೂ ಸಂಪರ್ಕವನ್ನು ಕಳೆದುಕೊಂಡಿದ್ದರು. ಹೀಗಾಗಿ ಶೋಭಿತಾ ಶಿವಣ್ಣ ಬಗ್ಗೆ ಹೆಚ್ಚಿನ ಮಾಹಿತಿ ಕಿರುತೆರೆಯಲ್ಲಿನ ಅವರ ಸಹ ಕಲಾವಿದರಿಗೆ ಇರಲಿಲ್ಲ ಎನ್ನಲಾಗಿದೆ.
ಹೈದರಾಬಾದ್‌ನ ಗಚ್ಚಿಬೌಲಿಯ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ. ಸದ್ಯ ಅವರಿಗೆ ಡೆತ್ ನೋಟ್ ಸಿಕ್ಕಿದ್ದು, ಅದರ ಬಗ್ಗೆ ತನಿಖೆ ನಡೆಯುತ್ತಿದೆ. ಪೊಲೀಸರ ತನಿಖೆಯಲ್ಲಿ ಕನ್ನಡದ ನಟಿ ಶೋಭಿಯಾ ಶಿವಣ್ಣ ಸಾವಿಗೆ ಅಸಲಿ ಕಾರಣವೇನು? ನಟನೆ ಬಿಟ್ಟಿದ್ದರಿಂದ ಖಿನ್ನತೆಗೆ ಒಳಗಾಗಿದ್ದರೇ? ಪತಿ ಸುಧೀರ್ ರೆಡ್ಡಿ ಮೇಲೆ ಶಂಕೆ ಇದೆಯೇ? ಈ ಎಲ್ಲಾ ಆಂಗಲ್‌ಗಳಲ್ಲಿ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ. ಅವರೊಂದಿಗೆ ಕೆಲಸ ಮಾಡಿದವರು ಶೋಭಿತಾ ಸಾವು ಅನುಮಾನಾಸ್ಪದವಾಗಿದೆ ಎಂದಿದ್ದಾರೆ.


Click it and Unblock the Notifications











