"ನನಗೆ ಗುಂಡು ಗುಂಡಗೆ ಇರೋದಕ್ಕೆ ಇಷ್ಟ.. ಪ್ರೇಕ್ಷಕರಿಗೆಹೀಗಿರೋದೆ ಇಷ್ಟ"; ನಟಿ ಶುಭಾ ಪೂಂಜಾ!
'ಮೊಗ್ಗಿನ ಮನಸ್ಸು' ಸಿನಿಮಾ ಬಳಿಕ ಸಾಕಷ್ಟು ಜನಪ್ರಿಯತೆ ಗಳಿಸಿದ ನಟಿ ಶುಭಾ ಪೂಜಾ. ಆದರೆ, ಈ ಸಿನಿಮಾಗಿಂತ ಮುನ್ನವೇ ಶುಭಾ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಬಳಿಕ ಸ್ಯಾಂಡಲ್‌ವುಡ್‌ಗೆ ಪ್ರವೇಶ ಮಾಡಿದ್ದಾರೆ. ಎರಡು ದಶಕಗಳ ತಮ್ಮ ಸಿನಿ ಜರ್ನಿಯಲ್ಲಿ ಶುಭಾ ಪೂಂಜಾ ಸಾಕಷ್ಟು ಏರಿಳಿತಗಳನ್ನು ಕಂಡಿದ್ದಾರೆ.
ತಮ್ಮ ವೃತ್ತಿ ಬದುಕಿನಲ್ಲಿ ಶುಭಾ ಪೂಂಜಾ ಸುಮಾರು 50 ಸಿನಿಮಾಗಳನ್ನು ಪೂರೈಸಿದ್ದಾರೆ. ಈ ಜರ್ನಿಯಲ್ಲಿ ದೊಡ್ಡ ಸಕ್ಸಸ್ ಅನ್ನು ಕಂಡಿದ್ದಾರೆ. ಸೋಲಿನ ರುಚಿ ನೋಡಿದ್ದಾರೆ. ದೊಡ್ಡ ದೊಡ್ಡ ವಿವಾದಗಳನ್ನು ಎದುರಿಸಿದ್ದಾರೆ. ಅತ್ತಿದ್ದಾರೆ, ನಕ್ಕಿದ್ದಾರೆ, ಅವಮಾನಗಳನ್ನು ಎದುರಿಸಿದ್ದಾರೆ, ಕುಣಿದು ಕುಪ್ಪಳಿಸಿದ್ದಾರೆ.

ಹೀಗಿದ್ದರೂ ಯಾವುದನ್ನೂ ತಲೆಗೆ ಹಾಕಿಕೊಳ್ಳದೆ, ಜೀವನ ಬಂದಂತೆ ಮುಂದೆ ಸಾಗಿಸಿದ್ದಾರೆ. ಶುಭಾ ಪೂಂಜಾ ಇತ್ತೀಚೆಗೆ ಆರ್ ಜೆ ರಾಜೇಶ್ ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿದ್ದರು. ಇಲ್ಲಿ ಸಾಕಷ್ಟು ಇಂಟ್ರೆಸ್ಟಿಂಗ್ ವಿಷಯಗಳನ್ನು ರಿವೀಲ್ ಮಾಡಿದ್ದಾರೆ. ನಾಯಕಿಯಾಗಿದ್ದರು ಕೊಂಡು ಶುಭಾ ಪೂಂಜಾ ಯಾಕಿಷ್ಟು ದಪ್ಪ ಇದ್ದಾರೆ? ಅನ್ನುವ ಬಗ್ಗೆ ಸಾಕಷ್ಟು ಕಾಮೆಂಟ್‌ಗಳು ಬಂದಿವೆ. ಅದಕ್ಕೂ ಶುಭಾ ಪೂಂಜಾ ಪ್ರತಿಕ್ರಿಯೆ ನೀಡಿದ್ದಾರೆ.
"ಹಾಗೇ ಇರಿ ಹೀಗೇ ಇರಿ ಅನ್ನಲ್ಲ"
ಹೀರೋಯಿನ್ ಅಂದರೆ, ತೆಳ್ಳಗೆ, ಸ್ಲಿಮ್ ಆಗಿರಬೇಕು ಅಂತ ಮಾನದಂಡವಿದೆ. ಆದರೆ, ಶುಭಾ ಪೂಂಜಾ ಇದ್ಯಾವುದನ್ನೂ ನಂಬುವುದಿಲ್ಲ. ಅವರ ಅಭಿಮಾನಿಗಳಿಗೂ ಶುಭಾ ಸಣ್ಣಗಾಗುವುದು ಇಷ್ಟ ಇಲ್ವಂತೆ. "ಆಡಿಯನ್ಸ್ ನಿಮ್ಮನ್ನು ಹೇಗಿದ್ದಿರೋ ಹಾಗೇ ನೋಡಲು ಇಷ್ಟಪಡುತ್ತಾರೆ. ಹಾಗೇ ಇರಿ, ಹೀಗೆ ಇರಿ ಅಂತ ಹೇಳುವುದಿಲ್ಲ. ನನ್ನನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ, ನನ್ನನ್ನು ಇಷ್ಟಪಡುವ ಬಹಳಷ್ಟು ಜನ ನೀನು ಗುಂಡಗೆ ಇದ್ದೀಯ ಅಂತಾರೆ. ನಾನು ಸಣ್ಣ ಆಗುವುದನ್ನು ಇಷ್ಟನೇ ಪಡೋದಿಲ್ಲ." ಎಂದು ಶುಭಾ ಪೂಂಜಾ ಹೇಳಿಕೊಂಡಿದ್ದಾರೆ.
"ಗುಂಡು ಗುಂಡಗೆ ನೋಡುವುದಕ್ಕೆ ಇಷ್ಟ"
ಸಿನಿಪ್ರಿಯರು ಶುಭಾ ಪೂಂಜಾರನ್ನು ಗುಂಡು ಗುಂಡಗೆ ನೋಡುವುದಕ್ಕೆ ಇಷ್ಟ ಪಡುತ್ತಾರಂತೆ. ಸಣ್ಣಗಾದರೆ ವೀಕ್ ಆಗಿ ಕಾಣಿಸುತ್ತೀರಾ ಅಂತಾರೆ. "ನಾನು ಸಣ್ಣ ಆಗಿ ಹೋದಾಗಲೆಲ್ಲಾ, ಏನು ಮೇಡಂ ವೀಕ್ ಆಗಿ ಕಾಣುತ್ತಿದ್ದೀರ. ನೀವು ಗುಂಡು ಗುಂಡಗೆ ಚೆನ್ನಾಗಿದ್ದೀರ. ನಿಮ್ಮನ್ನು ಗುಂಡು ಗುಂಡಗೆ ನೋಡುವುದಕ್ಕೆ ಇಷ್ಟ ಪಡುತ್ತೇವೆ ಎನ್ನುತ್ತಾರೆ. ಹಾಗಿದ್ದರೂ ಶೇ.10ರಷ್ಟು ಪ್ರೇಕ್ಷಕರು ಮೇಡಂ ನೀವು ಸಣ್ಣಗೆ ಆದರೆ, ಸಖತ್ ಆಗಿ ಕಾಣಿಸುತ್ತೀರಾ ಅಂತಾರೆ. " ಎಂದು ಹೇಳಿದ್ದಾರೆ.

"ಆ ಚಾಯ್ಸ್ ನನಗೆ ಬಿಟ್ಟಿದ್ದು"
ಶೇ.90ರಷ್ಟು ಮಂದಿ ದಪ್ಪಗೆ ಇರಿ ಅಂದರೆ, ಇನ್ನು 10 ಪರ್ಸೆಂಟ್ ಮಂದಿ ಸಣ್ಣಾಗಾಗಿ ಅಂತಾರಂತೆ. "ಈಗ ಆ ಚಾಯ್ಸ್ ನನಗೆ ಬಿಟ್ಟಿದ್ದು, ನನಗೆ ಆಡಿಯನ್ಸ್ ಹೇಗೆ ಇಷ್ಟ ಪಡುತ್ತಾರೋ ಹಾಗೆ ಇರುತ್ತೇನೆ. ಶೇ.90ರಷ್ಟು ಮಂದಿ ಹೇಗೆ ನೋಡುವುದಕ್ಕೆ ಇಷ್ಟ ಪಡುತ್ತಾರೆ ಹಾಗೆ ನಾನು ಆರಾಮಾಗಿ ಇರುತ್ತೇನೋ. ಇಲ್ಲಾ ತುಂಬಾ ತಲೆ ಕೆಡಿಸಿಕೊಂಡು ಫುಲ್ ಸಣ್ಣ ಆಗಿ ನನಗೂ ಇಷ್ಟವಿಲ್ಲದೆ. ಆರೋಗ್ಯ ಹದಗೆಡಿಸಿಕೊಳ್ಳುತ್ತೇನೋ ಅದು ನನಗೆ ಬಿಟ್ಟಿದ್ದು." ಎನ್ನುತ್ತಾರೆ ಶುಭಾ.
"ನಾನೂ ಯೋಗ ಮಾಡುತ್ತೇನೆ"
ಶುಭಾ ಪೂಂಜಾ ಇಷ್ಟು ದಪ್ಪಗಿದ್ದರೂ, ದೇಹಕ್ಕೆ ಕಸರತ್ತು ಕೊಡುತ್ತಾರೆ. ಇವರೂ ಕೂಡ ಯೋಗ, ವರ್ಕ್‌ಔಟ್ ಮಾಡುತ್ತೇನೆ ಎಂದು ಹೇಳಿಕೊಂಡಿದ್ದಾರೆ. "ಹಾಗಂತ ನಾನು ಫಿಸಿಕ್ ಅನ್ನು ಕಾಪಾಡಿಕೊಳ್ಳಲ್ಲ ಅಂತಲ್ಲ. ನಾನು ತುಂಬಾ ಯೋಗ ಮಾಡುತ್ತೇನೆ. ನಾನು ತುಂಬಾ ವರ್ಕ್‌ಔಟ್ ಮಾಡುತ್ತೇನೆ. ಆದರೆ, ನಾನು ತೀರಾ ಡಯೆಟ್ ಮಾಡಿಕೊಂಡು, ತೀರಾ ತಲೆ ಕೆಡಿಸಿಕೊಂಡು ಮಾಡುವುದಕ್ಕೆ ಹೋಗುವುದಿಲ್ಲ. ಯಾಕಂದ್ರೆ, ನನಗೂ ಸ್ವಲ್ಪ ಗುಂಡು ಗುಂಡಗೆ ಇರುವುದಕ್ಕೆ ಇಷ್ಟ" ಎಂದು ಶುಭಾ ಪೂಂಜಾ ಹೇಳಿಕೊಂಡಿದ್ದಾರೆ.


Click it and Unblock the Notifications











