ತರುಣ್ ಕೈ ಹಿಡಿಯಲಿರುವ ಸೋನಾಲ್‌ಗೆ ಇನ್ಮುಂದೆ ಪ್ರತಿ ವರ್ಷ ಹುಟ್ಟುಹಬ್ಬ ತುಂಬಾನೇ ವಿಶೇಷ: ಯಾಕೆ?

'ಕಾಟೇರ' ಡೈರೆಕ್ಟರ್ ತರುಣ್ ಸುಧೀರ್ 'ಬನಾರಸ್' ಬ್ಯೂಟಿ ಸೋನಾಲ್ ಮಾಂಥೆರೋ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇಬ್ಬರ ಮದುವೆಯನ್ನು ಕಣ್ತುಂಬಿಕೊಳ್ಳುವುದಕ್ಕೆ ಅವರ ಅಭಿಮಾನಿಗಳು ಹಾಗೂ ಸ್ಯಾಂಡಲ್‌ವುಡ್‌ನ ಆಪ್ತರು ತುದಿಗಾಲಲ್ಲಿ ನಿಂತಿದ್ದಾರೆ. ಇದೇ ವೇಳೆ ಈ ಜೋಡಿ ತಮ್ಮ ಮದುವೆಯನ್ನು ವಿಶೇಷವಾಗಿ ಆಗುವುದಕ್ಕೆ ನಿರ್ಧರಿಸಿದೆ.

ಪ್ರೀ ವೆಡ್ಡಿಂಗ್ ಫೋಟೊಶೂಟ್‌ನಿಂದ ಹಿಡಿದು ಆಮಂತ್ರಣ ಪತ್ರಿಕೆವರೆಗೂ ಈ ಜೋಡಿ ಗಮನ ಸೆಳೆದಿದೆ. ಥಿಯೇಟರ್‌ ಒಳಗೆ ಫೋಟೊಶೂಟ್ ಮಾಡಿಸಿ, ಫಿಲ್ಮಿ ಜೋಡಿ ಅನ್ನೋದನ್ನು ಸಾಬೀತು ಮಾಡಿದೆ. ಇನ್ನೊಂದು ಕಡೆ ಪರಿಸರ ಸ್ನೇಹಿ ಮದುವೆ ಆಮಂತ್ರಣ ಪತ್ರಿಕೆಯನ್ನು ನೀಡಿ ಭೇಷ್ ಎನಿಸಿಕೊಂಡಿದೆ. ಈ ಕಾರಣಕ್ಕೆ ಎಲ್ಲರ ಗಮನವೀಗ ತರುಣ್ ಸುಧೀರ್ ಹಾಗೂ ಸೋನಾಲ್ ಮಾಂಥೆರೋ ಮದುವೆ ಮೇಲೆ ನಿಂತಿದೆ.

Kannada actress Sonal Monteiro getting married to Tharun Sudhir on her birthday

ಇದೆಲ್ಲ ಒಂದು ಕಡೆಯಾದರೆ, ಈ ಜೋಡಿ ಮದುವೆ ಆಗುತ್ತಿರುವ ದಿನ ಕೂಡ ಅಷ್ಟೇ ವಿಶೇಷ. ವೈವಾಹಿಕ ಜೀವನಕ್ಕೆ ಕಾಲಿಡುವುದಕ್ಕೆ ಈ ಜೋಡಿ ವಿಶೇಷ ದಿನವನ್ನು ಆಯ್ಕೆ ಮಾಡಿಕೊಂಡಿದೆ. ಆಗಸ್ಟ್ 10 ಹಾಗೂ ಆಗಸ್ಟ್ 11 ಎರಡು ದಿನ ಅದ್ಧೂರಿಯಾಗಿ ಮದುವೆ ಆಗುವುದಕ್ಕೆ ತರುಣ್ ಹಾಗೂ ಸೋನಾಲ್ ನಿರ್ಧರಿಸಿದ್ದಾರೆ. ಅಷ್ಟಕ್ಕೂ ಆಗಸ್ಟ್ 11ರಂದೇ ಮದುವೆ ಆಗುವುದಕ್ಕೊಂದು ವಿಶೇಷ ಕಾರಣವಿದೆ.

ಸೋನಾಲ್ ಮಾಂಥೆರೋ ಕನ್ನಡ ಚಿತ್ರರಂಗದ ಉದಯೋನ್ಮುಖ ನಟಿ. ಇವರ ಕೈಯಲ್ಲಿ ಸಾಕಷ್ಟು ಆಫರ್‌ಗಳು ಇವೆ. ಕನ್ನಡದ ಉತ್ತಮ ಸಿನಿಮಾಗಳಲ್ಲಿ ಸೋನಾಲ್ ಮಾಂಥೆರೋ ನಟಿಸಿದ್ದಾರೆ. ಈಗ ವೈವಾಹಿಕ ಜೀವನಕ್ಕೆ ಕಾಲಿಡುವುದಕ್ಕೆ ಸೋನಾಲ್ ಸಜ್ಜಾಗಿದ್ದಾರೆ. ಆದರೆ, ಆಗಸ್ಟ್ 11 ಸೋನಾಲ್‌ ಮಾಂಥೆರೋಗೆ ವಿಶೇಷ ದಿನ.

Kannada actress Sonal Monteiro getting married to Tharun Sudhir on her birthday

ಆಗಸ್ಟ್ 11 ಕನ್ನಡದ ನಟಿ ಸೋನಾಲ್ ಮಾಂಥೆರೋ ಹುಟ್ಟುಹಬ್ಬ. ಅದೇ ದಿನ 'ಕಾಟೇರ' ನಿರ್ದೇಶಕ ತರುಣ್ ಸುಧೀರ್ ಅವರೊಂದಿಗೆ ಸಪ್ತಪದಿಯನ್ನು ತುಳಿಯುತ್ತಿದ್ದಾರೆ. ಹೀಗಾಗಿ ಇನ್ಮುಂದೆ, ಸೋನಾಲ್ ಮಾಂಥೆರೋ ತನ್ನ ಹುಟ್ಟುಹಬ್ಬ ಹಾಗೂ ವಿವಾಹ ವಾರ್ಷಿಕೋತ್ಸವವನ್ನು ಒಂದೇ ದಿನ ಆಚರಣೆ ಮಾಡಿಕೊಳ್ಳಲಿದ್ದಾರೆ.

ಅಷ್ಟಕ್ಕೂ ಸೋನಾಲ್ ಮಾಂಥೆರೋ ಹುಟ್ಟುಹಬ್ಬದಂದೇ ಮದುವೆ ಆಗಬೇಕು ಅನ್ನೋದು ಯಾರ ಪ್ಲ್ಯಾನ್ ಅನ್ನೋದು ಇನ್ನಷ್ಟೇ ಗೊತ್ತಾಗಬೇಕು. ಸಹಜವಾಗಿ ತರುಣ್ ಸುಧೀರ್ ಯಾವುದೇ ಸಿನಿಮಾ ಮಾಡಿದರೂ, ಅದನ್ನು ಪರ್ಫೆಕ್ಟ್ ಆಗಿ ಪ್ಲ್ಯಾನ್ ಮಾಡಿ ಶೂಟ್ ಮಾಡುತ್ತಾರೆ. ಅಂದುಕೊಂಡ ದಿನವೇ ರಿಲೀಸ್ ಮಾಡುತ್ತಾರೆ. ಹಾಗೇ ಮದುವೆಯನ್ನೂ ಕೂಡ ಹಾಗೇ ಪ್ಲ್ಯಾನ್ ಮಾಡಿರಬಹುದು ಎಂದು ಊಹೆ ಮಾಡಲಾಗಿದೆ. ಈಗಾಗಲೇ ತಮ್ಮ ಫ್ಯಾನ್ಸ್ ಕೊಟ್ಟಿರುವ ಸರ್ಪ್ರೈಸ್‌ಗಳು ಅದನ್ನೇ ಹೇಳುತ್ತಿವೆ.

ಅಂದ್ಹಾಗೆ ಆಗಸ್ಟ್ 10ರಂದು ತರುಣ್ ಸುಧೀರ್ ಹಾಗೂ ಸೋನಾಲ್ ಮಾಂಥೆರೋ ಮದುವೆ ಆರತಕ್ಷತೆ ಇರುತ್ತೆ. ಆಗಸ್ಟ್ 11ರಂದು ಈ ಜೋಡಿ ಹಿಂದೂ ಸಂಪ್ರದಾಯದಂತೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಈ ಮದುವೆ ಸಮಾರಂಭ ಬೆಂಗಳೂರಿನ ಕೆಂಗೇರಿ ಬಳಿಯ ಪೂರ್ಣಿಮಾ ಕನ್ವೆಷನ್ ಹಾಲ್‌ನಲ್ಲಿ ನಡೆಯಲಿದೆ. ಇಷ್ಟೇ ಅಲ್ಲದೆ, ಕ್ರಿಶ್ಚಿಯನ್ ಸಂಪ್ರದಾಯದಂತೆ ಮತ್ತೊಮ್ಮೆ ಮದುವೆ ನಡೆಯಲಿದೆ.

More from Filmibeat

English summary
Sonal Monteiro getting married to Tharun Sudhir on her birthday:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X