ಹಿರಿಯ ನಟಿ ಹೇಮಾ ಚೌಧರಿಗೆ ಶಸ್ತ್ರಚಿಕಿತ್ಸೆ; ಐಸಿಯುನಲ್ಲಿರೋ ನಟಿಯ ಆರೋಗ್ಯದ ಬಗ್ಗೆ ತಾರಾ ಹೇಳಿದ್ದೇನು?
ಕನ್ನಡ ಚಿತ್ರರಂಗದ ಹಿರಿಯ ನಟಿ ಹೇಮಾ ಚೌಧರಿ ಇಂದು (ಡಿಸೆಂಬರ್ 20) ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಹಿರಿಯ ನಟಿಯನ್ನು ದಾಖಲು ಮಾಡಲಾಗಿತ್ತು. ನಟಿಯ ಆರೋಗ್ಯ ಸ್ಥಿತಿ ತೀರಾ ಗಂಭೀರವಿದೆ ಎಂದು ಹೇಳಲಾಗಿತ್ತು.
ಹಿರಿಯ ನಟಿ ಹೇಮಾ ಚೌಧರಿಗೆ ಬ್ರೈನ್ ಹ್ಯಾಮರೇಜ್ ಆಗಿದೆ ಎಂದು ವರದಿಯಾಗಿತ್ತು. ಸದ್ಯ ಹೇಮಾ ಚೌಧರಿ ಆರೋಗ್ಯದ ಬಗ್ಗೆ ವೈದ್ಯರು ಖಚಿತ ಮಾಹಿತಿ ನೀಡಿಲ್ಲ. ಆದರೆ, ಹೇಮಾ ಚೌಧರಿಯ ಆರೋಗ್ಯ ವಿಚಾರಿಸುವುದಕ್ಕೆ ಕನ್ನಡದ ಮತ್ತೊಬ್ಬ ಹಿರಿಯ ನಟಿ ತಾರಾ ಅನುರಾಧ ಆಸ್ಪತ್ರೆಗೆ ಭೇಟಿ ಕೊಟ್ಟಿದ್ದರು.

ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಹಿರಿಯ ನಟಿ ಹೇಮಾ ಚೌಧರಿಯ ಆರೋಗ್ಯದ ಬಗ್ಗೆ ವೈದ್ಯರು ನೀಡಿದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಹಿರಿಯ ನಟಿ ಹೇಮಾ ಚೌಧರಿಗೆ ವೈದ್ಯರು ಮಾಡಿದ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದ್ದು, ಐಸಿಯುಗೆ ಶಿಫ್ಟ್ ಮಾಡಲಾಗಿದೆ ಎಂದು ಹೇಳಿದ್ದಾರೆ. ಹಿರಿಯ ನಟಿಯ ಬಗ್ಗೆ ತಾರಾ ನೀಡಿದೆ ಮಾಹಿತಿ ಹೀಗಿದೆ.
"ಈಗ ನೋಡಿಕೊಂಡು ಬಂದೆ ಐಸಿಯುಗೆ ಶಿಫ್ಟ್ ಮಾಡಿದ್ದಾರೆ. ವೈದ್ಯರು ಹೇಳಿರುವ ಪ್ರಕಾರ, ಅವರು ಸಂಪೂರ್ಣವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ನಾನು ಅವರನ್ನು ಭೇಟಿ ಮಾಡಿದಾಗ, ಅವರು ನನ್ನನ್ನು ಗುರುತಿಸಿದ್ರು. ನಾರ್ಮಲ್ ಆಗಿ ಹೊರ ಬರುತ್ತಾರೆ ಎಂದು ವೈದ್ಯರು ಹೇಳಿದ್ದಾರೆ. ಅದೇ ನಮಗೆ ಸಮಾಧಾನ ಆಗಿದ್ದು," ಎಂದು ಕನ್ನಡದ ಹಿರಿಯ ನಟಿ ತಾರಾ ಹೇಳಿದ್ದಾರೆ.

ಇಷ್ಟೇ ಅಲ್ಲದೆ ಮಧ್ಯಾಹ್ನ ಭೇಟಿ ಕೂಡ ತಾರಾ ಆಸ್ಪತ್ರೆಗೆ ಭೇಟಿ ನೀಡಿ, ಹಿರಿಯ ನಟಿಯ ಆರೋಗ್ಯ ವಿಚಾರಿಸಿದ್ದರು. "ಮಧ್ಯಾಹ್ನ ಬಂದಾಗ ಚಿಕಿತ್ಸೆ ನಡೆಯುತ್ತಿತ್ತು. ಈಗ ಅವರನ್ನು ಐಸಿಯುಗೆ ಶಿಫ್ಟ್ ಮಾಡಿದ್ದಾರೆ. ಆಪರೇಷನ್ ಸಕ್ಸಸ್ ಆಗಿದೆ. ನಾರ್ಮಲ್ ಆಗುತ್ತಾರೆ ಎಂದು ವೈದ್ಯರು ಹೇಳಿದ್ದಾರೆ. ಅವರ ಮಗ ಪುರೋಹಿತ್ ವಿದೇಶದಿಂದ ಬರುತ್ತಿದ್ದಾನೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಬರಬಹುದು." ಎಂದು ನಟಿ ತಾರಾ ಹೇಳಿದ್ದಾರೆ.
"ಹೇಮಮ್ಮ ನಮಗೆಲ್ಲ ತುಂಬಾನೇ ಪ್ರೋತ್ಸಾಹ ನೀಡೋದು ಆಗಲಿ. ನನಗೆ ಬೆಂಬಲ ನೀಡುವುದೇ ಆಗಲಿ. ಮೊನ್ನೆನೂ ಅಷ್ಟೇ ಲೀಲಮ್ಮ ಅವರನ್ನು ನೋಡುವುದಕ್ಕೆ ಬಂದಾಗಲೂ ನಾನು ನಿಮ್ಮೊಂದಿಗೆ ಮಾತಾಡುತ್ತಿದ್ದೆ ಅವರೊಂದಿಗೆ ಮಾತಾಡುವುದಕ್ಕೆ ಆಗಲಿಲ್ಲ. ಮನೆಗೆ ಹೋದ ಕೂಡಲೇ ಫೋನ್ ಮಾಡಿದ್ರು. ಯಾಕೆ ನಿಮಗೆ ಹುಷಾರಿಲ್ವಾ? ಅಂದಾಗ. ಇಲ್ಲ ಇಷ್ಟು ದಿನ ಮಗನೊಂದಿಗೆ ಇದ್ದೆ. ಅದಕ್ಕೆ ಸ್ವಲ್ಪ ಸುಸ್ತಾಗಿದೆ ಅಂದ್ರು. ಏನೂ ಆಗಲ್ಲಪ್ಪ ಚೆನ್ನಾಗಿದ್ದಾರೆ ಅನ್ನೋದಷ್ಟೇ ಸಮಾಧಾನ." ಎಂದು ಅವರೊಂದಿಗಿನಿ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.


Click it and Unblock the Notifications











