"ತಮಿಳಿನಿಂದ ಹುಟ್ಟಿದ್ದು ಕನ್ನಡ"; ಕಮಲ್ ಹಾಸನ್ ಹೇಳಿಕೆಗೆ ಆಕ್ರೋಶ

ಮಣಿರತ್ನಂ ಹಾಗೂ ಕಮಲ್ ಹಾಸನ್ ನಟನೆಯ 'ಥಗ್ ಲೈಫ್' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಇತ್ತೀಚೆಗೆ ಚೆನ್ನೈನಲ್ಲಿ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮ ನಡೀತಿದೆ. ಇದಕ್ಕೆ ಕನ್ನಡ ನಟ ಶಿವರಾಜ್‌ಕುಮಾರ್ ಮುಖ್ಯ ಅತಿಥಿಯಾಗಿ ಹೋಗಿದ್ದರು.

ಕಮಲ್ ಹಾಸನ್ ದೊಡ್ಡ ಅಭಿಮಾನಿ ಶಿವಣ್ಣ. ಈ ಬಗ್ಗೆ ಸಾಕಷ್ಟು ಸಂದರ್ಭಗಳಲ್ಲಿ ಹೇಳಿಕೊಂಡಿದ್ದಾರೆ. ಇನ್ನು ಕಮಲ್ ಹಾಗೂ ಅಣ್ಣಾವ್ರ ಕುಟುಂಬದ ನಡುವೆ ಬಹಳ ಆತ್ಮೀಯ ಒಡನಾಟವಿದೆ. ಈ ಬಗ್ಗೆ ಕೂಡ ವೇದಿಕೆಯಲ್ಲಿ ಇಬ್ಬರೂ ಮಾತನಾಡಿದ್ದಾರೆ. 'ಥಗ್ ಲೈಫ್' ಸಿನಿಮಾ ನೋಡಲು ತಾವು ಬಹಳ ಉತ್ಸುಕರಾಗಿರುವುದಾಗಿ ಶಿವಣ್ಣ ಹೇಳಿದ್ದಾರೆ.

Kannada born from Tamil Kamal Haasan s Statement on Kannada-Tamil Origins Sparks Debate

ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಕಮಲ್ ಹಾಸನ್ 30 ನಿಮಿಷಗಳ ಕಾಲ ಮಾತನಾಡಿದರು. ಸಾಕಷ್ಟು ಸಂಗತಿಗಳನ್ನು ಮೆಲುಕು ಹಾಕಿದ್ದರು. ಡಾ. ರಾಜ್‌ಕುಮಾರ್ ಜೊತೆಗಿನ ಒಡನಾಟದ ಬಗ್ಗೆ ನೆನಪಿಸಿಕೊಂಡಿದ್ದರು. ಪ್ರತಿಭೆಯನ್ನು ಪ್ರೋತ್ಸಾಹಿಸುವ ಗುಣವನ್ನು ನಾನು ಕಲಿತ್ತಿದ್ದೇ ಅಣ್ಣಾವ್ರಿಂದ ಎಂದು ಕಮಲ್ ಹಾಸನ್ ಹೇಳಿದ್ದಾರೆ. ನನ್ನ ಸಿನಿಮಾಗಳಿಗೆ ಕ್ಲಾಪ್ ಮಾಡಿ ಶುಭ ಕೋರಿದ್ದರು. ನನ್ನ ನಟನೆಗೆ ಬೆನ್ನು ತಟ್ಟಿದ್ದರು ಎಂದು ಕಮಲ್ ವಿವರಿಸಿದ್ದಾರೆ.

"ನಾನು ಎಲ್ಲದ್ದರ ಬಗ್ಗೆ ಮಾತನಾಡಿ ನಿಮ್ಮ(ಶಿವಣ್ಣ) ತಂದೆ ಬಗ್ಗೆ ಮಾತನಾಡದಿದ್ದರೆ ತಪ್ಪಾಗುತ್ತದೆ. ಇದನ್ನೆಲ್ಲಾ ನಾನು ನಿಮ್ಮ ತಂದೆಯಿಂದಲೇ ಕಲಿತ್ತಿದ್ದು. ಆ ಸನ್ನಿವೇಶದಲ್ಲಿ ಹೇಗಿ ನಟಿಸಿದ್ರಿ ಎಂದು ಅಣ್ಣಾವ್ರು ಕೇಳುತ್ತಿದ್ದರು. ಆಗ ನನಗಿನ್ನ 21 ವರ್ಷ ವಯಸ್ಸು. ರಾಜ್‌ಕುಮಾರ್ ಅಣ್ಣ ನನ್ನ ಬಳಿ ಕೇಳುತ್ತಿದ್ದರು. ಆ ದೃಶ್ಯ ಹೇಗೆ ಮಾಡಿದ್ರಿ, ಆಹಾ ಸೂಪರ್ ಎನ್ನುತ್ತಿದ್ದರು. ಇವ್ರು ನಿಜ ಹೇಳ್ತಿದ್ದಾರಾ, ಸುಮ್ನೆ ಹೇಳ್ತಾರಾ ಅನ್ನಿಸ್ತಿತ್ತು. ಆದ್ರೆ ಪ್ರತಿಬಾರಿ ಬೇರೊಬ್ಬರ ಮುಂದೆ ಇದನ್ನು ಹೇಳುತ್ತಿದ್ದರು" ಎಂದು ಕಮಲ್ ನೆನಪಿಸಿಕೊಂಡಿದ್ದಾರೆ.

ಮಾತು ಮುಂದುವರೆಸಿರುವ ಕಮಲ್ "ನನ್ನ 'ರಾಜ ಪಾರ್ವೈ' ಚಿತ್ರಕ್ಕೆ ಕ್ಲಾಪ್ ಮಾಡಿ ರಾಜ್‌ಕುಮಾರ್ ಅವ್ರು ಶುಭ ಕೋರಿದ್ದರು. ಬಳಿಕ ಬೆಂಗಳೂರಿನಲ್ಲಿ 'ಪುಷ್ಪಕ ವಿಮಾನ' ಸಿನಿಮಾ ಆರಂಭಿಸಿದಾಗ ಅದಕ್ಕೂ ಅವ್ರೇ ಕ್ಲಾಪ್ ಮಾಡಿದ್ದರು. ಇದು ಆ ಊರಿನಲ್ಲಿರುವ ನನ್ನ ಕುಟುಂಬ, ಅದಕ್ಕಾಗಿ ಶಿವಣ್ಣ ಇಲ್ಲಿ ಬಂದಿದ್ದಾರೆ. ತಮಿಳಿನಿಂದ ಹುಟ್ಟಿದ್ದು ನಿಮ್ಮ ಭಾಷೆ(ಕನ್ನಡ). ಹಾಗಾಗಿ ನೀವು ಅದರಲ್ಲಿ ಒಂದು" ಎಂದು ಕಮಲ್ ಹಾಸನ್ ತಿಳಿಸಿದ್ದಾರೆ.

ಅಣ್ಣಾವ್ರ ಕುಟುಂಬದ ಮೇಲಿನ ಕಮಲ್ ಹಾಸನ್ ಅಭಿಮಾನಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದರೆ ತಮಿಳಿನಿಂದ ಹುಟ್ಟಿದ್ದು ಕನ್ನಡ ಎನ್ನುವ ಅವರ ಹೇಳಿಕೆ ಕೆಲವರು ಚಕಾರ ಎತ್ತಿದ್ದಾರೆ. ಕನ್ನಡಕ್ಕೆ ತಮಿಳು ಮೂಲ ಅಲ್ಲ. ತಮಿಳಿಗಿಂತಲೂ ಬಹಳ ಹಳೆಯ ಭಾಷೆ ಕನ್ನಡ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಕಮಲ್ ಹೇಳಿಕೆ ಬಗ್ಗೆ ಪರೋ ವಿರೋಧ ಚರ್ಚೆ ನಡೆಯುತ್ತಿದೆ.

ಕಮಲ್ ಹಾಸನ್ ಹೇಳಿದ್ದು ಸರಿ ಎಂದು ತಮಿಳಿನ ಕೆಲವರು ವಾದಿಸುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಕನ್ನಡಿಗರು ಕನ್ನಡದ ಭಾಷೆಯ ಇತಿಹಾಸದ ಬಗ್ಗೆ ಪಾಠ ಮಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇದೇ ವಿಚಾರ ಬಹಳ ಚರ್ಚೆ ಆಗುತ್ತಿದೆ.

ದ್ರಾವಿಡ ಭಾಷೆಗಳಲ್ಲಿ ಒಂದಾಗಿರುವ ಕನ್ನಡ ಅತ್ಯಂತ ಪ್ರಾಚೀನ ಭಾಷೆ. ಸಂಶೋಧನೆಗಳ ಪ್ರಕಾರ ಕನ್ನಡ ಭಾಷೆ ಕ್ರಿ.ಪೂ. 3ನೇ ಶತಮಾನಕ್ಕಿಂತಲೂ ಹಳೆಯದು ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಕಮಲ್ ಹಾಸನ್ ಹೇಳಿಕೆಯನ್ನು ಕೆಲವರು ಒಪ್ಪಲು ಸಿದ್ಧರಿಲ್ಲ. ಇತಿಹಾಸ ಸರಿಯಾಗಿ ತಿಳಿದುಕೊಂಡು ಮಾತನಾಡಬೇಕು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಕೆಲ ಕನ್ನಡ ಸಿನಿಮಾಗಳಲ್ಲಿ ಕೂಡ ಕಮಲ್ ಹಾಸನ್ ನಟಿಸಿದ್ದಾರೆ. ಸಿನಿಮಾ ಮಾತ್ರವಲ್ಲದೇ ಮಕ್ಕಳ್ ನೀದಿಮಯ್ಯಂ ಪಕ್ಷ ಸ್ಥಾಪಿಸಿ ರಾಜಕೀಯರಂಗದಲ್ಲಿ ಕೂಡ ಗುರ್ತಿಸಿಕೊಂಡಿದ್ದಾರೆ.

More from Filmibeat

English summary
At the 'Thug Life' audio launch in Chennai, Kamal Haasan's remarks about Kannada originating from Tamil stirred controversy, overshadowing his emotional tribute to Dr. Rajkumar and bond with Shivarajkumar;
Read more about: kannada tamil kamal haasan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X