Tatsama Tadbhava: "ಒಂದೊಳ್ಳೆ ಸಿನಿಮಾ.. ಮೇಘನಾಗೋಸ್ಕರ 'ತತ್ಸಮ ತದ್ಭವ' ನೋಡ್ಬೇಕು" ತಾರೆಯರ ಒಕ್ಕೊರಲು!

ಕಲಾ ಸಾಮ್ರಾಟ್ ಚಿರಂಜೀವಿ ಸರ್ಜಾ ಅಗಲಿದ ಬಳಿಕ ಮೇಘನಾ ರಾಜ್ ನಟಿಸಿದ ಚೊಚ್ಚಲ ಸಿನಿಮಾವಿದು. ಇನ್ನೊಂದು ಅರ್ಥದಲ್ಲಿ 'ತತ್ಸಮ ತದ್ಭವ' ಸಿನಿಮಾ ಮೇಘನಾ ರಾಜ್ ಕಮ್‌ಬ್ಯಾಕ್ ಸಿನಿಮಾ ಕೂಡ ಹೌದು. ಹೀಗಾಗಿ ಈ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿದೆ.

ಪ್ರಜ್ವಲ್ ದೇವರಾಜ್ ಪೊಲೀಸ್ ಅಧಿಕಾರಿಯಾಗಿ ಈ ಸಿನಿಮಾ ಕಾಣಿಸಿಕೊಂಡಿದ್ದಾರೆ. ಇದು ಅವರ ರೆಗ್ಯೂಲರ್ ಮಾಸ್ ಸಿನಿಮಾಗಳಿಗೆ ಹೋಲಿಸಿದರೆ ವಿಭಿನ್ನ ಸಿನಿಮಾ ಎನ್ನಬಹುದು. ಇನ್ನು ಮೇಘನಾ ರಾಜ್ ಪಾತ್ರ ಟ್ರೈಲರ್‌ ಹಾಗೂ ಟೀಸರ್‌ನಿಂದಲೇ ಗಮನ ಸೆಳೆಯುತ್ತಿದೆ.

ಪನ್ನಗ ಭರಣ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದರೆ, ವಿಶಾಲ್ ನಿರ್ದೇಶನ ಮಾಡಿದ್ದಾರೆ. ಹಾಗೇ ವಾಸುಕಿ ವೈಭವ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಇದೇ ಸೆಪ್ಟೆಂಬರ್ 15ರಂದು ರಿಲೀಸ್ ಆಗಲಿರುವ ಈ ಸಿನಿಮಾವನ್ನು ಸೆಲೆಬ್ರೆಟಿಗಳಿಗಾಗಿ ತೋರಿಸಲಾಗಿದೆ. ಧ್ರುವ ಸರ್ಜಾ, ದಿಗಂತ್, ದೇವರಾಜ್, ಬಿ ಸಿ ಪಾಟೀಲ್ ಸೇರಿದಂತೆ ಹಲವು ಮಂದಿ ಸಿನಿಮಾ ನೋಡಿ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.

kannada-celebrity-reaction-tatsama-tadbhava

"ಇಂತಹ ಸಿನಿಮಾ ಮಾಡೋಕೆ ಧೈರ್ಯ ಬೇಕು"- ಧ್ರುವ ಸರ್ಜಾ

"ಈ ಸಿನಿಮಾವನ್ನು ಒಪ್ಪಿಕೊಳ್ಳುವುದಕ್ಕೆ ಒಂದು ಧೈರ್ಯ ಬೇಕು. ಪನ್ನಗಗೆ ಆ ಧೈರ್ಯವಿದೆ. ಡೈರೆಕ್ಟರ್ ನಿರೂಪಣೆ ಮಾಡಿದ್ದೇ ಒಂದು ವಿಭಿನ್ನವಾಗಿದೆ. ಇದೇ 15ನೇ ತಾರೀಕು ಸಿನಿಮಾ ರಿಲೀಸ್ ಆಗುತ್ತಿದೆ ನೋಡಿ ಅಂತ ಮನವಿ ಮಾಡಿಕೊಳ್ಳುತ್ತಿದ್ದೇನೆ" ಎಂದು ಧ್ರುವ ಸರ್ಜಾ ಹೇಳಿದ್ದಾರೆ.

"ಕನ್ನಡದಲ್ಲೊಂದು ಇಂಟ್ರೆಸ್ಟಿಂಗ್ ಸಿನಿಮಾ"-ದೇವರಾಜ್

"ನಾವು ಫ್ಯಾಮಿಲಿ ಸಮೇತ ಸಿನಿಮಾ ನೋಡಿದ್ದೇವೆ. ತುಂಬಾ ಚೆನ್ನಾಗಿದೆ ಸಿನಿಮಾ. ತುಂಬಾನೇ ಇಂಟ್ರೆಸ್ಟಿಂಗ್ ಆಗಿದೆ. ಕೊನೆ ಕ್ಷಣದವರೆಗೂ ಕುರ್ಚಿಯ ಅಂಚಿನಲ್ಲಿ ಕೂರಿಸಿದ ಸಿನಿಮಾವಿದು. ಸಿನಿಮಾ ತುಂಬಾನೇ ಅದ್ಭುತವಾಗಿ ಮಾಡಿದ್ದಾರೆ ಹುಡುಗರು. ಹೊಸ ಹುಡುಗ ವಿಶಾಲ್ ತುಂಬಾನೇ ಅದ್ಭುತವಾಗಿ ಡೈರೆಕ್ಟ್ ಮಾಡಿದ್ದಾನೆ. ಪ್ರಜ್ವಲ್ ಹಾಗೂ ಮೇಘನಾ ಚೆನ್ನಾಗಿ ಮಾಡಿದ್ದಾರೆ. ಹಾಡು ತುಂಬಾನೇ ಅದ್ಭುತವಾಗಿದೆ. ಕನ್ನಡದಲ್ಲಿ ಇದೊಂದು ಇಂಟ್ರೆಸ್ಟಿಂಗ್ ಸಿನಿಮಾ ಆಗುತ್ತೆ." ಎಂದು ದೇವರಾಜ್ ಅಭಿಪ್ರಾಯ ಪಟ್ಟಿದ್ದಾರೆ.

"ಇಂತಹ ಸಾಹಸಕ್ಕೆ ಯಾರೂ ಕೈ ಹಾಕಿಲ್ಲ"-ಬಿ ಸಿ ಪಾಟೀಲ್

"ತತ್ಸಮ ತದ್ಬವ ಬಹಳ ಅದ್ಭುತವಾದ ಸಿನಿಮಾ. ಕನ್ನಡ ಚಿತ್ರರಂಗದಲ್ಲಿ ಇಂತಹ ಸಾಹಸಕ್ಕೆ ಯಾರೂ ಕೈ ಹಾಕಿಲ್ಲ. ತುಂಬಾ ವಿಭಿನ್ನವಾದ ಒಂದು ಕಥೆ. ಪ್ರೇಕ್ಷಕರನ್ನು ಮೊದಲ ಫ್ರೇಮ್‌ನಿಂದ ಕೊನೆಯ ಫ್ರೇಮ್‌ವರೆಗೂ ಗಟ್ಟಿಯಾಗಿ ಹಿಡಿದಿಡುವ ಸಿನಿಮಾ. ಪ್ರೇಕ್ಷಕರಿಗೆ ಕೆಲಸ ಕೊಡುವ ಸಿನಿಮಾ. ಇಂತಹ ಸಿನಿಮಾಗಳು ಕನ್ನಡದಲ್ಲಿ ಬರಬೇಕು." ಎಂದಿದ್ದಾರೆ ಬಿ ಸಿ ಪಾಟೀಲ್.

"ಮಸ್ಟ್ ವಾಚ್ ಸಿನಿಮಾ"-ದಿಗಂತ್

"ತತ್ಸಮ ತದ್ಬವ ಸಿನಿಮಾವನ್ನು ನೋಡಿದೆ. ಇದೊಂದು ಸೈಕಾಲಜಿಕಲ್ ಥ್ರಿಲ್ಲರ್. ಕಥೆ ಚೆನ್ನಾಗಿದೆ. ಎಲ್ಲರ ಅಭಿನಯ ಅದ್ಭುತವಾಗಿದೆ. ವಾಸುಕಿ ವೈಭವ್ ಸೌಂಡ್ ಡಿಸೈನಿಂಗ್ ಕುತೂಹಲ ಮೂಡಿಸುತ್ತೆ. ಇದೊಂದು ಮಸ್ಟ್ ವಾಚ್ ಸಿನಿಮಾ." ಎಂದು ದಿಗಂತ್ ಹೇಳಿದ್ದಾರೆ.

kannada-celebrity-reaction-tatsama-tadbhava

"ಚಿರಂಜೀವಿ ಸರ್ಜಾ ಮೇಲಿಂದ ನೋಡುತ್ತಿದ್ದಾರೆ"- ಅಭಿಷೇಕ್ ಅಂಬರೀಷ್

"ನಮಗೆ ಸರ್ಜಾ ಫ್ಯಾಮಿಲಿ ಕ್ಲೋಸ್ ಅಂತೇನು ಹೊಗಳುತ್ತಿಲ್ಲ. ಸಿನಿಮಾದಲ್ಲಿ ಎಲ್ಲವೂ ಚೆನ್ನಾಗಿದೆ. ಎಲ್ಲಾ ಕನ್ನಡ ಚಿತ್ರ ಪ್ರೇಮಿಗಳು ಬಂದು ಹರಸುತ್ತೀರಾ ಎಂದು ನಂಬಿದ್ದೇನೆ. ನನ್ನ ಕಡೆಯಿಂದ ಮೇಘನಾ ಸರ್ಜಾ ಅವರಿಗೆ ಒಂದು ಮೆಸೇಜ್.. ಚಿರಂಜೀವಿ ಸರ್ಜಾ ಮೇಲಿಂದ ನೋಡುತ್ತಿದ್ದಾರೆ. ಅವರು ನಿಮ್ಮ ಬಗ್ಗೆ ತುಂಬಾನೇ ಹೆಮ್ಮೆ ಪಡುತ್ತಾರೆ. ಪ್ರಜ್ವಲ್, ಪನ್ನಗ ಹಾಗೂ ಡೈರೆಕ್ಟರ್ ವಿಶಾಲ್ ಹಾಗೂ ಎಲ್ಲರಿಗೂ ವಿಶ್ ಮಾಡುತ್ತೀನಿ" ಎನ್ನುತ್ತಾರೆ ಅಭಿಷೇಕ್ ಅಂಬರೀಶ್.

"ತುಂಬಾನೇ ಹೊಸತನದ ಸಿನಿಮಾ"- ಶ್ರಿನಗರ ಕಿಟ್ಟಿ

"ತುಂಬಾನೇ ಹೊಸತನ ಇರುವಂತಹ ಸಿನಿಮಾ. ತುಂಬಾ ಚೆಂದದ ಸಿನಿಮಾ. ಮೇಘನಾ, ಪ್ರಜ್ವಲ್, ನಿರ್ದೇಶಕ ಹಾಗೂ ಕಥೆ ಹೇಳುವ ರೀತಿ, ಪ್ಯಾಟ್ರನ್ ಆಗಬಹುದು ವಿಭಿನ್ನ ರೀತಿಯಲ್ಲಿದೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ." ಎಂದಿದ್ದಾರೆ ಶ್ರೀನಗರ ಕಿಟ್ಟಿ

"ದಶಕಗಳಿಗೊಮ್ಮೆ ಬರುವ ಸಿನಿಮಾ"-ನಾಗಾಭರಣ

"ನಾನು ಗಮನಿಸಿದ ಹಾಗೇ ಚಿತ್ರರಂಗ ದಶಕಗಳಿಗೆ ಒಮ್ಮೆ ತನ್ನ ಸಾಬೀತು ಮಾಡುತ್ತಾ ಹೋಗುತ್ತೆ. ಆ ದೃಷ್ಟಿಯಲ್ಲಿ ಕನ್ನಡದ ಹೊಸತನವನ್ನು ಹೇಳುತ್ತೆ ಅನ್ನೋದಾದರೆ, ತನ್ನ ತನವನ್ನು ಹೇಳುವಂತಹ ಸಿನಿಮಾ ಆಗಬೇಕಾಗುತ್ತೆ. ಅದು ಇಲ್ಲಿ ತತ್ಸವ ತದ್ಬವ ಆಗಿದೆ. ಈ ಸಿನಿಮಾ ನೋಡಿದಾಗ ನಿರ್ದೇಶಕನ ಜಾಣ್ಮೆ ಹಾಗೂ ಕಥೆ ಹೇಳುವ ಕ್ರಮವನ್ನು ಗುರುತಿಸಬಹುದು." ಎಂದು ಹಿರಿಯ ನಿರ್ದೇಶಕ ನಾಗಾಭರಣ ಹೇಳಿದ್ದಾರೆ.

"ಸಿಂಕ್ ಆಗಿಬಿಟ್ಟಿದ್ದೀನಿ"-ಸುಂದರ್ ರಾಜ್

"ಸಿನಿಮಾ ನೋಡಿದ ಮೇಲೆ ಸಿಂಕ್ ಆಗಿಬಿಟ್ಟಿದ್ದೀನಿ. ಏನು ಹೇಳಬೇಕು ಅಂತ ಗೊತ್ತಾಗುತ್ತಿಲ್ಲ. ಕನ್ನಡದಲ್ಲಿ ಒಂದು ವಿಭಿನ್ನವಾದ ಸಿನಿಮಾ. ಅದೇ ರೀತಿ ವಿಭಿನ್ನವಾದ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬಂದಿದೆ. ಎಲ್ಲರೂ ಹೇಳಿದ್ರು ಸೆಕೆಂಡ್ ಎಂಟ್ರಿ ಅಂತ. ಆದರೆ ನಾನು ಹೇಳುತ್ತೇನೆ. ಒಮ್ಮೆ ಸಿನಿಮಾಗೆ ಎಂಟ್ರಿ ಕೊಟ್ಟರೆ ಕೊನೆಯ ಉಸಿರು ಇರುವವರೆಗೂ ಇಲ್ಲೇ ಇರುತ್ತೇವೆ. ಚಿಕ್ಕದೊಂದು ಗ್ಯಾಪ್ ಅಷ್ಟೇ." ಎಂದು ಸುಂದರ್ ರಾಜ್‌ ಹೇಳಿದ್ದಾರೆ.

"ಮೇಘನಾಗೋಸ್ಕರ ಸಿನಿಮಾ ನೋಡಬೇಕು"- ಸುನೀಲ್ ರಾವ್

"ಮೇಘನಾ ರಾಜ್ ಎಂತಹ ಒಳ್ಳೆ ಸ್ಟಾರ್ ಅನ್ನೋದನ್ನು ಸಾಬೀತು ಮಾಡಿದ್ದಾರೆ. ಸುಂದರ್ ರಾಜ್ ಅವರು ಹೆಮ್ಮೆ ಪಡಬೇಕು. ಮೇಘನಾಗೋಸ್ಕರ ಈ ಸಿನಿಮಾ ನೋಡಬೇಕು. ಕನ್ನಡದಲ್ಲೊಂದು ಒಳ್ಳೆಯ ಸಿನಿಮಾ ಅನ್ನೋದಕ್ಕೆ ಈ ಸಿನಿಮಾ ನೋಡಬೇಕು" ಎಂದು ಸುನೀಲ್ ರಾವ್ ಹೇಳಿದ್ದಾರೆ.

"ಇದು ಚಿರು ಕನಸು"-ಮೇಘನಾ ರಾಜ್

"ಈ ಸಿನಿಮಾ ಚಿರು ಅವರ ಕನಸು. ಇದನ್ನು ಅವರಿಗಾಗಿಯೇ ಮಾಡಿರೋದು. ಇದು ಚಿರಂಜೀವಿ ಸರ್ಜಾ ಅವರಿಗೆ ಅರ್ಪಣೆ. ಇದು ಎರಡು ವರ್ಷದ ಜರ್ನಿ. ಇಲ್ಲಿವರೆಗೂ ಬಂದಿದೆ. ನಮ್ಮ ಸಿನಿಮಾ ಸ್ನೇಹಿತರು ಬಂದಿತ್ತು. ನಮ್ಮ ತಂಡವನ್ನು ಸಪೋರ್ಟ್ ಮಾಡಿದೆ. ತತ್ಸಮ ತದ್ಬವ ಇದೇ ತಿಂಗಳ 15ಕ್ಕೆ ರಿಲೀಸ್ ಆಗಿದೆ. ಮುಂದೆನೂ ಎಲ್ಲರೂ ಸಪೋರ್ಟ್ ಮಾಡಬೇಕು" ಅಂತ ಮೇಘನಾ ರಾಜ್ ಹೇಳಿದ್ದಾರೆ.

More from Filmibeat

English summary
Kannada Celebrity reaction on Meghana Raj and Prajwal movie Tatsama tadbhava
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X