'ಉಪಾಧ್ಯಕ್ಷ'ರು ಡಬ್ಬಿಂಗ್ ಶುರು ಮಾಡಿದ್ರು: ಶೀಘ್ರದಲ್ಲೇ ಸಿಗುತ್ತೆ ಗುಡ್ ನ್ಯೂಸ್!
ಒಂದಿಷ್ಟು ಸಿನಿಮಾಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಚಿಕ್ಕಣ್ಣ ಬಹಳ ಬೇಡಿಕೆ ಇದೆ. ಸೆಟ್ಟೇರಿರೋ ಸೂಪರ್‌ಸ್ಟಾರ್ ಸಿನಿಮಾಗಳಲ್ಲಿ ಚಿಕ್ಕಣ್ಣ ಇರಲೇಬೇಕು. ಇಲ್ಲದೇ ಹೋದರೆ ಕಾಮಿಡಿ ಅನ್ನೋದೇ ಸಿನಿಮಾದಿಂದ ಕಣ್ಮರೆಯಾಗಿರುತ್ತೆ.
ಹೀರೊ ಆಗೋದೇ ಇಲ್ಲ ಅಂತಿದ್ದ ಚಿಕ್ಕಣ್ಣ ಕೊನೆಗೂ 'ಉಪಾಧ್ಯಕ್ಷ'ರಾಗಿ ಅಖಾಡಕ್ಕಿಳಿಯೋಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಅದರಂತೆ ಸಿನಿಮಾ ಭರ್ಜರಿಯಾಗಿ ಆರಂಭ ಆಗಿತ್ತು. ಸದ್ಯ ಸಿನಿಮಾದ ಬಹುತೇಕ ಶೂಟಿಂಗ್ ಮುಗಿದಿದ್ದು ಡಬ್ಬಿಂಗ್‌ನಲ್ಲಿ ಬ್ಯುಸಿಯಾಗಿದೆ ತಂಡ.
ಮೈಕ್ ಮುಂದೆ ಚಿಕ್ಕಣ್ಣ ಡೈಲಾಗ್
'ಅಧ್ಯಕ್ಷ' ಸಿನಿಮಾದಲ್ಲಿ 'ಉಪಾಧ್ಯಕ್ಷ'ನಾಗಿ ಫೇಮಸ್ ಆಗಿದ್ದ ಚಿಕ್ಕಣ್ಣ ಅದೇ ಟೈಟಲ್ ಇಟ್ಕೊಂಡು ಹೀರೊ ಆಗಿದ್ದಾರೆ. ಅನಿಲ್ ಕುಮಾರ್ ಈ ಸಿನಿಮಾ ಆಕ್ಷನ್ ಕಟ್ ಹೇಳಿದ್ದು, ಸಿನಿಮಾದ ಟಾಕಿ ಪೋಷನ್ ಬಹುತೇಕ ಮುಗಿದೆ. ಇನ್ನು ಕೇವಲ ಸಾಂಗ್‌ಗಳಷ್ಟೇ ಬಾಕಿ ಉಳಿದಿದೆ.

ಈ ಬೆನ್ನಲ್ಲೇ ಚಿತ್ರತಂಡ ಡಬ್ಬಿಂಗ್ ಅನ್ನು ಶುರು ಮಾಡಿದೆ. ಚಿಕ್ಕಣ್ಣನಿಂದ ಡಬ್ಬಿಂಗ್ ಭರ್ಜರಿಯಾಗಿ ಆರಂಭ ಆಗಿದ್ದು, ಆದಷ್ಟು ಬೇಗ ಮುಗಿಸಿ, ಸಿನಿಪ್ರಿಯರಿಗೆ ಸಿನಿಮಾ ಟೀಸರ್ ಹಾಗೂ ಟ್ರೈಲರ್ ತೋರಿಸಲು ಸಜ್ಜಾಗಿದ್ದಾರೆ.
ಇದು ರಿಮೇಕ್ ಅಲ್ಲ ಸ್ವಮೇಕ್
ಅಂದ್ಹಾಗೆ ಇದು 'ಅಧ್ಯಕ್ಷ' ಸಿನಿಮಾದ ಮುಂದುವರೆದ ಭಾಗ. ಸಿನಿಮಾ ಎಲ್ಲಿಗೆ ಕೊನೆಯಾಗಿತ್ತೋ ಅಲ್ಲಿಂದ 'ಉಪಾಧ್ಯಕ್ಷ'ನ ಆರ್ಭಟ ಆರಂಭ ಆಗಲಿದೆ. ಈ ಮಾತನ್ನ ನಿರ್ದೇಶಕ ಅನಿಲ್ ಕುಮಾರ್ ಸಿನಿಮಾ ಮುಹೂರ್ತದ ದಿನದಂದೇ ಹೇಳಿದ್ದರು. ಹೀಗಾಗಿ ಇದು ಪಕ್ಕಾ ಸ್ವಮೇಕ್ ಸಿನಿಮಾ.
'ಉಪಾಧ್ಯಕ್ಷ' ಔಟ್ ಅಂಡ್ ಕಾಮಿಡಿ ಸಿನಿಮಾ. ಆರಂಭದಿಂದ ಸಿನಿಮಾ ಮುಗಿಯುವವರೆಗೂ ಚಿಕ್ಕಣ್ಣ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತಾರೆ ಅನ್ನೋ ಭರವಸೆಯನ್ನೂ ನಿರ್ದೇಶಕರು ನೀಡಿದ್ದಾರೆ. ಹೀಗಾಗಿ ಕಾಮಿಡಿ ಸಿನಿಮಾ ಪ್ರಿಯರಿಗೆ ಈ ಸಿನಿಮಾ ಇಷ್ಟ ಆಗಬಹುದು ಅನ್ನೋ ನಿರೀಕ್ಷೆಯಿದೆ.

'ರಾಬರ್ಟ್' ನಿರ್ಮಾಪಕನೇ ಪ್ರಡ್ಯೂಸರ್
'ರಾಬರ್ಟ್' ಸಿನಿಮಾ ವೇಳೆನೇ 'ಉಪಾಧ್ಯಕ್ಷ' ಸಿನಿಮಾ ಮಾಡುವ ಬಗ್ಗೆ ಪ್ಲ್ಯಾನ್ ಆಗಿತ್ತು. ಆದರೆ, 'ರಾಬರ್ಟ್' ರಿಲೀಸ್ ಆದ ಬಳಿಕ ಸಿನಿಮಾ ಸೆಟ್ಟೇರಿದ್ದು, ಈಗ ಮುಗಿಯುವ ಹಂತಕ್ಕೆ ಬಂದಿದೆ. ಇನ್ನೇನು ಹಾಡುಗಳ ಶೂಟಿಂಗ್ ಮುಗಿದರೆ, ಸಿನಿಮಾ ರಿಲೀಸ್‌ಗೆ ರೆಡಿಯಾಗುತ್ತೆ.
ಅಂದ್ಹಾಗೆ ಸಾಧುಕೋಕಿಲ ಅವರ ಲೂಪ್ ಸ್ಟುಡಿಯೋದಲ್ಲಿ ಡಬ್ಬಿಂಗ್ ನಡೆಯುತ್ತಿದೆ. ಚಿಕ್ಕಣ್ಣ ಜೊತೆ ನಾಯಕಿಯಾಗಿ ಮಲೈಕಾ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗೇ ಸಾಧುಕೋಕಿಲ, ರವಿಶಂಕರ್, ವೀಣಾಸುಂದರ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದು, ಅರ್ಜುನ್ ಜನ್ಯ ಸಂಗೀತ ನಿರ್ದೇಶನವಿದೆ.


Click it and Unblock the Notifications











