ಕೋಮಲ್ ಹೊಸ ಸಿನಿಮಾದ ಟೈಟಲ್ ʼತೆನಾಲಿ ಡಿಎ LLBʼ; ಅಕ್ಷಯ್ ಸಿನಿಮಾ 'ಜಾಲಿ LLB' ರಿಮೇಕ್ ಅಲ್ವೇ ಅಲ್ಲ

ಸ್ಯಾಂಡಲ್‌ವುಡ್‌ನ ಕಾಮಿಡಿ ಕಿಂಗ್ ಕೋಮಲ್ ಕುಮಾರ್ ಹೊಸ ಸಿನಿಮಾ ಅನೌನ್ಸ್ ಆಗಿದೆ. ನಾಯಕನಾದ್ಮೇಲೆ ಕೋಮಲ್ ಕಥೆಯನ್ನು ಆಯ್ಕೆ ಮಾಡಿಕೊಳ್ಳುವ ಪರಿಯೇ ಬದಲಾಗಿದೆ. ಹೀಗಾಗಿ ಸಿನಿಮಾಗಳು ರಿಲೀಸ್ ಆಗುವುದು ಕೂಡ ತಡವಾಗುತ್ತಿವೆ. ಆದರೆ, ಅವರ ಅಭಿಮಾನಿಗಳು ಬೇಸರ ಮಾಡಿಕೊಳ್ಳುವಂತೆ ಇಲ್ಲ. ಕೋಮಲ್ ನಟನೆಯ ಹೊಸ ಸಿನಿಮಾ ಅನೌನ್ಸ್ ಆಗಿದೆ.

ಹೌದು ಕೋಮಲ್‌ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಈ ಸಿನಿಮಾ ಮೂಲಕ ಮತ್ತೆ ತಮ್ಮ ಅಭಿಮಾನಿಗಳ ಮುಂದೆ ಬರಲು ರೆಡಿಯಾಗಿದ್ದಾರೆ. ಅಳೆದು ತೂಗಿ ಸಿನಿಮಾಗಳನ್ನು ಕೋಮಲ್‌ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ವಿಭಿನ್ನ ಕಥೆಗಳ ಹುಡುಕಾಟದಲ್ಲಿರುವ ಕೋಮಲ್ ಇದೂವರೆಗೂ ಹಲವು ಕಥೆಗಳನ್ನು ಕೇಳಿದ್ದು, ಅದರಲ್ಲಿ ತಮಗೆ ಇಷ್ಟ ಎನಿಸಿದ ಕಥೆಗಳಿಗೆ ಮಾತ್ರ ಗ್ರೀನ್ ಸಿಗ್ನಲ್ ಕೊಡುತ್ತಿದ್ದಾರೆ.

Kannada Comedy actor Komal Kumar new movie Tenali DA LLB is out and comedy film

ಕೋಮಲ್ ಲೆಕ್ಕಾಚಾರ ಹಾಕಿ ಗ್ರೀನ್ ಸಿಗ್ನಲ್ ಕೊಟ್ಟಿರುವ ಸಿನಿಮಾಗಳ ಸಾಲಿನಲ್ಲಿ ಇರುವುದೇ 'ತೆನಾಲಿ ಡಿ ಎ ಎಲ್‌ ಎಲ್‌ ಬಿ'. ಸಿನಿಮಾದ ಟೈಟಲ್‌ ನೋಡಿದರೆ, ಇದು ಬಾಲಿವುಡ್‌ ಸಿನಿಮಾದ ಟೈಟಲ್ ಇದ್ದಂತೆ ಇದೆಯಲ್ಲ ಅಂತ ಅನಿಸಬಹುದು. ಆದರೆ, ಬಾಲಿವುಡ್‌ನಲ್ಲಿ ಅಕ್ಷಯ್ ಕುಮಾರ್ ಹಾಗೂ ಅರ್ಷದ್ ವರ್ಸಿ ನಟನೆಯ 'ಜಾಲಿ ಎಲ್‌ಎಲ್‌ಬಿ' ಅನ್ನು ನೆನಪಿಸಿದರೂ, ಆ ಸಿನಿಮಾಗೂ 'ತೆನಾಲಿ ಡಿ ಎ ಎಲ್‌ ಎಲ್‌ ಬಿ'ಗ ಯಾವುದೇ ಸಂಬಂಧವಿಲ್ಲ.

'ತೆನಾಲಿ ಡಿ ಎ ಎಲ್‌ ಎಲ್‌ ಬಿ' ಟೈಟಲೇ ಹೇಳುವ ಹಾಗೆ ನಟ ಕೋಮಲ್‌ ಕುಮಾರ್‌ ಈ ಸಿನಿಾದಲ್ಲಿ ಲಾಯರ್‌ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ಈಗ ಈ ಹೊಚ್ಚ ಹೊಸ ಸಿನಿಮಾದ ಪೋಸ್ಟರ್ ಬಿಡುಡಗೆಯಾಗಿದೆ. ಈ ಪೋಸ್ಟರ್‌ನಲ್ಲಿಯೂ ಕೋಮಲ್‌ ಲಾಯರ್‌ ಲುಕ್‌ ಕೊಟ್ಟಿದ್ದಾರೆ. 'ತೆನಾಲಿ ಡಿ ಎ ಎಲ್‌ ಎಲ್‌ ಬಿ' ಸಿನಿಮಾವನ್ನ ಸಿದ್ದ್ರುವ್‌ ಸಿದ್ದು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಫಸ್ಟ್ ಲುಕ್ ಅಂತೂ ಕೋಮಲ್ ಅಭಿಮಾನಿಗಳಿಗೆ ಕಿಕ್ ಕೊಟ್ಟಿದೆ.

ಅಂದ್ಹಾಗೆ, ನಿರ್ದೇಶಕ ಸಿದ್ದ್ರುವ್‌ ಸಿದ್ದು ಅವರಿಗೆ ಇದು ಚೊಚ್ಚಲ ಸಿನಿಮಾವೇನಲ್ಲ. ಈ ಹಿಂದೆ ವಿಜಯರಾಘವೇಂದ್ರ ನಟನೆಯ 'ಮರೀಚಿ' ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದರು. ಈ ಸಿನಿಮಾಗೆ ಎಲ್ಲಾ ಕಡೆಯಿಂದಲೂ ಮೆಚ್ಚುಗೆ ವ್ಯಕ್ತವಾಗಿತ್ತು. ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡದೇ ಹೋದರೂ, ವಿಮರ್ಶಾತ್ಮಕವಾಗಿ ಆ ಸಿನಿಮಾ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು.

'ಮರೀಚಿ' ಸಿನಿಮಾ ಬಳಿಕ ಕಾಮಿಡಿ ಕಿಂಗ್ ಕೋಮಲ್‌ ಅವರಿಗಾಗಿ ಸಿದ್ದ್ರುವ್‌ ಸಿದ್ದು ವಿಭಿನ್ನವಾದ ಕಥೆಯನ್ನು ಬರೆದು, ನಿರ್ದೇಶನ ಮಾಡುತ್ತಿದ್ದಾರೆ. ಈ ಕಥೆ ಈಗಿನ ಕಾಲಘಟ್ಟಕ್ಕೆ ಸರಿಹೊಂದುವ ಹೊಂದುವಂತಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಸದ್ಯಕ್ಕೀಗ 'ತೆನಾಲಿ ಡಿ ಎ ಎಲ್‌ ಎಲ್‌ ಬಿ' ಪೋಸ್ಟರ್‌ ಜೊತೆಗೆ ಪ್ರಚಾರವನ್ನೂ ಶುರು ಮಾಡಿದ್ದು, ಚಿತ್ರತಂಡ ಮೇ ತಿಂಗಳಲ್ಲಿ ಶೂಟಿಂಗ್ ಮಾಡಲಿದ್ದಾರೆ.

ಕೋಮಲ್ ಇದೇ ಬಾರಿಗೆ ಇದೇ ಮೊದಲ ಬಾರಿಗೆ ಲಾಯರ್‌ ಪಾತ್ರದಲ್ಲಿ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ವಿಶೇಷ ಅಂದರೆ, ಕೋಮಲ್‌ ರಿಯಲ್ ಲೈಫ್‌ನಲ್ಲಿ ಎಲ್‌ ಎಲ್‌ ಬಿ ಓದಿದ್ದಾರೆ. ತಮ್ಮ ರಿಯಲ್ ಲೈಫ್‌ ಕ್ಯಾರೆಕ್ಟರ್ ಅನ್ನು ತೆರೆಮೇಲೆ ಮಾಡುತ್ತಿದ್ದಾರೆ. ಚಿಕ್ಕ ಪುಟ್ಟ ಪಾತ್ರಗಳಲ್ಲಿ ಲಾಯರ್ ಆಗಿ ನಟಿಸಿದ್ದ ಕೋಮಲ್ ಅನೇಕ ವರ್ಷಗಳ ಬಳಿಕ ಮತ್ತೆ ಖಾಕಿ ಕೋಟು ತೊಟ್ಟು ಮಿಂಚಲಿದ್ದಾರೆ.

'ತೆನಾಲಿ ಡಿ ಎ ಎಲ್‌ ಎಲ್‌ ಬಿ' ಸಿನಿಮಾವನ್ನ ಸಿದ್ದ್ರುವ್‌ ಸಿದ್ದು ನಿರ್ದೇಶನದ ಜೊತೆಗೆ ಕಥೆ ಚಿತ್ರಕಥೆಯನ್ನೂ ಅವರೇ ಬರೆದಿದ್ದಾರೆ. ಈ ಸಿನಿಮಾಗೆ ಸಿದ್ದ್ರುವ್‌ ಸಿದ್ದು, ಸಂತೋಷ್‌ ಮಾಯಪ್ಪ, ಪ್ರದೀಪ್‌ ಕುಮಾರ್‌ ಮಹಾಲಿಂಗಯ್ಯ, ರೇಣುಕಾ ಪ್ರಸಾದ್‌ ಹಣ ಹೂಡಿಕೆ ಮಾಡಿದ್ದಾರೆ. ರಿತ್ವಿಕ್‌ ಮುರಳಿಧರನ್‌ ಸಂಗೀತಾ ನಿರ್ದೇಶನ ಮಾಡುತ್ತಿದ್ದು, ಉದಯ್‌ ಲೀಲಾ ಕ್ಯಾಮೆರಾ ಹ್ಯಾಂಡಲ್ ಮಾಡುತ್ತಿದ್ದಾರೆ. ಸದ್ಯಕ್ಕೀಗ ಕೇವಲ ಪೋಸ್ಟರ್‌ ಅಷ್ಟೇ ಬಿಡುಗಡೆ ಮಾಡಿದ್ದು, ಚಿತ್ರತಂಡ ಇನ್ನೂ ಹೆಚ್ಚಿನ ಮಾಹಿತಿಯನ್ನು ಸದ್ಯದಲ್ಲೇ ರಿವೀಲ್ ಮಾಡುತ್ತಿದೆ.

More from Filmibeat

English summary
Kannada Comedy actor Komal Kumar new movie Tenali DA LLB is out and comedy film.
Read more about: komal kumar comedy kannada movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X