For Quick Alerts
  ALLOW NOTIFICATIONS  
  For Daily Alerts

  ಕನ್ನಡದ ಹಿರಿಯ ಹಾಸ್ಯ ನಟ ಮಿಮಿಕ್ರಿ ರಾಜಗೋಪಾಲ್ ನಿಧನ

  |

  ಕನ್ನಡ ಸಿನಿಮಾಗಳಲ್ಲಿ ಹಾಸ್ಯ ಪಾತ್ರಗಳು ಹಾಗೂ ಮಿಮಿಕ್ರಿ ಕಾರ್ಯಕ್ರಮಗಳ ಮೂಲಕ ಗುರುತಿಸಿಕೊಂಡಿದ್ದ ನಟ ಮಿಮಿಕ್ರಿ ರಾಜ್‌ಗೋಪಾಲ್ (64) ನಿಧನರಾದರು.

  Nikhil Kumaraswamy to start agriculture ತಾತನಂತೆ ಮಣ್ಣಿನ ಮಗನಾಗಲು ಹೊರಟ ನಿಖಿಲ್ ಕುಮಾರಸ್ವಾಮಿ

  ಕೆಲವು ಸಮಯಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ರಾಜ್ ಗೋಪಾಲ್ ಅವರು ಬೆಂಗಳೂರಿನ ಕೆಂಗೇರಿ ಸಮೀಪದಲ್ಲಿನ ತಮ್ಮ ನಿವಾಸದಲ್ಲಿ ವಿಧಿವಶರಾದರು. ಅವರು ಅಸ್ತಮಾ ಮತ್ತು ಮೂತ್ರಪಿಂಡ ಸಮಸ್ಯೆಗಳಿಂದ ಬಳಲುತ್ತಿದ್ದರು ಎನ್ನಲಾಗಿದೆ. ಹಾಸ್ಯ ನಟರಾಗಿ ಮತ್ತು ಮಿಮಿಕ್ರಿ ಕಲಾವಿದರಾಗಿ ಗುರುತಿಸಿಕೊಂಡಿದ್ದ ಅವರು 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮಿಳು ಚಿತ್ರಗಳಲ್ಲಿಯೂ ಬಣ್ಣಹಚ್ಚಿದ್ದರು.

  ಜನಪ್ರಿಯ ಟಿಕ್ ಟಾಕ್ ಸ್ಟಾರ್ ಸಿಯಾ ಕಕ್ಕರ್ ಆತ್ಮಹತ್ಯೆಜನಪ್ರಿಯ ಟಿಕ್ ಟಾಕ್ ಸ್ಟಾರ್ ಸಿಯಾ ಕಕ್ಕರ್ ಆತ್ಮಹತ್ಯೆ

  ಕೊರೊನಾ ವೈರಸ್ ಲಾಕ್‌ಡೌನ್ ಕಾರಣದಿಂದ ಇತ್ತೀಚೆಗೆ ಅವರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದರು. ಕಳೆದ ತಿಂಗಳಷ್ಟೇ ಶಾರದಾ ಎನ್ ನಾಯ್ಡು ಫೌಂಡೇಷನ್ ವತಿಯಿಂದ ಮಿಮಿಕ್ರಿ ರಾಜಗೋಪಾಲ್ ಸೇರಿದಂತೆ ವಿವಿಧ ಹಿರಿಯ ನಟರಿಗೆ ಆಹಾರ ಧಾನ್ಯ ವಿತರಣೆ ಮಾಡಲಾಗಿತ್ತು.

  1983ರಿಂದ ಅವರು ಬಣ್ಣದ ಬದುಕಿನಲ್ಲಿದ್ದಾರೆ. ಅನ್ನ. ಬಟ್ಟೆ ಸಿಗುತ್ತದೆ ಬೇರೆ ಏನೂ ಇಲ್ಲ. ಸಿನಿಮಾದಲ್ಲಿ ಬೇರೆ ಏನೂ ಸಿಗುತ್ತಿಲ್ಲ. ಹೊಸ ನಿರ್ದೇಶಕರು, ಹೊಸ ನಿರ್ಮಾಪಕರು, ಹೊಸ ಹುಡುಗರು ನಮ್ಮಂಥಹ ಹಳಬರನ್ನು ಕರೆಯುವುದಿಲ್ಲ. ಡಿಡಿ 1 ಆರಂಭವಾದಾಗಿನಿಂದ 'ಪಾಪ ಪಾಂಡು'ವರೆಗೂ ಸುಮಾರು ಧಾರಾವಾಹಿಗಳನ್ನು ಮಾಡಿದ್ದೇನೆ. ನಮ್ಮ ರಾಜ್ಯದಲ್ಲಿ ಹಳಬರಿಗೆ ಯಾರೂ ಕರೆಯುವುದಿಲ್ಲ. ಬೇರೆ ರಾಜ್ಯದಲ್ಲಿ ಹಳಬರಿಗೆ ಅವಕಾಶ ಕಡಿಮೆಯಾಗದಂತೆ ನೋಡಿಕೊಳ್ಳುತ್ತಾರೆ. ಸಣ್ಣಪುಟ್ಟ ಮಿಮಿಕ್ರಿ ಕಾರ್ಯಕ್ರಮಗಳಿಗೆ ಯಾರಾದರೂ ಕರೆಯುತ್ತಾರೆ. ಅಂದಿನ ದಿನದ ಜೀವನಕ್ಕೆ ಅಷ್ಟೇ ಹಣ. ಹೇಳಲು ಬಹಳ ನೋವಾಗುತ್ತದೆ ಎಂದು ಇತ್ತೀಚೆಗೆ ಅವರು ನೋವು ಹಂಚಿಕೊಂಡಿದ್ದರು.

  ಮಲಯಾಳಂ ಚಿತ್ರರಂಗದ ಅತಿ ಹಿರಿಯ ನಟ ಭಾಗವತರ್ ನಿಧನಮಲಯಾಳಂ ಚಿತ್ರರಂಗದ ಅತಿ ಹಿರಿಯ ನಟ ಭಾಗವತರ್ ನಿಧನ

  ವಿವಿಧ ಕಲಾವಿದರ ಧ್ವನಿಗಳನ್ನು ಅನುಕರಣೆ ಮಾಡುವುದರಲ್ಲಿ ಪರಿಣತರಾಗಿದ್ದ ಮಿಮಿಕ್ರಿ ರಾಜಗೋಪಾಲ್, ನಟಿ ಕಲ್ಪನಾ ಧ್ವನಿಯನ್ನು ಅನುಕರಿಸುವುದರ ಮೂಲಕ ಹೆಸರು ಗಳಿಸಿದ್ದರು.

  ಕಾಪಿಕಟ್ಟೆ, ರಿಯಲ್ ಪೊಲೀಸ್, ಸಾಧಕರು, ಗೋಸಿ ಗ್ಯಾಂಗ್, ಸೂಪರ್ ಪೊಲೀಸ್ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

  English summary
  Veteran Kannada comedy actor, mimicry artist Mimicry Rajagopal passed away in Bengaluru due to health issues.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X