"ಓಂ ಪ್ರಕಾಶ್ ರಾವ್‌ಗೆ ಸಿನಿಮಾ ಮಾಡೋ ಕ್ಯಪಾಸಿಟಿ ಇದೆಯಾ?" ಮಾಸ್ತಿ ಹೀಗೆ ಟೀಕಿಸಿದ್ದು ನಿಜವೇ?

ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ 50 ಸಿನಿಮಾಗಳನ್ನು ನಿರ್ದೇಶನ ಮಾಡಿರುವವರು ನೆನಪಿಗೆ ಬರೋದು ಎಸ್‌.ನಾರಾಯಣ್ ಹಾಗೂ ಓಂ ಪ್ರಕಾಶ್ ರಾವ್. ಆದರೆ, ಇವರಿಬ್ಬರ ನಿರ್ದೇಶನದ ಶೈಲಿ ಬೇರೆ. ಓಂ ಪ್ರಕಾಶ್ ರಾವ್ ಮಾಸ್ ಸಿನಿಮಾಗಳ ಡೈರೆಕ್ಟರ್. ಅವರ ಬತ್ತಳಿಕೆಯಿಂದ ಈಗಾಗಲೇ ಹಲವು ಸಿನಿಮಾಗಳು ಬಂದು, ಸೂಪರ್ ಹಿಟ್ ಆಗಿವೆ. 'ಲಾಕಪ್‌ಡೆತ್', 'ಎಕೆ 47' ಹೀಗೆ ಹಲವು ಸಿನಿಮಾಗಳು ಸಿಗುತ್ತವೆ.

ಓಂ ಪ್ರಕಾಶ್ ರಾವ್ ನಿರ್ದೇಶಿಸಿದ ಎಷ್ಟೋ ಸಿನಿಮಾಗಳು ಸ್ಟಾರ್ ನಟರಿಗೆ ಮರುಜೀವ ಕೊಟ್ಟಿದೆ. ಕೆಲವರು ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದೂ ಇದೆ. ಇತ್ತೀಚೆಗೆ ಓಂ ಪ್ರಕಾಶ್ ರಾವ್ ಡೈಲಿ ಮಾಧ್ಯಮ ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನವನ್ನು ನೀಡಿದ್ದರು. ಇದರಲ್ಲಿ ಕನ್ನಡ ಮತ್ತೊಬ್ಬ ಪ್ರತಿಭಾನ್ವಿತ ಡೈಲಾಗ್ ರೈಟರ್ ಮಾಸ್ತಿ ತನ್ನ ಬಗ್ಗೆ ಟೀಕೆ ಮಾಡಿದ್ದಾರೆಂದು ಆರೋಪ ಮಾಡಿದ್ದರು.

Kannada Dialogue writer Masthi gave clarity on his controversial comments on Om Prakash Rao

ಮಾಸ್ತಿ ಇಬ್ಬರ ಕಾಮನ್ ಗೆಳೆಯರ ಹತ್ತಿರ ಓಂ ಪ್ರಕಾಶ್ ರಾವ್‌ಗೆ ಇನ್ನೂ ಸಿನಿಮಾ ಮಾಡುವ ಕ್ಯಪಾಸಿಟಿ ಇದೆಯಾ? ಇಂದಿನ ಪೀಳಿಗೆಗೆ ಸಿನಿಮಾ ಮಾಡುವುದಕ್ಕೆ ಬರುತ್ತಾ? ಎಂದು ಟೀಕೆ ಮಾಡಿದ್ದಾರೆಂದು ಹೇಳಿದ್ದರು. ಅದಕ್ಕೆ ಡೈಲಿ ಮಾಧ್ಯಮದಲ್ಲಿಯೇ ಮಾಸ್ತಿ ಪ್ರತಿಕ್ರಿಯೆ ನೀಡಿದ್ದಾರೆ. ಹಾಗಿದ್ದರೆ, ಓಂ ಪ್ರಕಾಶ್ ಆರೋಪವೇನು? ಮಾಸ್ತಿ ಕೊಟ್ಟ ಕ್ಲಾರಿಟಿ ಏನು? ತಿಳಿಯುವುದಕ್ಕೆ ಮುಂದೆ ಓದಿ.

ಓಂ ಪ್ರಕಾಶ್ ರಾವ್ ಆರೋಪವೇನು?

"ಮಾಸ್ತಿ ಸರ್ ಭಾಸ್ಕರ್ ಶೆಟ್ಟಿ (ಇಬ್ಬರ ಗೆಳೆಯರು) ಹತ್ತಿರ ಹೇಳಿದ್ರಂತೆ ಓಂ ಪ್ರಕಾಶ್ ಅಪ್‌ಡೇಟ್ ಆಗಿದ್ದಾರಾ? ಹಳೆಯ ಸಿನಿಮಾಗಳನ್ನು ಅಲ್ಲಿ ಇಲ್ಲಿ ಕದ್ದು ಸಿನಿಮಾ ಮಾಡುತ್ತಾರೆ. ಇಂದಿನ ಪೀಳಿಗೆಗೆ ಸಿನಿಮಾ ಮಾಡುವುದಕ್ಕೆ ಬರುತ್ತಾ? ಆ ಕ್ಯಪಾಸಿಟಿ ಅವರಿಗೆ ಇದೆಯಾ? ಅಂತ ಭಾಸ್ಕರ್ ಶೆಟ್ಟಿಯವರು ಹೇಳಿದರಂತೆ. ಇಲ್ಲ ಉಪೇಂದ್ರ ಅವರು ಡೇಟ್ ಕೊಟ್ಟಿದ್ದಾರಂತೆ ಎಂದು ಭಾಸ್ಕರ್ ಶೆಟ್ಟಿ ಹೇಳಿದ್ದಾರೆ. ಅದಕ್ಕೆ ಓಹೋ ಉಪೇಂದ್ರ ಅವರು, ಆಮೇಲೆ ಧ್ರುವ ಸರ್ಜಾ, ಆಮೇಲೆ ಚಿರಂಜೀವಿಯರು ಡೇಟ್ ಕೊಟ್ಟಿದ್ದಾರಾ? ಎಂದು ಹೇಳಿದ್ರಂತೆ. ಇರಲಿ ಅದು ಅವರ ಆಶೀರ್ವಾದ. ಅವರು ದೊಡ್ಡವರು. ಹೀಗೆ ಬಹಳಷ್ಟು ಮಂದಿ ಹೇಳಿದ್ದಾರೆ. ಅದರಲ್ಲಿ ಇವರೂ ಒಬ್ಬರು ಹೇಳಿದ್ದಾರೆ ಅಷ್ಟೇ. ಅವರು ಸಂಭಾಷಣೆಕಾರರು, ಹಿರಿಯರು. ಮುಂದೊಂದು ದಿನ ಅವರೊಂದಿಗೆ ಕೆಲಸ ಕಲಿಯುವ ಹಾಕಿದ್ದರೆ ಕಲಿಯುತ್ತೇನೆ. ನಿಮ್ಮ ಪ್ರೀತಿ ಸದಾ ನಮ್ಮೊಂದಿಗೆ ಇರಲಿ ಮಾಸ್ತಿ ಸರ್ ಥ್ಯಾಂಕ್ಯೂ." ಎಂದು ಓಂ ಪ್ರಕಾಶ್ ರಾವ್ ಹೇಳಿದ್ದರು.

ಮಾಸ್ತಿ ಪ್ರತಿಕ್ರಿಯೆ ಏನು?

ಓಂ ಪ್ರಕಾಶ್ ರಾವ್ ಬಗ್ಗೆ ತಾನು ಮಾಡಿದ ಟೀಕೆ ಬಗ್ಗೆ ಮಾಸ್ತಿ ಹೀಗೆ ಪ್ರತಿಕ್ರಿಯಿಸಿದ್ದಾರೆ. "ಮೊದಲನೆಯದ್ದಾಗಿ ಓಂ ಪ್ರಕಾಶ್ ಸರ್ ಅಂತ ಕಲ್ಟ್ ಮತ್ತು ಮಾಸ್ ಡೈರೆಕ್ಟರ್ ಬಗ್ಗೆ ನಾನು ಏನು ಹೇಳಿದರೂ ಕಡಿಮೆ. ಚಿತ್ರರಂಗಕ್ಕೆ ಅವರದ್ದೊಂದು ಇತಿಹಾಸವಿದೆ. ಅವರ ತಂದೆ ಎಲ್ಲರನ್ನೂ ನಗಿಸಿ, ಎಲ್ಲರ ಮನಸ್ಸಿನಲ್ಲೂ ಅಚ್ಚಳಿಯದೆ ಉಳಿದುಕೊಂಡಿದ್ದಾರೆ. ಈ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಿರೋರು ಓಂ ಪ್ರಕಾಶ್ ರಾವ್. ಒಬ್ಬ ನಟನ ಮಗ ದೊಡ್ಡ ಡೈರೆಕ್ಟರ್ ಆಗೋದು ನಿಜಕ್ಕೂ ಹೆಮ್ಮೆ." ಎಂದು ಮಾಸ್ತಿ ಹೇಳಿದ್ದಾರೆ.

Kannada Dialogue writer Masthi gave clarity on his controversial comments on Om Prakash Rao

"ಓಂ ಪ್ರಕಾಶ್ ಸರ್ ಹೆಡ್ ಮಾಸ್ಟರ್ ಇದ್ದಂತೆ"

"ಪಿಎನ್ ಸತ್ಯ ಅವರು ನನಗೆ ಗುರು. ಪಿಎನ್ ಸತ್ಯ ಅವರೇ ಓಂ ಪ್ರಕಾಶ್ ರಾವ್ ಅವರನ್ನು ನನ್ನ ಗುರುಗಳು ಅಂತ ಹೇಳೋರು. ನಮಗೆ ಓಂ ಪ್ರಕಾಶ್ ಸರ್ ಹೆಡ್ ಮಾಸ್ಟರ್ ಇದ್ದಂತೆ. ಭೀಮ ಸಿನಿಮಾ ಆದ್ಮೇಲೆ ಓಂ ಪ್ರಕಾಶ್ ಸರ್ ಫೋನ್ ಮಾಡಿ ವಿಶ್ ಮಾಡಿದರು. ಫಿನಿಕ್ಸ್ ಸಿನಿಮಾದ ಪೂಜೆಗೆ ಕರೆದಿದ್ದರು. ಈ ಮಾತು ತಮಾಷೆಗೆ ಆಡಿರೋದು. ಆದರೆ ಅವರಿಗೆ ಬೇರೆ ರೀತಿ ತಲುಪಿದೆ. ಯಾಕಂದ್ರೆ ನಾಲಿಗೆಯಿಂದ ಬರುವ ಮಾತುಗಳೇ ಕಿವಿಗೆ ತಲುಪುತ್ತೆ ಅಂತಲ್ಲ. ಬೇರೆ ರೀತಿನೂ ತಲುಪಿರುತ್ತೆ. ಕಾಲೇಜಿನಲ್ಲಿ ಒಬ್ಬ ಲೆಕ್ಚರರ್‌ ಬಗ್ಗೆ ಒಬ್ಬ ಸ್ಟೂಡೆಂಟ್ ಹೇಗೆ ಮಾತಾಡಿಕೊಳ್ಳುತ್ತಾರೆ ಗೊತ್ತಾ ಅಷ್ಟು ಮಾತ್ರ ಆಗಿದೆ. ಲೆಕ್ಚರರ್ ನಮ್ಮನ್ನು ಕರೆದು ಕಿವಿ ಹಿಂಡೋ ಮಾತಾಡಾಡಿದ್ದಾರೆ ಅಷ್ಟೇ. ನಮಗೆ ಓಂ ಪ್ರಕಾಶ್ ರಾವ್ ನಿಜಕ್ಕೂ ಹೆಮ್ಮೆ." ಎಂದು ಮಾಸ್ತಿ ಕ್ಲಾರಿಟಿ ಕೊಟ್ಟಿದ್ದಾರೆ.

ಓಂ ಪ್ರಕಾಶ್ ರಾವ್ ತೆರೆದ ಪುಸ್ತಕ

"ಓಂ ಪ್ರಕಾಶ್ ರಾವ್ ಬಗ್ಗೆ ನಾನು ಮಾತಾಡೋದು ಏನಿದೆ? ಅದು ತೆರೆದ ಪುಸ್ತಕ. ಅವರೇ ಎಲ್ಲವನ್ನೂ ಹೇಳಿಕೊಂಡಿದ್ದಾರೆ. ನಾನು ಏನೋ ಹೇಳಿದ್ದೀನಿ ಅನ್ನೋದಲ್ಲ. ಓಪನ್ ಸ್ಟೇಟ್ಮೆಂಟ್ ಅವರೇ ಕೊಟ್ಟಿದ್ದಾರೆ. ಪ್ರತಿಯೊಂದು ಪೇಜ್, ಪದವನ್ನು ಅವರೇ ಹೇಳಿಕೊಂಡಿದ್ದಾರೆ. ನಾನು ಸುಮಾರು ಮಂದಿ ನಿರ್ದೇಶಕರನ್ನು ನೋಡಿದ್ದೇನೆ. ಹೊಗಳು ಭಟ್ಟರನ್ನು ಜೊತೆಯಲ್ಲಿ ಇಟ್ಟುಕೊಂಡಿರುತ್ತಾರೆ. ಅವರು ಯಾರನ್ನೂ ಇಟ್ಟುಕೊಂಡಿಲ್ಲ. ತಪ್ಪಿದ್ದರೆ ತಪ್ಪು ಕಣೋ ಅಂತಾರೆ. ನಮ್ಮ ಗುರುಗಳು ನಮ್ಮ ಕಿವಿ ಹಿಂಡಿದ್ದಾರೆ. ಅವರು ಏನು ಹೇಳುತ್ತಾರೋ ತಲೆ ತಗ್ಗಿಸಿಕೊಂಡು ಹೋಗುತ್ತೇನಷ್ಟೇ." ಎಂದಿದ್ದಾರೆ.

More from Filmibeat

English summary
Kannada Dialogue writer Masthi gave clarity on his controversial comments on Om Prakash Rao.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X