ಅಣ್ಣಾವ್ರು, ವಿಷ್ಣು, ಅಂಬರೀಶ್ ಅವ್ರೇ ಕಾಯಿಸಲಿಲ್ಲ..18 ಸಿನಿಮಾ ಕೈ ತಪ್ಪಿ ಹೋಯ್ತು"; ಎಸ್ ನಾರಾಯಣ್ ಬೇಸರ!

ಕಲಾ ಸಾಮ್ರಾಟ್ ಎಸ್.ನಾರಾಯಣ್ ಸುಮಾರು ಮೂರು-ನಾಲ್ಕು ದಶಕಗಳಿಂದ ಚಿತ್ರರಂಗದಲ್ಲಿದ್ದಾರೆ. ನಿರ್ದೇಶನ ಅಷ್ಟೇ ಅಲ್ಲದೆ, ಸಿನಿಮಾ ನಿರ್ಮಾಣ, ನಟನೆಯಲ್ಲೂ ಗೆದ್ದಿದ್ದಾರೆ. ಇವರ ನಿರ್ದೇಶನದ ಸಿನಿಮಾಗೆ ಎಷ್ಟು ಮಂದಿ ಫ್ಯಾನ್ ಇದ್ದಾರೋ. ಅದರಷ್ಟೇ ಇವರ ನಟನೆಗೂ ಅಭಿಮಾನಿಗಳಿದ್ದಾರೆ. ಕಳೆದ ಕೆಲವು ವರ್ಷಗಳಿಂದ ನಿರ್ದೇಶನದಿಂದ ದೂರ ಉಳಿದಿದ್ದು, ನಟನೆಯಲ್ಲಿಯೇ ಹೆಚ್ಚಾಗಿ ಕಾಣಿಸಿಕೊಂಡಿದ್ದರು.

ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ, ಸಿನಿಮಾ ನಿರ್ದೇಶನದಿಂದ ಯಾಕೆ ದೂರ ಉಳಿದಿದ್ದಾರೆ? ಕನ್ನಡ ಚಿತ್ರರಂಗದ ಶಿಸ್ತಿನ ಮನುಷ್ಯ ಸಿನಿಮಾವನ್ನೇ ಮಾಡೋದಿಲ್ಲ ಅನ್ನೋ ನಿರ್ಧಾರಕ್ಕೆ ಬಂದಿದ್ಯಾಕೆ? ಚಿತ್ರರಂಗದಿಂದ ಅಂತಹದ್ದೇನಾಯ್ತು? ಅನ್ನೋ ಪ್ರಶ್ನೆ ಎಲ್ಲರನ್ನೂ ಕಾಡುತ್ತಲೇ ಇದೆ. ಸದ್ಯಕ್ಕೀಗ ಎಸ್‌.ನಾರಾಯಣ್ ತಮ್ಮ ನಿರ್ದೇಶನದ 50ನೇ ಸಿನಿಮಾ ನ ಮೂಲಕ ಕಮ್‌ಬ್ಯಾಕ್ ಮಾಡುತ್ತಿದ್ದಾರೆ.

 Kannada director S. Narayan was humiliated and because of that he lost 18 movies.

ಹೌದು.. ಎಸ್. ನಾರಾಯಣ್ ಈಗ '5ಡಿ' ಅನ್ನುವ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಇದು ಅವರ 50ನೇ ಸಿನಿಮಾ. ಇದರಲ್ಲಿ ಆದಿತ್ಯ, ಅದಿತಿ ಪ್ರಭುದೇವ ಹಾಗೂ ಸ್ವತ: ಎಸ್‌ ನಾರಾಯಣ್ ಕೂಡ ನಟಿಸಿದ್ದಾರೆ. ಈ '5ಡಿ' ಬಿಡುಗಡೆ ವೇಳೆ ಗೌರೀಶ್ ಅಕ್ಕಿ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಚಿತ್ರರಂಗದಲ್ಲಿ ತಮಗಾದ ಅವಮಾನದ ಬಗ್ಗೆ ರಿವೀಲ್ ಮಾಡಿದ್ದಾರೆ. ಅದೇನು ಅಂತ ತಿಳಿಯಲು ಮುಂದೆ ಓದಿ..

ಎಸ್‌.ನಾರಾಯಣ್‌ಗೆ ಚಿತ್ರರಂಗದಲ್ಲಿ ಏನಾಯ್ತು? ಯಾಕೆ ಇಷ್ಟು ದಿನ ಗ್ಯಾಪ್ ತೆಗೆದುಕೊಂಡರು? ಅನ್ನೋ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ. "ನನ್ನನ್ನು ಅಣ್ಣಾವ್ರು ಕಾಯಿಸಲಿಲ್ಲ. ವಿಷ್ಣು ಸರ್ ಕಾಯಿಸಲಿಲ್ಲ. ಅಂಬರೀಶ್ ಅವರೂ ಕಾಯಿಸಲಿಲ್ಲ. ಅಂಬರೀಶ್ ಅವರು 12 ಗಂಟೆ ಆದರೂ ಸೆಟ್ಟಿಗೆ ಬರಲ್ಲ. ನನ್ನ ಸೆಟ್ಟಿಗೆ 8 ಗಂಟೆಗೆ ಬರೋರು. ನಾನು ಕರೆಯಲಿಲ್ಲ. ಇಷ್ಟು ಅಶಿಸ್ತು ಶುರುವಾಗಿ ಹೋಯ್ತು. ಕಾಯಲಿ ಬಿಡಿ ನಿರ್ದೇಶಕರು ಏನು ಇವಾಗ? ಈತರ ಬಂದಾಗ ನಾವು ಇಂತಹ ವಾತಾವರಣದಲ್ಲಿ ಕೆಲಸ ಮಾಡ್ಬೇಕಾ ಅಂತ ಅನಿಸಿತ್ತು. ಆಗ ನಾನು ದೊಡ್ಡ ಗ್ಯಾಪ್ ತೆಗೆದುಕೊಂಡು ಬಿಟ್ಟೆ." ಎಂದು ಎಸ್.ನಾರಾಯಣ್ ಹೇಳಿದ್ದಾರೆ.

 Kannada director S. Narayan was humiliated and because of that he lost 18 movies.

ಹಾಗೇ ತಮ್ಮಲ್ಲಿರುವ ಶಿಸ್ತು. ಈಗೀನ ಜಮಾನದವಿಗೆ ಇಲ್ಲ ಅಂತ ಪರೋಕ್ಷವಾಗಿ ಹೇಳಿದ್ದಾರೆ. "ನಮ್ಮ ತಂದೆ ನನಗೆ ಅಕ್ಷರ ಕಲಿಸುವುದಕ್ಕಿಂತ ಮುಂಚೆ ಶಿಸ್ತು, ಸಂಸ್ಕಾರ ಕಲಿಸಿದ್ದಾರೆ. ಶಿಸ್ತು ಇಲ್ಲದೆ ಭೂಮಿ ಮೇಲೆ ಈ ಮನುಷ್ಯ ಬದುಕುವುದು ವ್ಯರ್ಥ ಅಂತ ಹೇಳಿದ್ದರು. ಮೊದಲು ಶಿಸ್ತು ಕಲಿ. ನಂತರ ಸಂಸ್ಕಾರ ಕಲಿ. ಆಮೇಲೆ ಹೋಗಿ ಅಕ್ಷರ ಕಲಿ ಎಂತ ಹೇಳಿದ್ದರು. ನಾನು ಶಿಸ್ತು ಕಲಿತು ಬಂದೆ. ಶಿಸ್ತಿನಿದ ಕೆಲಸ ಮಾಡಿಕೊಂಡು ಬಂದೆವು. ನನ್ನ ಶಿಸ್ತನ್ನು ಎಲ್ಲರೂ ಗೌರವಿಸಿದ್ದಾರೆ. ಹಾಗೂ ಮೆಚ್ಚಿಕೊಂಡಿದ್ದಾರೆ. ಈ ರೀತಿ ನನ್ನನ್ನು ಬೆಳೆಸಿದ್ದಾರೆ. ಒಂದು ಹಂತದಲ್ಲಿ ಇದೆಲ್ಲ ಉಲ್ಟಾ ಆಗಿ ಹೋಯ್ತು." ಎಂದು ಹೇಳಿದ್ದಾರೆ.

ಎಲವು ವರ್ಷಗಳ ಹಿಂದೆ ಎಸ್‌.ನಾರಾಯಣ್ ಅವಮಾನಗಳಿಂದ ಬೇಸತ್ತು ಸಿನಿಮಾವನ್ನೇ ಮಾಡುವುದಿಲ್ಲ ಎಂದು ಹೇಳಿದ್ದರು. ಆದ್ರೀಗ 50ನೇ ಸಿನಿಮಾ ಮೂಲಕ ಕಮ್‌ಬ್ಯಾಕ್ ಮಾಡಿದ್ದಾರೆ. "ತುಂಬಾ ಜನ ನನಗೆ ಅವಹೇಳನ ಮಾಡಿದ್ದಾರೆ. ಅವಮಾನ ಮಾಡಿದ್ದಾರೆ. ಎಸ್‌. ನಾರಾಯಣ್ ಅವರು ಏನ್ರಿ ತೆಗೀತಾರೆ? ಎರಡು ಸನ್‌ರೈಸ್ ತೆಗೀತಾರೆ. ಎರಡು ಜನಕ್ಕೆ ಕಣ್ಣೀರು ಹಾಕಿಸಿಬಿಡ್ತಾರೆ. ಅದ್ಬಿಟ್ಟು ಇನ್ನೇನ್ರಿ ಗೊತ್ತು ಅವ್ರಿಗೆ ಅಂದ್ಬಿಟ್ಟು 18 ಸಿನಿಮಾಗಳು ನನ್ನ ಕೈಯಿಂದ ಹೋಗಿದೆ." ಎಂದು ಹೇಳಿದ್ದಾರೆ.

ಎಸ್ ನಾರಾಯಣ್ ತಮ್ಮ 50ನೇ ಸಿನಿಮಾ '5ಡಿ'ಯನ್ನು ನಿರ್ದೇಶನ ಮಾಡಿ, ಬಿಡುಗಡೆಗೂ ಸಿದ್ಧತೆಗಳನ್ನು ಮಾಡಿಕೊಳ್ಳುತ್ತದ್ದಾರೆ ಅಂದು ಇನ್ಮುಂದೆ ಸಿನಿಮಾವನ್ನೇ ಮಾಡುವುದಿಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದ ಎಸ್. ನಾರಾಯಣ್, ಈಗ ಮತ್ತೆ ಆಕ್ಷನ್ ಕಟ್ ಹೇಳಿದ್ದಾರೆ.

More from Filmibeat

English summary
Kannada director S Narayan 50 movie 5D releasing soon. But he lost 18 movies in his bad days
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X