ರೇಮೊಗಾಗಿ ಒಂದಾದ ಕನ್ನಡದ ಟಾಪ್ ನಿರ್ದೇಶಕರು-ನಿರ್ಮಾಪಕರು

'ರೇಮೊ' ಚಿತ್ರದ ಟೀಸರ್ ಲಾಂಚ್‌ಗಾಗಿ ನಿರ್ದೇಶಕ ಪವನ್ ಒಡೆಯರ್ ಭರ್ಜರಿ ಪ್ಲ್ಯಾನ್ ಮಾಡಿದ್ದಾರೆ. ಒಂದೇ ವೇದಿಕೆ ಮೇಲೆ ಸ್ಯಾಂಡಲ್‌ವುಡ್‌ನ ಟಾಪ್ ನಿರ್ದೇಶಕರು ಹಾಗೂ ನಿರ್ಮಾಪಕರನ್ನು ಸೇರಿಸಲು ಸಜ್ಜಾಗಿದ್ದಾರೆ. ದುಬಾರಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ 'ರೇಮೊ' ಚಿತ್ರದ ಫಸ್ಟ್ ಲುಕ್ ಟೀಸರ್ ಇದೇ ನವೆಂಬರ್ 25ರಂದು ಗ್ರ್ಯಾಂಡ್ ಆಗಿ ಬಿಡುಗಡೆಯಾಗಲಿದೆ.

'ರೇಮೊ' ಚಿತ್ರತಂಡ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಎಲ್ಲವೂ ತಂಡ ಅಂದುಕೊಂಡಂತೆ ಆದರೆ, ಹೊಸ ವರ್ಷಕ್ಕೆ 'ರೇಮೊ' ಚಿತ್ರ ಅದ್ದೂರಿಯಾಗಿ ರಿಲೀಸ್ ಆಗಲಿದೆ. ಅದಕ್ಕೂ ಮುನ್ನ ನಿರ್ದೇಶಕ ಪವನ್ ಒಡೆಯರ್ ಚಿತ್ರದ ಮೊದಲ ಟೀಸರ್ ರಿಲೀಸ್ ಮಾಡೋದಕ್ಕೆ ಸಜ್ಜಾಗಿದ್ದಾರೆ. ಈ ಫಸ್ಟ್ ಲುಕ್ ಟೀಸರ್ ರಿಲೀಸ್ ಮಾಡುವುದಕ್ಕೆ ಸ್ಯಾಂಡಲ್‌ವುಡ್‌ನ ಟಾಪ್ ನಿರ್ಮಾಪಕರು ಹಾಗೂ ನಿರ್ದೇಶಕರು ಒಂದೇ ವೇದಿಕೆ ಮೇಲೆ ಸೇರಲಿದ್ದಾರೆ.

ಒಂದೇ ವೇದಿಕೆ ಕನ್ನಡ ಸ್ಟಾರ್ ನಿರ್ದೇಶಕರು-ನಿರ್ಮಾಪಕರು

ಒಂದೇ ವೇದಿಕೆ ಕನ್ನಡ ಸ್ಟಾರ್ ನಿರ್ದೇಶಕರು-ನಿರ್ಮಾಪಕರು

'ದಿ ವಿಲನ್' ಅಂತಹ ಸಿನಿಮಾವನ್ನು ನಿರ್ಮಿಸಿದ್ದ ದುಬಾರಿ ನಿರ್ಮಾಪಕ ಸಿ.ಆರ್ ಮನೋಹರ್ ರೇಮೊ ಚಿತ್ರದ ನಿರ್ಮಾಪಕ. ಹೀಗಾಗಿ ರೇಮೊ ಚಿತ್ರದ ಟೀಸರ್ ಲಾಂಚ್ ಕೂಡ ಅಷ್ಟೇ ಅದ್ದೂರಿಯಾಗಿ ನೆರವೇರಲಿದೆ. ಇದಕ್ಕಾಗಿ ಸ್ಯಾಂಡಲ್‌ವುಡ್‌ನ ಸ್ಟಾರ್ ನಿರ್ದೇಶಕರು ಹಾಗೂ ನಿರ್ಮಾಪಕರು ಒಂದೇ ವೇದಿಕೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಇವರಿಂದಲೇ 'ರೇಮೊ' ಚಿತ್ರದ ಟೀಸರ್ ಅನ್ನು ರಿಲೀಸ್ ಮಾಡಲು ಚಿತ್ರತಂಡ ಮುಂದಾಗಿದೆ. ಕೇವಲ ಫಸ್ಟ್ ಲುಕ್ ಟೀಸರ್ ಲಾಂಚ್‌ಗೆ ಇಡೀ ಸ್ಯಾಂಡಲ್‌ವುಡ್ ಸ್ಟಾರ್ ನಿರ್ಮಾಪಕರು ಹಾಗೂ ನಿರ್ದೇಶಕರು ಒಂದಾಗಿದ್ದು ಹೊಸ ಸಂಚಲ ಮೂಡಿಸಿದೆ.

ವೇದಿಕೆ ಏರಲಿರುವ ನಿರ್ದೇಶಕರು-ನಿರ್ಮಾಪಕರು ಯಾರು?

ವೇದಿಕೆ ಏರಲಿರುವ ನಿರ್ದೇಶಕರು-ನಿರ್ಮಾಪಕರು ಯಾರು?

'ರೇಮೊ' ಟೀಸರ್ ಲಾಂಚ್‌ಗಾಗಿ ಭಜರಂಗಿ ಚಿತ್ರದ ನಿರ್ದೇಶಕ ಎ.ಹರ್ಷ, ಜೇಮ್ಸ್ ಸಿನಿಮಾದ ನಿರ್ದೇಶಕ ಚೇತನ್ ಕುಮಾರ್, ರಾಬರ್ಟ್ ಡೈರೆಕ್ಟರ್ ತರುಣ್ ಸುಧೀರ್, ಗಾಳಿಪಟ 2 ಚಿತ್ರದ ನಿರ್ದೇಶಕ ಯೋಗರಾಜ್ ಭಟ್ , ಏಕ್‌ ಲವ್ ಯಾ ಸಿನಿಮಾ ನಿರ್ದೇಶಕ ಜೋಗಿ‌ ಪ್ರೇಮ್, ಮಾರ್ಟಿನ್ ನಿರ್ದೇಶಕ ಎಪಿ ಅರ್ಜುನ್ ವೇದಿಕೆ ಏರಲಿರುವ ನಿರ್ದೇಶಕರು. ಇದರೊಂದಿಗೆ ಸಲಗ ಸಿನಿಮಾದ ನಿರ್ಮಾಪಕ ಕೆ.ಪಿ ಶ್ರೀಕಾಂತ್, ಹೊಂಬಾಳೆ ಫಿಲಂಸ್‌ನ ಕಾರ್ತಿಕ್ ಗೌಡ, ಹಿರಿಯ ನಿರ್ಮಾಪಕ ಕೆ.ಮಂಜು, ಜಯಣ್ಣ ಹಾಗೂ ಭೋಗೇಂದ್ರ ವೇದಿಕೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಇವರುಗಳಿಂದಲೇ 'ರೇಮೋ' ಟೀಸರ್ ಲಾಂಚ್ ಮಾಡಿಸಲು ವೇದಿಕೆ ಸಿದ್ಧವಾಗಿದೆ.

ಆಶಿಕಾ- ಇಶಾನ್ ಪಾತ್ರ ಪರಿಚಯ

ಆಶಿಕಾ- ಇಶಾನ್ ಪಾತ್ರ ಪರಿಚಯ

ನಿರ್ಮಾಪಕ ಸಿ.ಆರ್ ಮನೋಹರ್ ಸಹೋದರ 'ರೋಗ್' ಸಿನಿಮಾದ ನಟ ಇಶಾನ್ ಈ ಚಿತ್ರದ ನಾಯಕ. ಮದಗಜ, ಆವತಾರ್ ಪುರುಷ ಚಿತ್ರದ ಆಶಿಕಾ ರಂಗನಾಥ್ ನಾಯಕಿಯಾಗಿ ನಟಿಸಿದ್ದಾರೆ. ಇವರೊಂದಿಗೆ ಶರತ್ ಕುಮಾರ್, ಮಧುಬಾಲಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮ್ಯೂಸಿಕಲ್ ರೊಮ್ಯಾಂಟಿಕ್ ಸಿನಿಮಾ 'ರೇಮೊ'ಗೆ ಅರ್ಜುನ್ ಜನ್ಯ ಅವರ ಕ್ಯಾಚಿ ಟ್ಯೂನ್ ಇದೆ.

ಸ್ಯಾಂಡಲ್‌ವುಡ್‌ನ ಅದ್ದೂರಿ ಸಿನಿಮಾ 'ರೇಮೊ'

ಸ್ಯಾಂಡಲ್‌ವುಡ್‌ನ ಅದ್ದೂರಿ ಸಿನಿಮಾ 'ರೇಮೊ'

ಪವನ್​ ಒಡೆಯರ್​ ನಿರ್ದೇಶನದ 'ರೇಮೊ ' ಸ್ಯಾಂಡಲ್‌ವುಡ್‌ನ ಅದ್ದೂರಿ ಸಿನಿಮಾ ಅನ್ನುವುದರಲ್ಲಿ ಅನುಮಾನವಿಲ್ಲ. ಈ ಚಿತ್ರದಲ್ಲಿ ನಾಯಕ ಇಶಾನ್‌ನನ್ನು ಪರಿಚಯಿಸುವ ಒಂದು ಹಾಡಿಗಾಗಿಯೇ ಒಂದೂವರೆ ಕೋಟಿ ಖರ್ಚು ಮಾಡಿದ್ದಾರೆ. ಹೀಗಾಗಿ ಸಿನಿಮಾ ಕೂಡ ಅಷ್ಟೇ ಅದ್ದೂರಿಯಾಗಿರಲಿದೆ. ಇಲ್ಲಿವರೆಗೂ ಕೇವಲ ಮೇಕಿಂಗ್ ಬಗ್ಗೆ ಮಾತಾಡುತ್ತಿದ್ದ ಚಿತ್ರತಂಡ, ಸಿನಿಮಾದ ಟೀಸರ್ ಅನ್ನು ಪ್ರೇಕ್ಷಕರ ಮುಂದಿಡುವುದಕ್ಕೆ ಭರ್ಜರಿ ತಯಾರಿ ನಡೆಸಿದೆ.

More from Filmibeat

English summary
Kannada film star director and producer will launch Raymo movie first look teaser. Pawan Wadeyar directed, Ashika Ranganath acted movie tease will launch on November 25th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X