Nandi Awards: ತೆಲುಗಿನಲ್ಲಷ್ಟೇ ಅಲ್ಲ.. ಸ್ಯಾಂಡಲ್‌ವುಡ್‌ನಲ್ಲೂ ನಂದಿ ಅವಾರ್ಡ್ ಆರಂಭ.. ಏನಿದರ ಉದ್ದೇಶ?

ಚಿತ್ರರಂಗದ ಅವಾರ್ಡ್ ಫಂಕ್ಷನ್ ಅಂದ್ರೆ ಮೊದ್ಲು ನೆನಪಾಗೋದು ಫಿಲಂಫೇರ್, ಸೈಮಾ, ಐಫಾ ಮುಂತಾದವೇ. ಇಲ್ಲೆಲ್ಲಾ ಕನ್ನಡದ ಪ್ರತಿಭೆಗಳನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ಕೊಡ್ತಾರೆ ಅನ್ನೋದೇನೋ ನಿಜವೇ. ಆದ್ರೆ ನಾವು- ಕನ್ನಡದವರು ಈ ರೀತಿಯ ಯಾವುದೇ ಪ್ರಶಸ್ತಿ ಕಾರ್ಯಕ್ರಮ ನಡೆಸುತ್ತಿಲ್ಲ ಎನ್ನುವ ವಿಚಾರ ಬಹಳ ಸಮಯದಿಂದ ಚಿತ್ರರಂಗದ ಹಿರಿಯರನ್ನು ಕಾಡುತ್ತಿತ್ತಂತೆ. ಇದಕ್ಕೆ ಪರಿಹಾರವಾಗಿ ಬರ್ತಿರೋದು "ನಂದಿ-ಕನ್ನಡದ ಹೆಮ್ಮೆ" ಎನ್ನುವ ಅಚ್ಚ ಕನ್ನಡದ ಪ್ರಶಸ್ತಿ ಪ್ರದಾನ ಸಮಾರಂಭ.

ಕನ್ನಡದಲ್ಲಿ ಮೊಟ್ಟಮೊದಲ ಬಾರಿಗೆ ನಂದಿ ಪ್ರಶಸ್ತಿ ಆರಂಭವಾಗಲಿದ್ದು ಇದರ ಲಾಂಛನವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ನಿನ್ನೆ ಅನಾವರಣಗೊಳಿಸಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ ಮಾ ಹರೀಶ್ ಈ ಬಗ್ಗೆ ಮತ್ತಷ್ಟು ವಿವರಣೆ ನೀಡಿದ್ದಾರೆ. "ಚಿತ್ರರಂಗದ ಗೆಳೆಯರೆಲ್ಲಾ ಸೇರಿ "ನಂದಿ-ಕನ್ನಡದ ಹೆಮ್ಮೆ" ಪ್ರಶಸ್ತಿ ನೀಡೋದು ಅತ್ಯಂತ ಸೂಕ್ತ ಎಂದು ನಿರ್ಧರಿಸಿದ್ವಿ. ಇದೇ ವರ್ಷ ನವೆಂಬರ್ ತಿಂಗಳಲ್ಲಿ ಅದ್ಧೂರಿಯಾಗಿ ಪ್ರಶಸ್ತಿ ಪ್ರದಾನ ಸಮಾರಮಭ ನಡೆಯಲಿದೆ. ಸದ್ಯ ಕೇವಲ ಲಾಂಛನ ಮಾತ್ರ ಬಿಡುಗಡೆಯಾಗಿದೆ. ಮುಂದಿನ ದಿನಗಳಲ್ಲಿ ಇದರ ರೂಪುರೇಷೆ ನಿರ್ಧಾರವಾಗಲಿದ್ದು ಅದರ ವಿವರಗಳನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ತಿಳಿಸಲಿದೆ.

kannada-nandi-awards

ಕನ್ನಡದಲ್ಲಿ ಪ್ರತಿಭೆಗಳಿಗೇನೂ ಕೊರತೆಯಿಲ್ಲ. ಒಬ್ಬರಿಗಿಂತ ಒಬ್ಬರು ಮಿಗಿಲಾಗಿ ತಮ್ಮ ಕಲೆಯನ್ನು ಒರೆಗೆ ಹಚ್ಚಿದ್ದಾರೆ. ಎಲ್ಲೆಡೆ ಸೈ ಎನಿಸಿಕೊಂಡಿದ್ದಾರೆ. ಇಲ್ಲಿನ ಪ್ರತಿಭೆಗಳಿಗೆ ಎಲ್ಲಾ ಭಾಷೆಯ ಚಿತ್ರರಂಗದಲ್ಲೂ ಬೇಡಿಕೆ ಇದೆ. ಜೊತೆಗೆ ಪ್ರತಿಷ್ಟಿತ ಪ್ರಶಸ್ತಿಗಳನ್ನೆಲ್ಲಾ ಇಲ್ಲಿನ ಕಲಾವಿದರು ಮತ್ತು ತಂತ್ರಜ್ಞರು ಪ್ರತೀ ಬಾರಿಗೂ ಗೆದ್ದು ಸಂಭ್ರಮಿಸಿದ್ದಾರೆ. ಅವರೊಂದಿಗೆ ಕನ್ನಡಿಗರೂ ಖುಷಿಪಟ್ಟಿದ್ದಾರೆ.

ಆದರೆ, ಕನ್ನಡದ್ದೇ ಆದ ಸ್ವಂತ ಪ್ರಶಸ್ತಿ ನೀಡುವ ವೇದಿಕೆ, ಆ ಮೂಲಕ ನಮ್ಮ ಪ್ರತಿಭೆಗಳನ್ನು ನಾವೇ ಗುರುತಿಸಿ ಬೆನ್ನು ತಟ್ಟುವ ಪ್ರಯತ್ನ ಮಾಡಬೇಕಿದೆ. ಇದನ್ನೆಲ್ಲಾ ಮನಗಂಡು, ಚರ್ಚಿಸಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಂದಿ ಅವಾರ್ಡ್ ಕೊಡುವ ನಿರ್ಧಾರ ಮಾಡಿದೆ.

kannada-nandi-awards

ಇನ್ನು ನೆರೆಯ ಆಂಧ್ರಪ್ರದೇಶ ಮನರಂಜನಾ ಕ್ಷೇತ್ರದ ಸಾಧಕರಿಗೆ ಒಡುವ ರಾಜ್ಯಪ್ರಶಸ್ತಿಗೂ ನಂದಿ ಅವಾರ್ಡ್ಸ್ ಎಂದೇ ಹೆಸರಿದೆ. ಹಾಗಾಗಿ ನಮ್ಮ ರಾಜ್ಯದ ಈ ಹೊಸ ಖಾಸಗಿ ಪ್ರಶಸ್ತಿಗೆ ಅದೇ ಹೆಸರಿಟ್ಟಿರೋದು ನೋಡಿ ಇದಕ್ಕೂ ಆಂಧ್ರದ ಅವಾರ್ಡ್‌ಗೂ ಸಂಬಂಧ ಇದೆ ಎಂದುಕೊಳ್ಳಬೇಡಿ. ಇವೆರಡೂ ಸಂಪೂರ್ಣವಾಗಿ ಬೇರೆಯೇ ಆಗಿವೆ.

ನಂದಿ ಎನ್ನುವುದು ಕನ್ನಡದ ಪಾಲಿಗೂ ಒಂದು ಪವರ್‌ಫುಲ್ ಇಮೇಜ್ ಎನಿಸುವ ಲಾಂಛನ. ಆ ಕಾರಣದಿಂದ ಅದೇ ಪದವನ್ನು ಇಲ್ಲಿ ಆಯ್ಕೆ ಮಾಡಲಾಗಿದೆ ಅಷ್ಟೇ. ಇನ್ನು ನಂದಿ ಅವಾರ್ಡ್ ಅನೌನ್ಸ್ ಆಗ್ತಿದ್ದಂತೆ ಚೊಚ್ಚಲ ನಂದಿ ಪ್ರಶಸ್ತಿಯನ್ನು ಕನ್ನಡದ ಯಾವೆಲ್ಲಾ ಕಲಾವಿದರು, ತಂತ್ರಜ್ಞರು ಪಡೆಯಬಹುದು ಎನ್ನುವ ಕುತೂಹಲದ ಚರ್ಚೆಯಂತೂ ಈಗಾಗ್ಲೇ ಶುರುವಾಗ್ಬಿಟ್ಟಿದೆ. ಎಷ್ಟು ಕೆಟಗರಿ, ಎಷ್ಟು ಪ್ರಶಸ್ತಿ ಎನ್ನುವ ವಿವರಗಳನ್ನೆಲ್ಲಾ ವಾಣಿಜ್ಯ ಮಂಡಳಿ ತಿಳಿಸಿದ ನಂತರ ಬಹುಶಃ ಸಾಮಾಜಿಕ ಜಾಲತಾಣಗಳಲ್ಲಿ ಜನ ತಾವೇ ಈ ಬಗ್ಗೆ ಮತ್ತಷ್ಟು ಬಿರುಸಿನ ಚರ್ಚೆ ಮಾಡಿದ್ರೂ ಆಶ್ಚರ್ಯವಿಲ್ಲ. ಒಟ್ನಲ್ಲಿ ಕನ್ನಡದ ಸ್ವಂತದ ಪ್ರಶಸ್ತಿಯೊಂದು ಶುರುವಾಗ್ತಿರೋದು ಎಲ್ಲರಿಗೂ ಖುಷಿ ಕೊಟ್ಟಿರೋದಂತೂ ಸತ್ಯ.

More from Filmibeat

English summary
Sandalwood have own Nandi awards
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X