For Quick Alerts
  ALLOW NOTIFICATIONS  
  For Daily Alerts

  ಲಂಡನ್ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಲೂಸಿಯಾ

  By Rajendra
  |

  ಜನರೇ ನಿರ್ಮಾಪಕರಾಗಿರುವ (Crowd funding movie) ಕನ್ನಡದ ಮೊಟ್ಟ ಮೊದಲ ಚಿತ್ರ 'ಲೂಸಿಯಾ'. ಈ ಚಿತ್ರ ಈಗಾಗಲೆ ಹಾಡುಗಳಿಂದ ಹಾಗೂ ವಿಭಿನ್ನ ಪ್ರೊಮೋಗಳಿಂದ ಕನ್ನಡ ಚಿತ್ರರಸಿಕರ ಗಮನಸೆಳೆದಿದೆ. ಬಿಡುಗಡೆಗೆ ಮುನ್ನವೇ ಸಾಕಷ್ಟು ಸದ್ದು ಮಾಡಿರುವ ಈ ಚಿತ್ರ ಈಗ ಲಂಡನ್ ಅಂತಾರ್ರಾಷ್ಟ್ರೀಯಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ.

  ಪವನ್ ಕುಮಾರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಈ ಹಿಂದೆ ಅವರ ನಿರ್ದೇಶನದಲ್ಲಿ ಮೂಡಿಬಂದಿದ್ದ 'ಲೈಫು ಇಷ್ಟೇನೆ' ಚಿತ್ರ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಯಶಸ್ವಿ ನಿರ್ದೇಶಕ ಯೋಗರಾಜ್ ಭಟ್ ಅವರ ಗರಡಿಯಲ್ಲಿ ಪಳಗಿರುವ ಪವನ್ ಈಗ 'ಲೂಸಿಯಾ' ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. [ಕೊಲವೆರಿ ಡಿ ಮೀರಿಸಲಿರುವ ಲೂಸಿಯಾ ಕನ್ನಡ ಹಾಡು]

  ಇಷ್ಟಕ್ಕೂ 'ಲೂಸಿಯಾ' ಎಂದರೆ ಏನು? ಹುಡಿಗೀನಾ? ಹುಡುಗಾನಾ? ಈ ಪ್ರಶ್ನೆಗಳಿಗೆ ಸದ್ಯಕ್ಕೆ ಉತ್ತರವಿಲ್ಲ. ಪವನ್ ಅವರನ್ನು ಕೇಳಿದರೆ ಚಿತ್ರ ನೋಡಿ ನಿಮಗೇ ಗೊತ್ತಾಗುತ್ತದೆ ಎನ್ನುತ್ತಾರೆ. ಈಗ ಲಂಡನ್ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆಯಾಗುವ ಮೂಲಕ ಮತ್ತೆ ಸುದ್ದಿಯಲ್ಲಿದೆ 'ಲೂಸಿಯಾ' ಚಿತ್ರ.

  ಲೂಸಿಯಾ ಚಿತ್ರ ಜುಲೈ ತಿಂಗಳ ಕೊನೆಯ ವಾರ ಅಥವಾ ಆಗಸ್ಟ್ ತಿಂಗಳಲ್ಲಿ ರಾಜ್ಯದಾದ್ಯಂತ ತೆರೆ ಕಾಣಲಿದೆ. ಜುಲೈ 20-21ರಂದು ಲಂಡನ್ ನಲ್ಲಿ ಚಿತ್ರ ಪ್ರದರ್ಶನಗೊಳ್ಳುತ್ತಿದೆ. ಸರಿಸುಮಾರು 110 ಜನ ಬಂಡವಾಳ ಹೂಡಿ ನಿರ್ಮಿಸಿರುವ ಚಿತ್ರ ಇದಾಗಿದೆ. ಮಂಗಳೂರಿನ ಹಾರ್ದಿಕ ಶೆಟ್ಟಿ, ಕೇರಳದ ಶ್ರುತಿ ಚಿತ್ರದ ನಾಯಕಿಯರು.

  'ಡ್ರಾಮಾ' ಚಿತ್ರದಲ್ಲಿ ಯಶ್ ಜೊತೆ ಕ್ಯಾಟ್ಲೆ ಸತೀಶ ಪಾತ್ರವನ್ನು ಪೋಷಿಸಿದ್ದ ನೀನಾಸಂ ಸತೀಶ್ ಚಿತ್ರದ ನಾಯಕ ನಟ. ಹೊಸ ಸಂಗೀತ ನಿರ್ದೇಶಕ ಮೈಸೂರಿನ ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತ ನಿರ್ದೇಶನ ಚಿತ್ರಕ್ಕಿದೆ. 'ತಿನ್ಬೇಡಕಮ್ಮಿ' ಎಂಬುದು ಈ ಚಿತ್ರದ ಅಡಿಬರಹ. (ಒನ್ಇಂಡಿಯಾ ಕನ್ನಡ)

  English summary
  Kannada film industries first Crowd funding movie 'Lucia' selected for London International film festival. Pawan Kumar’s Lucia is selected for World premiere by London Indian film festival which will be screened at Cine World theater, London on July 20th, 2013 and second premiere on July 21st, 2013 at Institute of London contemporary art Theaters, London.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X