»   » ಕೊಲವೆರಿ ಡಿ ಮೀರಿಸಲಿರುವ ಲೂಸಿಯಾ ಕನ್ನಡ ಹಾಡು

ಕೊಲವೆರಿ ಡಿ ಮೀರಿಸಲಿರುವ ಲೂಸಿಯಾ ಕನ್ನಡ ಹಾಡು

Posted By:
Subscribe to Filmibeat Kannada
A song form Kannada Lucia
ಈ ಹಾಡು ಈಗ ಯೂಟ್ಯೂಬ್ ನಲ್ಲಿ ಸಿಕ್ಕಾಪಟ್ಟೆ ಹಿಟ್ ಆಗಿದೆ. ಈ ಹಾಡನ್ನು ರಚಿಸಿದವರು ಮೈಸೂರಿನ ಪೂರ್ಣಚಂದ್ರ ತೇಜಸ್ವಿ ಹಾಗೂ ಅವರ ಗೆಳೆಯರು. ಸಂಗೀತ ಸಂಯೋಜನೆ ಸಹ ಈ ಗೆಳೆಯರದೆ. ಈ ವೆರೈಟಿ ಸಾಹಿತ್ಯವನ್ನು ನಟ, ನಿರ್ದೇಶಕ ಹಾಗೂ ನಿರ್ಮಾಪಕ ಪವನ್ ಕುಮಾರ್ ಅವರ 'ಲೂಸಿಯಾ' ಎಂಬ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ.

ಪವನ್ ಅವರು A Perfect Day, Beginnings & Endings, Blind Date ಎಂಬ ಕಿರುಚಿತ್ರಗಳನ್ನು ನಿರ್ದೇಶಿಸಿದ್ದಾರೆ. 'ಲಗೋರಿ' (2008) ಚಿತ್ರಕ್ಕೆ ಚಿತ್ರಕಥೆ ಬರೆದಿದ್ದರು. 'ಮನಸಾರೆ' ಚಿತ್ರದಲ್ಲಿ ಅಭಿನಯಿಸುವುದರ ಜೊತೆಗೆ ಚಿತ್ರಕಥೆಯನ್ನೂ ಹೆಣೆದಿದ್ದರು. 'ಪಂಚರಂಗಿ' ಸಿನೆಮಾದ ಕಥೆ, ಚಿತ್ರಕಥೆ ಸಹ ಇವರದೆ.

ಈಗ ಇವರು 'ಲೂಸಿಯಾ' ಎಂಬ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಈ ಹಾಡಿನ ವಾಯ್ಸ್ ಆಡಿಷನ್ ಹಾಡನ್ನು ಯೂಟ್ಯೂಬ್ ಗೆ ಹಾಕಿದ್ದಾರೆ. ಈ ಹಾಡಿನ ಸಂಗೀತ ಕೂಡ ಸಾಹಿತ್ಯದೊಂದಿಗೆ ಜುಳುಜುಳನೆ ಹರಿಯುವುದನ್ನು ಕೇಳುತ್ತಿದ್ದರೆ ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತದೆ.

ಈ ಹಾಡಿನ ಚರಣಗಳ ಜೊತೆಗೆ ಯೂಟ್ಯೂಬ್ ಕೊಂಡಿಯನ್ನೂ ಕೊಡುತ್ತಿದ್ದೇವೆ. ನೀವೂ ಹಾಡಿ ಆನಂದಿಸಿ. ಜಿ.ಪಿ.ರಾಜರತ್ನಂ ಅವರ ಶೈಲಿಯಲ್ಲಿರುವ ಹಾಡು ನಿಜಕ್ಕೂ ಸೊಗಸಾಗಿದೆ. ಓದಿ ಎಂಜಾಯ್ ಮಾಡಿ. ನಿಮ್ಮ ಅನಿಸಿಕೆ ತಿಳಿಸಿ. (ಹಾಡಿನ ವಿಡಿಯೋ ಲಿಂಕ್)ತಿನ್ ಬೇಡ ಕಮ್ಮಿ ತಿನ್ ತಿನ್ ಬೇಡ ಕಮಿ
ತಿನ್ ತಿನ್ ಬೇಡ ಕಮೀ ನಿ ನೆಲಗಳ್ಳೆಯ
ತಿನ್ ಬೇಡ ಕಮೀ ತಿನ್ ತಿನ್ ಬೇಡ ಕಮೀ
ತಿನ್ ತಿನ್ ಬೇಡ ಕಮೀ ನೀ ನನ್ನ ತಲೆಯ

ಸಪ್ಪೀರಿಗೆ ಸೊಪ್ಪು ತಕಂಡ್
ಉಪ್ಪು ಕಾರ ಉಳಿ ಬುಟ್ ಕಂಟ್
ಕಪ್ಪು ರಾಗಿ ಮುದ್ದೆ ತಿನೋದ್ ಒಳ್ಳೇದು ಕಮೀ
ಅಪ್ಪಿ ತಪ್ಪಿ ಯಾಟೆ ಕೋಳಿ
ಕೊಬ್ಬೆಚ್ಕಂಡು ಓಡಾಡ್ ತಿದ್ರೆ
ಇಡ್ಕಂಡ್ ಕುಯ್ಕಂಡ್ ಎಸರು ಮಾಡ್ಕಂಡ್ ಸೊರ್ ದು ನೋಡಮ್ಮಿ

ತಿಂತ ತಿಂತ ತಿಂತ ತಿಂತ ತಿಮಿರ್ ಕಮ್ಮಿ ಕಾಣಮಿ
ತಿಂತ ತಿಂತ ತಿಂತ ತಿಂತ ತೀಟೆ ಕಾಣಮ್ಮಿ
ತಿಂತ ತಿಂತ ತಿಂತ ತಿಂತ ತಿಮಿರ್ ಕಮ್ಮಿ ಕಾಣಮಿ
ತಿಂತ ತಿಂತ ತಿಂತ ತಿಂತ ಆಸೆ ಕಾಣಮಿ

ತಿನ್ ಬೇಡ ಕಮ್ಮಿ ತಿನ್ ತಿನ್ ಬೇಡ ಕಮಿ
ತಿನ್ ತಿನ್ ಬೇಡ ಕಮೀ ನಿ ನೆಲಗಳ್ಳೆಯ
ತಿನ್ ಬೇಡ ಕಮೀ ತಿನ್ ತಿನ್ ಬೇಡ ಕಮೀ
ತಿನ್ ತಿನ್ ಬೇಡ ಕಮೀ ನೀ ನನ್ನ ತಲೆಯ

ಕನ್ನಡ ಮದರ್‍ರು ಇಂಗ್ಲಿಷು ಲವರು
ಕಟ್ಕತಾಳೋ ಬಿಟ್ಟೋಯ್ತಾಳೋ ಗೊತ್ತಿಲ್ಲಕಮಿ
ಕನ್ನಡ ಮದರ್‍ರಂಗೆ ಇಂಗ್ಲಿಷು ಲವರ್‍ರಂಗೆ
ಕಟ್ಕತಾಳೋ ಬಿಟ್ಟೋಯ್ತಾಳೋ ಗೊತ್ತಿಲ್ಲಕಮಿ

ಯಾರಾರು ಕೈ ಕೊಡ್ಲಿ
ಊರೆಲ್ಲ ಆಡ್ಕಳ್ಳಿ ಉಣ್ಣಕ್ಕಿಕ್ಕಿ ಬೆಣ್ಣೆ ತಿನ್ಸೋಳವ್ವನೇಕಮ್ಮಿ
ಬಾರಮಿ ಕೂರಮಿ ಏಳ್ತೀನಿ ಕೇಳಮಿ
ಕನ್ನಡ ಕಮಿಯಮಿ ಮುದ್ದೆ ತಿಂದು ನೋಡಮಿ
ತುತ್ತು ಮಾಡಿ ನುಂಗುವಷ್ಟೆ ಸುಲಭ ಕಾಣಮಿ

ಸಪ್ಪೀರಿಗೆ ಸೊಪ್ಪು ತಕಂಡ್
ಉಪ್ಪು ಕಾರ ಉಳಿ ಬುಟ್ ಕಂಟ್
ಕಪ್ಪು ರಾಗಿ ಮುದ್ದೆ ತಿನೋದ್ ಒಳ್ಳೇದು ಕಮೀ
ಅಪ್ಪಿ ತಪ್ಪಿ ಯಾಟೆ ಕೋಳಿ
ಕೊಬ್ಬೆಚ್ಕಂಡು ಓಡಾಡ್ ತಿದ್ರೆ
ಇಡ್ಕಂಡ್ ಕುಯ್ಕಂಡ್ ಎಸರು ಮಾಡ್ಕಂಡ್ ಸೊರ್ ದು ನೋಡಮ್ಮಿ

English summary
A fantastic song "Thinbeda kami" from Lucia (For voice audition) is the first Crowd Funded Kannada film. The film is directed by Pawan Kumar and is scheduled to release early 2013. Written and composed by Poornachandra Tejasvi and Team (Mysore).

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada