For Quick Alerts
  ALLOW NOTIFICATIONS  
  For Daily Alerts

  ಚಂದನ್ ಸಾವಿಗೆ ಕಂಬನಿ ಮಿಡಿದ ಚಿತ್ರರಂಗ

  By Pavithra
  |
  ಚಂದನ್ ಸಾವಿಗೆ ಕಂಬನಿ ಮಿಡಿದ ಚಿತ್ರರಂಗ | Filmibeat Kannada

  ಕನ್ನಡ ಟಿವಿ ನಿರೂಪಕ ಚಂದನ್ ಸಾವು ಸಾಕಷ್ಟು ಜನರಿಗೆ ನೋವು ತಂದಿದೆ. ಚಿತ್ರರಂಗದಲ್ಲಿ ಸಾಕಷ್ಟು ವರ್ಷಗಳಿಂದ ಗುರುತಿಸಿಕೊಂಡಿದ್ದ ಚಂದನ್ ಬಹುತೇಕ ಸ್ಟಾರ್ ಕಲಾವಿದರ ಜೊತೆಯಲ್ಲಿ ಉತ್ತಮ ಒಡನಾಟ ಹೊಂದಿದ್ದರು.

  ಕನ್ನಡ ಸಿನಿಮಾ ಹಾಗೂ ಕನ್ನಡ ಭಾಷೆಯನ್ನು ಅತಿಯಾಗಿ ಪ್ರೀತಿ ಮಾಡುತ್ತಿದ್ದ ಆಂಕರ್ ಚಂದನ್ ಅಣ್ಣಾವ್ರ ಅಪ್ಪಟ ಅಭಿಮಾನಿ ಆಗಿದ್ದರು. ಯಾವುದೇ ಸಣ್ಣ ಸಿನಿಮಾ ಕಾರ್ಯಕ್ರಮ ನಡೆಸಿಕೊಡಬೇಕು ಎಂದರು ಪೂರ್ವ ತಯಾರಿ ಮಾಡಿಕೊಳ್ಳುತ್ತಿದ್ದರು.

  ಚಂದನ್ ನಿರೂಪಣೆಗೆ ಅನುಶ್ರೀ ಕೂಡ ಅಭಿಮಾನಿ ಆಗಿದ್ರು!ಚಂದನ್ ನಿರೂಪಣೆಗೆ ಅನುಶ್ರೀ ಕೂಡ ಅಭಿಮಾನಿ ಆಗಿದ್ರು!

  ಅಪ್ಪಟ ಕನ್ನಡತನ, ಕಾರ್ಯಕ್ರಮಕ್ಕೂ ಮುಂಚಿನ ತಯಾರಿ, ಕನ್ನಡ ಸಿನಿಮಾ ಮೇಲಿನ ಪ್ರೀತಿ ಇವೆಲ್ಲವೂ ಸಿನಿಮಾರಂಗದವರಿಗೆ ಚಂದನ್ ಮತ್ತಷ್ಟು ಹತ್ತಿವಾಗುವಂತೆ ಮಾಡಿತ್ತು. ಚಂದನ್ ಸಾವಿಗೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ. ಮುಂದೆ ಓದಿ

  ಸಂತಾಪ ಸೂಚಿಸಿದ ಧೀರೇನ್

  ಸಂತಾಪ ಸೂಚಿಸಿದ ಧೀರೇನ್

  ಡಾ ರಾಜ್ ಕುಮಾರ್ ಅವರ ಮೊಮ್ಮಗ ಧೀರೇನ್ ರಾಮ್ ಕುಮಾರ್ ಚಂದನ್ ಅವರ ಜೊತೆಗಿನ ನೆನಪನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. "ನಮ್ಮ ತಾಯಿ ಹಾಗೂ ಅಜ್ಜಿಯ ಸಂದರ್ಶನ ಮಾಡಿದ್ದರು. ಇಷ್ಟು ಬೇಗ ಕಳೆದು ಹೋದರು ಎನ್ನುವುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ" ಎಂದಿದ್ದಾರೆ.

  ಕಳೆದು ಹೋದ ಚಂದಿರ

  ಕಳೆದು ಹೋದ ಚಂದಿರ

  "ಚಂದನ್ ನೀವು ತುಂಬಾ ಬುದ್ದಿವಂತರು. ಮಾಧ್ಯಮ ಲೋಕದಲ್ಲಿ ಸಾಕಷ್ಟು ವಿಚಾರವನ್ನು ತಿಳಿದುಕೊಂಡವರಲ್ಲಿ ನೀವು ಒಬ್ಬರು. ನಿಮ್ಮ ಕನ್ನಡ ಭಾಷೆಯ ಮೇಲಿನ ಹಿಡಿತಕ್ಕೆ ಸಾಕಷ್ಟು ಜನರು ಅಭಿಮಾನಿಗಳಿದ್ದರು. ನಿಮ್ಮನ್ನು ಕಳೆದುಕೊಂಡಿದಕ್ಕೆ ಬೇಸರವಿದೆ." ಎಂದು ನಿರ್ದೇಶಕ ದಯಾಳ್ ಪದ್ಮನಾಬ್ ಬರೆದುಕೊಂಡಿದ್ದಾರೆ.

  ಸಹೃದಯದ ವ್ಯಕ್ತಿ ಚಂದನ್ ಇನಿಲ್ಲ

  ಸಹೃದಯದ ವ್ಯಕ್ತಿ ಚಂದನ್ ಇನಿಲ್ಲ

  "ಬುದ್ದಿವಂತ ನಿರೂಪಕ, ಅತ್ಯುತ್ತಮ ವಾಗ್ಮಿ ಇವುಗಳ ಜೊತೆಯಲ್ಲಿ ಒಳ್ಳೆಯ ಮನಸ್ಸು ಹೊಂದಿದ್ದ ಚಂದನ್ ಇನ್ನಿಲ್ಲ. ಅವರ ಆತ್ಮಕ್ಕೆ ಸಾಂತಿ ನೀಡಲಿ" ಎಂದು ನಿರ್ದೇಶಕ, ನಟ ತರುಣ್ ಸುಧೀರ್ ಟ್ವೀಟ್ ಮಾಡಿದ್ದಾರೆ. ತರುಣ್ ನಿರ್ದೇಶನದ ಚೌಕ ಚಿತ್ರದ 50ನೇ ದಿನ ಪೂರೈಸಿದ ಸಂಭ್ರಮದ ಕಾರ್ಯಕ್ರಮದಲ್ಲಿ ಚಂದನ್ ಭಾಗಿ ಆಗಿದ್ದರು.

  ಸ್ವಚ್ಛ ಮನಸ್ಸಿನ ಗೆಳೆಯ ಇನ್ನಿಲ್ಲ

  ಸ್ವಚ್ಛ ಮನಸ್ಸಿನ ಗೆಳೆಯ ಇನ್ನಿಲ್ಲ

  ನಟ ನೆನಪಿರಲಿ ಪ್ರೇಮ್ ಚಂದನ್ ಸಾವಿನ ಬಗ್ಗೆ ಟ್ವೀಟ್ ಮಾಡಿದ್ದಾರೆ. "ಅಚ್ಚ ಕನ್ನಡದ ಸ್ವಚ್ಛ ಮನಸ್ಸಿನ ನನ್ನ ಗೆಳೆಯ ಹಾಗು ನನ್ನ ಆತ್ಮೀಯ ನಿರೂಪಕ ಸ್ನೇಹಿತ ಚಂದನ್ ಇನ್ನಿಲ್ಲ . ದೇವರು ನಿನ್ನ ಆತ್ಮಕ್ಕೆ ಶಾಂತಿ ಕೊಡಲಿ ಗೆಳೆಯ. ನಿನ್ನ ಕುಟುಂಬದ ಕಾವಲಾಗಿ ನಾವಿರುತ್ತೇವೆ." ಎಂದಿದ್ದಾರೆ.

  English summary
  famous kannada tv anchor Chandan pass away. Kannada film stars mourns death of anchor Chandan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X