New Year 2025: ಹೊಸ ವರ್ಷ ಬಂದೇ ಬಿಡ್ತು.. ಏನಂತಾರೆ ಕನ್ನಡದ ತಾರೆಯರು?

2024 ಕೆಲವರಿಗೆ ಸೂಪರ್ ಸಕ್ಸಸ್ ಕೊಟ್ಟಿದೆ. ಅದೇ ಮತ್ತೆ ಕೆಲವರಿಗೆ ನಿರಾಸೆಯನ್ನು ಮೂಡಿಸಿದೆ. 2024 ಹಳೆಯದಾಗಿದೆ. 2025 ಹೊಸ ವರ್ಷದ ಆಗಮನ ಆಗಿದೆ. ಇಡೀ ವಿಶ್ವದ ಮೂಲೆ ಮೂಲೆಯಲ್ಲಿ ಹೊಸ ವರ್ಷದ ಸಂಭ್ರಮವನ್ನು ಆಚರಿಸುತ್ತಿದ್ದಾರೆ. ಹಾಗೆ ನಮ್ಮ ಕನ್ನಡ ಚಿತ್ರರಂಗದ ತಾರೆಯರು ಕೂಡ ನ್ಯೂ ಇಯರ್ ಅನ್ನು ಗ್ರ್ಯಾಂಡ್ ಆಗಿಯೇ ವೆಲ್ ಕಮ್ ಮಾಡಿದ್ದಾರೆ.

ಕನ್ನಡದ ತಾರೆಯರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್‌ಗಳನ್ನು ಹಂಚಿಕೊಳ್ಳುವುದರ ಮೂಲಕ ಹೊಸ ವರ್ಷಕ್ಕೆ ಶುಭಾಶಯಗಳನ್ನು ಕೋರಿದ್ದಾರೆ. ನಟಿ ಸಾನ್ವಿ ಶ್ರೀವತ್ಸವ್, ಪ್ರಜ್ವಲ್ ದೇವರಾಜ್, ರೋರಿಂಗ್ ಸ್ಟಾರ್ ಶ್ರೀಮುರಳಿ, ರಾಗಿಣಿ ದ್ವಿವೇದಿ, ಪ್ರಿಯಾಂಕಾ ಉಪೇಂದ್ರ, ರಕ್ಷಿತಾ ಪ್ರೇಮ್, ಸೇರಿದಂತೆ ಹೊಸ ವರ್ಷಕ್ಕೆ ಶುಭಕೋರಿದ್ದು, ತಮ್ಮ ಅಭಿಮಾನಿಗಳಿಗೆ ಶುಭಕೋರಿದ್ದಾರೆ.

Kannada film stars wished new year 2025 here is list of celebrities

ಸಾನ್ವಿ ಶ್ರೀವತ್ಸವ್

ಸಾನ್ಚಿ ಶ್ರೀವತ್ಸವ್ 2024 ಹೇಗಿತ್ತು ಅನ್ನೋದನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡು ಹೊಸ ವರ್ಷವನ್ನು ಸ್ವಾಗತಿಸಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. "2024 ನನಗೊಂದು ಪಾಠ ಅನ್ನೋದು ಸ್ಪಷ್ಟವಾಗಿತ್ತು. ಇದು ನನ್ನ ಬೆಳವಣಿಗೆಯ ವರ್ಷ ಎಂದು ಹೇಳಬಹುದು. ಈ ವರ್ಷ ನಾನೇನು ಕಲಿತಿದ್ದೇನೆ ಅದಕ್ಕೆ 2025 ಸ್ಟ್ರಾಂಗ್ ಆಗಿರುತ್ತೆ ಎಂದು ಭಾವಿಸಿದ್ದೇನೆ. 100 ಸಾರಿ ಬಿದ್ದರೂ ಮತ್ತೆ ಎದ್ದೇಳಲೇ ಬೇಕು. ಕ್ರೇಜಿ ವರ್ಷಕ್ಕೆ ಬಾಯ್ ಅಂತ ಹೇಳುತ್ತೇನೆ. ನಾನೇ ಹೆಮ್ಮೆ ಪಡುವಂತೆ ಮಾಡಲಿರುವ 2025ಕ್ಕೆ ಹಾಯ್ ಎಂದು ಹೇಳುತ್ತೇನೆ. ಇದು ನನಗೆ ಗೊತ್ತು. ಯಾರು ನನಗೆ ಜೊತೆ ಇದ್ದರೋ, ಯಾರು ಇಲ್ಲವೋ ಅವರೆಲ್ಲರಿಗೂ ನನ್ನ ಜರ್ನಿಯ ಭಾಗವಾಗಿದ್ದಕ್ಕೆ ಲವ್ ಹಾಗೂ ಥ್ಯಾಂಕ್ಯೂ" ಎಂದು ಸಾನ್ವಿ ಶ್ರೀವತ್ಸವ್ ಬರೆದು ಪೋಸ್ಟ್ ಮಾಡಿದ್ದಾರೆ.

ಪ್ರಜ್ವಲ್ ದೇವರಾಜ್

ಸ್ಯಾಂಡಲ್‌ವುಡ್‌ನ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಹಾಗೂ ಅವರ ಪತ್ನಿ ರಾಗಿಣಿ ಹೊಸ ವರ್ಷವನ್ನು ಅವರದ್ದೇ ಸೈಲ್‌ನಲ್ಲಿ ಸ್ವಾಗತಿಸಿದ್ದಾರೆ. ಪ್ರಜ್ವಲ್ ಹಾಗೂ ರಾಗಿಣಿ ಇಬ್ಬರೂ ಜೊತೆಗಿರುವ ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದು, "ನಾನು ಬಯಸಿದ್ದಂತೆ 2024 ಅನ್ನು ಎಂಡ್ ಮಾಡುತ್ತಿದ್ದೇನೆ. ಹ್ಯಾಪಿ ನ್ಯೂ ಇಯರ್" ಎಂದು ರಾಗಿಣಿ ಪ್ರಜ್ವಲ್ ಬರೆದು ಪೋಸ್ಟ್ ಮಾಡಿದ್ದಾರೆ.

ಶ್ರೀಮುರಳಿ

ರೋರಿಂಗ್ ಸ್ಟಾರ್ ಶ್ರೀಮುರಳಿ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಅವರಿಗೆ ಇದು 25ನೇ ವೆಡ್ಡಿಂಗ್ ಆನಿವರ್ಸರಿ. ಹೀಗಾಗಿ ವಿದೇಶದಲ್ಲಿ ಕ್ರಿಸ್‌ಮಸ್, ವಿವಾಹವಾರ್ಷಿಕೋತ್ಸವ ಹಾಗೂ ಹೊಸ ವರ್ಷವನ್ನು ಆಚರಣೆ ಮಾಡಿದ್ದಾರೆ. ವಿದೇಶದಲ್ಲಿ ಪತ್ನಿ ಶ್ರೀವಿದ್ಯಾ ಹಾಗೂ ಮಕ್ಕಳೊಂದಿಗೆ ಹೊಸ ವರ್ಷವನ್ನು ಆಚರಣೆ ಮಾಡುತ್ತಿದ್ದಾರೆ. ತಮ್ಮ ಕುಟುಂಬದೊಂದಿಗಿನ ಕೆಲವು ಫೋಟೊಗಳನ್ನು ಹಂಚಿಕೊಂಡು ಪತ್ನಿ ಶ್ರೀ ವಿದ್ಯಾಗೆ ಧನ್ಯವಾದಗಳನ್ನು ಹೇಳಿದ್ದಾರೆ.

ರಕ್ಷಿತಾ- ರಾಗಿಣಿ- ಪ್ರಿಯಾಂಕಾ ಶುಭಾಶಯ

ಇನ್ನು ರಕ್ಷಿತಾ ಪ್ರೇಮ್ 2024ರ ಕೊನೆಯ ಸೆಲ್ಫಿಯನ್ನು ತೆಗೆದುಕೊಂಡಿದ್ದಾರೆ. ಹಾಗೇ ತಮ್ಮ ಅಭಿಮಾನಿಗಳಿಗೆ ಹೊಸ ವರ್ಷದ ಶುಭಾಶಯವನ್ನು ತಿಳಿಸಿದ್ದಾರೆ. ಹಾಗೇ ರಾಗಿಣಿ ದ್ವಿವೇದಿ ಕೂಡ 2024ಕ್ಕೆ ಗುಡ್‌ಬೈ ಹೇಳಿ 2025 ಅನ್ನು ಸ್ವಾಗತಿಸಿದ್ದಾರೆ. ಇನ್ನು ಉಪೇಂದ್ರ ಪತ್ನಿ ಪ್ರಿಯಾಂಕಾ ಗೋಲ್ಡನ್ ಸ್ಟಾರ್ ಗಣೇಶ್ ಪತ್ನಿ ಶಿಲ್ಪಾ ಹಾಗೂ ಸ್ನೇಹಿತರೊಂದಿಗೆ ಹೊಸ ವರ್ಷವನ್ನು ಆಚರಿಸಿದ್ದಾರೆ.

More from Filmibeat

English summary
Kannada movie stars wished new year 2025 here is list of celebrities;
Read more about: new year 2025 sanalwood wish
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X