ಕನ್ನಡದ ಮೊದಲ ವರ್ಚುವಲ್ ಸಿನಿಮಾ 'ಮೇಡ್ ಇನ್ ಚೈನಾ': ಟೀಸರ್ ನೋಡಿ ಗೆಸ್ ಮಾಡಿ
ಸ್ಯಾಂಡಲ್‌ವುಡ್‌ನಲ್ಲಿ ಎಕ್ಸ್‌ಪೆರಿಮೆಂಟ್ ಸಿನಿಮಾಗಳು ಬರುವುದೇ ಕಡಿಮೆ. ಇಲ್ಲವೇ ಸಿನಿಮಾ ಮಂದಿನೇ ಎಕ್ಸ್‌ಪೆರಿಮೆಂಟ್ ಮಾಡುವುದಕ್ಕೆ ಹಿಂದೆ ಮುಂದೆ ನೋಡುತ್ತಾರೆ. ಎಲ್ಲಾ ಭಾಷೆಗಳಲ್ಲೂ ಏನಾದರೂ ಒಂದು ಹೊಸ ಪ್ರಯೋಗಕ್ಕೆ ಒಗ್ಗಿಕೊಳ್ಳುತ್ತಿರುವಾಗ, ಕನ್ನಡ ಚಿತ್ರರಂಗ ಯಾಕೆ ಇಂತಹದ್ದೊಂದು ಪ್ರಯತ್ನ ಮಾಡುತ್ತಿಲ್ಲವೆಂಬ ಬೇಸರ ಸಿನಿಮಾ ಪ್ರೇಮಿಗಳಲ್ಲಿತ್ತು. ಆದ್ರೀಗ, ಕನ್ನಡದಲ್ಲೂ ಪ್ರಯೋಗಾತ್ಮಕ ಸಿನಿಮಾವೊಂದು ನಿರ್ಮಾಣಗೊಂಡಿದೆ. ಅದುವೇ 'ಮೇಡ್ ಇನ್ ಚೈನಾ'.
'ಮೇಡ್ ಇನ್ ಚೈನಾ' ಕನ್ನಡದ ಮೊದಲ ವರ್ಚುವಲ್ ಸಿನಿಮಾ. ಈ ಹಿಂದೆ ಮಲಯಾಳಂ ಭಾಷೆಯಲ್ಲಿ ಇಂತಹದ್ದೇ ಒಂದು ಸಿನಿಮಾ ಬಿಡುಗಡೆಯಾಗಿತ್ತು. ಲಾಕ್‌ಡೌನ್ ವೇಳೆ ಫಹಾದ್ ಫಾಸಿಲ್ ಹಾಗೂ ತಂಡ ಸೇರಿಕೊಂಡು 'ಸಿ ಯು ಸೂನ್' ಎಂಬ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಆ ಮಲಯಾಳಂ ಚಿತ್ರಕ್ಕೆ ದೇಶಾದ್ಯಂತ ಉತ್ತಮ ರೆಸ್ಪಾನ್ಸ್ ಸಿಕ್ಕಿತ್ತು. ಈಗ ಕನ್ನಡದಲ್ಲೂ ಇಂತಹದ್ದೇ ಒಂದು ಪ್ರಯತ್ನಕ್ಕೆ 'ಮೇಡ್ ಇನ್ ಚೈನಾ' ತಂಡ ಮುಂದಾಗಿದ್ದಾರೆ.
'ಮೇಡ್ ಇನ್ ಚೈನಾ' ಸಿನಿಮಾ ಟೀಸರ್ ರಿಲೀಸ್
'ಮೇಡ್ ಇನ್ ಚೈನಾ' ಕನ್ನಡದ ಮೊದಲ ವರ್ಚುವಲ್ ಸಿನಿಮಾ. ಅಂದರೆ, ವಿಡಿಯೋ ಕಾಲ್‌ಗಳ ಮೂಲಕವೇ ಒಂದು ಸಿನಿಮಾದ ಕಥೆ ಹೇಳಲು ಹೊರಟಿದ್ದಾರೆ. ಈ ಕಾನ್ಸೆಪ್ಟ್ ಅನ್ನೇ ಇಟ್ಟುಕೊಂಡು ಮಲಯಾಳಂನಲ್ಲಿ 'ಸಿ ಯು ಸೂನ್' ಎನ್ನುವ ಸಿನಿಮಾ ಮಾಡಲಾಗಿತ್ತು. ಇಂತಹದ್ದೇ ಕಾನ್ಸೆಪ್ಟ್ ಇಟ್ಟುಕೊಂಡು ಈಗ 'ಮೇಡ್ ಇನ್ ಚೈನಾ' ಸಿನಿಮಾ ಮಾಡಲಾಗಿದೆ. 'ಇಕ್ಕಟ್' ಸಿನಿಮಾ ಮೂಲಕ ಮನರಂಜನೆಯ ನೀಡಿದ್ದ ನಾಗಭೂಷಣ್ ಈ 'ಮೇಡ್ ಇನ್ ಚೈನಾ' ಸಿನಿಮಾದಲ್ಲಿ ನಟಿಸಿದ್ದಾರೆ. ಇದೇ ಸಿನಿಮಾದ ಟೀಸರ್ ಇದೀಗ ರಿಲೀಸ್ ಆಗಿದ್ದು, ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿದೆ.

ಲಾಕ್‌ಡೌನ್ ಸಮಯದಲ್ಲಿ ನಡೆಯುವ ಕಥೆ
'ಮೇಡ್ ಇನ್ ಚೈನಾ' ಸಿನಿಮಾದಲ್ಲಿ ನಾಗಭೂಷಣ್ ನಾಯಕರಾಗಿ ಬಣ್ಣ ಹಚ್ಚಿದ್ದಾರೆ. ನಾಗಭೂಷಣ್ ಜೊತೆ ಪ್ರಿಯಾಂಕಾ ತಿಮ್ಮೇಶ್ ಪತ್ನಿಯಾಗಿ ನಟಿಸಿದ್ದಾರೆ. ಇವರೊಂದಿಗೆ ಗೌರವ್ ಶೆಟ್ಟಿ, ಅಶ್ವಿನಿ ರಾವ್ ಪಲ್ಲಕ್ಕಿ, ಅರುಣ ಬಾಲರಾಜ್, ರವಿ ಭಟ್ ಮುಂತಾದವರು ನಟಿಸಿದ್ದಾರೆ. ಲಾಕ್‌ಡೌನ್ ಸಮಯದಲ್ಲಿ ಪತಿ ವಿದೇಶದಲ್ಲಿ ಲಾಕ್ ಆಗುತ್ತಾನೆ. ಪತ್ನಿ ಕರ್ನಾಟಕದಲ್ಲಿ ಇರುತ್ತಾಳೆ. ಗಂಡ ಹೆಂಡ್ತಿ ನಡುವಿನ ಪ್ರೀತಿ ಪ್ರೇಮ, ಮಾತುಕತೆ ಎಲ್ಲವೂ ವಿಡಿಯೋ ಕಾಲ್ ಮೂಲಕವೇ ನಡೆಯುತ್ತೆ. ಇದನ್ನೇ 'ಮೇಡ್ ಇನ್ ಚೈನಾ' ಸಿನಿಮಾದಲ್ಲಿ ತೋರಿಸಲಾಗಿದೆ.



Click it and Unblock the Notifications











