"ಕಾಶೀನಾಥ್ ಮಗನಿಗೆ ಸನ್ ಆಫ್‌ ಕಾಶೀನಾಥ್ ಸಿಗಲಿಲ್ಲ"; ಲೆಜೆಂಡ್ ಪುತ್ರ ಅಭಿಮನ್ಯು

ಕನ್ನಡ ಚಿತ್ರರಂಗದ ಲೆಜೆಂಡ್ ಕಾಶೀನಾಥ್ ನಿರ್ದೇಶಿಸಿ, ನಟಿಸಿದ ಸಿನಿಮಾಗಳ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ಸ್ಯಾಂಡಲ್‌ವುಡ್ ವಿಶಿಷ್ಠ ಸಿನಿಮಾಗಳನ್ನು ಕೊಟ್ಟ ನಿರ್ದೇಶಕ. ಇಂದಿಗೂ ಇವರಿಗೆ ಒಂದು ಅಭಿಮಾನಿ ವರ್ಗವಿದೆ. ಇಂದಿಗೂ ಅವರ ಸಿನಿಮಾಗಳನ್ನು ನೆನಪಿಸಿಕೊಂಡು ನೋಡುವ ಒಂದು ವರ್ಗವಿದೆ. ಇನ್ನೂ ಸಿನಿಪ್ರಿಯರನ್ನು ರಂಜಿಸಬೇಕಿದ್ದ ನಟ, ನಿರ್ದೇಶಕ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ಈಗ ಅವರ ಸ್ಥಾನವನ್ನು ತುಂಬುವುದಕ್ಕೆ ಕಾಶೀನಾಥ್ ಪುತ್ರ ಅಭಿಮನ್ಯು ಮತ್ತೆ ಚಿತ್ರರಂಗದಲ್ಲಿ ಆಕ್ಟಿವ್ ಆಗಿದ್ದಾರೆ. ಒಂದರ ಹಿಂದೊಂದು ಸಿನಿಮಾಗಳನ್ನು ಮಾಡುತ್ತಿದ್ದಾರೆ. ಈಗ ವಿಜಯದಶಮಿ ಹಬ್ಬದ ಸಂಭ್ರಮದಲ್ಲಿಯೇ ಇನ್ನೊಂದು ಸಿನಿಮಾ ಅನೌನ್ಸ್ ಆಗಿದೆ. ಅದುವೇ 'ಅಭಿಮನ್ಯು S/O ಕಾಶೀನಾಥ್'. ಇದೇ ಸಿನಿಮಾ ಬಗ್ಗೆ ಅಭಿಮನ್ಯು ಮನಬಿಚ್ಚಿ ಮಾತಾಡಿದ್ದಾರೆ.

Kannada Legend Kashinath son Abhimanyu said he never got to use his father name

ಮೊದಲ ಈ ಸಿನಿಮಾಗೆ 'S/O ಕಾಶೀನಾಥ್' ಅಂತ ಟೈಟಲ್ ಇಡುವುದಕ್ಕೆ ಹೊರಟಿದ್ದರು. ಆದರೆ, ಅದು ಸಿಗಲಿಲ್ಲ. ಆ ಕಾರಣಕ್ಕೆ 'ಅಭಿಮನ್ಯು S/O ಕಾಶೀನಾಥ್' ಅನ್ನೋ ಟೈಟಲ್ ಇಡಲಾಗಿದೆ. ಈ ವೇಳೆ ತನ್ನ ತಂದೆಯ ಹೆಸರು ತನಗೇ ಸಿಗಲಿಲ್ಲ ಎಂದು ಹೇಳಿಕೊಂಡಿದ್ದಾರೆ.

"ನಿರ್ದೇಶಕರ ರಾಜ್‌ಮೌಳಿಯವರು ಅಪ್ಪನ ಜಾನರ್ ಇಟ್ಕೊಂಡು ಈಗಿನ ಕಾಲದ ಹುಡುಗರಿಗೆ ಮಾಡಿದರೆ ಹೇಗಿರುತ್ತೆ? ಅದನ್ನು ನಿಮ್ಮನ್ನು ಇಟ್ಕೊಂಡು ಪ್ಲಾನ್ ಮಾಡಿಕೊಂಡಿದ್ದೀನಿ ಸರ್ ಅಂದರು. ಅಪ್ಪ ಇದ್ದಾಗ ನನಗೆ ಬರುತ್ತಿದ್ದ ಆಫರ್ ಇಂತಹದ್ದೇ. ಅಪ್ಪ ಡೈರೆಕ್ಷನ್ ಮಾಡಬೇಕು. ನಾನು ಆಕ್ಟಿಂಗ್ ಮಾಡಬೇಕು. ಅನಂತನ ಅವಾಂತರ ಪಾರ್ಟ್ 2 ಮಾಡಬೇಕು. ಅನುಭವ ಪಾರ್ಟ್‌ 2 ಮಾಡಬೇಕು ಇದೇ ತರ ಹೆಚ್ಚು ಬರುತ್ತಿತ್ತು. ಅಪ್ಪನಿಗೂ ಆ ಕ್ಯಾರೆಕ್ಟರ್ ನನಗೆ ಸೂಟ್ ಆಗಲ್ಲ ಅಂತ ಅನಿಸುತ್ತಿತ್ತು. ನನಗೂ ಅದನ್ನು ಮಾಡುತ್ತೇನೆ ಅನ್ನೋ ಕಾನ್ಫಿಡೆನ್ಸ್ ಇರಲಿಲ್ಲ" ಎಂದು ಈ ಪ್ರಾಜೆಕ್ಟ್ ಬಗ್ಗೆ ಹೇಳಿದ್ದಾರೆ.

ಕಾಶೀನಾಥ್ ಅವರು ಇದ್ದಾಗ ಅನುಭವ, ಅನಂತರ ಅವಾಂತ ಮತ್ತೆ ಸೃಷ್ಟಿ ಮಾಡೋದು ಕಷ್ಟ. ಅಪ್ಪನ ಜಾನರ್ ಕಥೆ ಮಾಡೋದು ಕಷ್ಟ ಅಂತ ಅಂದುಕೊಳ್ಳುತ್ತಿದ್ದರು. ಇದೇ ವೇಳೆ ನಿರ್ದೇಶಕ ರಾಜ್‌ಮೌಳಿ ಬಂದು ಕಥೆಯನ್ನು ಹೇಳಿದಾಗ ಎಲ್ಲ ಪಾಸಿಟಿವ್ ಆಗಿ ಮಾಡಿಕೊಂಡಿದ್ದಾರೆ ಅಂತ ಅವರಿಗೆ ಅನಿಸಿತ್ತು. ಆದರೆ, ಟೈಟಲ್ ಇಡಬೇಕು ಅಂದಾಗ ಅಸಲಿ ಚಾಲೆಂಜ್ ಶುರುವಾಗಿತ್ತು.

Kannada Legend Kashinath son Abhimanyu said he never got to use his father name

"ಒಮ್ಮೆ ಫೋನ್ ಮಾಡಿ ಟೈಟಲ್ ಇಡಬೇಕು. ಏನಾದರೂ ಪಂಚಿಂಗ್ ಆಗಿರಬೇಕು. ಕ್ಯಾಚಿ ಆಗಿರಬೇಕು ಅಂತ ನಿರ್ದೇಶಕರು ಹೇಳಿದರು. ಸ್ವಲ್ಪ ದಿನ ಬಿಟ್ಟು ಈ ಟೈಟಲ್ ಅಂದುಕೊಂಡಿದ್ದೀನಿ, ಏನು ಅನಿಸುತ್ತೆ ಹೇಳಿ ಅಂದರು. 'ಸನ್ ಆಫ್ ಕಾಶೀನಾಥ್' ಅಂತ ಇಟ್ಟಿದೀನಿ ಅಂದರು. ನನಗೆ ಒಂದು ಕಡೆ ಖುಷಿ. ಇನ್ನೊಂದು ಕಡೆ ಅಪ್ಪನ ಹೆಸರು ಬಂದಾಗ ಹೀಗೆ ಹಿಡಿಯುತ್ತೆ. ಯಾಕಂದ್ರೆ ಈ ಹಿಂದೆ ಆದ ಒಂದಷ್ಟು ಅನುಭವಗಳು." ಎಂದು ಆ ಸನ್ನಿವೇಶಗಳನ್ನು ವಿವರಿಸಿದ್ದಾರೆ.

ಆದರೆ, 'ಸನ್ ಆಫ್ ಕಾಶೀನಾಥ್ ಸಿನಿಮಾ ಟೈಟಲ್ ರಿಜೆಸ್ಟರ್ ಮಾಡೋಣ ಅಂತ ಹೋದಾಗ ಯಾರೋ ಮಾಡಿಬಿಟ್ಟಿದ್ದರು. ಆ ಬಗ್ಗೆನೂ ಅಭಿಮನ್ಯು ಬೇಸರ ಹೊರಹಾಕಿದ್ದರು. "ಎಲ್ಲರೂ ಹೇಳ್ತಾರೆ ಕಾಶೀನಾಥ್ ಮಗನಿಗೆ ಸನ್ ಆಫ್‌ ಕಾಶೀನಾಥ್ ಸಿಗಲಿಲ್ಲ ಅಂತಾರೆ. ನಿರ್ದೇಶಕರು ಟೈಟಲ್ ಇಲ್ಲ ಸರ್ ಯಾರೋ ರಿಜಿಸ್ಟರ್ ಮಾಡಿಸಿದ್ದಾರೆ. ಸುಮ್ಮನೆ ಏನೋ ಸರಿಸುವುದಕ್ಕೆ ಆಗಲ್ಲ ಅಂದರು. ಆಮೇಲೆ ಅವರೇ ಯೋಚನೆ ಮಾಡಿ ಅಭಿಮನ್ಯು ಸನ್ ಆಫ್ ಕಾಶೀನಾಥ್ ಅಂತ ಹೇಳಿದರು." ಎಂದಿದ್ದಾರೆ.

ಇನ್ನೊಂದು ಇಂಟ್ರೆಸ್ಟಿಂಗ್ ವಿಷಯ ಅಂದರೆ, "ಅಪ್ಪ ಮಾಡಿದ ಸಿನಿಮಾಗಳು, ಅಪ್ಪನ ಲೈಫ್‌ನಲ್ಲಿ ಹೆಸರು ಮಾಡಿದ ಸಿನಿಮಾಗಳು ಶುರುವಾಗೋದು A ಯಿಂದಲೇ. ಆ A ಬೇಡ ಬೇಡ ಅಂದರೂ, ಅದು ವಾಪಸ್ ತಿರುಗಿ ಅಲ್ಲಿಗೆ ಬರುತ್ತಿದೆ. ಹೀಗೆ ಅಭಿಮನ್ಯು ಸನ್ ಆಫ್ ಕಾಶೀನಾಥ್ ಆಯ್ತು." ಎಂದಿದ್ದಾರೆ.

More from Filmibeat

English summary
Kannada Legend Kashinath son new movie title Abhimanyu S/O Kashinath:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X