ಕನ್ನಡ ಪ್ರೇಕ್ಷಕರಿಗೆ ಶಾಕ್ ನೀಡಿದ 'ಅರ್ಜುನ್ ಗೌಡ' ಟ್ರೈಲರ್
Recommended Video
ತೆಲುಗು ಬ್ಲಾಕ್ ಬಸ್ಟರ್ ಸಿನಿಮಾ ಅರ್ಜುನ್ ರೆಡ್ಡಿ ಇಡೀ ಭಾರತದಲ್ಲಿ ಸಂಚಲನ ಸೃಷ್ಟಿಸಿತ್ತು. ಈ ಒಂದು ಚಿತ್ರದ ಮೂಲಕ ವಿಜಯ್ ದೇವರಕೊಂಡ ನ್ಯಾಷನಲ್ ಸ್ಟಾರ್ ಆಗಿ ಗುರುತಿಸಿಕೊಂಡಿದ್ದರು. ವರ್ಷಗಳ ಕಾಲ ಚಿತ್ರರಂಗದಲ್ಲಿದ್ದು ಗಳಿಸಲಾಗದ ಯಶಸ್ಸು, ನೇಮೂ, ಫೇಮೂ ಎಲ್ಲವೂ ಈ ಚಿತ್ರದ ಮೂಲಕ ರಾತ್ರೋರಾತ್ರಿ ದೇವರಕೊಂಡಗೆ ಸಿಕ್ತು.
ಈ ಚಿತ್ರವನ್ನ ಶಾಹೀದ್ ಕಪೂರ್ ಹಿಂದಿಯಲ್ಲಿ ರೀಮೇಕ್ ಮಾಡಿದ್ರು. ಅರ್ಜುನ್ ರೆಡ್ಡಿಯ ಯಥಾವತ್ತು ದೃಶ್ಯಗಳು ಬಾಲಿವುಡ್ ಪರದೆ ಮೇಲೆ ಬಂತು. ಇದಕ್ಕೂ ಮುಂಚೆ ಕನ್ನಡದ ಖ್ಯಾತ ನಿರ್ಮಾಪಕರೊಬ್ಬರು ಅರ್ಜುನ್ ರೆಡ್ಡಿ ರೀಮೇಕ್ ಖರೀದಿಸಿದ್ದರು ಎನ್ನಲಾಗಿತ್ತು. ಆದ್ರೆ, ಆ ಚಿತ್ರ ಸೆಟ್ಟೇರಿಲ್ಲ.
ಈ ಮಧ್ಯೆ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅರ್ಜುನ್ ಗೌಡ ಎಂದು ಸಿನಿಮಾವೊಂದನ್ನ ಶುರು ಮಾಡಿದ್ದರು. ಅರ್ಜುನ್ ರೆಡ್ಡಿಗೆ ಹೋಲಿಕೆ ಇರುವಂತಹ ಟೈಟಲ್ ಇಟ್ಟರೂ ಇದು ರೀಮೇಕ್ ಅಲ್ಲ ಎಂದು ಮೊದಲೇ ಸ್ಪಷ್ಟಪಡಿಸಿದ್ದರು. ಆದ್ರೆ, ಈಗ ಬಿಡುಗಡೆಯಾಗಿರುವ ಅರ್ಜುನ್ ಗೌಡ ಟ್ರೈಲರ್ ಪ್ರೇಕ್ಷಕರಿಗೆ ಅಚ್ಚರಿ ತಂದಿದೆ. ಮುಂದೆ ಓದಿ.....

ಅರ್ಜುನ್ ರೆಡ್ಡಿ ಕಾಪಿ ಮಾಡಿದ್ರಾ ಪ್ರಜ್ವಲ್.!
ಪ್ರಜ್ವಲ್ ದೇವರಾಜ್ ಅಭಿನಯದ ಅರ್ಜುನ್ ಗೌಡ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಶಂಕರ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಕ್ರೈಂ ಥ್ರಿಲ್ಲಿಂಗ್ ಸಿನಿಮಾ ಎಂಬುದು ಟ್ರೈಲರ್ ನಲ್ಲಿ ಬಹಿರಂಗವಾಗಿದೆ. ವಿಭಿನ್ನವಾದ ಪಾತ್ರದಲ್ಲಿ ಡೈನಾಮಿಕ್ ಪ್ರಿನ್ಸ್ ಅಭಿನಯಿಸಿದ್ದು, ಇದರಲ್ಲಿ ಒಂದು ದೃಶ್ಯ ಚರ್ಚೆಗೆ ಕಾರಣವಾಗಿದೆ. ಅರ್ಜುನ್ ರೆಡ್ಡಿ ಚಿತ್ರದ ಅದೊಂದು ದೃಶ್ಯವನ್ನ ಅರ್ಜುನ್ ಗೌಡ ಕಾಪಿ ಮಾಡಿದ್ರಾ ಎಂಬ ಪ್ರಶ್ನೆ ಮೂಡುತ್ತಿದೆ.

ಎರಡರಲ್ಲೂ ಇತ್ತು, ಇಲ್ಲಿಯೂ ಇದೆ
ಅರ್ಜುನ್ ಗೌಡ ರೀಮೇಕ್ ಅಲ್ಲ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಆದ್ರೆ, ಅದೊಂದು ದೃಶ್ಯ ಈಗ ಕಾಪಿ ಮಾಡಿರಬಹುದು ಎಂಬ ಚರ್ಚೆಯನ್ನ ಹುಟ್ಟುಹಾಕಿದೆ. ಅರ್ಜುನ್ ರೆಡ್ಡಿ ಚಿತ್ರದಲ್ಲಿ ವಿಜಯ್ ದೇವರಕೊಂಡ ಹಾಗೂ ಕಬೀರ್ ಸಿಂಗ್ ಚಿತ್ರದಲ್ಲಿ ಶಾಹೀದ್ ಕಪೂರ್ ಇಬ್ಬರು ಸ್ಮೋಕಿಂಗ್ ಮಾಡ್ಕೊಂಡು ಕೊಡುವ ಎಂಟ್ರಿ ಈಗ ಕನ್ನಡದಲ್ಲೂ ಕಂಡಿದೆ.
ಕಬೀರ್ ಸಿಂಗ್ ಅಬ್ಬರಕ್ಕೆ ಬಾಲಿವುಡ್ ಶೇಕ್: 12 ದಿನದ ಗಳಿಕೆ ಎಷ್ಟು?

ರಜನಿಕಾಂತ್ ಕೂಡ ಮಾಡಿದ್ರು
ಅಂದ್ಹಾಗೆ, ಈ ರೀತಿ ಸ್ಮೋಕಿಂಗ್ ಎಂಟ್ರಿ ದೃಶ್ಯ ಸದ್ದು ಮಾಡ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮುಂಚೆ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯಿಸುದ್ದ ಅಣ್ಣಾಮಲೈ ಚಿತ್ರದಲ್ಲೂ ಇಂತಹದೊಂದು ಸೀನ್ ಇತ್ತು. ಇದು ರಜನಿ ಮಾಡಿದ್ದರಿಂದ ಸಖತ್ ಸ್ಟೈಲಿಶ್ ಆಗಿ ಬಂದಿತ್ತು. ಅದಾದ ಬಳಿಕ ಇಂತಹದೊಂದು ಸೀನ್ ಸದ್ದು ಮಾಡಿದ್ದು ಅರ್ಜುನ್ ರೆಡ್ಡಿ ಮತ್ತು ಕಬೀರ್ ಸಿಂಗ್ ಚಿತ್ರದಲ್ಲಿ. ಈಗ ಅದೇ ಸೀನ್ ಕನ್ನಡದ ಅರ್ಜುನ್ ಗೌಡ ಚಿತ್ರದಲ್ಲು ಇದೆ.

ಯಾವುದೇ ಸಂಬಂಧವಿಲ್ಲ
ಈ ಒಂದು ದೃಶ್ಯದಲ್ಲಿ ಹೋಲಿಕೆ ಕಂಡರೇ ಅರ್ಜುನ್ ಗೌಡಗೂ ಮತ್ತು ಅರ್ಜುನ್ ರೆಡ್ಡಿಗೂ ಯಾವುದೇ ಸಂಬಂಧವಿಲ್ಲ. ರಾಮು ಈ ಚಿತ್ರ ನಿರ್ಮಾಣ ಮಾಡಿದ್ದು, ಶಂಕರ್ ನಿರ್ದೇಶಿಸಿದ್ದಾರೆ. ಧರ್ಮವಿಶ್ ಸಂಗೀತವಿದ್ದು, ಪ್ರಿಯಾಂಕಾ ನಾಯಕಿಯಾಗಿ ನಟಿಸಿದ್ದಾರೆ.


Click it and Unblock the Notifications











