ಕಬೀರ್ ಸಿಂಗ್ ಅಬ್ಬರಕ್ಕೆ ಬಾಲಿವುಡ್ ಶೇಕ್: 12 ದಿನದ ಗಳಿಕೆ ಎಷ್ಟು?

ಶಾಹೀದ್ ಕಪೂರ್ ಅಭಿನಯದ ಕಬೀರ್ ಸಿಂಗ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಅಬ್ಬರ ಮುಂದುವರಿಸಿದೆ. ಮೊದಲ ವಾರಾಂತ್ಯದಲ್ಲಿ ಭರ್ಜರಿ ಬೇಟೆ ಮಾಡಿದ್ದ ಕಬೀರ್ ಸಿಂಗ್ ಎರಡನೇ ವಾರಾಂತ್ಯಕ್ಕೆ ದಾಖಲೆಯ ಗಳಿಕೆ ಕಂಡಿತ್ತು.

ಇದೀಗ, ಬಿಡುಗಡೆಯಾದ ಹನ್ನೆರಡು ದಿನಗಳಲ್ಲಿ 200 ಕೋಟಿ ಗಳಿಸುವ ಮೂಲಕ ಬಾಲಿವುಡ್ ಇಂಡಸ್ಟ್ರಿಯಲ್ಲಿ ಸದ್ದು ಮಾಡ್ತಿದೆ. ಕಬೀರ್ ಸಿಂಗ್ ವೇಗ ನೋಡ್ತಿದ್ರೆ ಈ ವರ್ಷದ ದೊಡ್ಡ ಹಿಟ್ ಚಿತ್ರ ಎಂಬ ಖ್ಯಾತಿ ಪಡೆದುಕೊಳ್ಳುತ್ತೆ ಎಂದು ವಿಶ್ಲೇಷಿಸಲಾಗುತ್ತಿದೆ.

ಮಂಗಳವಾರ 8.31 ಕೋಟಿ ಗಳಿಸುವ ಮೂಲಕ ಕಬೀರ್ ಸಿಂಗ್ ಸಿನಿಮಾ ಅಧಿಕೃತವಾಗಿ 200 ಕೋಟಿ ಕ್ಲಬ್ ಸೇರಿದೆ. ಈ ಮೂಲಕ ಉರಿ ಮತ್ತು ಭಾರತ್ ಚಿತ್ರಗಳ ನಂತರ ಶಾಹೀದ್ ಕಪೂರ್ ಚಿತ್ರ ಬಿಟೌನ್ ನಲ್ಲಿ ದಾಖಲೆ ಮಾಡಿದೆ.

Kabir singh day 12 collection

ಜೂನ್ 5 ರಂದು ತೆರೆಕಂಡಿದ್ದ ಭಾರತ್ ಸಿನಿಮಾ 300 ಕೋಟಿಯ ಗಡಿದಾಟಿದೆ. ಜನವರಿ 11 ರಂದು ಬಿಡುಗಡೆಯಾಗಿದ್ದ ಉರಿ ಸಿನಿಮಾ 250 ಕೋಟಿ ಕ್ರಾಸ್ ಮಾಡಿದೆ. ಇದೀಗ, ಜೂನ್ 21 ರಂದು ತೆರೆಗೆ ಬಂದಿದ್ದ ಕಬೀರ್ ಸಿಂಗ್ 200 ಕೋಟಿ ಗಳಿಸಿ ಭಾರತ್ ಮತ್ತು ಉರಿ ಚಿತ್ರಗಳ ದಾಖಲೆ ಬೆನ್ನುತ್ತಿದೆ.

ತೆಲುಗಿನ ಸೂಪರ್ ಹಿಟ್ ಚಿತ್ರ ಅರ್ಜುನ್ ರೆಡ್ಡಿ ಚಿತ್ರದ ಹಿಂದಿ ರೀಮೇಕ್ ಕಬೀರ್ ಸಿಂಗ್. ಶಾಹೀದ್ ಕಪೂರ್, ಕಿಯಾರಾ ಅಡ್ವಾನಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರವನ್ನ ಮೂಲ ನಿರ್ದೇಶಕ ಸಂದಿಪ್ ವಂಗಾ ಅವರೇ ನಿರ್ದೇಶಿಸಿದ್ದಾರೆ.

More from Filmibeat

English summary
Kabir singh movie collection day 12: Bollywood Actor shahid kapoor and kiara advani movie earns 200 crors in box offcie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X